ದಕ್ಷಿಣ ಕನ್ನಡ

ಬಾಲಕನಿಗೆ ದ್ವಿಚಕ್ರ ವಾಹನ ನೀಡಿದ ವ್ಯಕ್ತಿಗೆ 29 ಸಾವಿರ ರೂ ದಂಡ

ಮಂಗಳೂರು : ಅಪ್ರಾಪ್ತ ವಯಸ್ಸಿನ ಬಾಲಕನಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ ವ್ಯಕ್ತಿಗೆ ನ್ಯಾಯಾಲಯ 29,000 ರೂ. ದಂಡ ವಿಧಿಸಿದೆ. ಮಾರುತಿ ಕಂಬಾಲ್ ದಂಡ ಪಾವತಿಸಬೇಕಾದ ವ್ಯಕ್ತಿ ಎಂದು ತಿಳಿದುಬಂದಿದೆ. ಜೆಎಂಎಫ್‌ಸಿ 4 ನ್ಯಾಯಾಲಯದ ಪ್ರಭಾರ ನ್ಯಾಯಾಧೀಶೆ ಶಿಲ್ಪ ಎಸ್ ಬ್ಯಾಡಗಿ ಅವರು ಮಾರುತಿ ಕಂಬಾಲ್‌ಗೆ ದಂಡ ವಿಧಿಸಿ ಆದೇಶ ನೀಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಬಾಲಕನಿಗೆ ದ್ವಿಚಕ್ರ ವಾಹನ ನೀಡಿದ ವ್ಯಕ್ತಿಗೆ 29 ಸಾವಿರ ರೂ ದಂಡ Read More »

ಉಳ್ಳಾಲದಲ್ಲಿ ಮೀನು ಸಂಸ್ಕರಣಾ ಘಟಕ ಬೆಂಕಿಗಾಹುತಿ

ಮಂಗಳೂರು : ಉಳ್ಳಾಲದ ಕೋಟೆಪುರದಲ್ಲಿರುವ ಮೀನಿನ ಆಹಾರ ತಯಾರಿಕ ಸಂಸ್ಕರಣಾ ಘಟಕದ ಗೋದಾಮು ಬುಧವಾರ ರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ನಾಶವಾಗಿದೆ. ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಖಾದರ್ ಎಂಬವರಿಗೆ ಸೇರಿದ ಎಂಎಂಪಿ ಫಿಶ್ ಫುಡ್ ಗೋದಾಮಿಗೆ ರಾತ್ರಿ ಬೆಂಕಿಹತ್ತಿಕೊಂಡಿದೆ. ಬೆಂಕಿಯ ಕೆನ್ನಾಲೆ ಹೊರಗೂ ಆವರಿಸಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ನೀರು ಎರಚಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ತುಂಬಾ ಹೊತ್ತಿನ ನಂತರ ಮಂಗಳೂರಿನಿಂದ ಅಗ್ನಿ ಶಾಮಕ ದಳದ ವಾಹನ ಬಂದು ಬೆಂಕಿ ನಂದಿಸಿದೆ. ಉಳ್ಳಾಲ ಪೊಲೀಸರು ಸ್ಥಳದಲ್ಲಿದ್ದರು.

ಉಳ್ಳಾಲದಲ್ಲಿ ಮೀನು ಸಂಸ್ಕರಣಾ ಘಟಕ ಬೆಂಕಿಗಾಹುತಿ Read More »

ಶರಣ್‌ ಪಂಪ್‌ವೆಲ್‌ಗೆ 2 ಲ.ರೂ. ದಂಡ ವಿಧಿಸಿದ ಹೈಕೋರ್ಟ್‌

ಗಣೇಶೋತ್ಸವದಲ್ಲಿ ಹೈಕೋರ್ಟ್‌ ಷರತ್ತು ಉಲ್ಲಂಘಿಸಿದ ಆರೋಪ ಬೆಂಗಳೂರು: ಆದೇಶ ಉಲ್ಲಂಘನೆ ಆರೋಪ ಎದುರಿಸುತ್ತಿದ್ದ ವಿಶ್ವ ಹಿಂದೂ ಪರಿಷತ್​​ ಸಹಕಾರ್ಯದರ್ಶಿ ಶರಣ್ ಪಂಪ್​​ವೆಲ್​​ಗೆ ಹೈಕೋರ್ಟ್ 2 ಲಕ್ಷ ರೂ. ದಂಡ ವಿಧಿಸಿದೆ. ಇದರಲ್ಲಿ ರಾಜ್ಯ ಲೀಗಲ್ ಸರ್ವೀಸ್ ಅಥಾರಿಟಿಗೆ 1 ಲಕ್ಷ ರೂ. ಮತ್ತು ಪೋಲಿಸ್ ಕ್ಷೇಮಾಭಿವೃದ್ಧಿ ನಿಧಿಗೆ 1 ಲಕ್ಷ ರೂ ನೀಡಲು ಬುಧವಾರ ಕೋರ್ಟ್‌ ಆದೇಶ ನೀಡಿದೆ. ಇತ್ತೀಚೆಗೆ ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಹಿನ್ನಲೆ ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾಡಳಿತ ಶರಣ್ ಪಂಪ್​​ವೆಲ್​​ಗೆ ನಿರ್ಬಂಧ ವಿಧಿಸಿತ್ತು.

