ದಕ್ಷಿಣ ಕನ್ನಡ

ಒಂದೇ ಕಡೆ ಹತ್ತು ಶವ ಹೂತ ಹೊಸ ಕಥೆ : ಧರ್ಮಸ್ಥಳ ಪ್ರಕರಣಕ್ಕೆ ಟ್ವಿಸ್ಟ್‌

ಎಸ್‌ಐಟಿಗೆ ತಿಳಿಸದ ವಿಚಾರವನ್ನು ನ್ಯಾಯಾಲಯಕ್ಕೆ ಹೇಳಿದ ಆರೋಪಿ ಚಿನ್ನಯ್ಯ ಧರ್ಮಸ್ಥಳ : ಧರ್ಮಸ್ಥಳ ಪ್ರಕರಣದ ತನಿಖೆ ಒಂದು ಹಂತಕ್ಕೆ ಬಂತು ಎನ್ನುವಾಗಲೇ ಆರೋಪಿ ಚಿನ್ನಯ್ಯ ಮಂಗಳವಾರ ಹೊಸ ಕಥೆ ಹೇಳಿ ಇಡೀ ಪ್ರಕರಣಕ್ಕೆ ಟ್ವಿಸ್ಟ್‌ ನೀಡಿದ್ದಾನೆ. ಕೋರ್ಟ್‌ ಮುಂದೆ ಚಿನ್ನಯ್ಯ ತಾನು ಒಂದೇ ಜಾಗದಲ್ಲಿ ಹತ್ತು ಮೃತದೇಹ ಹೂತಿದ್ದಾಗಿ ಸ್ಫೋಟಕ ಹೇಳಿಕೆ ಕೊಟ್ಟಿದ್ದಾನೆ. ಆದರೆ, ಯಾವ ಜಾಗದಲ್ಲಿ, ಎಲ್ಲಿ, ಯಾವಾಗ ಎಂದು ಮಾತ್ರ ಹೇಳಿಲ್ಲ. ಎಸ್‌ಐಟಿ ಮುಂದೆ ಇಷ್ಟರ ತನಕ ಕೊಡದ ಈ ಮಾಹಿತಿಯನ್ನು ಕೋರ್ಟ್‌ ಮುಂದೆ […]

ಒಂದೇ ಕಡೆ ಹತ್ತು ಶವ ಹೂತ ಹೊಸ ಕಥೆ : ಧರ್ಮಸ್ಥಳ ಪ್ರಕರಣಕ್ಕೆ ಟ್ವಿಸ್ಟ್‌ Read More »

ಬಂಟ್ವಾಳ: ಕಾರು ಡಿಕ್ಕಿ ಹೊಡೆದು ಮೆಕ್ಯಾನಿಕ್‌ ಸಾವು

ಬಂಟ್ವಾಳ : ಬಿ.ಸಿ.ರೋಡ್ ಬಳಿಯ ಗಾಣದಪಡ್ಪು ಎಂಬಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಭೀಕರ ಅಪಘಾತದಲ್ಲಿ ಹೆದ್ದಾರಿ ಬದಿಯಲ್ಲಿ ಕಾರು ದುರಸ್ತಿ ಮಾಡುತ್ತಿದ್ದ ಮೆಕ್ಯಾನಿಕ್‌ ಮತ್ತೊಂದು ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಮೃತರನ್ನು ಬೋಳಾರ್ಂತೂರು ನಿವಾಸಿ ಜಬ್ಬಾರ್ (33) ಎಂದು ಗುರುತಿಸಲಾಗಿದೆ. ಅವರು ಅವಿವಾಹಿತರಾಗಿದ್ದು, ಗಾಣದಪಡ್ಪುವಿನ ಶಿವಗಣೇಶ್ ಬ್ಯಾಟರಿ ಅಂಗಡಿಯಲ್ಲಿ ಆಟೋ ಇಲೆಕ್ಟ್ರಿಕಲ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಜಬ್ಬಾರ್ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಕಾರಿಗೆ ಹಾರ್ನ್ ಅಳವಡಿಸುತ್ತಿದ್ದಾಗ ವೇಣೂರಿನ ವ್ಯಕ್ತಿಯೊಬ್ಬರು ಚಲಾಯಿಸುತ್ತಿದ್ದ ಮತ್ತೊಂದು ಕಾರು ಬಂಟ್ವಾಳ ಬೈಪಾಸ್ ಕಡೆಯಿಂದ

