ದಕ್ಷಿಣ ಕನ್ನಡ

ವಿದ್ಯುತ್ ಶಾಕ್‍ ಗೆ ಇಲೆಕ್ಟ್ರಿಷಿಯನ್ ಮೃತ್ಯು

ಬಂಟ್ವಾಳ : ವಿದ್ಯುತ್ ಶಾಕ್‍ ಗೆ ಒಳಗಾಗಿ ಎಲೆಕ್ಟ್ರಿಷಿಯನ್ ಒಬ್ಬರು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಉರ್ಕುಂಜ ಎಂಬಲ್ಲಿ ನಡೆದಿದೆ. ಉಳಿ ಗ್ರಾಮದ ನೆಕ್ಕಿಲ ಪಲೈ ನಿವಾಸಿ ಸದಾನಂದ ಗೌಡರ ಪುತ್ರ ದೇವದಾಸ್ (35) ವಿದ್ಯುತ್‍ ಶಾಕ್‍ ನಿಂದ ಮೃತಪಟ್ಟವರು. ದೇವದಾಸ್ ಉಳಿ ಗ್ರಾಮದ, ಉರ್ಕುಂಜ ಎಂಬಲ್ಲಿ ಮನೆಯೊಂದರ ಹೊರಗಡೆಯಲ್ಲಿದ್ದ ಮೈನ್ ಸ್ವಿಚ್ ಬಳಿ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ವಿದ್ಯುತ್ ಪ್ರಹರಿಸಿದೆ. ಪರಿಣಾಮ ಕೆಳಗೆ ಬಿದ್ದು ಗಾಯಗೊಂಡಿದ್ದರು ಎನ್ನಲಾಗಿದೆ. ತಕ್ಷಣ ಸ್ಥಳದಲ್ಲಿದ್ದವರು ಗಾಯಾಳುವನ್ನು ಬಂಟ್ವಾಳ […]

ವಿದ್ಯುತ್ ಶಾಕ್‍ ಗೆ ಇಲೆಕ್ಟ್ರಿಷಿಯನ್ ಮೃತ್ಯು Read More »

ಬಂಟ್ವಾಳ ಪುದು ಗ್ರಾಮದಲ್ಲಿ ಮನೆಗೆ ನುಗ್ಗಿ ಕಳ್ಳತನ | ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಕಳವು

ಬಂಟ್ವಾಳ: ತಾಲೂಕಿನ ಪುದು ಗ್ರಾಮದ ಪೆರಿಯಾರ್‌ನ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದಾರೆ. ಯಾರೂ ಇಲ್ಲದ ವೇಳೆ ಬಾಗಿಲಿನ ಚಿಲಕ ಮುರಿದು ಒಳನುಗ್ಗಿದ್ದ ಕಳ್ಳರು 3.54 ಲಕ್ಷ ರೂ. ಮೌಲ್ಯದ ಆಭರಣ ಹಾಗೂ ನಗದು ಕಳವು ಮಾಡಿದ್ದಾರೆ ಎನ್ನಲಾಗಿದೆ. ಪೆರಿಯಾರ್ ಬಾಲ್ಬಬೊಟ್ಟು ನಿವಾಸಿ ಮಹಮ್ಮದ್ ಇಟ್ಬಾಲ್ ಅವರ ಮನೆಯಿಂದ ಕಳವು ನಡೆದಿದ್ದು, ಕ್ಯಾಟರಿಂಗ್ ಕೆಲಸ ಮಾಡುತ್ತಿರುವ ಅವರು ಸೆ.8ರಂದು ಮನೆಗೆ ಬೀಗ ಹಾಕಿ ಪತ್ನಿ ಜೊತೆ ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ

ಬಂಟ್ವಾಳ ಪುದು ಗ್ರಾಮದಲ್ಲಿ ಮನೆಗೆ ನುಗ್ಗಿ ಕಳ್ಳತನ | ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಕಳವು Read More »

