ಬೆಂಗಳೂರು ಕಂಬಳ ಯಶಸ್ವಿಗಾಗಿ ಶಾಸಕ ಅಶೋಕ್ ರೈ ಪ್ರಾರ್ಥನೆ
ಪುತ್ತೂರು: ನ. 25 ಮತ್ತು 26ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಕಂಬಳ ಯಶಸ್ವಿಗಾಗಿ ಶಾಸಕ ಅಶೋಕ್ ರೈ ಅವರು ಕೋಡಿಂಬಾಡಿ ಶ್ರೀಮಹಿಷಮರ್ದಿನಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬೆಂಗಳೂರು ಕಂಬಳವು ಅಭೂತಪೂರ್ವ ಯಶಸ್ವಿಯಾಗಲಿ ಎಂದು ತನ್ನ ಊರಿನ ದೇವಾಲಯದಲ್ಲಿ ಶನಿವಾರ ಶಾಸಕರು ಪ್ರಾರ್ಥನೆ ಸಲ್ಲಿಸಿದರು. ಪ್ರಥಮ ಭಾರಿಗೆ ರಾಜ್ಯದ ರಾಜಧಾನಿಯಲ್ಲಿ ಕರಾವಳಿಯ ಜನಪದ ಕ್ರೀಡೆ ಕಂಬಳವನ್ನು ಆಯೋಜಿಸಲಾಗಿದ್ದು, ಕಂಬಳದಲ್ಲಿ ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಇದಕ್ಕಾಗಿ ಈಗಾಗಲೇ ಸಿದ್ದತೆಗಳು ಆರಂಭಗೊಂಡಿದೆ.
ಬೆಂಗಳೂರು ಕಂಬಳ ಯಶಸ್ವಿಗಾಗಿ ಶಾಸಕ ಅಶೋಕ್ ರೈ ಪ್ರಾರ್ಥನೆ Read More »