ಬಂಟ್ವಾಳ: ಕಾರು ಡಿಕ್ಕಿ ಹೊಡೆದು ಮೆಕ್ಯಾನಿಕ್‌ ಸಾವು Read More »

ಬೆಂಗಳೂರಿನಲ್ಲಿ ಕಂಬಳ ನಡೆಸಲು ಹೈಕೋರ್ಟ್‌ ಅನುಮತಿ

ಕರಾವಳಿಯಿಂದ ಹೊರಗೆ ಕಂಬಳ ನಡೆಸಲು ಇದ್ದ ಅಡ್ಡಿ ನಿವಾರಣೆ ಮಂಗಳೂರು : ಕರಾವಳಿಯಿಂದ ಹೊರಗೆ ಕಂಬಳ ನಡೆಸುವುದಕ್ಕೆ ಇದ್ದ ಅಡ್ಡಿ ನಿವಾರಣೆಯಾಗಿದೆ. ಕಂಬಳ ಆಯೋಜನೆಗೆ ಪೇಟಾದವರು ತಕರಾರು ಮಾಡಿದ ಹಿನ್ನೆಲೆಯಲ್ಲಿ ನಿಂತು ಹೋಗಿದ್ದ ಮೈಸೂರು, ಬೆಂಗಳೂರು ಹಾಗೂ ಶಿವಮೊಗ್ಗ ಕಂಬಳ ನಡೆಸಲು ಹೈಕೋಟ್೯ ನಿನ್ನೆ ಅನುಮತಿ ನೀಡಿದೆ. ಪುತ್ತೂರು ಶಾಸಕ ಅಶೋಕ್‌ ರೈಯವರು ಬೆಂಗಳೂರಿನಲ್ಲಿ ಕಂಬಲ ಆಯೋಜಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಆದರೆ ಅದರ ಮರುವರ್ಷ ಬೆಂಗಳೂರಿನಲ್ಲಿ ಮತ್ತೆ ಕಂಬಳ ನಡೆಸಲು ಮುಂದಾದಾಗ ಪೆಟಾ ತಕರಾರು ತೆಗೆದು

ಬೆಂಗಳೂರಿನಲ್ಲಿ ಕಂಬಳ ನಡೆಸಲು ಹೈಕೋರ್ಟ್‌ ಅನುಮತಿ Read More »

ಸುಳ್ಯ : 35 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್‌

ಸುಳ್ಯ : ಕಳೆದ ಸುಮಾರು 35 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಕೇರಳದ ತ್ರಿಶ್ಶೂರ್‌ ಜಿಲ್ಲೆಯ ನಾಟಿ ಮನೆಯ ಬಾಲನ್(73) ಎಂದು ಗುರುತಿಸಲಾಗಿದೆ. 1990ರಲ್ಲಿ ಸುಳ್ಯ ತಾಲೂಕಿನ ಅಲೆಟ್ಟಿ ಗ್ರಾಮದ ನಾಗಪಟ್ಟಣ ಎಂಬಲ್ಲಿ ಅಕ್ರಮ ಕೂಟ ಸೇರಿ ಶಾಂತಪ್ಪ ಮತ್ತು ಸುಬ್ಬಯ್ಯ ಎಂಬವರಿಗೆ ತಲ್ವಾರ್‌ನಿಂದ ಹಲ್ಲೆ ಮಾಡಿ ಗಂಭೀರವಾಗಿ ಗಾಯಗೊಳಿಸಿದ ಕೃತ್ಯಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್‌ ರಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಸುಮಾರು 35 ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಈತನನ್ನು ಕೇರಳ ರಾಜ್ಯದ ತ್ರಿಶ್ಶೂರ್‌ನಿಂದ ಅ.13ರಂದು