ಸಹೋದರಿಯ ಮದುವೆ ಖರ್ಚಿಗಾಗಿ ಗಾಂಜಾ ಮಾರಾಟಕ್ಕಿಳಿದ ವ್ಯಕ್ತಿ ಈಗ ಪೊಲೀಸರ ಅತಿಥಿ

ಬೆಂಗಳೂರು: ಸಹೋದರಿಯ ಮದುವೆ ಮಾಡುವ ಸಲುವಾಗಿ ಒಡಿಶಾದಿಂದ ರೈಲಿನಲ್ಲಿ ಗಾಂಜಾ ತಂದು ಬೆಂಗಳೂರಿನಲ್ಲಿ ಮಾರಾಟಕ್ಕೆ ಸಿದ್ಧತೆ ನಡೆಸಿದ್ದ ಆರೋಪಿಯನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ದ.ಕ. ಜಿಲ್ಲೆಯ ಪುತ್ತೂರು ಮೂಲದ ಬದ್ರುದ್ದೀನ್ ಬಂಧಿತ ಆರೋಪಿ ಬಂಧಿತನಿಂದ 1 ಲಕ್ಷ ರೂ. ಮೌಲ್ಯದ 5 ಕೆ.ಜಿ 20 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ನಗರದ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಪರಿಚಿತನೊಬ್ಬನ ಸಲಹೆಯಂತೆ ಒಡಿಶಾಕ್ಕೆ ತೆರಳಿ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಹೊಟೇಲ್‌ನಲ್ಲಿನ ಸಂಬಳದಿಂದ ಕುಟುಂಬ ನಿರ್ವಹಣೆ

ಸಹೋದರಿಯ ಮದುವೆ ಖರ್ಚಿಗಾಗಿ ಗಾಂಜಾ ಮಾರಾಟಕ್ಕಿಳಿದ ವ್ಯಕ್ತಿ ಈಗ ಪೊಲೀಸರ ಅತಿಥಿ Read More »

ಸವಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಕ್ಕೆ ಪ್ರಸ್ತುತ ವರ್ಷದಲ್ಲಿ 1.52 ಕೋಟಿ ರೂ. ಲಾಭ | ಸತತ 13 ವರ್ಷಗಳಿಂದ ಡಿಸಿಸಿ ಬ್ಯಾಂಕ್‍ ಪ್ರಶಸ್ತಿಗೆ ಬಾಜನ : ತಾರನಾಥ ಕಾಯರ್ಗ

ಸವಣೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2023-2024ನೇ ಸಾಲಿನಲ್ಲಿ ಸತತ 22 ನೇ ಬಾರಿಗೆ ಎ ತರಗತಿ ಆಡಿಟ್ ವರ್ಗೀಕರಣದೊಂದಿಗೆ ಶೇಕಡಾ 99.22% ಸಾಲ ವಸೂಲಾತಿಯೊಂದಿಗೆ 1.52 ಕೋಟಿ ಲಾಭ ಗಳಿಸಿದ್ದು, ಸತತ 13 ವರ್ಷಗಳಿಂದ ಡಿಸಿಸಿ ಬ್ಯಾಂಕ್‍ ಪ್ರಶಸ್ತಿಗೆ ಭಾಜನವಾಗಿದೆ ಎಂದು ಸಂಘದ ಅಧ್ಯಕ್ಷ ತಾರನಾಥ ಕಾಯರ್ಗ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರು ಅವರು, ಸಂಘದಲ್ಲಿ 3451 ಸದಸ್ಯರಿದ್ದು, ರೂ. 5.52 ಕೋಟಿ ಪಾಲು ಬಂಡವಾಳ ಮತ್ತು ರೂ. 36.39 ಕೋಟಿ ಠೇವಣಿ ಸಂಗ್ರಹಿಸಲಾಗಿದೆ.

ಸವಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಕ್ಕೆ ಪ್ರಸ್ತುತ ವರ್ಷದಲ್ಲಿ 1.52 ಕೋಟಿ ರೂ. ಲಾಭ | ಸತತ 13 ವರ್ಷಗಳಿಂದ ಡಿಸಿಸಿ ಬ್ಯಾಂಕ್‍ ಪ್ರಶಸ್ತಿಗೆ ಬಾಜನ : ತಾರನಾಥ ಕಾಯರ್ಗ Read More »

ಅನಾರೋಗ್ಯಕ್ಕೆ ತುತ್ತಾದ ದನದಿಂದ ಸಾರ್ವಜನಿಕರಿಗೆ ತೊಂದರೆ | ಚಿಕಿತ್ಸೆ ಕೊಡಿಸಿದರೂ ಸಂಜೆ ಹೊತ್ತಿಗೆ ಮೃತ್ಯು

ಮಂಗಳೂರು: ದನವೊಂದು ಅನಾರೋಗ್ಯಕ್ಕೆ ತುತ್ತಾಗಿ ಸಾರ್ಜನಿಕರಿಗೆ ತೊಂದರೆ ನೀಡುತ್ತಿದ್ದಾಗ ಸ್ಥಳೀಯರು ಹೇಗಾದರು ಮಾಡಿ ದನವನ್ನು ಹಿಡಿದು ಕಟ್ಟಿಹಾಕಿ ಚಿಕಿತ್ಸೆ ಕೊಡಿಸಿದರೂ ಸಂಜೆ ವೇಳೆಗೆ ದನ ಮೃತಪಟ್ಟ ಘಟನೆ ಸೋಮೇಶ್ವರದಲ್ಲಿ ನಡೆದಿದೆ. ಸಾರ್ವಜನಿಕರು ಬಹಳ ಕಷ್ಟ ಪಟ್ಟು ಕಟ್ಟಿಹಾಕಿ ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಿದರಾದರೂ ಫಲ ನೀಡದೆ ಸಾವನ್ನಪ್ಪಿದ ಘಟನೆ ಮಂಗಳವಾರ ಸಂಜೆ ವೇಳೆ ಮೃತಪಟ್ಟಿದೆ. ಸೋಮೇಶ್ವರದ ದ್ವಾರದ ಬಳಿಯ ಗಣೇಶ್ ಕಾಜವ ಅವರ ಮಾಲೀಕತ್ವದ ದನಕ್ಕೆ ರಾತ್ರಿಯಿಂದ  ಆರೋಗ್ಯದಲ್ಲಿ ಏರುಪೇರಾಗಿದ್ದು ಬೆಳಗ್ಗೆ ಸಿಕ್ಕಿಸಿಕ್ಕಿದವರಿಗೆಲ್ಲ ಹಾಯುತ್ತ ಗೋಡೆಗಳಿಗೆ

ಅನಾರೋಗ್ಯಕ್ಕೆ ತುತ್ತಾದ ದನದಿಂದ ಸಾರ್ವಜನಿಕರಿಗೆ ತೊಂದರೆ | ಚಿಕಿತ್ಸೆ ಕೊಡಿಸಿದರೂ ಸಂಜೆ ಹೊತ್ತಿಗೆ ಮೃತ್ಯು Read More »

