ದಕ್ಷಿಣ ಕನ್ನಡ

ಸೆ. 24: ಕಡಬ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ

ಸವಣೂರು: ಕಡಬ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ 2023-24 ಸೆ. 24ರಂದು ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ. ಶಾಸಕಿ ಭಾಗೀರಥಿ ಮುರುಳ್ಯ ಕ್ರೀಡಾಕೂಟವನ್ನು ಉದ್ಘಾಟಿಸುವರು. ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ಬಿ.ಎಸ್. ಅಧ್ಯಕ್ಷತೆ ವಹಿಸುವರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕಡಬ ತಾಲೂಕು ಪಂಚಾಯತ್, ಸವಣೂರು ಗ್ರಾಮ ಪಂಚಾಯತ್, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗ, ಕಡಬ ತಾಲೂಕು ಯುವಜನ […]

ಸೆ. 24: ಕಡಬ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ Read More »

ಬಲ್ಯ: ಕಟ್ಟಿಗೆ ಕಟ್ಟುವ ಹಗ್ಗ ಮೃತದೇಹ ತೋರಿಸಿತು!

ಕಡಬ: ತೋಟದಿಂದ ಹುಲ್ಲು ತರಲು ಹೋದ ಮಹಿಳೆಯೊಬ್ಬರು ಆಕಸ್ಮಿಕವಾಗಿ ಕೆರೆಗೆ ಜಾರಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಬಲ್ಯ ಗ್ರಾಮದ ದೇರಾಜೆ ನಿವಾಸಿ ಕುಶಲಾವತಿ ಮೃತಪಟ್ಟ ಮಹಿಳೆ. ಕುಶಾಲವತಿ ಮನೆ ಕೆಲಸ ಮಾಡಿಕೊಂಡಿದ್ದರು. ಮೈದುನ ಕೆಲಸಕ್ಕೆ ಹೋಗಿದ್ದು, ತಂಗಿಯ ಮಗ ಶಾಲೆಗೆ ಹೋಗಿದ್ದ ಸಂದರ್ಭದಲ್ಲಿ ಕುಶಲಾವತಿ ಹಸುಗಳಿಗೆ ಹುಲ್ಲು ತರಲು ತೋಟಕ್ಕೆ ಹೋದ ಸಂದರ್ಭ ಕೆರೆಗೆ ಕಾಲು ಜಾರಿ ಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮಗ ಪ್ರಜ್ವಲ್ ಸಂಜೆ ಶಾಲೆಯಿಂದ ಮನೆಗೆ ಬಂದು ಹುಡುಕಾಡಿದ್ದಾರೆ. ತೋಟದ ಕಡೆ

ಬಲ್ಯ: ಕಟ್ಟಿಗೆ ಕಟ್ಟುವ ಹಗ್ಗ ಮೃತದೇಹ ತೋರಿಸಿತು! Read More »

ಸೆ. 25: ಸಾರ್ವಜನಿಕ ಅಹವಾಲು ಸ್ವೀಕಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ವೇದಿಕೆ

ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ಸೆಪ್ಟೆಂಬರ್ 25ರಂದು ಜನತಾ ದರ್ಶನ ಹಮ್ಮಿಕೊಳ್ಳಲಾಗಿದೆ. ಸೋಮವಾರ ಬೆಳಗ್ಗೆ 10 ಗಂಟೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜನತಾ ದರ್ಶನ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ. 25: ಸಾರ್ವಜನಿಕ ಅಹವಾಲು ಸ್ವೀಕಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ವೇದಿಕೆ Read More »

ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ! | ಸಿರಿಲ್ ಮಿನೇಜಸ್ ಸಹಿತ ನಾಲ್ವರು ವಶ

ಬೆಳ್ತಂಗಡಿ; ಜುಗಾರಿ ಆಡುತ್ತಿದ್ದಾಗ ಪೊಲೀಸರು ದಾಳಿ ಮಾಡಿದ ಘಟನೆ ಬೆಳ್ತಂಗಡಿ ತಾಲೂಕು ಅಂಡಿಂಜೆ ಗ್ರಾಮದ ಕಿಲಾರ ಮಾರಿಕಾಂಬ ದೇವಸ್ಥಾನದ ಹಿಂಭಾಗದ ಸರಕಾರಿ ಗುಡ್ಡೆ ಪ್ರದೇಶದಲ್ಲಿ ನಡೆದಿದೆ. ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪೀಟ್ ಎಲೆಗಳಿಂದ ಜುಗಾರಿ ಆಟ ಆಡುತ್ತಿದ್ದಾಗ, ವೇಣೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಹಾಗೂ ಸಿಬ್ಬಂದಿಯ ತಂಡ ದಾಳಿ ಮಾಡಿದೆ. ಈ ವೇಳೆ ಅಂಡಿಂಜೆ ಗ್ರಾಮದ ವಾಸಿಗಳಾದ ಸಿರಿಲ್ ಮಿನೇಜಸ್, ಎಂ ಸಿ ಸುಂದರ, ಶೀನ ಮತ್ತು ರಾಘವ ಆಚಾರಿ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ! | ಸಿರಿಲ್ ಮಿನೇಜಸ್ ಸಹಿತ ನಾಲ್ವರು ವಶ Read More »