ಸುಳ್ಯ : 35 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್‌ Read More »

ವಿಟ್ಲ: ಮದುವೆಗೆ ಹೆಣ್ಣು ತೋರಿಸುವ ನೆಪದಲ್ಲಿ 44.80 ಲಕ್ಷ ರೂ. ಸುಲಿಗೆ

ವಿದೇಶದಲ್ಲಿದ್ದ ವ್ಯಕ್ತಿಯನ್ನು ಕರೆಸಿಕೊಂಡು ವಂಚಿಸಿದ ಪ್ರಕರಣ ವಿಟ್ಲ : ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿರುವ ಕೇರಳ ಮೂಲದ ವ್ಯಕ್ತಿಯೊಬ್ಬರಿಗೆ ಮದುವೆಯಾಗಲು ಹೆಣ್ಣು ತೋರಿಸುವ ನೆಪದಲ್ಲಿ ಕರೆಸಿಕೊಂಡು ಹನಿಟ್ರ್ಯಾಪ್‌ಗೆ ಕೆಡವಿ 44.80 ಲಕ್ಷ ರೂ.ಸುಲಿಗೆ ಮಾಡಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಬ್ಲ್ಯಾಕ್‌ಮೇಲ್ ಮತ್ತು ಹಣಕಾಸು ವಂಚನೆಯ ಪ್ರಕರಣ ದಾಖಲಾಗಿದೆ. 53 ವರ್ಷದ ಮೊಹಮ್ಮದ್ ಅಶ್ರಫ್ ತಾವರಕಡನ್ ಎಂಬವರು 2024ರ ಸೆಪ್ಟೆಂಬರ್‌ನಲ್ಲಿ ಮಂಗಳೂರಿಗೆ ಬಂದಿದ್ದಾಗ ಹೆಣ್ಣು ತೋರಿಸುವ ನೆಪದಲ್ಲಿ ಆರೋಪಿಗಳು ಅವರನ್ನು ಭೇಟಿ ಮಾಡಿ ಸುಲಿಗೆ ಮಾಡಿದ್ದಾರೆ. ಬಶೀರ್

ವಿಟ್ಲ: ಮದುವೆಗೆ ಹೆಣ್ಣು ತೋರಿಸುವ ನೆಪದಲ್ಲಿ 44.80 ಲಕ್ಷ ರೂ. ಸುಲಿಗೆ Read More »

ಮಾಸ್ಕ್‌ಮ್ಯಾನ್ ಚಿನ್ನಯ್ಯನ ಪತ್ನಿ SIT ಕಚೇರಿಗೆ ಹಾಜರ್

ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣದ ಆರೋಪಿ ಮಾಸ್ಕ್‌ಮ್ಯಾನ್ ಚಿನ್ನಯ್ಯ‌ನ ಎರಡನೇ ಪತ್ನಿ SIT ಕಚೇರಿಗೆ ಇಂದು ಹಾಜರಾಗಿದ್ದಾರೆ. ಅವರನ್ನು ಆರೋಪಿ ಚಿನ್ನಯ್ಯನಿಗೆ ಸಂಬಂಧಿಸಿದಂತೆ ಇರುವ ಮಾಹಿತಿಗಳನ್ನು ಸಂಗ್ರಹ ಮಾಡುವ ದೃಷ್ಟಿಯಿಂದ SIT ಅಧಿಕಾರಿಗಳು ಕಚೇರಿಗೆ ಕರೆಸಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಬಂಗ್ಲಗುಡ್ಡದಲ್ಲಿ ಶವಗಳನ್ನು ಹೂಳಲಾಗಿದೆ ಎಂದು ಚಿನ್ನಯ್ಯ ತೋರಿಸಿದ್ದ ಜಾಗದಲ್ಲಿ ಇತ್ತೀಚೆಗೆ ಮತ್ತೆ SIT ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದರು. ಹಾಗೆಯೇ ಅರಣ್ಯಾಧಿಕಾರಿಗಳ ಜೊತೆಗೂ ಸ್ಥಳಕ್ಕೆ ಭೇಟಿ ನೀಡಿ ಸರ್ವೇ ಕಾರ್ಯ ನಡೆಸಿದ್ದರು.

