ದಕ್ಷಿಣ ಕನ್ನಡ

ಮಂಗಳೂರಿನಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಮಂಗಳೂರು: ಭಾರತೀಯ ಜನತಾ ಪಾರ್ಟಿಯ ಸದಸ್ಯತ್ವ ಅಭಿಯಾನ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ದೀಪ ಬೆಳಗಿಸಿ ಚಾಲನೆ ನೀಡಿದರು. ಪಕ್ಷದ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸಂಸದ ಬ್ರಿಜೇಶ್ ಚೌಟ, ಶಾಸಕರುಗಳಾದ ವೇದವ್ಯಾಸ ಕಾಮತ್, ಉಮಾನಾಥ್ ಕೋಟ್ಯಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್ ಹಾಗೂ‌ ಪ್ರಮುಖರು ಉಪಸ್ಥಿತರಿದ್ದರು.

ಮಂಗಳೂರಿನಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ Read More »

ಅಕ್ರಮ ಕಸಾಯಿಖಾನೆಗೆ ಕಡಬ ಪೊಲೀಸರಿಂದ ದಾಳಿ | 70 ಕೆ.ಜಿ. ಗೋಮಾಂಸ ಪತ್ತೆ

ಕಡಬ: ಮನೆಯೊಂದರಲ್ಲಿ ಅಕ್ರಮ ಕಸಾಯಿಖಾನೆ ನಡೆಸುತ್ತಿರುವ ಕುರಿತು ಮಾಹಿತಿ ಪಡೆದ ಕಡಬ ಪೊಲೀಸರು ದಾಳಿ ನಡೆಸಿದ ಘಟನೆ ಇಂದು ಕಡಬ ತಾಲೂಕಿನ ಕಾಯರ್ತಡ್ದದಲ್ಲಿ ನಡೆದಿದೆ. ಕಡಬದ ಕುಟ್ರುಪ್ಪಾಡಿ ಗ್ರಾ.ಪಂ ವ್ಯಾಪ್ತಿಯ ಕಾಯರ್ತಡ್ಕ ಸಮೀಪದ ಮನೆಯೊಂದರಲ್ಲಿ ಜಾನುವಾರು ವಧೆ ಮಾಡುತ್ತಿರುವ ಕುರಿತು ಬಜರಂಗದಳಕ್ಕೆ ಮಾಹಿತಿ ಲಭಿಸಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ರವಾನಿಸಿದ ಮೇರೆಗೆ ಕಡಬ ಠಾಣಾ ಎಸ್.ಐ. ನೇತೃತ್ವದ ಪೊಲೀಸರು ದಾಳಿ ಮಾಡಿದ್ದು, ಗೋವಧೆ ಮಾಡಲು ಬಳಸಿದ ಸಾಧನ, ದನದ ತಲೆ, ಸುಮಾರು 70 ಕೆಜಿಯಷ್ಟು ಮಾಂಸ

ಅಕ್ರಮ ಕಸಾಯಿಖಾನೆಗೆ ಕಡಬ ಪೊಲೀಸರಿಂದ ದಾಳಿ | 70 ಕೆ.ಜಿ. ಗೋಮಾಂಸ ಪತ್ತೆ Read More »

ಚಾಲಕನ ನಿಯಂತ್ರಣ ತಪ್ಪಿ ಬೈಕ್‍ ಪಲ್ಟಿ | ಸವಾರರಿಬ್ಬರು ಮೃತ್ಯು

ಮಂಗಳೂರು: ಬೈಕೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಬೈಕ್‍ ಸವಾರರಿಬ್ಬರು ಮೃತಪಟ್ಟ ಘಟನೆ ಮಂಗಳೂರಿನ ಯೆಯ್ಯಾಡಿ ಸಮೀಪದ ಹರಿಪದವು ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಉಪ್ಪಿನಂಗಡಿಯ ಚೇತನ್ (24)  ಹಾಗೂ ಕೋಡಿಕಲ್‌ ನಿವಾಸಿ ಕಾಶೀನಾಥ್ (17) ಮೃತಪಟ್ಟವರು. ಬೈಕ್‍ ನಲ್ಲಿ ತೆರಳುತ್ತಿದ್ದಾಗ ಲಾರಿಯೊಂದಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ನಿಯಂತ್ರಣ ತಪ್ಪಿ ಬೈಕ್ ಉರುಳಿಬಿದ್ದಿದೆ. ಪರಿಣಾಮ ರಸ್ತೆಗೆಸೆಯಲ್ಪಟ್ಟ ಸವಾರರಿಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ಚಾಲಕನ ನಿಯಂತ್ರಣ ತಪ್ಪಿ ಬೈಕ್‍ ಪಲ್ಟಿ | ಸವಾರರಿಬ್ಬರು ಮೃತ್ಯು Read More »