ಸಂಘಟಿತ ಸಮಾಜಕೋಸ್ಕರ ನಾವೆಲ್ಲರೂ ಒಂದಾಗಬೇಕು: ಶಾಸಕಿ ಭಾಗೀರಥಿ ಮುರುಳ್ಯ | ಹಬ್ಬದ ಸಾರ ಸಂದೇಶ ಅರಿತು ಬದುಕಿದರೆ ಸಮಾಜದಲ್ಲಿ ಗೌರವ: ಶಾಸಕ ಅಶೋಕ್ ರೈ | ಮುಕ್ಕೂರಿನಲ್ಲಿ 14ನೇ ವರ್ಷದ ಗಣೇಶೋತ್ಸವದಲ್ಲಿ ಸನ್ಮಾನ, ಪ್ರತಿಭಾ ಪುರಸ್ಕಾರ

ಮುಕ್ಕೂರು: ಸಂಘಟಿತ ಸಮಾಜದ ನಿರ್ಮಾಣದ ಜತೆಗೆ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಹಬ್ಬ ಹರಿದಿನಗಳು ಸಂದೇಶ ನೀಡುತ್ತಿದೆ. ಹಾಗಾಗಿ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗಿರಿಸಿ ಸಮಾಜದ ಏಳಿಗೆಗೋಸ್ಕರ ನಾವೆಲ್ಲರೂ ಒಂದಾಗಿ ಕಾರ್ಯ ನಿರ್ವಹಿಸಬೇಕು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಮುಕ್ಕೂರು- ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಮುಕ್ಕೂರು ಶಾಲಾ ವಠಾರದಲ್ಲಿ ಸೆ. 19ರಂದು ನಡೆದ 14ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಆಚರಣೆ, ಕ್ರೀಡಾಕೂಟ, ಸನ್ಮಾನ ಸಮಾರಂಭ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಮುಕ್ಕೂರು

ಸಂಘಟಿತ ಸಮಾಜಕೋಸ್ಕರ ನಾವೆಲ್ಲರೂ ಒಂದಾಗಬೇಕು: ಶಾಸಕಿ ಭಾಗೀರಥಿ ಮುರುಳ್ಯ | ಹಬ್ಬದ ಸಾರ ಸಂದೇಶ ಅರಿತು ಬದುಕಿದರೆ ಸಮಾಜದಲ್ಲಿ ಗೌರವ: ಶಾಸಕ ಅಶೋಕ್ ರೈ | ಮುಕ್ಕೂರಿನಲ್ಲಿ 14ನೇ ವರ್ಷದ ಗಣೇಶೋತ್ಸವದಲ್ಲಿ ಸನ್ಮಾನ, ಪ್ರತಿಭಾ ಪುರಸ್ಕಾರ Read More »

ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೌಜನ್ಯಾ ತಾಯಿ ದೂರು | ದೂರಿನಲ್ಲೇನಿದೆ?? ಸಚಿವರ ಪ್ರತಿಕ್ರಿಯೆ ಏನು?

ಮಂಗಳೂರು: ಸೌಜನ್ಯಾ ತಾಯಿ ಕುಸುಮಾವತಿ ಗೌಡ ಅವರು ಬುಧವಾರ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅವರನ್ನು ಭೇಟಿ ಮಾಡಿ ಸೌಜನ್ಯಾಗೆ ನ್ಯಾಯ ಕೊಡಿಸಲು ನಡೆಯುತ್ತಿರುವ ಹೋರಾಟವನ್ನು ಹತ್ತಿಕ್ಕಲು ಯತ್ನಿಸುತ್ತಿದ್ದು, ರಕ್ಷಣೆ ಕೊಡಬೇಕೆಂದು ಮನವಿ ಮಾಡಿದ್ದಾರೆ. ನಿನ್ನೆ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಸಚಿವರನ್ನು ದಿಢೀರ್‌ ಭೇಟಿ ಮಾಡಿದ ಕುಸುಮಾವತಿ ಅವರು ಪ್ರಭಾವಿಗಳ ಒತ್ತಡಕ್ಕೆ ಮಣಿದು ಸಾಕ್ಷ್ಯಗಳನ್ನು ನಾಶ ಮಾಡಿದ ಪೊಲೀಸರು ಮತ್ತು ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಪ್ರಕರಣದ ಮರು ತನಿಖೆಗೆ ಸರಕಾರದ

ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೌಜನ್ಯಾ ತಾಯಿ ದೂರು | ದೂರಿನಲ್ಲೇನಿದೆ?? ಸಚಿವರ ಪ್ರತಿಕ್ರಿಯೆ ಏನು? Read More »

ಜೀವನೋಪಾಯಕ್ಕೆ ಚಾಲಕ ವೃತಿಯನ್ನು ಆಯ್ಕೆ ಮಾಡಿಕೊಂಡ ಮಹಿಳೆ | ಕಸ ವಿಲೇವಾರಿ ವಾಹನದ ಚಾಲಕಿಯಾಗಿ ಕರ್ತವ್ಯ

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಓಂ ಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸುಬ್ರಹ್ಮಣ್ಯ ಇದರ ಸುಬ್ರಹ್ಮಣ್ಯ ಗ್ರಾಮದಲ್ಲಿ ಕಸ ವಿಲೇವಾರಿ ಕೆಲಸ ಕಾರ್ಯ ನಡೆಯುತ್ತಿದೆ. ಈ ಕಸ ವಿಲೇವಾರಿ ವಾಹನದ ಚಾಲಕಿಯಾಗಿ ಕೀರ್ತಿ ದೇವರಗದ್ದೆ ಎಂಬವರು ಕರ್ತವ್ಯ ಮಾಡುತ್ತಿರುವುದು ವಿಶೇಷ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಪೇಟೆ, ಆಸುಪಾಸಿನ ಮನೆಗಳಲ್ಲಿ, ಒಟ್ಟು ಸುಬ್ರಹ್ಮಣ್ಯ ಗ್ರಾಮದಲ್ಲಿ ಸಂಗ್ರಹವಾಗುವ ಎಲ್ಲಾ ರೀತಿಯ ತ್ಯಾಜ್ಯ ವಸ್ತುಗಳನ್ನು ಸಂಗ್ರಹ ಮಾಡಿ ಕಸ ವಿಲೇವಾರಿ ವಾಹನದ ಮೂಲಕ ಇಂಜಾಡಿಯಲ್ಲಿರುವ ಘಟಕಕ್ಕೆ ಸಾಗಿಸಲಾಗುತ್ತದೆ. ತುಂಬಾ ಸಂತೋಷದಿಂದಲೇ ಈ

ಜೀವನೋಪಾಯಕ್ಕೆ ಚಾಲಕ ವೃತಿಯನ್ನು ಆಯ್ಕೆ ಮಾಡಿಕೊಂಡ ಮಹಿಳೆ | ಕಸ ವಿಲೇವಾರಿ ವಾಹನದ ಚಾಲಕಿಯಾಗಿ ಕರ್ತವ್ಯ Read More »

ಕೆದಿಲ ಸಾಕೇತನಗರ ಶ್ರೀ ರಾಮ ಭಜನಾ ಮಂದಿರದಲ್ಲಿ ಗಣೇಶೋತ್ಸವ | ಶೋಭಾಯಾತ್ರೆಗೆ ಅಡ್ಡಿಯಾಗದಂತೆ ರಸ್ತೆ ಶ್ರಮದಾನ

ಕೆದಿಲ: ಸಾಕೇತನಗರ ಶ್ರೀ ರಾಮ ಭಜನಾ ಮಂದಿರದಲ್ಲಿ ನಡೆಯುವ ಶ್ರೀ ಗಣೇಶೋತ್ಸವದ ಅಂಗವಾಗಿ ಶ್ರೀ ಗಣೇಶ ವಿಗ್ರಹ ಶೋಭಾಯಾತ್ರೆ ಮಂಗಳವಾರ ರಾತ್ರಿ ನಡೆಯಲಿರುವುದರಿಂದ ಶೋಭಾಯಾತ್ರೆ ಸಾಗುವ ಬೀಟಿಗೆ – ಕ್ಷೇತ್ರಪಳಿಕೆ – ಕಾಂತುಕೋಡಿ ರಸ್ತೆಯನ್ನು ಶ್ರಮದಾನದ ಮೂಲಕ ಸರಿಪಡಿಸಲಾಯಿತು. ಈ ರಸ್ತೆ ಗುಂಡಿಗಳಿಂದ ಕೂಡಿದ್ದು, ಶೋಭಾಯಾತ್ರೆಗೆ ಸಮಸ್ಯೆ ಉಂಟಾಗಲಿದೆ ಎಂಬ ಹಿನ್ನೆಲೆಯಲ್ಲಿ ಈ ವಾರ್ಡಿನ ಸದಸ್ಯ ಶ್ಯಾಮ ಪ್ರಸಾದ್ ತಾವೇ ಸ್ವತಃ ತಮ್ಮ ಪಿಕಪ್ ವಾಹನದಲ್ಲಿ ಜಲ್ಲಿಕಲ್ಲು ಹಾಗೂ ಕ್ರಶರ್ ಹುಡಿ ಹಾಕಿ ಸರಿಪಡಿಸಿದರು. ಈ ಸಂದರ್ಭದಲ್ಲಿ

