ದಕ್ಷಿಣ ಕನ್ನಡ

ವಿಟ್ಲ: ಅಕ್ರಮವಾಗಿ ಸಾಗಿಸುತ್ತಿದ್ದ ಕೆಂಪುಕಲ್ಲು, ಲಾರಿ ವಶ

ವಿಟ್ಲ : ಎರಡು ಲಾರಿಗಳಲ್ಲಿ ಅಕ್ರಮವಾಗಿ ಕೆಂಪುಕಲ್ಲುಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ವಿಟ್ಲ ಪೊಲೀಸರು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿ ವಶಕ್ಕೆ ಪಡೆದಿದ್ದಾರೆ. ಶನಿವಾರ ವಿಟ್ಲ ಠಾಣಾ ಉಪನಿರೀಕ್ಷಕ ರಾಮಕೃಷ್ಣ ಅವರು ತಮ್ಮ ಸಿಬ್ಬಂದಿಯೊಂದಿಗೆ ವಿಟ್ಲ ಕಸಬಾ ಗ್ರಾಮದ ಕಾಶಿಮಠ ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಉಕ್ಕುಡ ಕಡೆಯಿಂದ ವಿಟ್ಲ ಕಡೆಗೆ ಬರುತ್ತಿದ್ದ KA 01 AJ 9542 & KA 50 AF 3229 ನೋಂದಣಿ ಸಂಖ್ಯೆಯ ಎರಡು ಲಾರಿಗಳನ್ನು ನಿಲ್ಲಿಸಿ, ತಪಾಸಣೆ ನಡೆಸಲಾಗಿದೆ. ಈ ವೇಳೆ […]

ವಿಟ್ಲ: ಅಕ್ರಮವಾಗಿ ಸಾಗಿಸುತ್ತಿದ್ದ ಕೆಂಪುಕಲ್ಲು, ಲಾರಿ ವಶ Read More »

ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣ : 13 ಕಡೆ ಎನ್‌ಐಎ ದಾಳಿ

ಬಜ್ಪೆ, ಸುರತ್ಕಲ್‌ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಅಧಿಕಾರಿಗಳಿಂದ ಪರಿಶೋಧನೆ ಮಂಗಳೂರು: ಸಂಘ ಪರಿವಾರದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯ ಅಧಿಕಾರಿಗಳು ಶನಿವಾರ ಬೆಳಗ್ಗೆ ಬಜ್ಪೆ ಮತ್ತು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹಲವೆಡೆ ದಾಳಿ ಮಾಡಿದ್ದಾರೆ. ಈ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಮನೆ ಸೇರಿದಂತೆ ಸುಮಾರು 13 ಕಡೆಗಳಲ್ಲಿ ಎನ್‌ಐಎ ಅಧಿಕಾರಿಗಳು ಇಂದು ಬೆಳಗ್ಗೆ 5 ಗಂಟೆಯ ಸುಮಾರಿಗೆ ಏಕಕಾಲಕ್ಕೆ ದಾಳಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣ : 13 ಕಡೆ ಎನ್‌ಐಎ ದಾಳಿ Read More »

ಧರ್ಮಸ್ಥಳ ಪ್ರಕರಣ : 15 ವರ್ಷಗಳ ಪೊಲೀಸ್‌ ದಾಖಲೆಗಳು ನಾಶ?

ಆರ್‌ಟಿಐ ಅಡಿ ಕೇಳಿದ ಮಾಹಿತಿಗೆ ದಾಖಲೆಗಳನ್ನು ಡಿಲೀಟ್‌ ಮಾಡಲಾಗಿದೆ ಎಂದು ಉತ್ತರಿಸಿದ ಪೊಲೀಸರು ಧರ್ಮಸ್ಥಳ: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳ ತನಿಖೆಯನ್ನು ವಿಶೇಷ ತನಿಖಾ ತಂಡ ಚುರುಕುಗೊಳಿಸಿರುವಂತೆಯೇ 2000 ಇಸವಿಯಿಂದ 2015ರ ನಡುವೆ ದಾಖಲಾದ ಅಪರಿಚಿತ ಸಾವಿನ ಪ್ರಕರಣಗಳ ಪ್ರಮುಖ ದಾಖಲೆಗಳು(ಯುಡಿಆರ್‌) ಡಿಲೀಟ್ ಆಗಿದೆ ಎಂದು ಹೇಳಲಾಗಿದ್ದು, ಇದು ಹೊಸ ವಿವಾದ ಸೃಷ್ಟಿಸಿದೆ. ಇದೇ ಅವಧಿಯಲ್ಲಿ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ದೂರುದಾರ ಅನಾಮಿಕ ವ್ಯಕ್ತಿ ಆರೋಪಿಸಿದ್ದಾರೆ. 1998 ಮತ್ತು 2014ರ ನಡುವೆ ಲೈಂಗಿಕ

