ದಕ್ಷಿಣ ಕನ್ನಡ

ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‍ ವರ್ಗಾವಣೆ | ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ದರ್ಶನ್‍ ಎಚ್‍.ವಿ.

ಮಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಆಡಳಿತಾತ್ಮಕವಾಗಿ ಬದಲಾವಣೆ ಮಾಡಲಾಗಿದ್ದು, ರಾಜ್ಯದ ಹಲವು ಐಎಎಸ್‍ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‍ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದ್ದು. ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿದ್ದ ದರ್ಶನ್‍ ಎಚ್‍.ವಿ. ಅವರನ್ನು ದ.ಕ.ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ. ವರ್ಗಾವಣೆಗೊಂಡ ಮುಲ್ಲೈ ಮಹಿಲನ್‍ ಅವರನ್ನು ನೋಂದಣಿ ಮತ್ತು ಮುದ್ರಾಂಕ ಐಜಿಯಾಗಿ ನೇಮಿಸಲಾಗಿದೆ.  ಈ ಕುರಿತು ರಾಜ್ಯ ಸರಕಾರದ ಕಾರ್ಯದರ್ಶಿ ಮಹಾಂತೇಶ ಅವರು ಆದೇಶ ಹೊರಡಿಸಿದ್ದಾರೆ.

ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‍ ವರ್ಗಾವಣೆ | ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ದರ್ಶನ್‍ ಎಚ್‍.ವಿ. Read More »

ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು | ಯುವ ವೈದ್ಯ ಡಾ.ಮೊಹಮ್ಮದ್ ಅಮಲ್‍ ಮೃತ್ಯು

ಮಂಗಳೂರು: ಭಾನುವಾರ ರಾತ್ರಿ ಸುರಿದ ಭಾರೀ ಮಳೆಯಲ್ಲಿ ವೇಗವಾಗಿ ಹೋಗುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಯುವ ವೈದ್ಯರೊಬ್ಬರು ಮೃತಪಟ್ಟ ಘಟನೆ ನಂತೂರು ಬಳಿ ನಡೆದಿದೆ. ಕೇರಳದ ಆಲಪ್ಪುಝ ಮೂಲದ ಡಾ. ಮೊಹಮ್ಮದ್ ಅಮಲ್ (29) ಮೃತಪಟ್ಟವರು. ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿಸ್ಟ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೊಹಮ್ಮದ್ ಅಮಲ್‍ ಭಾನುವಾರ ರಾತ್ರಿ 11:45 ರ ವೇಳೆ ತಮ್ಮ ಸಿಯಾಝ್ ಕಾರಿನಲ್ಲಿ ಕೇರಳ ಮೂಲದ ವೈದ್ಯಕೀಯ ವಿದ್ಯಾರ್ಥಿನಿಯೊಂದಿಗೆ ನಂತೂರಿನಿಂದ ಪಂಪೈಲ್

ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು | ಯುವ ವೈದ್ಯ ಡಾ.ಮೊಹಮ್ಮದ್ ಅಮಲ್‍ ಮೃತ್ಯು Read More »

ಮಂಗಳೂರಿನಲ್ಲಿ ಮತ್ತೆ ಮಳೆ ಅನಾಹುತ : ಮನೆ ಮೇಲೆ ಕುಸಿದು ಬಿದ್ದ ಗುಡ್ಡ

ಮೂರು ಮನೆಗಳಿಗೆ ಹಾನಿ; 40 ಮನೆಗಳು ಅಪಾಯದಲ್ಲಿ ಮಂಗಳೂರು: ಮಂಗಳೂರಿನಲ್ಲಿ ಸೋಮವಾರ ಮಳೆ ಅಬ್ಬರ ತುಸು ತಡಿಮೆಯಾಗಿದ್ದರೂ ಗುಡ್ಡ ಕುಸಿತ ಸಂಭವಿಸಿದೆ. ಮಂಗಳೂರು ಸಮೀಪದ ಕಣ್ಣೂರಿನ ದಯಂಬು ಎಂಬಲ್ಲಿ ಗುಡ್ಡ ಕುಸಿದು ಮನೆ ಮೇಲೆ ಬಿದ್ದಿದ್ದು, ಕುಟುಂಬವೊಂದು ಕೂದಲೆಲೆ ಅಂತರದಲ್ಲಿ ಪಾರಾಗಿದೆ. ಗುಡ್ಡದ ಕೆಳಭಾಗದಲ್ಲೇ ಇದ್ದ ಮನೆಯಲ್ಲಿ ವಾಸವಿದ್ದ ಕುಟುಂಬದವರು, ಗುಡ್ಡ ಕುಸಿತದ ಸದ್ದು ಕೇಳುತ್ತಿದ್ದಂತೆಯೇ ಓಡಿಹೋಗಿ ಬಚಾವಾಗಿದ್ದಾರೆ. ಮೂರು ಮನೆಗಳಿಗೆ ಕುಸಿತದಿಂದ ಹಾನಿಯಾಗಿದೆ. ಕಳೆದ ಶನಿವಾರದಿಂದೀಚೆಗೆ ಸುರಿಯುತ್ತಿರುವ ಭೀಕರ ಮಳೆಗೆ ಮಂಗಳೂರು ನಗರದಲ್ಲಿ ಅನೇಕ ಅನಾಹುತಗಳು