ಕೆದಿಲ ಸಾಕೇತನಗರ ಶ್ರೀ ರಾಮ ಭಜನಾ ಮಂದಿರದಲ್ಲಿ ಗಣೇಶೋತ್ಸವ | ಶೋಭಾಯಾತ್ರೆಗೆ ಅಡ್ಡಿಯಾಗದಂತೆ ರಸ್ತೆ ಶ್ರಮದಾನ Read More »

ಜೀಪಿನಲ್ಲಿ ಪತ್ತೆಯಾಯ್ತು ಗಂಡು ಕರು | ತೋಮಸ್ ಸಹಿತ ಇಬ್ಬರು ಪೊಲೀಸ್ ವಶ

ವೇಣೂರು : ಜೀಪೊಂದರಲ್ಲಿ ವಾಹನದಲ್ಲಿ ಅಕ್ರಮವಾಗಿ ಜಾನುವಾರನ್ನು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕುತ್ಲೂರು ಎಂಬಲ್ಲಿ ನಡೆದಿದೆ. ಕೇರಳ ತೋಡಪುಡ ತಾಲೂಕು, ಇಡ್ಕಿ ನಿವಾಸಿ ತೋಮಸ್ (34), ಬೆಳ್ತಂಗಡಿ ಕುತ್ಲೂರು ನಿವಾಸಿ ರಂಜಿತ್ (31) ಬಂಧಿತ ಆರೋಪಿಗಳು. ಸೋಮವಾರ ಬೆಳಿಗ್ಗೆ ಬೆಳ್ತಂಗಡಿ ತಾಲೂಕಿನ ಕುತ್ಲೂರು ಎಂಬಲ್ಲಿ ಜೀಪಿನಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚಿದ ವೇಣೂರು ಪೊಲೀಸ್ ಠಾಣೆಯ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸಿ, ಒಂದು ಗಂಡು ಕರು ಹಾಗೂ

ಜೀಪಿನಲ್ಲಿ ಪತ್ತೆಯಾಯ್ತು ಗಂಡು ಕರು | ತೋಮಸ್ ಸಹಿತ ಇಬ್ಬರು ಪೊಲೀಸ್ ವಶ Read More »

ಅಪಘಾತಕ್ಕೀಡಾದ ರಿಕ್ಷಾ: ಯುವತಿ ಸ್ಥಳದಲ್ಲೇ ಮೃತ್ಯು!

ಮಂಗಳೂರು: ಆಟೋರಿಕ್ಷಾವೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ, ಮದುವೆ ನಿಶ್ಚಿತಾರ್ಥವಾಗಿದ್ದ ಯುವತಿಯೋರ್ವಳು ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುಪುರದ ಬಂಗ್ಲೆಗುಡ್ಡೆ ಸಮೀಪ ನಡೆದಿದೆ. ಯುವತಿ ಅರ್ಕುಳ ತುಪ್ಪೆಕಲ್ಲು ನಿವಾಸಿ ಪ್ರೀತಿ ಸಪಲಿಗ (25) ಮೃತಪಟ್ಟವರು. ಪ್ರೀತಿ ಅವರ ತಾಯಿ ಮೀನಾಕ್ಷಿ (55), ತಂಗಿ ಸ್ವಾತಿ (23), ಅತ್ತಿಗೆ ಶೋಭಾ (37), ಶೋಭಾ ಅವರ ಪುತ್ರ ಭವಿಷ್‌ (9), ಆಟೋ ಚಾಲಕ ಪದ್ಮನಾಭ ಗಾಯಗೊಂಡಿದ್ದಾರೆ. ಮೃತ ಯುವತಿಗೆ ವಿವಾಹ ನಿಶ್ಚಿತಾರ್ಥವಾಗಿದ್ದು, ಮುಂದಿನ ವರ್ಷ ಜ. 4ರಂದು ಮದುವೆಗೆ ದಿನ

ಅಪಘಾತಕ್ಕೀಡಾದ ರಿಕ್ಷಾ: ಯುವತಿ ಸ್ಥಳದಲ್ಲೇ ಮೃತ್ಯು! Read More »

error: Content is protected !!
Scroll to Top