ಮಾಸ್ಕ್‌ಮ್ಯಾನ್ ಚಿನ್ನಯ್ಯನ ಪತ್ನಿ SIT ಕಚೇರಿಗೆ ಹಾಜರ್ Read More »

ನಕಲಿ ಒಡವೆ ಅಡವಿಟ್ಟು ಬ್ಯಾಂಕಿಗೆ ವಂಚನೆ : ಪುತ್ತೂರಿನ ಓರ್ವನ ಸಹಿತ ಮೂವರ ಸೆರೆ

ಆರೋಪಿಗಳಿಂದ ಕಾರು ಸಹಿತ 26.5 ಲ.ರೂ. ಸೊತ್ತು ವಶ ಮಂಗಳೂರು: ನಗರದ ಕಾವೂರಿನ ಸಹಕಾರಿ ಸಂಸ್ಥೆಯೊಂದರಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು 6.24 ಲಕ್ಷ ರೂ. ವಂಚಿಸಿದ್ದ ಮೂವರು ಆರೋಪಿಗಳನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಆಕಾಶಭವನದ ಆನಂದ ನಗರ ನಿವಾಸಿ ಹಾರೀಫ್ ಅಬೂಬಕ್ಕರ್ (39), ನಂತೂರು ಬಿಕರ್ನಕಟ್ಟೆಯ ನಿವಾಸಿ ಮೊಹಮ್ಮದ್ ಆಶೀಕ್ ಕಟ್ಟತ್ತಾರ್ ಹುಸೈನ್ (34) ಮತ್ತು ಪುತ್ತೂರು ತಾಲೂಕು ಬೆಳಂದೂರು ಗ್ರಾಮದ ನಿವಾಸಿ ಅಬ್ದುಲ್ ರಮೀಝ್ (33) ಎಂದು ಗುರುತಿಸಲಾಗಿದೆ. ಅಕ್ಟೋಬರ್ 9ರಂದು ಹಾರೀಫ್

ನಕಲಿ ಒಡವೆ ಅಡವಿಟ್ಟು ಬ್ಯಾಂಕಿಗೆ ವಂಚನೆ : ಪುತ್ತೂರಿನ ಓರ್ವನ ಸಹಿತ ಮೂವರ ಸೆರೆ Read More »

ಟ್ಯಾಕ್ಸಿ ಚಾಲಕನನ್ನು ಮುಸ್ಲಿಂ ಟೆರರಿಸ್ಟ್‌ ಎಂದು ನಿಂದಿಸಿದ ನಟ : ಎಫ್‌ಐಆರ್‌ ದಾಖಲು

ಮಂಗಳೂರಿಗೆ ಬಂದ ವೇಳೆ ಚಾಲಕನನ್ನು ಅವಹೇಳನ ಮಾಡಿದ ಮಲಯಾಳಂ ನಟ ಮಂಗಳೂರು: ಕ್ಯಾಬ್ ಚಾಲಕನಿಗೆ ಕರೆ ಮಾಡಿ ‘ಮುಸ್ಲಿಂ ಟೆರರಿಸ್ಟ್’ ಎಂದು ಅವಹೇಳನ ಮಾಡಿದ ಬಗ್ಗೆ ಮಲಯಾಳಂ ಚಿತ್ರರಂಗದ ಜನಪ್ರಿಯ ಪೋಷಕ ನಟ ಜಯಕೃಷ್ಣನ್‌ ಮತ್ತು ಅವರ ಗೆಳೆಯರಾದ ಸಂತೋಷ್ ಅಬ್ರಾಹಂ ಹಾಗೂ ವಿಮಲ್‌ ಎಂಬವರ ವಿರುದ್ಧ ಮಂಗಳೂರಿನ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿಗೆ ಗುರುವಾರ ರಾತ್ರಿ ಬಂದಿದ್ದ ಜಯಕೃಷ್ಣ್‌ ಮತ್ತು ಸ್ನೇಹಿತರು ಉಬರ್‌ ಮತ್ತು ರಾಪಿಡೊ ಕ್ಯಾಪ್ಟನ್ ಆ್ಯಪ್ ಮೂಲಕ ಕ್ಯಾಬ್ ಬುಕ್ ಮಾಡಿದ್ದರು.