ಶರಣ್‌ ಪಂಪ್‌ವೆಲ್‌ಗೆ 2 ಲ.ರೂ. ದಂಡ ವಿಧಿಸಿದ ಹೈಕೋರ್ಟ್‌ Read More »

ಮಂಗಳೂರು : 9.72 ಲ.ರೂ.ಮೌಲ್ಯದ ಇ-ಸಿಗರೇಟ್‌ ವಶ

ಅಂಗಡಿಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಇ-ಸಿಗರೇಟ್‌ ಮಂಗಳೂರು : ನಗರದ ಪ್ರಮುಖ ವಾಣಿಜ್ಯ ಸಂಕೀರ್ಣದಲ್ಲಿರುವ ಅಂಗಡಿಯ ಮೇಲೆ ಬರ್ಕೆ ಪೊಲೀಸರು ದಾಳಿ ನಡೆಸಿ, ಇ-ಸಿಗರೇಟ್ ಮತ್ತು ಇತರ ವಸ್ತುಗಳು ಸೇರಿದಂತೆ 9.72 ಲಕ್ಷ ಮೌಲ್ಯದ ಸೊತ್ತುಗಳನ್ನು ಮಂಗಳವಾರ ವಶಪಡಿಸಿಕೊಂಡಿದ್ದಾರೆ. ಮಂಗಳೂರಿನ ಲಾಲ್‌ಬಾಗ್ ಬಳಿಯ ಅಂಗಡಿಯೊಂದು ಯಾವುದೇ ಪರವಾನಗಿ ಪಡೆಯದೇ ಇ-ಸಿಗರೇಟ್, ಹುಕ್ಕಾ ಪರಿಕರಗಳು ಮತ್ತು ಭಾರತೀಯ ಹಾಗೂ ವಿದೇಶಿ ಸಿಗರೇಟ್‌ಗಳನ್ನು ಕಾನೂನುಬಾಹಿರವಾಗಿ ಮಾರಾಟ ಮತ್ತು ಸಂಗ್ರಹಿಸುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಈ ವಸ್ತುಗಳನ್ನು

ಮಂಗಳೂರು : 9.72 ಲ.ರೂ.ಮೌಲ್ಯದ ಇ-ಸಿಗರೇಟ್‌ ವಶ Read More »

ಬಾಗಿಲಿನ ಚಿಲಕ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

ಬೆಳ್ತಂಗಡಿ: ಕುತ್ಲೂರು ಗ್ರಾಮದ ಮಂಜುಶ್ರೀ ನಗರದ ಮನೆಯೊಂದರ ಬಾಗಿಲ ತಿಲಕ ಮುರಿದು 9.50 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳ್ಳರು ಕದ್ದೊಯ್ದ ಘಟನೆ ನಡೆದಿದೆ. ಅವಿನಾಶ್ ಎಂಬವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಈ ಕೈಚಳಕ ತೋರಿದ್ದಾರೆ. ಈ ಘಟನೆ ಆ. 2 ರಿಂದ ಆ. 6 ರ ನಡುವೆ ನಡೆದಿದೆ ಎಂದು ವೇಣೂರು ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಮನೆಯ ಮುಂಭಾಗಿಲಿನ ಚಿಲಕ ಮುರಿದು ಒಳ ಪ್ರವೇಶಿಸಿ, ಬೆಡ್ ರೂಂ ಒಳಗಿದ್ದ ಕಪಾಟಿನ

ಬಾಗಿಲಿನ ಚಿಲಕ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು Read More »