ತುಳು ಲಿಪಿ ‘ಯುನಿಕೋಡ್‍’ಗೆ ಸೇರ್ಪಡೆ | ಮಹತ್ವದ ಮೈಲಿಗಲ್ಲು

ಮಂಗಳೂರು : ರಾಜ್ಯದ ಅಧಿಕೃತ ಭಾಷೆಯ ಸ್ಥಾನಮಾನ ಹಾಗೂ ಸಂವಿಧಾನದ 8ನೇ ಪರಿಚ್ಛೇದದಡಿ ತುಳು ಭಾಷೆ ಸೇರುವ ಅವಕಾಶವನ್ನು ಸರಕಾರ ಕಲ್ಪಿಸದಿದ್ದರೂ ತುಳು ಲಿಪಿ ಈಗ ‘ಯುನಿಕೋಡ್’ಗೆ ಸೇರ್ಪಡೆಯಾಗುವ ಮೂಲಕ ಮಹತ್ವದ ಮೈಲಿಗಲ್ಲು ದಾಖಲಿಸಿದೆ. ತುಳು ವಿಕಿಪೀಡಿಯಾ, ಗೂಗಲ್ ನಲ್ಲಿ ತುಳು ಅನುವಾದದ ಅವಕಾಶ ಒದಗಿದ ಬಳಿಕ ತುಳು ಭಾಷಿಕರಿಗೆ ಈಗ ಯುನಿಕೋಡ್‌ನಲ್ಲಿ ತುಳು ಲಭ್ಯವಾಗಿರುವುದು ಉಲ್ಲೇಖನೀಯ ಅಂಶ. ಯುನಿಕೋಡ್ ಆವೃತ್ತಿ 16 ರಲ್ಲಿ ತುಳು ಸೇರ್ಪಡೆಯಾಗಿದೆ. ಸದ್ಯ ಒಟ್ಟು 80 ಅಕ್ಷರ ಸೇರಿಸಲಾಗಿದೆ. ಯುನಿಕೋಡ್‌ನಲ್ಲಿ ತುಳು

ತುಳು ಲಿಪಿ ‘ಯುನಿಕೋಡ್‍’ಗೆ ಸೇರ್ಪಡೆ | ಮಹತ್ವದ ಮೈಲಿಗಲ್ಲು Read More »

ಸಂಸದ ಕ್ಯಾ.ಬ್ರಿಜೇಶ್ ಚೌಟರಿಗೆ ನ್ಯೂಸ್ ಪುತ್ತೂರಿನ “ಶಿವಾಮೃತ’ ಸಂಚಿಕೆ ಹಸ್ತಾಂತರ

ನ್ಯೂಸ್ ಪುತ್ತೂರು ಹೊರತಂದ ‘ಶಿವಾಮೃತ’ ಸಂಚಿಕೆಯನ್ನು ದ.ಕ.ಜಿಲ್ಲಾ ಸಂಸದ ಕ್ಯಾ.ಬ್ರಿಜೇಶ್‍ ಚೌಟ ಅವರಿಗೆ ನೀಡಲಾಯಿತು. ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಶೆಟ್ಟಿ ಸಂಚಿಕೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಪ್ರಸಾದ್ ಕೆ.ಎನ್‍. ಕಡಬ ಉಪಸ್ಥಿತರಿದ್ದರು.

ಸಂಸದ ಕ್ಯಾ.ಬ್ರಿಜೇಶ್ ಚೌಟರಿಗೆ ನ್ಯೂಸ್ ಪುತ್ತೂರಿನ “ಶಿವಾಮೃತ’ ಸಂಚಿಕೆ ಹಸ್ತಾಂತರ Read More »

ಚಾರ್ಮಾಡಿಯಲ್ಲಿ ಒಂಟಿ ಸಲಗ ಓಡಾಟ | ವಾಹನ ಸವಾರರಲ್ಲಿ ಆತಂಕ

ಉಜಿರೆ : ಒಂಟಿ ಸಲಗವೊಂದು ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಕಾಣಿಸಿಕೊಂಡಿದೆ. ಘಾಟಿ ಭಾಗದ ಅಣ್ಣಪ್ಪ ಬೆಟ್ಟದಿಂದ ಸೋಮನ ಕಾಡು ಅರಣ್ಯಭಾಗದ ತನಕ ರಸ್ತೆಯಲ್ಲಿ ಸವಾರಿ ನಡೆಸಿದ ಕಾಡಾನೆ ಬಳಿಕ ಸೋಮನ ಕಾಡು ಪರಿಸರದ ಅರಣ್ಯ ಪ್ರದೇಶದತ್ತ ತೆರಳಿದೆ ಎಂದು ವಾಹನ ಸವಾರರು ತಿಳಿಸಿದ್ದಾರೆ. ಕಾಡಾನೆ ರಸ್ತೆಯಲ್ಲಿ ಓಡಾಟ ನಡೆಸಿದ ವೇಳೆ ಹಲವು ಹೊತ್ತು ಟ್ರಾಫಿಕ್ ಜಾಮ್ ಸಮಸ್ಯೆ ಕಂಡು ಬಂತು. ಮಂಜಿನ ವಾತಾವರಣ, ನಿರಂತರ ಸುರಿಯುವ ಮಳೆ, ಜೊತೆಗೆ ಕಾಡಾನೆಯ ತಿರುಗಾಟ ಘಾಟಿ ಪ್ರದೇಶದಲ್ಲಿ

