ದಕ್ಷಿಣ ಕನ್ನಡ

ಸಂಸದ ತೇಜಸ್ವಿ ಸೂರ್ಯ ದಂಪತಿ  ಕಾಪು ಮಾರಿಯಮ್ಮ ದೇವಸ್ಥಾನ ಭೇಟಿ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ,  ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ದಂಪತಿ  ಭಾನುವಾರ ಸಂಜೆ ಕಾಪು ಶ್ರೀ ಹೊಸ ಮಾರಿಯಮ್ಮ ದೇವಸ್ಥಾನ ಸಂದರ್ಶಿಸಿ ದೇವಿಯ ದರ್ಶನ ಪಡೆದರು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯಾ ಅವರು ದೇವಸ್ಥಾನದ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ಸಮ್ಮುಖದಲ್ಲಿ ದಂಪತಿಗೆ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿದರು. ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ […]

ಸಂಸದ ತೇಜಸ್ವಿ ಸೂರ್ಯ ದಂಪತಿ  ಕಾಪು ಮಾರಿಯಮ್ಮ ದೇವಸ್ಥಾನ ಭೇಟಿ Read More »

ರೈಲು ಡಿಕ್ಕಿ ಹೊಡೆದು ಮೃತ್ಯು

ಪುತ್ತೂರು: ರೈಲು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಎಡಮಂಗಲ ಮರ್ದೂರಡ್ಕ ಎಂಬಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ವಿಶ್ವನಾಥ ಮೃತಪಟ್ಟವರು. ವಿಶ್ವನಾಥರು ರೈಲ್ವೆ ಟ್ರ್ಯಾಕ್ ಬಳಿ ಕುಳಿತು ಮೊಬೈಲ್ ನೋಡುತ್ತಿದ್ದಾಗ ರಾತ್ರಿ 10 ಗಂಟೆ ಸುಮಾರಿಗೆ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ರೈಲು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ರೈಲು ಡಿಕ್ಕಿ ಹೊಡೆದು ಮೃತ್ಯು Read More »

ಕಿನ್ನಿಗೋಳಿಯ ಉಳವಾಡಿಯಲ್ಲಿ ಚಿರತೆಯ ಶವ ಪತ್ತೆ

ಮಂಗಳೂರು : ಚಿರತೆಯೊಂದು ಅಸಹಜ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಇಂದು ಬೆಳಗ್ಗೆ (ಮಾ.೧೬) ಕಿನ್ನಿಗೋಳಿ ಸಮೀಪದ ಉಳವಾಡಿಯಲ್ಲಿ ನಡೆದಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಿನ್ನಿಗೋಳಿ ಸುತ್ತಮುತ್ತ ಹಲವು ಬಾರಿ ಚಿರತೆ ಕಂಡು ಬಂದಿದ್ದು, ಸಾಕು ನಾಯಿಗಳು ಚಿರತೆಗೆ ಆಹಾರವಾಗಿವೆ ಎನ್ನಲಾಗಿದೆ. ಚಿರತೆ ಓಡಾಡುವ ದೃಶ್ಯಗಳು ಸಿ.ಸಿ. ಟಿವಿಯಲ್ಲಿ ಸೆರೆಯಾಗಿದ್ದು, ಕೆಲ ತಿಂಗಳ ಹಿಂದೆ ಮೂಲ್ಕಿಯಲ್ಲಿ ಮನೆಯೊಳಗೆ ಚಿರತೆ ನುಗ್ಗಿದೆ ಎಂದು ತಿಳಿದು ಬಂದಿದೆ.

ಕಿನ್ನಿಗೋಳಿಯ ಉಳವಾಡಿಯಲ್ಲಿ ಚಿರತೆಯ ಶವ ಪತ್ತೆ Read More »

