ದಕ್ಷಿಣ ಕನ್ನಡ

ಜಲ್ಲಿ ಕ್ರಶರ್ ಸೊತ್ತು ಕಳವು ಆರೋಪಿಗಳ ಬಂಧನ | ಸೊತ್ತುಗಳು ವಶಕ್ಕೆ

ಬಂಟ್ವಾಳ : ಜಲ್ಲಿ ಕ್ರಶರ್ ಯಂತ್ರವೊಂದರ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ ಇಬ್ಬರು ಆರೋಪಿಗಳನ್ನು ಬಂಟ್ವಾಳ ಪೊಲೀಸರು ಬಂಧಿಸಿ, ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವಗ್ಗ ನಿವಾಸಿ ಸತೀಶ್ ಮತ್ತು ಬೆಳ್ತಂಗಡಿ ನಿವಾಸಿ ರೋಹಿತ್ ಬಂಧಿತ ಆರೋಪಿಗಳು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಬಿ.ಮೂಡ ಗ್ರಾಮದ ಪಲ್ಲಮಜಲುನ ವಿನಯ ಶೆಟ್ಟಿ ಎಂಬವರಿಗೆ ಸೇರಿದ ಕ್ರಶರ್ ಜಾಬ್ ಪ್ಲೇಟ್ ಒಂದು ವಾರಗಳ ಹಿಂದೆ ಕಳವಾಗಿತ್ತು. 450 ಕೆ.ಜಿ. ತೂಕದ 2.60 ಲಕ್ಷ ರೂ. […]

ಜಲ್ಲಿ ಕ್ರಶರ್ ಸೊತ್ತು ಕಳವು ಆರೋಪಿಗಳ ಬಂಧನ | ಸೊತ್ತುಗಳು ವಶಕ್ಕೆ Read More »

ವಿದ್ಯಾರ್ಥಿನಿ ಸೌಜನ್ಯ ಕೊಲೆ | ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಗನ್ ಮ್ಯಾನ್ | ಸರಕಾರದಿಂದ ಎಸ್‍ಪಿಗೆ ಆದೇಶ

ಪುತ್ತೂರು: 11 ವರ್ಷಗಳ ಹಿಂದೆ ಕೊಲೆಯಾದ ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ನ್ಯಾಯಕ್ಕಾಗಿ ಹೋರಾಡುತ್ತಿರುವ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ಅವರ ರಕ್ಷಣೆಗಾಗಿ ರಾಜ್ಯ ಸರಕಾರ ಗನ್ ಮ್ಯಾನ್ ಒದಗಿಸಲು ಮುಂದಾಗಿದೆ. ಮಹೇಶ್ ಶೆಟ್ಟಿ ಜೀವಕ್ಕೆ ಅಪಾಯದ ಸಾಧ್ಯತೆಯಿದೆ ಎಂದು ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಸರಕಾರದ ಗಮನಕ್ಕೆ ತಂದ ಹಿನ್ನಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಆ.17 ರಂದು ಬೆಂಗಳೂರಿನಲ್ಲಿ ಗೃಹ ಸಚಿವರನ್ನು ಭೇಟಿ ಮಾಡಿದ್ದ ವಸಂತ ಬಂಗೇರ ಮಹೇಶ್ ಶೆಟ್ಟಿ ಅವರಿಗೆ ಇಬ್ಬರು ಗನ್ ಮ್ಯಾನ್

ವಿದ್ಯಾರ್ಥಿನಿ ಸೌಜನ್ಯ ಕೊಲೆ | ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಗನ್ ಮ್ಯಾನ್ | ಸರಕಾರದಿಂದ ಎಸ್‍ಪಿಗೆ ಆದೇಶ Read More »