ಬಿಜೆಪಿ ನಾಯಕರ ಜೊತೆ ಫೋಟೊ ತೆಗೆಸಿಕೊಂಡದ್ದಕ್ಕೆ ಕಾಪಿಕಾಡ್‌ ದುಬೈ ಕಾರ್ಯಕ್ರಮಕ್ಕೆ ಬಹಿಷ್ಕಾರ ಬೆದರಿಕೆ

ಸೋಷಿಯಲ್‌ ಮೀಡಿಯಾದಲ್ಲಿ ನಟನ ವಿರುದ್ಧ ಅಪಪ್ರಚಾರ ಮಂಗಳೂರು : ತುಳು ಸಿನಿಮಾದ ಜನಪ್ರಿಯ ನಟ ದೇವದಾಸ್ ಕಾಪಿಕಾಡ್ ಬಿಜೆಪಿ ನಾಯಕರ ಜೊತೆ ಫೋಟೊ ತೆಗೆಸಿಕೊಂಡಿರುವ ವಿಚಾರ ಭಾರಿ ವಿವಾದಕ್ಕೀಡಾಗಿದೆ. ಇತ್ತೀಚೆಗೆ ಬಿಜೆಪಿಯ ಸದಸ್ಯತ್ವ ನೋಂದಣಿ ಅಭಿಯಾನದಂಗವಾಗಿ ಹಿರಿಯ ನಾಯಕರಾದ ಸದಾನಂದ ಗೌಡ, ಶಾಸಕ ವೇದವ್ಯಾಸ ಕಾಮತ್‌ ಸಹಿತ ಕೆಲವು ನಾಯಕರು ಅವರ ಮನೆಗೆ ಭೇಟಿ ನೀಡಿದ್ದರು. ಈ ಫೋಟೊವನ್ನು ಬಿಜೆಪಿ ತನ್ನ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡು ದೇವದಾಸ್‌ ಕಾಪಿಕಾಡ್‌ ಬಿಜೆಪಿ ಸದಸ್ಯತ್ವ ಪಡೆದುಕೊಂಡಿದ್ದಾರೆ ಎಂದು ಹೇಳಿತ್ತು.ಆದರೆ

ಬಿಜೆಪಿ ನಾಯಕರ ಜೊತೆ ಫೋಟೊ ತೆಗೆಸಿಕೊಂಡದ್ದಕ್ಕೆ ಕಾಪಿಕಾಡ್‌ ದುಬೈ ಕಾರ್ಯಕ್ರಮಕ್ಕೆ ಬಹಿಷ್ಕಾರ ಬೆದರಿಕೆ Read More »

ತೋಡಿಗೆ ಬಿದ್ದು ಕೂಲಿ ಕಾರ್ಮಿಕ ಮೃತ್ಯು

ಕಡಬ: ಕೂಲಿ ಕಾರ್ಮಿಕರೊಬ್ಬರು ನೀರು ತುಂಬಿದ ತೋಡಿಗೆ ಬಿದ್ದು ಮೃತಪಟ್ಟ ಘಟನೆ ನೂಜಿಬಾಳ್ತಿಲ ಗ್ರಾಮದ ಪೇರಡ್ಕದಲ್ಲಿನಡೆದಿದೆ. ಮೀನಾಡಿ ಸಮೀಪದ ದೋಳ ನಿವಾಸಿ ಉಮೇಶ (35) ಮೃತಪಟ್ಟವರು ಕೂಲಿ ಕಾರ್ಮಿಕರಾಗಿದ್ದ ಉಮೇಶ ಬೆಳಗ್ಗೆ ಕೆಲಸಕ್ಕೆ ಹೋಗುತ್ತಿದ್ದಾಗ ಕಾಲು ಜಾರಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು. ನಿನ್ನೆ ಸಂಜೆ ವೇಳೆ ಒಂದು ಕಿ.ಮೀ. ದೂರದ ಪೇರಡ್ಕ ಸೇತುವೆ ಬಳಿ ಮೃತದೇಹ ಪತ್ತೆಯಾಗಿದೆ

ತೋಡಿಗೆ ಬಿದ್ದು ಕೂಲಿ ಕಾರ್ಮಿಕ ಮೃತ್ಯು Read More »

ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯರ ನೇಮಕ

ಮಂಗಳೂರು: ಭಾರತೀಯ ಜನತಾ ಪಾರ್ಟಿಗೆ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸದಸ್ಯರನ್ನು ನೇಮಕ ಮಾಡಲಾಗಿದೆ. ಪುತ್ತೂರಿನ ಮೂವರು ಮಹಿಳಾ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಜಯಶ್ರೀ ನಾಯಕ್, ಪ್ರೇಮಲತಾ ನಂದಿಲ ಹಾಗೂ ಮಲ್ಲಿಕಾ ಪ್ರಸಾದ್ ಅವರನ್ನು ಆಯ್ಕೆ ಮಾಡಿ ಆದೇಶಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯರ ನೇಮಕ Read More »

ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಗೆ ನೂತನ ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷರಾಗಿ ಭಾಸ್ಕರ ದೇವಸ್ಯ, ಉಪಾಧ್ಯಕ್ಷರಾಗಿ ಸಂಜೀವ ಅಡ್ಯಾರ್ ಅವಿರೋಧವಾಗಿ ಆಯ್ಕೆ

ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿ ನೂತನ ಅಧ್ಯಕ್ಷರಾಗಿ ಮಾತೃಭೂಮಿ ಸೌಹಾರ್ದ ಸಹಕಾರಿಯ ಅಧ್ಯಕ್ಷ ಭಾಸ್ಕರ ದೇವಸ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸಫಲ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಅಡ್ಯಾ‌ರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಮಂಗಳೂರಿನ ಪಂಪ್ ವೆಲ್ ನಲ್ಲಿರುವ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಕಚೇರಿಯಲ್ಲಿ ಬುಧವಾರ ಚುನಾವಣಾ ಪ್ರಕ್ರಿಯೆ ನಡೆದು ಈ ಆಯ್ಕೆ ನಡೆಯಿತು. ಚುನಾವಣಾ ರಿಟರ್ನಿಂಗ್ ಅಧಿಕಾರಿ ನವೀನ್ ಕುಮಾರ್ ಎಂ.ಎಸ್, ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯನ್ನು

ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಗೆ ನೂತನ ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷರಾಗಿ ಭಾಸ್ಕರ ದೇವಸ್ಯ, ಉಪಾಧ್ಯಕ್ಷರಾಗಿ ಸಂಜೀವ ಅಡ್ಯಾರ್ ಅವಿರೋಧವಾಗಿ ಆಯ್ಕೆ Read More »

ಡೆಂಗ್ಯೂ ಶಂಕಿತ ಜ್ವರದಿಂದ ಬಳಲುತ್ತಿದ್ದ ಯುವತಿ ಮೃತ್ಯು

ಬೆಳ್ತಂಗಡಿ : ಡೆಂಗ್ಯೂ ಜ್ವರದಿಂದ ಯುವತಿಯೊಬ್ಬರು ಬಳತ್ತಿದ್ದು, ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬೆಳ್ತಂಗಡಿ ತಾಲೂಕಿನ ಗಂಡಿಬಾಗಿಲಿನ ದೇವಗಿರಿಯ ಬೈಕಾಟ್ ನಿವಾಸಿ ಜೋಸ್- ಮೆಡ್ಲಿ ದಂಪತಿ ಪುತ್ರಿ ಟಿನು (27) ಮೃತಪಟ್ಟವರು. ಬೆಂಗಳೂರಿನಲ್ಲಿ ನರ್ಸ್ ಆಗಿದ್ದ ಟಿನು ಅವರಿಗೆ ಶಿವಮೊಗ್ಗ ಜಿಲ್ಲೆಯ ಸಾಗರದ ಸೋಬಿಟ್ ಅವರೊಂದಿಗೆ ಎರಡೂವರೆ ವರ್ಷಗಳ ಹಿಂದೆ ವಿವಾಹವಾಗಿತ್ತು. ಇತ್ತೀಚೆಗೆ ಜ್ವರದಿಂದ ಬಳಲುತ್ತಿದ್ದು, ಡೆಂಗ್ಯೂ ಎಂದು ಶಂಕಿಸಲಾಗಿತ್ತು.