ವಿದ್ಯಾ ಭಾರತಿ ಜಿಲ್ಲಾ ಸಮೀಕ್ಷಾ ಯೋಜನೆಯ ವಾರ್ಷಿಕ ಸಭೆ

 ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಸಮೀಕ್ಷಾ ಯೋಜನೆಯ ವಾರ್ಷಿಕ ಸಬೆ  ಬೈಠಕ್ ಮುಂಡ್ಕಿನ ಜೆಡ್ಡು   ಆರ್. ಕೆ .ಪಾಟ್ಕರ್ ಹಿರಿಯ ಪ್ರಾಥಮಿಕ ಶಾಲೆ ಚೇರ್ಕಾಡಿಯಲ್ಲಿ ನಡೆಯಿತು. ವಿದ್ಯಾ ಭಾರತಿ ಜಿಲ್ಲಾ ಸಮೀಕ್ಷಾ ಯೋಜನೆಯ ವಾರ್ಷಿಕ ಸಭೆ ಉಡುಪಿ ಜಿಲ್ಲಾ ಅಧ್ಯಕ್ಷ ಪಾಂಡುರಂಗ ಪೈ ಸಿದ್ದಾಪುರ  ಅಧ್ಯಕ್ಷತೆಯಲ್ಲಿ  ಜರಗಿತು. ವಿದ್ಯಾಭಾರತಿ ಕರ್ನಾಟಕ ಪ್ರಾಂತ ಸಂಘಟನ ಕಾರ್ಯದರ್ಶಿ ಉಮೇಶ ಎಮ್ .ಸರಸ್ವತಿ ವಂದನೆಯ ಮೂಲಕ ದೀಪ ಬೆಳಗಿಸಿ ಬೈಠಕ್ ಗೆ ಚಾಲನೆ ನೀಡಿದರು.  ಆರಂಭದಲ್ಲಿ ಸಂಯೋಜಿತ ಶಿಕ್ಷಣ ಸಂಸ್ಥೆಗಳ ವಾರ್ಷಿಕ

ವಿದ್ಯಾ ಭಾರತಿ ಜಿಲ್ಲಾ ಸಮೀಕ್ಷಾ ಯೋಜನೆಯ ವಾರ್ಷಿಕ ಸಭೆ Read More »

ಬೈಕ್‍ ಗೆ ಕಾರು ಡಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿದ  ಆರೋಪಿಗೆ  ನ್ಯಾಯಾಂಗ  ಬಂಧನ

ಮಂಗಳೂರು: ನಗರದ ಸಮೀಪ ಹಳೆಯ ದ್ವೇಷಕ್ಕೆ ಸಂಬಂಧಿಸಿ ಬಿಜೈ ಕಾಪಿಕಾಡ್ 6ನೇ ಕ್ರಾಸ್‌ನಲ್ಲಿ ಬೈಕಿಗೆ ಕಾರು ಢಿಕ್ಕಿ ಹೊಡೆಸಿ ಬೈಕ್ ಸವಾರನನ್ನು ಕೊಲೆ ಮಾಡಲು ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಬಂಧಿತ ಆರೋಪಿ ಸತೀಶ್ ಕುಮಾರ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಪಾದಚಾರಿ ಮಹಿಳೆ ಯಲ್ಲವ್ವ ಉಪ್ನಾಳ ಮತ್ತು ಬೈಕ್ ಸವಾರ ಮುರಳಿ ಪ್ರಸಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಯು ಗುರುವಾರ ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿತ್ತು ಎಂದು ತಿಳಿದು ಬಂದಿದೆ. ಪೊಲೀಸರು

ಬೈಕ್‍ ಗೆ ಕಾರು ಡಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿದ  ಆರೋಪಿಗೆ  ನ್ಯಾಯಾಂಗ  ಬಂಧನ Read More »

