ಸೌಜನ್ಯ ಹತ್ಯೆ ಪ್ರಕರಣ ನೈಜ ಆರೋಪಿಗಳನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಒತ್ತಾಯಿಸಿ ಸುಳ್ಯದಲ್ಲಿ ವಾಹನ ಜಾಥಾ
ಸುಳ್ಯ: ಬೆಳ್ತಂಗಡಿಯ ಸೌಜನ್ಯ ಹತ್ಯೆ ಪ್ರಕರಣವನ್ನು ಸರಕಾರ ಮರು ತನಿಖೆಗೊಳಪಡಿಸಿ ನೈಜ ಆರೋಪಿಗಳನ್ನು ಪತ್ತೆ ಮಾಡಿ ಕಠಿಣ ಶಿಕ್ಷೆಗೊಳಪಡಿಸಬೇಕೆಂದು ಆಗ್ರಹಿಸಿ ಆ.1ರಂದು ಸುಳ್ಯದಲ್ಲಿ ಗೌಡ ಯುವ ಸೇವಾ ಸಂಘದಿಂದ ವಾಹನ ಜಾಥಾ ನಡೆಯಿತು. ಮೊಗರ್ಪಣೆ ಶ್ರೀ ವೆಂಕಟರಮಣ ಸೊಸೈಟಿ ಮುಂಭಾಗದಿಂದ ವಾಹನ ಜಾಥಕ್ಕೆ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಟಾರ್ ಚಾಲನೆ ನೀಡಿ ಮಾತನಾಡಿ, ಬೆಳ್ತಂಗಡಿಯ ಸೌಜನ್ಯ ಹತ್ಯೆ ಪ್ರಕರಣವನ್ನು ಸರಕಾರ ಮರು ತನಿಖೆಗೊಳಪಡಿಸಿ 6 ತಿಂಗಳೊಳಗೆ ನೈಜ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು […]