ಧರ್ಮಸ್ಥಳ ಪ್ರಕರಣ : 15 ವರ್ಷಗಳ ಪೊಲೀಸ್‌ ದಾಖಲೆಗಳು ನಾಶ? Read More »

ಮಂಗಳೂರು : ಕಾರಿನಲ್ಲಿ ಸಾಗಿಸುತ್ತಿದ್ದ 123 ಕೆಜಿ ಗಾಂಜಾ ವಶ, ಮೂವರ ಸೆರೆ

5 ಮೊಬೈಲ್‌, ಕಾರು ಸಹಿತ 46.20 ಲ.ರೂ. ಸೊತ್ತು ವಶಪಡಿಸಿಕೊಂಡ ಪೊಲೀಸರು ಮಂಗಳೂರು : ಮೂಡುಬಿದಿರೆ ತಾಲೂಕಿನ ಬೆಳುವಾಯಿ ಗ್ರಾಮದ ಕಾಂತಾವರ ಕ್ರಾಸ್‌ನ ಮಠದಕೆರೆ ಎಂಬಲ್ಲಿ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಗಾಂಜಾ ಸಹಿತ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕಾಸರಗೋಡು ಜಿಲ್ಲೆಯ ಆಡೂರಿನ ಮಸೂದ್ ಎಂ.ಕೆ. (45), ಕಾಸರಗೋಡು ಜಿಲ್ಲೆಯ ದೇಲಂಪಾಡಿಯ ಮುಹಮ್ಮದ್ ಆಶಿಕ್ (24) ಮತ್ತು ಸುಬೇರ್ (30) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಸಾಗಾಟಕ್ಕೆ ಬಳಸಿದ ಎರಡು ಕಾರು

ಮಂಗಳೂರು : ಕಾರಿನಲ್ಲಿ ಸಾಗಿಸುತ್ತಿದ್ದ 123 ಕೆಜಿ ಗಾಂಜಾ ವಶ, ಮೂವರ ಸೆರೆ Read More »

ಉಪ್ಪಿನಂಗಡಿ : ವಿವಾಹಿತ ಮಹಿಳೆ ನಾಪತ್ತೆ

ಉಪ್ಪಿನಂಗಡಿ : ಇಲ್ಲಿನ 34ನೇ ನೆಕ್ಕಿಲಾಡಿ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಹಾವೇರಿ ಮೂಲದ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಸಂಕ್ರಿಕೊಪ್ಪ ನಿವಾಸಿ ಭೀಮಪ್ಪ ಎಂಬವರ ಪತ್ನಿ ರೇಷ್ಮಾ ಮಲಲಿ ಭಜಂತ್ರಿ (26) ನಾಪತ್ತೆಯಾದ ಮಹಿಳೆಯಾಗಿದ್ದು, ಆಕೆ ಪತಿಯೊಂದಿಗೆ 34ನೇ ನೆಕ್ಕಿಲಾಡಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಭೀಮಪ್ಪ ನಾಗರ ಪಂಚಮಿಯ ಹಬ್ಬಕ್ಕಾಗಿ ಜು.26ರಂದು ಹಾವೇರಿಗೆ ಹೋಗಿ ಜು.30ರಂದು ಹಿಂತಿರುಗಿ ಬರುವಾಗ ಮನೆಯಲ್ಲಿದ್ದ ಪತ್ನಿ ನಾಪತ್ತೆಯಾಗಿದ್ದರು.

ಉಪ್ಪಿನಂಗಡಿ : ವಿವಾಹಿತ ಮಹಿಳೆ ನಾಪತ್ತೆ Read More »