ದಂಪತಿ ವಿಷ ಸೇವಿಸಿ ಆತ್ಮಹತ್ಯೆ

ಆರ್ಥಿಕ ಮುಗ್ಗಟ್ಟಿನಿಂದ ಕೃತ್ಯ ಎಂಬ ಶಂಕೆ ಮಂಜೇಶ್ವರ: ಯುವ ದಂಪತಿ ವಿಷ ಸೇವಿಸಿ ಆತ್ಮಹತ್ಯೆಗೈದ ದಾರುಣ ಘಟನೆ ಮಂಜೇಶ್ವರ ಪೊಲೀಸ್‌ ಠಾಣಾ ವ್ಯಾಪ್ತಿಯ ಕಡಂಬಾರು ಎಂಬಲ್ಲಿ ನಡೆದಿದೆ. ಕಡಂಬಾರಿನ ಅಜಿತ್ (35) ಮತ್ತು ಪತ್ನಿ ಶ್ವೇತಾ (27) ಮೃತಪಟ್ಟವರು. ಅಜಿತ್ ಪೈಂಟಿಂಗ್ ಕಾರ್ಮಿಕರಾಗಿದ್ದು, ಶ್ವೇತಾ ವರ್ಕಾಡಿ ಬೇಕರಿ ಜಂಕ್ಷನ್‌ನ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಸೋಮವಾರ ಘಟನೆ ನಡೆದಿದ್ದು, ಗಂಭೀರ ಸ್ಥಿತಿಯಲ್ಲಿ ಇಬ್ಬರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಜಿತ್ ರಾತ್ರಿ ಹಾಗೂ ಶ್ವೇತಾ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಸೋಮವಾರ

ದಂಪತಿ ವಿಷ ಸೇವಿಸಿ ಆತ್ಮಹತ್ಯೆ Read More »

ಹೆಲ್ಪಿಂಗ್ ಫ್ರೆಂಡ್ಸ್ ಪೊಳಲಿ: 7ನೇ ಸೇವಾ ಯೋಜನೆಯಡಿ ಅನಾರೋಗ್ಯ ಪೀಡಿತ ಮಗುವಿಗೆ ನೆರವಿನ ಹಸ್ತ

ಪೊಳಲಿ: ಹೆಲ್ಪಿಂಗ್ ಫ್ರೆಂಡ್ಸ್ ಪೊಳಲಿ (ರಿ) ಇದರ 7ನೇ ಸೇವಾ ಯೋಜನೆಯಡಿಯಲ್ಲಿ ಅನಾರೋಗ್ಯ ಪೀಡಿತ ಮಗುವಿನ ಚಿಕಿತ್ಸೆಗೆ ನೆರವಿನ ಹಸ್ತ ಕಾರ್ಯಕ್ರಮ ನಡೆಯಿತು. ಭವತಿ ಭಿಕ್ಷಾಂದೇಹಿ ಕಾರ್ಯಕ್ರಮದ ಮೂಲಕ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಸಂದರ್ಭದಲ್ಲಿ ವಿಚಿತ್ರ ವೇಷಹಾಕಿ ಡಬ್ಬಿಯನ್ನು ಹಿಡಿದು ಶ್ರೀ ಕ್ಷೇತ್ರಕ್ಕೆ ಬಂದ ಭಕ್ತಾದಿಗಳು ನೀಡಿದ ಹಣವನ್ನು ಸಂಗ್ರಹ ಮಾಡಿದ್ದು, ಒಟ್ಟುಗೂಡಿದ 1,22,369ರೂ. ಹಣವನ್ನು ಅನಾರೋಗ್ಯ ಪೀಡಿತ ಮಗು ಸನ್ವಿತ್ ಕೆ. ಪೂಜಾರಿ ಅವರಿಗೆ ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಆಸರೆ ಪೌಂಡೇಷನ್

ಹೆಲ್ಪಿಂಗ್ ಫ್ರೆಂಡ್ಸ್ ಪೊಳಲಿ: 7ನೇ ಸೇವಾ ಯೋಜನೆಯಡಿ ಅನಾರೋಗ್ಯ ಪೀಡಿತ ಮಗುವಿಗೆ ನೆರವಿನ ಹಸ್ತ Read More »