ಬಂಟ್ವಾಳ ಸಗಟು ಗೋದಾಮಿನಿಂದ ಕೋಟಿಗೂ ಮಿಕ್ಕಿ ಮೌಲ್ಯದ ಅಕ್ಕಿ ನಾಪತ್ತೆ | ತನಿಖೆ ಆರಂಭ

ಬಂಟ್ವಾಳ: ನ್ಯಾಯ ಬೆಲೆ ಅಂಗಡಿ, ಸೊಸೈಟಿಗಳ ಮೂಲಕ ಅರ್ಹರಿಗೆ ವಿತರಣೆ ಆಗಬೇಕಾಗಿದ್ದ ಪಡಿತರ ಅಕ್ಕಿ ದಾಸ್ತಾನು ಮಳಿಗೆಯಲ್ಲಿ ಸುಮಾರು 1.32 ಕೋಟಿ ರೂ ಮೌಲ್ಯದ ಅಕ್ಕಿ ನಾಪತ್ತೆಯಾಗಿದ್ದು, ಈ ಕುರಿತು ತನಿಖೆ ಆರಂಭಗೊಂಡಿದೆ. ಈ ಕುರಿತು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮಂಗಳೂರು ಕಚೇರಿ ವ್ಯವಸ್ಥಾಪಕ ಶರತ್ ಕುಮಾರ್ ಹೋಂಡಾ ಎಂಬವರು ದೂರು ನೀಡಿದ್ದಾರೆ. ಬಂಟ್ವಾಳ ತಾಲೂಕು ಕಳ್ಳಿಗೆ ಗ್ರಾಮದ ಕೆ.ಎಸ್.ಆರ್.ಟಿ.ಸಿ. ಡಿಪೋ ಎದುರು ಇರುವ ಸಗಟು ಗೋದಾಮಿನಿಂದ ಬಂಟ್ವಾಳ ನಗರಕ್ಕೆ ಪಡಿತರ ಅಕ್ಕಿ

ಬಂಟ್ವಾಳ ಸಗಟು ಗೋದಾಮಿನಿಂದ ಕೋಟಿಗೂ ಮಿಕ್ಕಿ ಮೌಲ್ಯದ ಅಕ್ಕಿ ನಾಪತ್ತೆ | ತನಿಖೆ ಆರಂಭ Read More »

ಖಾಸಗಿ ಆಂಬುಲೆನ್ಸ್ ವಾಹನ ಪಲ್ಟಿ | ಚಾಲಕ ಮೃತ್ಯು

ಬಿ.ಸಿ.ರೋಡ್ : ರೋಗಿಯೋರ್ವನ್ನು ತುರ್ತಾಗಿ ಮಂಗಳೂರಿಗೆ ಸಾಗಿಸುತ್ತಿದ್ದ ಖಾಸಗಿ ಅಂಬ್ಯುಲೆನ್ಸ್ ವಾಹನವೊಂದು‌ ಅಂಚಿಕಟ್ಟೆ ಎಂಬಲ್ಲಿ ಪಲ್ಟಿಯಾಗಿದ್ದು, ವಾಹನ ಚಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ,  ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಗುರುವಾಯನಕೆರೆ ನಿವಾಸಿ ಶಬೀರ್ ಮೃತಪಟ್ಟ ಚಾಲಕ. ಬೆಳ್ತಂಗಡಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಸಾರ ಅಂಬ್ಯುಲೆನ್ಸ್ ವಾಹನ ವಗ್ಗ ಸಮೀಪದ ಕೊಪ್ಪಳ ಅಂಚಿಕಟ್ಟೆ ಎಂಬಲ್ಲಿ ಅಂಬ್ಯುಲೆನ್ಸ್ ವಾಹನ ರಸ್ತೆ ಮಧ್ಯ ಪಲ್ಟಿಯಾಗಿದ್ದು, ಚಾಲಕ ಶಬೀರ್ ಗಂಭೀರವಾಗಿ ಗಾಯಗೊಂಡಿದ್ದಾರೆ, ತಕ್ಷಣ ಆತನನ್ನು ಬೇರೆ

ಖಾಸಗಿ ಆಂಬುಲೆನ್ಸ್ ವಾಹನ ಪಲ್ಟಿ | ಚಾಲಕ ಮೃತ್ಯು Read More »