ನಾಪತ್ತೆಯಾಗಿದ್ದ ಯುವಕನ ಶವ ನೇತ್ರಾವತಿ ನದಿಯಲ್ಲಿ ಪತ್ತೆ

ಡ್ರೋನ್‌ ಸಹಾಯದಿಂದ ತುಂಬೆ ಡ್ಯಾಂ ಕೆಳಗೆ ಶವ ಪತ್ತೆ ಹಚ್ಚಿದ ಮುಳುಗು ಪರಿಣತರು ಬಂಟ್ವಾಳ : ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕಡೇಶಿವಾಲಯ ನಿವಾಸಿ ಹೇಮಂತ್ ಆಚಾರ್ಯ(21) ಎಂಬವರ ಮೃತದೇಹ ನೇತ್ರಾವತಿ ನದಿಯಲ್ಲಿ ಗುರುವಾರ ಪತ್ತೆಯಾಗಿದೆ. ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬಜಾಲ್ ಮುಗೇರು ಬಳಿ ನೇತ್ರಾವತಿ ನದಿಯ ಮಧ್ಯದಲ್ಲಿ ಅವರ ದೇಹ ತೇಲುತ್ತಿರುವುದು ಪತ್ತೆಯಾಗಿದೆ. ಜು.27ರಂದು ಹೇಮಂತ್ ನಾಪತ್ತೆಯಾಗಿದ್ದು, ಈ ಕುರಿತಾಗಿ ಜು.28ರಂದು ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿತ್ತು. ಜು.29ರಂದು ಹೇಮಂತ್‌ನ ದ್ವಿಚಕ್ರ ವಾಹನ ಜಕ್ರಿಬೆಟ್ಟುವಿನಲ್ಲಿ

ನಾಪತ್ತೆಯಾಗಿದ್ದ ಯುವಕನ ಶವ ನೇತ್ರಾವತಿ ನದಿಯಲ್ಲಿ ಪತ್ತೆ Read More »

ಬಂಟ್ವಾಳ : ಅಡಿಕೆ ಕಳ್ಳನ ಬಂಧನ

2,20,00 ರೂ. ಮೌಲ್ಯದ ಒಣ ಅಡಿಕೆ ಕಳ್ಳತನ ಮಾಡಿದ್ದ ಆರೋಪಿ ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಣಿನಾಲ್ಕೂರು ಗ್ರಾಮದ ಪೂಂಜೂರು ಎಂಬಲ್ಲಿ ಜುಲೈ 3ರಿಂದ 22ರ ಅವಧಿಯಲ್ಲಿ ಸುಮಾರು 45 ಪ್ಲಾಸ್ಟಿಕ್ ಚೀಲದಲ್ಲಿದ್ದ 2,20,00 ರೂ. ಮೌಲ್ಯದ ಒಣ ಅಡಿಕೆ ಕಳ್ಳತನ ಪ್ರಕರಣವನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಜುಲೈ 28ರಂದು ಆರೋಪಿಗಳಲ್ಲಿ ಓರ್ವನಾದ ಸುಳ್ಯ ಪೈಚಾರು ಗ್ರಾಮ ನಿವಾಸಿ ಸತೀಶ್ (29 ವರ್ಷ) ಎಂಬಾತನನ್ನು ಬಂಧಿಸಿ ಕಳವುಗೈದ 74,000

ಬಂಟ್ವಾಳ : ಅಡಿಕೆ ಕಳ್ಳನ ಬಂಧನ Read More »

ತುಳುವಿಗೆ ಅಧಿಕೃತ ಭಾಷೆ ಸ್ಥಾನ ಅಧ್ಯಯನ ನಡೆಸಲು ಸಮಿತಿ ರಚಿಸಿದ ಸರ್ಕಾರ

ಆಂಧ್ರ ಪ್ರದೇಶಕ್ಕೆ ತೆರಳಿ ಮಾನದಂಡಗಳ ಕುರಿತು ಅಧ್ಯಯನ ನಡೆಸಲಿರುವ ಸಮಿತಿ ಮಂಗಳೂರು: ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಲು ಅನುಸರಿಸಬೇಕಾದ ಮಾನದಂಡಗಳ ಬಗ್ಗೆ ಆಂಧ್ರ ಪ್ರದೇಶಕ್ಕೆ ತೆರಳಿ ಅಧ್ಯಯನ ನಡೆಸಲು ರಾಜ್ಯ ಸರಕಾರ ಸಮಿತಿ ರಚಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರ ಸಹಿತ 5 ಮಂದಿಯ ತಂಡವನ್ನು ಎರಡನೇ ಭಾಷೆಯನ್ನು ಅಧಿಕೃತ ಭಾಷೆ ಎಂದು ಘೋಷಿಸಲು ಅನುಸರಿಸಿರುವ ಮಾನದಂಡಗಳ ಅಧ್ಯಯನ ಮಾಡುವ ಸಲುವಾಗಿ ರಚನೆ ಮಾಡಲಾಗಿದೆ.

