ಗಣೇಶೋತ್ಸವ ಮೆರವಣಿಗೆ ವೇಳೆ ದೈವಾರಾಧನೆ ಸ್ತಬ್ಧಚಿತ್ರ ನಿಷೇಧಕ್ಕೆ ತುಳುನಾಡ ದೈವಾರಾಧನೆ ಸಂರಕ್ಷಣಾ ವೇದಿಕೆ ಆಗ್ರಹ : ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯಾಲಯಕ್ಕೆ ಮನವಿ
ಮಂಗಳೂರು: ಗಣೇಶ ಚತುರ್ಥಿಯ ಅಂಗವಾಗಿ ನಡೆಯುವ ಮೆರವಣಿಗೆಯ ವೇಳೆ ದೈವಾರಾಧನೆಗೆ ಸಂಬಂಧಿಸಿದ ಸ್ಥಬ್ಧಚಿತ್ರ, ಟ್ಯಾಬ್ಲೋಗಳನ್ನು ನಿಷೇಧಿಸಲು ಸಂಘಟನೆಯ ಮೂಲಕ ಕರೆ ನೀಡಬೇಕು ಎಂದು ತುಳುನಾಡ ದೈವಾರಾಧನೆ ಸಂರಕ್ಷಣಾ ವೇದಿಕೆ ಮೂಲಕ ಕದ್ರಿಯಲ್ಲಿರುವ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯಾಲಯಕ್ಕೆ ಮನವಿ ಮಾಡಲಾಯಿತು. ಹಿಂದೂ ಧರ್ಮದ ಅವಿಭಾಜ್ಯ ನಂಬಿಕೆಯಾಗಿರುವ ದೈವಗಳನ್ನು ಟ್ಯಾಬ್ಲೋಗಳಲ್ಲಿ ಪ್ರದರ್ಶಿಸುವುದನ್ನು ಸಂಘಟನೆ ಸಹಿಸುವುದಿಲ್ಲ. ಈ ಕುರಿತು ಜಿಲ್ಲೆಯಿಂದ ಸಂಘಟನೆಯ ಪ್ರಮುಖರಿಗೆ, ಕಾರ್ಯಕರ್ತರಿಗೆ, ಕಾರ್ಯಕ್ರಮದ ಆಯೋಜಕರಿಗೆ ಈ ಬಗ್ಗೆ ಸ್ಪಷ್ಟ ಸೂಚನೆ ನೀಡುವುದಾಗಿ ಸಂಘಟನೆಯ ಪ್ರಮುಖರು ಭರವಸೆ […]