ಚಾರ್ಮಾಡಿಯಲ್ಲಿ ಒಂಟಿ ಸಲಗ ಓಡಾಟ | ವಾಹನ ಸವಾರರಲ್ಲಿ ಆತಂಕ Read More »

ರಿಕ್ಷಾ-ದ್ವಿಚಕ್ರ ವಾಹನ ಡಿಕ್ಕಿ : ದ್ವಿಚಕ್ರ ವಾಹನ ಸವಾರ ಮೃತ್ಯು

ಸುಳ್ಯ : ರಿಕ್ಷಾ ಹಾಗೂ ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ಪೆರಾಜೆ ಬಳಿಯ ಕಲ್ಮರ್ಪೆ ಎಂಬಲ್ಲಿ ನಡೆದಿದೆ. ಚೆಂಬು ಗ್ರಾಮದ ಕುದ್ರೆಪಾಯ ಬೊಳ್ಳೂರು ಆನಂದ ಎಂಬವರ ಪುತ್ರ ನವೀನ್ (23) ಮೃತಪಟ್ಟವರು. ನವೀನ್ ಖಾಸಗಿ ಕಾಲೇಜಿನ ಐಟಿಐ ವಿದ್ಯಾರ್ಥಿಯಾಗಿದ್ದಾರೆ ಎಂದು ತಿಳಿದುಬಂದಿದೆ

ರಿಕ್ಷಾ-ದ್ವಿಚಕ್ರ ವಾಹನ ಡಿಕ್ಕಿ : ದ್ವಿಚಕ್ರ ವಾಹನ ಸವಾರ ಮೃತ್ಯು Read More »

ಭೀಕರ ಕಾರು ಅಪಘಾತ | ನವವಿವಾಹಿತೆ ಮೃತ್ಯು

ಬಿ.ಸಿ.ರೋಡ್ : ನವ ದಂಪತಿಗಳು ಇಬ್ಬರು ಪ್ರಯಾಣಿಸುತ್ತಿದ್ದ ಕಾರು  ಬೀಕರ  ಅಪಘಾತದಲ್ಲಿ ನವವಿವಾಹಿತೆ ಮೃತಪಟ್ಟು, ಪತಿ ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ರಸ್ತೆಯ ಬಂಟ್ವಾಳದ ತಲಪಾಡಿ ಎಂಬಲ್ಲಿ ನಡೆದಿದೆ. ಪೆರ್ನೆ ಸಮೀಪದ ಒಡ್ಯದಗಯ ನಿವಾಸಿ ಅನಿಶ್ ಕೃಷ್ಣ ಎಂಬವರ ಪತ್ನಿ ಮಾನಸ  ಸಾವನ್ನಪ್ಪಿದ ನವವಿವಾಹಿತೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಅನಿಶ್ ಕೃಷ್ಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಬಿಸಿರೋಡಿನ ಕಡೆಯಿಂದ ‌ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ದವದಂಪತಿಗಳ ಆಲ್ಟೋ ಕಾರು ನಿಯಂತ್ರಣ ಕಳೆದುಕೊಂಡು

ಭೀಕರ ಕಾರು ಅಪಘಾತ | ನವವಿವಾಹಿತೆ ಮೃತ್ಯು Read More »

error: Content is protected !!
Scroll to Top