ಮನೆ ಮನೆಗೆ ಬಂದು ಅನಿಲ ಸುರಕ್ಷತೆಯ ತಪಾಸಣೆ ಕಡ್ಡಾಯವಲ್ಲ | ಜಿಲ್ಲಾಧಿಕಾರಿ ಪ್ರಕಟಣೆ

ಮಂಗಳೂರು: ಎಚ್‌.ಪಿ.ಗ್ಯಾಸ್ ಏಜೆನ್ಸಿಗಳಿಂದ ತೈಲಕಂಪೆನಿಯ ನಿರ್ದೇಶಾನುಸಾರ ಅನಿಲ ಸುರಕ್ಷತೆಯ ತಪಾಸಣೆಯನ್ನು ಗ್ರಾಹಕರ ಸುರಕ್ಷತಾ ದೃಷ್ಟಿಯಿಂದ ಕಡ್ಡಾಯಗೊಳಿಸಿದ್ದು, ಗ್ರಾಹಕರ ಮನೆಗೆ ಬಂದು ಅಡುಗೆ ಅನಿಲ ತಪಾಸಣೆ ನಡೆಸುವುದು ಕಡ್ಡಾಯವಲ್ಲ ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ಪ್ರಕಟಣೆ ನೀಡಿದ್ದಾರೆ. ಪೆಟ್ರೋಲಿಯಮ್ ಕಂಪೆನಿಯ ಗುರುತು ಚೀಟಿ ಹೊಂದಿರುವ ವ್ಯಕ್ತಿಗಳು ತರಳಿ ಅಡುಗೆ ಕೋಣೆಯಲ್ಲಿ ಗ್ಯಾಸ ಅನ್ನು ಪರಿಶೀಲಿಸಲಿದ್ದು, ಸೇವಾ ಶುಲ್ಕ ರೂ.236 ನ್ನು ತೆರಬೇಕೆಂದೂ, ರಬ್ಬರ್ ಟ್ಯೂಬ್, ಬದಲಾಯಿಸಬೇಕಾದಲ್ಲಿ ರೂ.19೦ ಅನ್ನು  ನೀಡಬೇಕೆಂಬುದಾಗಿ ತಿಳಿಸಲಾಗಿರುತ್ತದೆ. ಈ ರೀತಿಯ ಅನಿಲ ಸುರಕ್ಷತೆಯ ತಪಾಸಣೆಯು

ಮನೆ ಮನೆಗೆ ಬಂದು ಅನಿಲ ಸುರಕ್ಷತೆಯ ತಪಾಸಣೆ ಕಡ್ಡಾಯವಲ್ಲ | ಜಿಲ್ಲಾಧಿಕಾರಿ ಪ್ರಕಟಣೆ Read More »

ಎಡನೀರಿನಲ್ಲಿ ಹಿರಿಯರ ಸಮಾವೇಶ, ಕಲಾವಿದರಿಗೆ ಸನ್ಮಾನ

ಎಡನೀರು: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನವು ಕಳೆದೆರಡು ವರ್ಷಗಳಿಂದ ನಡೆಸುತ್ತಿರುವ  ಸೇವಾ ಚಟುವಟಿಕೆಗಳು ಉದಾತ್ತ  ಭಾವನೆಯಿಂದ ಕೂಡಿದ್ದು ಸಮಾಜಕ್ಕೆ ಧೈರ್ಯವನ್ನು ತುಂಬುವ ಕಾರ್ಯವನ್ನು ಮಾಡುತ್ತಿದೆ. ಪರಿಪಕ್ವ ಮನಸ್ಸಿನ ಹಿರಿಯರು ಸಮಾಜಕ್ಕೆ ಮತ್ತು ಯುವ ಜನಾಂಗಕ್ಕೆ ಮಾರ್ಗದರ್ಶನ ನೀಡುವ ಎಲ್ಲಾ ಕಾರ್ಯಕ್ರಮಗಳಿಗೆ ಮಠದಿಂದ ಸದಾ ಪ್ರೋತ್ಸಾಹವಿದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ತಿಳಿಸಿದರು. ಬಂಟ್ವಾಳ ಮೆಲ್ಕಾರ್ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ವತಿಯಿಂದ ಮಠದ ಸಹಯೋಗದಲ್ಲಿ ಚಾತುರ್ಮಾಸ್ಯ ಸಭಾಂಗಣದಲ್ಲಿ ಜರಗಿದ ಹಿರಿಯರ

ಎಡನೀರಿನಲ್ಲಿ ಹಿರಿಯರ ಸಮಾವೇಶ, ಕಲಾವಿದರಿಗೆ ಸನ್ಮಾನ Read More »