ಕೆಲಂಬೀರಿಯಲ್ಲಿ ಶ್ರೀ ಬ್ರಹ್ಮಬೈದೆರುಗಳ ನೇಮೋತ್ಸವ

ಕುದ್ಮಾರು : ಶ್ರೀ ಬ್ರಹ್ಮಬೈದೆರುಗಳ ಗರಡಿ , ಕೆಲಂಬೀರಿ ಕುದ್ಮಾರುವಿನಲ್ಲಿ ಇಂದು ಬೆಳಗ್ಗೆ 7 ಗಂಟೆಗೆ ಶ್ರೀ ಕೊಡಮಣಿತ್ತಾಯ ನೇಮೋತ್ಸವ ನಡೆಯಿತು. ಬಳಿಕ ಶ್ರೀ ಬ್ರಹ್ಮಬೈದೆರುಗಳ ನೇಮೋತ್ಸವ ನಡೆಯಲಿದ್ದು, ಸಂಜೆ 4 ಗಂಟೆಗೆ  ಶ್ರೀ ಬ್ರಹ್ಮಬೈದೆರುಗಳ ಭಂಡಾರ ತೆಗೆಯುವುದು, ರಾತ್ರಿ 6 ಗಂಟೆಗೆ ಪಂಚಲಿಂಗೇಶ್ವರ ಕುಣಿತ ಭಜನಾ ಮಕ್ಕಳ ತಂಡ, ಕುದ್ಮಾರು ಇವರಿಂದ ಭಜನಾ ಕಾರ್ಯಕ್ರಮ ನೆರವೇರಲಿದೆ. ರಾತ್ರಿ 7ರಿಂದ ಗರಡಿಯಲ್ಲಿ ಗಂಧಪ್ರಸಾದ ವಿತರಣೆ, ರಾತ್ರಿ 8:30 ಅನ್ನಸಂತರ್ಪಣೆ,  ಇಂದು ರಾತ್ರಿ 9 ಗಂಟೆಗೆ ಶ್ರೀ ಬ್ರಹ್ಮಬೇದೆರುಗಳ

ಕೆಲಂಬೀರಿಯಲ್ಲಿ ಶ್ರೀ ಬ್ರಹ್ಮಬೈದೆರುಗಳ ನೇಮೋತ್ಸವ Read More »

ಅನಾರೋಗ್ಯದಿಂದ ಹಿರಿಯ ವಿದ್ವಾಂಸ ಡಾ.ವಾಮನ ನಂದಾವರ ನಿಧನ

ನಂದಾವರ : ಹಿರಿಯ ವಿದ್ವಾಂಸ ಡಾ.ವಾಮನ ನಂದಾವರ (81) ಹಲವು ವರ್ಷಗಳಿಂದ ಅನಾರೋಗ್ಯ ಬಳಲುತಿದ್ದು, ಇಂದು (ಮಾ.15) ಶನಿವಾರ ನಿಧನರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರ ಗ್ರಾಮದವರಾದ ವಿದ್ವಾಂಸ ಡಾ.ವಾಮನ ನಂದಾವರರವರು ಕನ್ನಡ ಹಾಗೂ ತುಳು ಭಾಷಾ ವಿದ್ವಾಂಸ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾಗಿದ್ದರು. ಇವರು ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ತಮ್ಮ ಪದವಿ ವ್ಯಾಸಂಗವನ್ನು ಮಾಡಿದ್ದು, ನಂತರ ಮಂಗಳೂರು ಸರಕಾರಿ ಮಹಾವಿದ್ಯಾಲಯದಲ್ಲಿ ಬಿಎಡ್, ಕರ್ನಾಟಕ ವಿವಿಯಿಂದ ಎಂ.ಎ.ಕನ್ನಡ ಪದವಿ ಗಳಿಸಿದ್ದರು.

ಅನಾರೋಗ್ಯದಿಂದ ಹಿರಿಯ ವಿದ್ವಾಂಸ ಡಾ.ವಾಮನ ನಂದಾವರ ನಿಧನ Read More »

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ “ಯುವಕರ ಸಾಮಾಜೀಕರಣ ಹಾಗೂ ಕೌಟುಂಬಿಕ ಭದ್ರತಗೆ ಪ್ರಸ್ತುತ ಸಮಾಜದಲ್ಲಿರುವ ಸವಾಲುಗಳು ” ಕುರಿತಾದ ಕಾರ್ಯಗಾರ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ಆಂತರಿಕ ಗುಣಮಟ್ಟ ಭರವಸಾ ಕೋಶ, ಸಮಾಜಶಾಸ್ತ್ರ ವಿಭಾಗ, ವಿವೇಕಾನಂದ ಕಾಲೇಜು ಪುತ್ತೂರು, ಸಮಾಜಶಾಸ್ತ್ರ ವಿಭಾಗದ ಜಂಟಿ ಆಶ್ರಯದಲ್ಲಿ, ಒಡಂಬಡಿಕೆ ಕಾರ್ಯಕ್ರಮವಾಗಿ ಯುವಕರ ಸಾಮಾಜೀಕರಣ ಹಾಗೂ ಕೌಟುಂಬಿಕ ಭದ್ರತೆಗೆ ಪ್ರಸ್ತುತ ಸಮಾಜದಲ್ಲಿರುವ ಸವಾಲುಗಳು ಎಂಬ ವಿಷಯದ ಕುರಿತು ಮಾ14  ರಂದು ಒಂದು ದಿನದ ಕಾರ್ಯಗಾರ  ನಡೆಯಿತು. ಎಂ ಎಲ್ ಟಿ ಸಿ ಕಾಲೇಜ್ ಉಜಿರೆ, ಇಲ್ಲಿನ ನಿವೃತ್ತ ಪ್ರಾಂಶುಪಾಲ ಅಶೋಕ್ ಕುಮಾರ್ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ 