ಡೆಂಗ್ಯೂ ಶಂಕಿತ ಜ್ವರದಿಂದ ಬಳಲುತ್ತಿದ್ದ ಯುವತಿ ಮೃತ್ಯು Read More »

ನಾಳೆ (ಸೆ.6) : ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಷಡಾಧಾರ ಪ್ರತಿಷ್ಠೆ ಹಾಗೂ ಶತ ಚಂಡಿಕಾಯಾಗ

ಕಡಬ : ತಾಲೂಕಿನ ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಷಡಾಧಾರ ಪ್ರತಿಷ್ಠೆ ಹಾಗೂ ಶತ ಚಂಡಿಕಾ ಯಾಗ ಸೆ.6 ಶುಕ್ರವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 7.20 ರಿಂದ 7.40 ರ ಸಮಯ ನಡೆಯುವ ಕನ್ಯಾಲಗ್ನ ಸುಮುಹೂರ್ತದಲ್ಲಿ ‘ಷಡಾಧಾರ ಪ್ರತಿಷ್ಠೆ’ ಜರಗಲಿದೆ. ಕಾರ್ಯಕ್ರಮದ ಪೂರ್ವಭಾವಿಯಾಗಿ ನೂತನ ಗರ್ಭಗೃಹಕ್ಕೆ ಇಷ್ಟಿಕಾಸ್ಥಾಪನ-ಗರ್ಭಪಾತ್ರನ್ಯಾಸ, ಪಾದುಕಾನ್ಯಾಸ ಕಾರ್ಯಕ್ರಮ ಈಗಾಗಲೇ ನಡೆದಿದೆ. ನಿಧಿಕುಂಭದ ಒಳಗೆ ತುಂಬಿಸುವ ಚಿನ್ನ, ಬೆಳ್ಳಿ, ನವರತ್ನಗಳನ್ನು ಅರ್ಪಿಸಲು  ಭಕ್ತಾಭಿಮಾನಿ ಅವಕಾಶವಿದ್ದು, ಸೆ.6 ಶುಕ್ರವಾರ ಬೆಳಿಗ್ಗೆ 7

ನಾಳೆ (ಸೆ.6) : ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಷಡಾಧಾರ ಪ್ರತಿಷ್ಠೆ ಹಾಗೂ ಶತ ಚಂಡಿಕಾಯಾಗ Read More »

ಅಮರ ಸುಳ್ಯ ಸಂಗ್ರಾಮ ರಾಷ್ಟ್ರೀಯ ವಿಚಾರ ಸಂಕಿರಣ ಸಮಾರೋಪ | ಜಗತ್ತಿನ ಎಲ್ಲಾ ಕ್ರಾಂತಿಗಳು ನಡೆದಿರುವುದು ಉಳ್ಳವರು ಮತ್ತು ಇಲ್ಲದವರ ನಡುವೆ : ಕೆ. ವಿ. ಹೇಮನಾಥ

ಸುಳ್ಯ: ಜಗತ್ತಿನ ಎಲ್ಲಾ ಕ್ರಾಂತಿಗಳು ನಡೆದಿರುವುದು ಉಳ್ಳವರು ಮತ್ತು ಇಲ್ಲದವರ ನಡುವೆ.  ಅನೇಕ ರಾಜರುಗಳು ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ. ಆದರೆ ಸುಳ್ಯದಲ್ಲಿ ನಡೆದಂತಹ ಅಮರ ಸುಳ್ಯ ಸಂಗ್ರಾಮ ನಡೆದಿರುವುದು ರೈತರು ಮತ್ತು ರಾಜರುಗಳ ನಡುವೆ ಎನ್ನುವುದೇ ಈ ಸಂಗ್ರಾಮದ ವಿಶೇಷ ಎಂದು  ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಕಾರ್ಯದರ್ಶಿ ಕೆ ವಿ ಹೇಮನಾಥ್ ಹೇಳಿದರು. ಅವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ನಡೆದ  ಡಾ. ವಿಜಯ ಪೂಣಚ್ಚ ತಂಬಂಡ ವಿರಚಿತ ಕೃತಿ, “ಅಮರಸುಳ್ಯ ಸಂಗ್ರಾಮ

ಅಮರ ಸುಳ್ಯ ಸಂಗ್ರಾಮ ರಾಷ್ಟ್ರೀಯ ವಿಚಾರ ಸಂಕಿರಣ ಸಮಾರೋಪ | ಜಗತ್ತಿನ ಎಲ್ಲಾ ಕ್ರಾಂತಿಗಳು ನಡೆದಿರುವುದು ಉಳ್ಳವರು ಮತ್ತು ಇಲ್ಲದವರ ನಡುವೆ : ಕೆ. ವಿ. ಹೇಮನಾಥ Read More »

error: Content is protected !!
Scroll to Top