ದ.ಕ.ಭೌತಶಾಸ್ತ್ರ ಉಪನ್ಯಾಸಕರ ಸಂಘದ ವತಿಯಿಂದ ಶೈಕ್ಷಣಿಕ ಕಾರ್ಯಾಗಾರ

ಮಂಗಳೂರು : ದ.ಕ ಭೌತಶಾಸ್ತ್ರ ಉಪನ್ಯಾಸಕರ ಶೈಕ್ಷಣಿಕ ಕಾರ್ಯಾಗಾರ ಸರಕಾರಿ ಬಾಲಕಿಯರ ಪಿ.ಯು ಕಾಲೇಜು ಬಲ್ಮಠದಲ್ಲಿ ನಡೆಯಿತು. ದ.ಕ ಜಿಲ್ಲಾ ಪ.ಪೂ. ಕಾಲೇಜುಗಳ ಭೌತಶಾಸ್ತ್ರ ಉಪನ್ಯಾಸಕರ ಸಂಘ, ಪ್ರಾಚಾರ್ಯರ ಸಂಘ(ರಿ) ಮತ್ತು ಸರಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜು, ಬಲ್ಮಠ ಮಂಗಳೂರು ಇದರ ಜಂಟಿ ಸಹಯೋಗದಲ್ಲಿ ಪ್ರತಿ ವರ್ಷದಂತೆ ಈ ವರುಷವು ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿ ಡಿ ಜಯಣ್ಣ ಮಾನ್ಯ ಉಪನಿರ್ದೇಶಕರು ಇವರು ಭೌತಶಾಸ್ತ್ರದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಶುಭ ಹಾರೈಸುವ

ದ.ಕ.ಭೌತಶಾಸ್ತ್ರ ಉಪನ್ಯಾಸಕರ ಸಂಘದ ವತಿಯಿಂದ ಶೈಕ್ಷಣಿಕ ಕಾರ್ಯಾಗಾರ Read More »

ಆ.13: ರಾಮಕುಂಜದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದಿಂದ ಆಟಿಡೊಂಜಿ ದಿನ, ಸ್ವಸಹಾಯ ಸಂಘಗಳ ವಾರ್ಷಿಕೋತ್ಸವ

ರಾಮಕುಂಜ: ಒಕ್ಕಲಿಗ ಗೌಡ ಸೇವಾ ಸಂಘ ಆಲಂಕಾರು ವಲಯ, ಒಕ್ಕಲಿಗ ಗೌಡ ಸೇವಾ ಸಂಘ ರಾಮಕುಂಜ ಮತ್ತು ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟ ರಾಮಕುಂಜ ಇದರ ಆಶ್ರಯದಲ್ಲಿ ಆಟಿಡೊಂಜಿ ದಿನ ಹಾಗೂ ಸ್ವಸಹಾಯ ಸಂಘಗಳ ವಾರ್ಷಿಕೋತ್ಸವ, ಅಭಿನಂದನಾ ಕಾರ್ಯಕ್ರಮ ಆ.13ರಂದು ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಬೆಳಿಗ್ಗೆ 9 ಗಂಟೆಯಿಂದ ರಾಮಕುಂಜ ಗ್ರಾಮದ ಸಮಾಜ ಬಾಂಧವರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿವೆ. ಮಧ್ಯಾಹ್ನ 11 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ನಿವೃತ್ತ ಮುಖ್ಯಶಿಕ್ಷಕಿ ಚಂದ್ರಾವತಿ

ಆ.13: ರಾಮಕುಂಜದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದಿಂದ ಆಟಿಡೊಂಜಿ ದಿನ, ಸ್ವಸಹಾಯ ಸಂಘಗಳ ವಾರ್ಷಿಕೋತ್ಸವ Read More »

ದಿನದಿಂದ ದಿನಕ್ಕೆ ಕಾವೇರುತ್ತಿರುವ ಸೌಜನ್ಯ ಪ್ರಕರಣ | ಜಿಲ್ಲೆಯಾದ್ಯಂತ  ವಾಹನ ಜಾಥಾ, ಪ್ರತಿಭಟನೆ, ಮೌನ ಮೆರವಣಿಗೆ