ಟ್ಯಾಕ್ಸಿ ಚಾಲಕನನ್ನು ಮುಸ್ಲಿಂ ಟೆರರಿಸ್ಟ್‌ ಎಂದು ನಿಂದಿಸಿದ ನಟ : ಎಫ್‌ಐಆರ್‌ ದಾಖಲು Read More »

ಬಂಟ್ವಾಳ : ಜಾತಿ ಗಣತಿಗೆ ತೆರಳಿದ ಶಿಕ್ಷಕರ ಮೇಲೆ ಜೇನುನೊಣಗಳ ಹಿಂಡಿನಿಂದ ದಾಳಿ

ಎರಡು ಕಿ.ಮೀ. ತನಕ ಅಟ್ಟಿಸಿಕೊಂಡು ಬಂದು ದಾಳಿ ಮಾಡಿದ ಹೆಜ್ಜೇನುಗಳು ಬಂಟ್ವಾಳ : ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಗೆ ತೆರಳಿದ್ದ ಶಿಕ್ಷಕರೊಬ್ಬರ ಮೇಲೆ ಜೇನುನೊಣಗಳು ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಶನಿವಾರ ಬಂಟ್ವಾಳ ಸಜೀಪದ ಶಾರದಾ ನಗರ ಭಜನಾ ಮಂದಿರದ ಬಳಿ ಸಂಭವಿಸಿದೆ. ಸಜೀಪಮೂಡ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ವೆಂಕಟರಮಣ ಗಾಯಗೊಂಡವರು. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಶನಿವಾರ ಬೆಳಗ್ಗೆ 9ರ ಸುಮಾರಿಗೆ ಅವರು ಒಂದು ಮನೆಯ ಗಣತಿ ಕಾರ್ಯ ಪೂರ್ಣಗೊಳಿಸಿ ಮತ್ತೊಂದು

ಬಂಟ್ವಾಳ : ಜಾತಿ ಗಣತಿಗೆ ತೆರಳಿದ ಶಿಕ್ಷಕರ ಮೇಲೆ ಜೇನುನೊಣಗಳ ಹಿಂಡಿನಿಂದ ದಾಳಿ Read More »

ನಿಷೇಧಿತ ಪಿಎಫ್‌ಐ ಪರ ಪ್ರಚಾರ : ಕಡಬದ ವ್ಯಕ್ತಿ ಸೆರೆ

ಸೋಷಿಯಲ್‌ ಮೀಡಿಯಾದಲ್ಲಿ ನಿರಂತರ ಪ್ರಚಾರ ಮಾಡುತ್ತಿದ್ದ ಆರೋಪಿ ಮಂಗಳೂರು : ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಾಕಿ ಆನ್‌ಲೈನ್‌ನಲ್ಲಿ ಪ್ರಚಾರ ಮಾಡಿದ ಆರೋಪದ ಮೇಲೆ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಡಬ ತಾಲೂಕಿನ ರಾಮಕುಂಜ ಗ್ರಾಮದ ಬೀಜತ್ತಳಿ ನಿವಾಸಿ ಸೈಯದ್ ಇಬ್ರಾಹಿಂ ತಂಙಳ್ (55) ಬಂಧಿತ ಆರೋಪಿ. 2022ರಲ್ಲಿ ಕೇಂದ್ರ ಸರ್ಕಾರ ಪಿಎಫ್‌ಯನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಿ ನಿಷೇಧಿಸಿದೆ. ನಿಷೇಧದ ಹೊರತಾಗಿಯೂ ಆರೋಪಿ ಸಂಘಟನೆಯ ಪರ

ನಿಷೇಧಿತ ಪಿಎಫ್‌ಐ ಪರ ಪ್ರಚಾರ : ಕಡಬದ ವ್ಯಕ್ತಿ ಸೆರೆ Read More »

error: Content is protected !!
Scroll to Top