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ “ಯುವಕರ ಸಾಮಾಜೀಕರಣ ಹಾಗೂ ಕೌಟುಂಬಿಕ ಭದ್ರತಗೆ ಪ್ರಸ್ತುತ ಸಮಾಜದಲ್ಲಿರುವ ಸವಾಲುಗಳು ” ಕುರಿತಾದ ಕಾರ್ಯಗಾರ Read More »

ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಸಿಲಿಂಡರ್ ಲಾರಿ ಪಲ್ಟಿ

ಸುಳ್ಯ: ತಾಲೂಕಿನ ಕುಂಬರ್ಚೋಡು ತಿರುವಿನಲ್ಲಿ ತಡ ರಾತ್ರಿ ಭಾರತ್ ಗ್ಯಾಸ್ ಸಿಲಿಂಡರ್ ಸರಬರಾಜು ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಲಾರಿ ಚಾಲಕನಿಗೆ ಗಾಯಗಳಾಗಿದ್ದು, ಸ್ಥಳೀಯರ ಸಹಾಯದಿಂದ ಅವರನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದೂ ತಿಳಿದುಬಂದಿದೆ. ಅಪಘಾತದ ಕಾರಣವಾಗಿ ಸ್ಥಳದಲ್ಲಿ ಅಲ್ಪ ಸಮಯ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಲಾರಿಯಲ್ಲಿ ಇದ್ದ ಗ್ಯಾಸ್ ಸಿಲಿಂಡರ್‌ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದೆ ಮತ್ತು ಅಲ್ಲಿ ಬದಿಯ ಕಂದಕಕ್ಕೂ ಉರುಳಿದೆ ಎನ್ನಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಸಿಲಿಂಡರ್ ಲಾರಿ ಪಲ್ಟಿ Read More »

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಶರವೂರು ಜಾತ್ರೋತ್ಸವ

ಶರವೂರು : ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಶರವೂರು ಜಾತ್ರೋತ್ಸವದ ಅಂಗವಾಗಿ ಶ್ರೀ ದೇವಿಯ ವರ್ಷಾವಧಿ ಉತ್ಸವ, ಪರಿವಾರ ದೈವಗಳಿಗೆ ಭಂಡಾರ ಹಿಡಿದು ನೇಮೋತ್ಸವ ಹಾಗೂ ಶ್ರೀ ಭದ್ರಕಾಳಿ ಅಮ್ಮನವರ ಗುಡಿಯಲ್ಲಿ ಪೂಜೆ ಮಾ. 14 ರಿಂದ ಮಾ. 24 ರವರೆಗೆ ನಡೆಯಲಿದೆ. ಮಾ. 14 ರಂದು ಬೆಳಗ್ಗೆ 8 ಗಂಟೆಗೆ ಸ್ವಸ್ತಿ ಪುಣ್ಯಾಹ ವಾಚನ, ನವಕ ಪ್ರಧಾನ, ಗಣಹೋಮ, ಕಲಶಾಭಿಷೇಕ, ಗೊನೆ ಮುಹೂರ್ತ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ 7 ಗಂಟೆಗೆ ಧ್ವಜಾರೋಹಣ, ಮಹಾಪೂಜೆ, ಭೂತಬಲಿ,

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಶರವೂರು ಜಾತ್ರೋತ್ಸವ Read More »

error: Content is protected !!
Scroll to Top