ನಿಂತಿಕಲ್ಲು: ಸೌಜನ್ಯ ಕೊಲೆಯಾಗಿ 11 ವರ್ಷ ಕಳೆದರೂ ನೈಜ ಕೊಲೆ ಅಪರಾಧಿಗಳ ಪತ್ತೆಗೆ ಪ್ರತಿಭಟನೆ, ಹಕ್ಕೊತ್ತಾಯಗಳು ದಿನದಿಂದ ದಿನಕ್ಕೆ ಕಾವೇರುತ್ತಿದೆ. ದ.ಕ.ಜಿಲ್ಲೆಯಾದ್ಯಂತ ವಿವಿಧ ತಾಲೂಕುಗಳಲ್ಲಿರುವ ಸಂಘ ಸಂಸ್ಥೆಗಳು, ಸಮುದಾಯಗಳು ನೈಜ ಆರೋಪಿಗಳ ಪತ್ತೆಗಾಗಿ ದೈವ-ದೇವಸ್ಥಾನಗಳಲ್ಲಿ, ಮಠ-ಮಂದಿರಗಳಲ್ಲಿ ಪ್ರಾರ್ಥನೆಗಳನ್ನು ನಡೆಸುತ್ತಿರುವುದಲ್ಲದೆ, ಸೌಜನ್ಯ ಕುಟುಂಬಕ್ಕೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಮೌನ ಮೆರವಣಿಗೆ, ವಾಹನ ಜಾಥಾ, ಪ್ರತಿಭಟನೆಗಳನ್ನು ಹಮ್ಮಿಕೊಳ‍್ಳುತ್ತಿದೆ. ಸಮುದಾಯದವರು ತಾಲೂಕು ಮಟ್ಟದಿಂದ ತೊಡಗಿ ಜಿಲ್ಲಾ ಮಟ್ಟದ ತನಕ ಹಕ್ಕೊತ್ತಾಯದ ಸಭೆಗಳನ್ನು ನಡೆಸುವ ಮೂಲಕ ಮುಂದಿನ ನಡೆಯ ಕುರಿತು ಚರ್ಚೆಗಳನ್ನು ನಡೆಸುತ್ತಿದೆ.

ದಿನದಿಂದ ದಿನಕ್ಕೆ ಕಾವೇರುತ್ತಿರುವ ಸೌಜನ್ಯ ಪ್ರಕರಣ | ಜಿಲ್ಲೆಯಾದ್ಯಂತ  ವಾಹನ ಜಾಥಾ, ಪ್ರತಿಭಟನೆ, ಮೌನ ಮೆರವಣಿಗೆ Read More »

ಸೌಜನ್ಯ ಕೊಲೆ ಪ್ರಕರಣ | ನೈಜ ಆರೋಪಿಗಳನ್ನು ಪತ್ತೆಹಚ್ಚಿ ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ವಾಹನ ಜಾಥಾ-ಬೃಹತ್ ಪ್ರತಿಭಟನೆ | ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನಸಮೂಹ

ಸುಳ್ಯ: ಸೌಜನ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜ ಆರೋಪಿಗಳನ್ನು ಪತ್ತೆಹಚ್ಚಿ ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಸುಳ್ಯ ತಾಲೂಕಿನ ನಿಂತಿಕಲ್ಲಿನಿಂದ ಸುಳ್ಯದ ತನಕದ ಬೃಹತ್ ವಾಹನ ಜಾಥಾ-ಪ್ರತಿಭಟನೆಗೆ ಮಂಗಳವಾರ ಬೆಳಿಗ್ಗೆ ನಿಂತಿಕಲ್ಲು ವೃತ್ತದ ಬಳಿ ಚಾಲನೆ ನೀಡಲಾಯಿತು. ನ್ಯಾಯ ಎಲ್ಲಿದೆ ? ಎಂಬ ಘೋಷ ವಾಕ್ಯದೊಂದಿಗೆ ನಡೆಯುತ್ತಿರುವ ವಾಹನ ಜಾಥಾಕ್ಕೆ ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸೌಜನ್ಯ ತಾಯಿ ಕುಸುಮಾವತಿ ಹಾಗೂ ಕುಟುಂಬಸ್ಥರು ಪಾಲ್ಗೊಂಡಿದ್ದರು.

ಸೌಜನ್ಯ ಕೊಲೆ ಪ್ರಕರಣ | ನೈಜ ಆರೋಪಿಗಳನ್ನು ಪತ್ತೆಹಚ್ಚಿ ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ವಾಹನ ಜಾಥಾ-ಬೃಹತ್ ಪ್ರತಿಭಟನೆ | ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನಸಮೂಹ Read More »

error: Content is protected !!
Scroll to Top