ತುಳುವಿಗೆ ಅಧಿಕೃತ ಭಾಷೆ ಸ್ಥಾನ ಅಧ್ಯಯನ ನಡೆಸಲು ಸಮಿತಿ ರಚಿಸಿದ ಸರ್ಕಾರ Read More »

ಮಂಗಳೂರಿನಲ್ಲಿ ಎನ್‌ಐಎ ಕಚೇರಿ ಸ್ಥಾಪನೆ : ಅಮಿತ್‌ ಶಾಗೆ ಕ್ಯಾ.ಬ್ರಿಜೇಶ್‌ ಚೌಟ ಮನವಿ

ಕರಾವಳಿಯಲ್ಲಿ ಉಗ್ರರ ಸ್ಲೀಪರ್‌ ಸೆಲ್‌ಗಳ ಆತಂಕ ಇರುವ ಹಿನ್ನೆಲೆಯಲ್ಲಿ ಅಗತ್ಯ ಎಂದು ಮನವರಿಕೆ ಮಂಗಳೂರು: ಹಿಂದೂ ಕಾರ್ಯಕರ್ತರ ಹತ್ಯೆ, ಡ್ರಗ್ಸ್ ಮಾಫಿಯಾ, ಭಟ್ಕಳ, ಕಾಸರಗೋಡು ಸೇರಿದಂತೆ ಕರಾವಳಿ ಭಾಗದಲ್ಲಿ ಉಗ್ರ ಚಟುವಟಿಕೆಯ ಸ್ಲೀಪರ್ ಸೆಲ್‌ಗಳ ಆತಂಕದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಆದಷ್ಟು ಬೇಗ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದ ಕಚೇರಿ ಸ್ಥಾಪಿಸಬೇಕೆಂದು ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಮನವಿ ಸಲ್ಲಿಸಿದ್ದಾರೆ. ಮಂಗಳೂರು ಭಟ್ಕಳ, ಕಾಸರಗೋಡಿನಂತಹ ಉಗ್ರ ಚಟುವಟಿಕೆಗಳ ಕೇಂದ್ರಗಳಿಗೆ

ಮಂಗಳೂರಿನಲ್ಲಿ ಎನ್‌ಐಎ ಕಚೇರಿ ಸ್ಥಾಪನೆ : ಅಮಿತ್‌ ಶಾಗೆ ಕ್ಯಾ.ಬ್ರಿಜೇಶ್‌ ಚೌಟ ಮನವಿ Read More »

ಧರ್ಮಸ್ಥಳ ಪ್ರಕರಣ: 6 ನೇ ಪಾಯಿಂಟ್‌ನಲ್ಲಿ ಕಳೇಬರದ ಕುರುಹು ಪತ್ತೆ

ಧರ್ಮಸ್ಥಳ: ದೇಶವನ್ನೇ ‌ತನ್ನೆಡೆ ಸೆಳೆದಿರುವ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ಕ್ಕೆ ಸಂಬಂಧಿಸಿದಂತೆ SIT ಅಧಿಕಾರಿಗಳು ಗುರುತಿಸಲಾದ 6 ನೇ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದ್ದು, ಇಲ್ಲಿ ಕಳೇಬರದ ಕುರುಹು ಸಿಕ್ಕಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ನಿನ್ನೆಯ ಕಾರ್ಯಾಚರಣೆಯಲ್ಲಿ ಪಾನ್ ಕಾರ್ಡ್, ಎಟಿಎಮ್ ಕಾರ್ಡ್, ರವಿಕೆ ‌ಸಿಕ್ಕಿರುವುದಾಗಿ ಅನಾಮಿಕ ದೂರುದಾರನ ಪರ ವಕೀಲ ಮಂಜುನಾಥ ಎನ್. ಪತ್ರ ಹಂಚಿಕೊಂಡಿದ್ದರು. ಆದರೆ ಈ ಬಗ್ಗೆ SIT ಅಧಿಕಾರಿಗಳು ಮಾತ್ರ ಖಚಿತ ಮಾಹಿತಿ ನೀಡಿರಲಿಲ್ಲ. ಆದರೆ ಇಂದು ದೂರುದಾರನ ಪರ

ಧರ್ಮಸ್ಥಳ ಪ್ರಕರಣ: 6 ನೇ ಪಾಯಿಂಟ್‌ನಲ್ಲಿ ಕಳೇಬರದ ಕುರುಹು ಪತ್ತೆ Read More »

error: Content is protected !!
Scroll to Top