ನೆರಿಯ : ಬೆಂಕಿ ಅವಘಡದಲ್ಲಿ ಮನೆ ಸುಟ್ಟು ಕರಕಲು

ಬೆಳ್ತಂಗಡಿ: ನೆರಿಯ ಗ್ರಾಮದ ಕಡ್ಡಿಬಾಗಿಲು ಎಂಬಲ್ಲಿ ಸೋಮವಾರ ರಾತ್ರಿ ಹರೀಶ್ ಎಂಬವರ ಮನೆ ಬೆಂಕಿಗಾಹುತಿಯಾಗಿ ಅಪಾರ ನಷ್ಟ ಸಂಭವಿಸಿದೆ. ಘಟನೆಯ ವೇಳೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಸಾವು ನೋವು ಉಂಟಾಗಿಲ್ಲ. ಹರೀಶ್ ಅವರು ಭಜನೆ ಗುರುಗಳಾಗಿದ್ದು ಅವರು ತಮ್ಮ ತಂಡದೊಂದಿಗೆ ಬೇರೆಡೆ ತೆರಳಿದ್ದರು. ಪತ್ನಿ ಹಾಗೂ ಒಬ್ಬಳು ಮಗಳು ತವರು ಮನೆಗೆ ಹೋಗಿದ್ದರು. ಇನ್ನಿಬ್ಬರು ಮಕ್ಕಳು ಮನೆಯಲ್ಲಿ ಇದ್ದರು. ಅವರು ಸಂಜೆಯ ವೇಳೆ ಪಕ್ಕದ ಮನೆಗೆ ಹೋಗಿದ್ದರು. ರಾತ್ರಿ ಆಗುತ್ತಿದ್ದಂತೆಯೇ ಮನೆಗೆ ಬೆಂಕಿ ಹತ್ತಿಕೊಂಡಿದೆ.ಮನೆಗೆ

ನೆರಿಯ : ಬೆಂಕಿ ಅವಘಡದಲ್ಲಿ ಮನೆ ಸುಟ್ಟು ಕರಕಲು Read More »

ದ.ಕ ಜಿಲ್ಲೆಯ 38 ಕಡೆ ಆಯುಷ್ಮಾನ್ ಭಾರತ್ ಆರೋಗ್ಯ-ಸ್ವಾಸ್ಥ್ಯ ಕೇಂದ್ರ ಸ್ಥಾಪನೆ

ಕೇಂದ್ರ ಸರ್ಕಾರದಿಂದ 24.70 ಕೋಟಿ ರೂ. ಅನುದಾನ ಮಂಜೂರು ಮಂಗಳೂರು : ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್‌ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 38 ಕಡೆ ಆಯುಷ್ಮಾನ್ ಭಾರತ್-ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ (ಎಚ್‌ಡಬ್ಲ್ಯುಸಿ) ಸ್ಥಾಪನೆಗೆ ಒಟ್ಟು 24.70 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರ

ದ.ಕ ಜಿಲ್ಲೆಯ 38 ಕಡೆ ಆಯುಷ್ಮಾನ್ ಭಾರತ್ ಆರೋಗ್ಯ-ಸ್ವಾಸ್ಥ್ಯ ಕೇಂದ್ರ ಸ್ಥಾಪನೆ Read More »

ಬಂಗ್ಲಗುಡ್ಡಕ್ಕೆ SIT ಅಧಿಕಾರಿಗಳ ತಂಡ ಭೇಟಿ

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದಲ್ಲಿ ಸದ್ದು ಮಾಡಿದ್ದ ಬಂಗ್ಲಗುಡ್ಡಕ್ಕೆ ಅರಣ್ಯ ಅಧಿಕಾರಿಗಳ ಜೊತೆಗೆ SIT ಅಧಿಕಾರಿಗಳು ಭೇಟಿ ನೀಡಿದ್ದಾರೆ. ಸೋಮವಾರ ಮಧ್ಯಾಹ್ನದ ವೇಳೆಗೆ SIT ಮತ್ತು ಅರಣ್ಯಾಧಿಕಾರಿಗಳ ತಂಡ ಜಂಟಿಯಾಗಿ ಭೇಟಿ ನೀಡಿ ಸರ್ವೇ ಕಾರ್ಯ ನಡೆಸುತ್ತಿದೆ. ಬಂಗ್ಲಗುಡ್ಡದಲ್ಲಿ ಏಳು ಅಸ್ಥಿಪಂಜರಗಳು ದೊರೆತ ಪ್ರದೇಶ ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುವುದು ಎಂಬುದನ್ನು ಸಾಕ್ಷಿ ಸಮೇತ SIT ಗೆ ವರದಿ ನೀಡಲು ಈ ಸರ್ವೇ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಬಂಗ್ಲಗುಡ್ಡಕ್ಕೆ SIT ಅಧಿಕಾರಿಗಳ ತಂಡ ಭೇಟಿ Read More »

error: Content is protected !!
Scroll to Top