ಮಂಗಳೂರಿನಲ್ಲಿ ಮತ್ತೆ ಮಳೆ ಅನಾಹುತ : ಮನೆ ಮೇಲೆ ಕುಸಿದು ಬಿದ್ದ ಗುಡ್ಡ Read More »

ವಿದ್ಯುತ್‍ ಶಾಕ್‍ ಹೊಡೆದು ಮಹಿಳೆ ಮೃತ್ಯು

ಕಡಬ: ಮಹಿಳೆಯೊಬ್ಬರು ವಿದ್ಯುತ್ ಶಾಕ್ ಹೊಡೆದು ಮೃತಪಟ್ಟ ಘಟನೆ ಸೋಮವಾರ ಸಂಜೆ ಕಡಬ ತಾಲೂಕಿನ ಎಡಮಂಗಲ ಸಮೀಪದ ಚಾರ್ವಾಕ ಎಂಬಲ್ಲಿ ನಡೆದಿದೆ. ದೋಳಾಡಿ ನಿವಾಸಿ ಪುರಂದರ ಎಂಬವರ ಪತ್ನಿ ರೇಖಾ(35) ಮೃತಪಟ್ಟವರು. ನೀರಿನ ಪಂಪ್‌ ಸ್ವಿಚ್‌ ಹಾಕುವ ವೇಳೆ ವಿದ್ಯುತ್ ಶಾಕ್ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ತಕ್ಷಣ ಅವರನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆಸ್ಪತ್ರೆಗೆ ತಲುಪುವಷ್ಟರಲ್ಲಿಯೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿದ್ಯುತ್‍ ಶಾಕ್‍ ಹೊಡೆದು ಮಹಿಳೆ ಮೃತ್ಯು Read More »

ಬಂಟ್ವಾಳ : ಹೊಂಡಕ್ಕೆ ಬಿದ್ದು ಯುವಕ ಸಾವು

ಬಂಟ್ವಾಳ : ನಾಪತ್ತೆಯಾಗಿದ್ದ ಯುವಕನ ಮೃತದೇಹ ರಸ್ತೆ ಬದಿಯ ಕೃಷಿ ಹೊಂಡದಲ್ಲಿ ಸೋಮವಾರ ಪತ್ತೆಯಾಗಿದೆ. ಮೃತ ಯುವಕನನ್ನು ಅಮ್ಮುಂಜೆ ಗ್ರಾಮದ ಬೆಂಜನಪದವು ಕಂಬಳ ಮನೆಯ ನಿವಾಸಿ ಜನಾರ್ದನ ಪೂಜಾರಿ ಅವರ ಪುತ್ರ ಸಾಗರ್ (28) ಎಂದು ಗುರುತಿಸಲಾಗಿದೆ. ಕಾಲುಜಾರಿ ಹೊಂಡಕ್ಕೆ ಬಿದ್ದಿರುವ ಸಾಧ್ಯತೆ ಇದೆ ಎಂದು ಸಂಶಯಿಸಲಾಗಿದೆ. ಪೈಟಿಂಗ್ ಕೆಲಸ ಮಾಡಿಕೊಂಡಿದ್ದ ಸಾಗರ್ ತಾಯಿಯ ಜೊತೆ ಬಿ.ಸಿ.ರೋಡಿಗೆ ಔಷಧಿ ತರಲೆಂದು ಅಟೋರಿಕ್ಷಾದಲ್ಲಿ ತೆರಳಿದ್ದರು. ವಾಪಾಸು ಬರುವಾಗ ಬೆಂಜನಪದವು ಮೂರು ಮಾರ್ಗ ಎಂಬಲ್ಲಿ ಸಾಗರ್ ಇಳಿದಿದ್ದು, ಬಳಿಕ ಮನೆಗೆ

ಬಂಟ್ವಾಳ : ಹೊಂಡಕ್ಕೆ ಬಿದ್ದು ಯುವಕ ಸಾವು Read More »

