ಹಿಂದೂ ಸಂಘಟನೆಗಳ ನಡುವೆ ನಡೆದ ಗಲಾಟೆ ಚೂರಿ ಇರಿತದಿಂದ ಅಂತ್ಯ
ಬಂಟ್ವಾಳ: ಹಿಂದೂ ಸಂಘಟನೆ ಕಾರ್ಯಕರ್ತರ ನಡುವೆ ಹೊಡೆದಾಟ ಸಂಭವಿಸಿ ಚೂರಿ ಇರಿತದ ಮೂಲಕ ಕೊನೆಗೊಂಡ ಘಟನೆ ಬಂಟ್ವಾಳದಲ್ಲಿ ನಡೆದಿದೆ. ವೈಯಕ್ತಿಕ ವಿಚಾರವಾಗಿ ನಡೆದ ಹೊಡೆದಾಟ ಚೂರಿ ಇರಿತದ ಮೂಲಕ ಕೊನೆಗೊಂಡಿದೆ. ಘಟನೆಯಲ್ಲಿ ಇತ್ತಂಡಗಳ ಮೂವರು ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪೃಥ್ವಿರಾಜ್, ವಿನಿತ್ ಹಾಗೂ ಪುಷ್ಪರಾಜ್ ಎಂಬವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಪೊಲೀಸರು ಭೇಟಿ ನೀಡಿದ್ದು, ಯಾವ ಕಾರಣಕ್ಕಾಗಿ ಗಲಾಟೆ ನಡೆದಿದೆ ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಹಿಂದೂ ಸಂಘಟನೆಗಳ ನಡುವೆ ನಡೆದ ಗಲಾಟೆ ಚೂರಿ ಇರಿತದಿಂದ ಅಂತ್ಯ Read More »