ಬೀಡಿಯ ತುಂಡು ನುಂಗಿ 10 ತಿಂಗಳ ಮಗು ಸಾವು

ತಂದೆ ಸೇದಿ ಎಸೆದಿದ್ದ ಬೀಡಿಯ ತುಂಡು ನುಂಗಿದ್ದ ಹಸುಳೆ ಮಂಗಳೂರು: ಬೀಡಿಯ ತುಂಡು ನುಂಗಿ 10 ತಿಂಗಳು ಪ್ರಾಯದ ಮಗುವೊಂದು ಸಾವನ್ನಪ್ಪಿರುವ ದಾರುಣ ಘಟನೆ ಮಂಗಳೂರು ಸಮೀಪ ಅಡ್ಯಾರ್‌ನಲ್ಲಿ ಸಂಭವಿಸಿದೆ. ಅಡ್ಯಾರ್‌ನಲ್ಲಿ ವಾಸವಿದ್ದ ಬಿಹಾರ ಮೂಲದ ದಂಪತಿಯ 10 ತಿಂಗಳ ಅನೀಶ್‌ ಕುಮಾರ್‌ ಸಾವನ್ನಪ್ಪಿರುವ ನತದೃಷ್ಟ ಮಗು. ಕಳೆದ ಶನಿವಾರ ಮಧ್ಯಾಹ್ನ 1.30ರ ವೇಳೆಗೆ ಮನೆಯಲ್ಲಿ ತಂದೆ ಸೇದಿ ಎಸೆದಿದ್ದ ಬೀಡಿಯ ತುಂಡನ್ನು ಮಗು ನುಂಗಿದೆ. ಅಸ್ವಸ್ಥಗೊಂಡ ಮಗುವನ್ನು ಸಂಜೆ ವೇಳೆಗೆ ವೆನ್ಲಾಕ್‌ ಆಸ್ಪತ್ರೆಗೆ ಕರೆತಂದಿದ್ದರು. ಆದರೆ

ಬೀಡಿಯ ತುಂಡು ನುಂಗಿ 10 ತಿಂಗಳ ಮಗು ಸಾವು Read More »

ನದಿಯೊಂದರ ಸೇತುವೆ ಮೇಲಿನಿಂದ ತೆರಳುತ್ತಿದ್ದ ಬೈಕ್‍ | ಬೈಕ್‍ ಸಮೇತ ಕೊಚ್ಚಿ ಹೋದ ಸವಾರರು

ಸವಣಾಲು: ಹಿತ್ತಿಲವೇಲ ಕೂಡುಜಾಲು ಸಮೀಪದ ನದಿಯಲ್ಲಿ ಬೈಕ್ ಸಮೇತ ಯುವಕರಿಬ್ಬರು ಕೊಚ್ಚಿ ಹೋಗಿರುವ ಘಟನೆ ಭಾನುವಾರ ನಡೆದಿದ್ದು, ಬೈಕ್‍ ಸವಾರರು ಪವಾಡಸದೃಶವಾಗಿ ಪಾರಾಗಿದ್ದಾರೆ. ಸವಣಾಲು ಹಿತ್ತಿಲಪೇಲ ಪ್ರದೇಶದ ಕೆಳಗಿನ ವೇಲ ಎಂಬಲ್ಲಿನ ನಿವಾಸಿ ಕರಿಯ ಮಲೆಕುಡಿಯ ಎಂಬವರ ಮಗ ಸತೀಶ್‍ ಮತ್ತು ಸಹಸವಾರ ಸುಳ್ಳೋಡಿ ನಿವಾಸಿ ಸಂಜೀವ ಪೂಜಾರಿ ಎಂಬವರು ಕೆಲಸಕ್ಕೆಂದು ಬೈಕ್‍ ನಲ್ಲಿ ಹೊರಟು ನದಿಯನ್ನು ಬೈಕ್ ಸಮೇತ ದಾಟುವ ಸಾಹಸ ಮಾಡಿದಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಅದೃಷ್ಟವಶಾತ್ ಬೈಕ್ ನದಿಯ ಬದಿಯಲ್ಲಿ ಸಿಲುಕಿದ್ದು, ಯುವಕರಿಬ್ಬರು

ನದಿಯೊಂದರ ಸೇತುವೆ ಮೇಲಿನಿಂದ ತೆರಳುತ್ತಿದ್ದ ಬೈಕ್‍ | ಬೈಕ್‍ ಸಮೇತ ಕೊಚ್ಚಿ ಹೋದ ಸವಾರರು Read More »

ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಕಾರು : ಅಪಾಯದಿಂದ ಪಾರು

ಮುಂಡಾಜೆ:  ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ಮುಂಡಾಜೆ ಸಮೀಪದ ಸೀಟ್‍ ಬಳಿ ನಡೆದಿದೆ. ಕಾರಿನಲ್ಲಿ ಕಕ್ಕಿಂಜೆಯ ಚಿಬಿದ್ರೆ ಗ್ರಾಮ ಮುದ್ದಿನಡ್ಕ ನಿವಾಸಿ ಹರೀಶ್ ಗೌಡ, ಪತ್ನಿ ಹಾಗೂ ಇಬ್ಬರು ಮಕ್ಕಳು ಕಕ್ಕಿಂಜೆ ಯಿಂದ ಬೆಳ್ತಂಗಡಿ ಬರುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ. ಹರೀಶ್ ಗೌಡ, ಪತ್ನಿ ಹಾಗೂ ಇಬ್ಬರು ಮಕ್ಕಳು ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಕಾರು : ಅಪಾಯದಿಂದ ಪಾರು Read More »

ವೀರಮಂಗಲ ಪಿಎಂಶ್ರೀ ಶಾಲೆಗೆ ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ |  ಸುಂದರ ಭಾರತ ಪುಸ್ತಕ ಟ್ರಸ್ಟ್  ನೀಡುತ್ತಿರುವ ನೋಟ್ ಬುಕ್ ವಿತರಣೆ

ಸುಳ್ಯ : ತಾ.ಪಂ ಸಭಾಭವನದಲ್ಲಿ ನಡೆದ  ಸುಂದರ ಭಾರತ ಟ್ರಸ್ಟ್ ಕೊಡಮಾಡಿದ ನೋಟ್ ಪುಸ್ತಕವನ್ನು ಮಂಗಳೂರು ಸಂಸದ ಕ್ಯಾ.ಬ್ರಿಜೇಶ್ ಚೌಟ ವೀರಮಂಗಲ ಪಿಎಂಶ್ರೀ ಶಾಲೆಗೆ ವಿತರಿಸಿ ಶುಭ ಹಾರೈಸಿದರು. ಸುಳ್ಯ  ಕ್ಷೇತ್ರದ ಮಾನ್ಯ ಶಾಸಕರಾದ ಕು. ಭಾಗೀರಥಿ ಮುರಳ್ಯ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ತಾ.ಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ,ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಸುಳ್ಯ ನಗರಸಭಾಧ್ಯಕ್ಷರಾದ ಶಶಿಕಲಾ ಸುಂದರ ಭಾರತ ಟ್ರಸ್ಟ್ ಮುಖ್ಯಸ್ಥ ಪ್ರತಾಪ್ ಪರಾಶರ ಉಪಸ್ಥಿತರಿದ್ದರು.

ವೀರಮಂಗಲ ಪಿಎಂಶ್ರೀ ಶಾಲೆಗೆ ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ |  ಸುಂದರ ಭಾರತ ಪುಸ್ತಕ ಟ್ರಸ್ಟ್  ನೀಡುತ್ತಿರುವ ನೋಟ್ ಬುಕ್ ವಿತರಣೆ Read More »

ಸುರತ್ಕಲ್‌ : ಮೇಲ್ಸೇತುವೆಯಿಂದ ಸರ್ವಿಸ್‌ ರಸ್ತೆಗೆ ಬಿದ್ದ ಕಾರು

ಸುರತ್ಕಲ್‌: ಸುರತ್ಕಲ್‌ ಎನ್‌ಐಟಿಕೆ ಸಮೀಪ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮೇಲ್ಸೇತುವೆಯಿಂದ ಕೆಳಗಿನ ರಸ್ತೆಗೆ ಬಿದ್ದ ಘಟನೆ ಭಾನುವಾರ ಸಂಭವಿಸಿದೆ. ಮಂಗಳೂರಿನಿಂದ ಉಡುಪಿ ಕಡೆ ತೆರಳುತ್ತಿದ್ದ ಕಾರನ್ನು ಕುಂದಾಪುರ ನಿವಾಸಿ ಪ್ರತ್ಯಕ್ಷ ಎಂಬವರು ಚಲಾಯಿಸುತ್ತಿದ್ದರು. ಅಪಘಾತದಿಂದ ಅವರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರತ್ಯಕ್ಷ ಅವರು ಕೆಲಸದ ನಿಮಿತ್ತ ಮಂಗಳೂರಿಗೆ ಹೋಗಿ ಕುಂದಾಪುರಕ್ಕೆ ಹಿಂದಿರುಗುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ 66ರ ಎನ್‌ಐಟಿಕೆ ಬಳಿ ಏಕಾಏಕಿ ಬ್ರೇಕ್‌ ಹಾಕಿದ್ದಾರೆ. ಇದರಿಂದ ನಿಯಂತ್ರಣ ಕಳೆದುಕೊಂಡ ಕಾರು ಮೇಲ್ಸೇತುವೆಯಿಂದ

ಸುರತ್ಕಲ್‌ : ಮೇಲ್ಸೇತುವೆಯಿಂದ ಸರ್ವಿಸ್‌ ರಸ್ತೆಗೆ ಬಿದ್ದ ಕಾರು Read More »

error: Content is protected !!
Scroll to Top