ದಕ್ಷಿಣ ಕನ್ನಡ

ಅ. 6 – 7ರಂದು ಮೂಡಬಿದ್ರೆ ಆಳ್ವಾಸ್ ನಲ್ಲಿ ಬೃಹತ್ ಉದ್ಯೋಗ ಮೇಳ | 204 ಕಂಪೆನಿಗಳು, ಸಾವಿರಾರು ಉದ್ಯೋಗ, ಗ್ರಾಮೀಣ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ | ಪುತ್ತೂರು ಶಾಸಕರ ಕಚೇರಿಯಿಂದ ಉದ್ಯೋಗ ಮೇಳಕ್ಕೆ ಬಸ್ ಉಚಿತ ವ್ಯವಸ್ಥೆ ಹೀಗಿರಲಿದೆ…

ಪುತ್ತೂರು: ಅ.6 ಮತ್ತು 7ರಂದು ಮೂಡಬಿದ್ರೆ ಆಳ್ವಾಸ್ ನಲ್ಲಿ ಬೃಹತ್ ಉದ್ಯೋಗ ಮೇಳ ನಡೆಯಲಿದ್ದು ವಿದ್ಯಾವಂತ ಯುವಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಶಾಸಕರಾದ ಅಶೋಕ್ ರೈ ತಿಳಿಸಿದ್ದಾರೆ. ಉದ್ಯೋಗ ಮೇಳದಲ್ಲಿ 204ಕ್ಕೂ ಮಿಕ್ಕಿ ವಿವಿಧ ಕಂಪೆನಿಗಳು ಭಾಗವಹಿಸುತ್ತಿದ್ದು, ಮೇಳದಲ್ಲಿ ಭಾಗವಹಿಸುವ ಸಾವಿರಾರು‌ ಮಂದಿಗೆ ಉದ್ಯೋಗ ದೊರೆಯಲಿದೆ. ಗ್ರಾಮೀಣ ಭಾಗದ ನಿರುದ್ಯೋಗಿ ವಿದ್ಯಾವಂತ ಯುವಕರು ಇದರಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬಹುದು. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಡಿಗ್ರಿ ಕಾಲೇಜು, ಐಟಿಐ ತರಬೇತಿ ಕೇಂದ್ರಗಳು, ಡಿಪ್ಲೋಮಾ ಕೋರ್ಸು‌ಮಾಡಿದವರು, ಬಿಎ, ಬಿಕಾಂ, […]

ಅ. 6 – 7ರಂದು ಮೂಡಬಿದ್ರೆ ಆಳ್ವಾಸ್ ನಲ್ಲಿ ಬೃಹತ್ ಉದ್ಯೋಗ ಮೇಳ | 204 ಕಂಪೆನಿಗಳು, ಸಾವಿರಾರು ಉದ್ಯೋಗ, ಗ್ರಾಮೀಣ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ | ಪುತ್ತೂರು ಶಾಸಕರ ಕಚೇರಿಯಿಂದ ಉದ್ಯೋಗ ಮೇಳಕ್ಕೆ ಬಸ್ ಉಚಿತ ವ್ಯವಸ್ಥೆ ಹೀಗಿರಲಿದೆ… Read More »

ಸುಳ್ಯ ಬಿಜೆಪಿ ಮಂಡಲದಿಂದ ಕುಕ್ಕೆಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ | ಅಭಿಯಾನದ ಬಗ್ಗೆ ಶಾಸಕಿ ಭಾಗೀರಥಿ ಮುರುಳ್ಯ ಮಾತು ಇಲ್ಲಿದೆ

ಸುಬ್ರಹ್ಮಣ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಂಡಲ ವತಿಯಿಂದ ಇಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ಉದ್ಘಾಟನೆಗೊಂಡಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು, ಗಾಂಧಿ ಜಯಂತಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿಯ ಜನ್ಮ ದಿನಾಚರಣೆಯ ಈ ಶುಭದಿನದಂದು ನಾವು ಸು ಳ್ಯ ಬಿಜೆಪಿ ಮಂಡಲ ವತಿಯಿಂದ ವಿವಿಧ ಸಂಘ-ಸಂಸ್ಥೆಗಳ ನೆರವಿನೊಂದಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ದರ್ಪಣ ತೀರ್ಥ ನದಿಯನ್ನು ಸ್ವಚ್ಛಗೊಳಿಸುವ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಮಹಾತ್ಮಾ

ಸುಳ್ಯ ಬಿಜೆಪಿ ಮಂಡಲದಿಂದ ಕುಕ್ಕೆಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ | ಅಭಿಯಾನದ ಬಗ್ಗೆ ಶಾಸಕಿ ಭಾಗೀರಥಿ ಮುರುಳ್ಯ ಮಾತು ಇಲ್ಲಿದೆ Read More »

ಬಿಳಿನೆಲೆ ಯುವಕ ಮಂಡಲದಿಂದ ಸ್ವಚ್ಚತಾ ಕಾರ್ಯ

ಬಿಳಿನೆಲೆ: ಬಿಳಿನೆಲೆ ಯುವಕ ಮಂಡಲದ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಸೋಮವಾರ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ಹಾಗೂ ಗ್ರಾಮದ ಹಲವೆಡೆ ಸ್ವಚ್ಚತಾ ಆಂದೋಲನ ನಡೆಯಿತು. ಪ್ರತಿ ವರ್ಷದಂತೆ  ಈ ಬಾರಿಯು ಯುವಕ ಮಂಡಲದ ಸದಸ್ಯರು ಸ್ವಚ್ಛತಾ ಕಾರ್ಯಕ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಬಿಳಿನೆಲೆ ಯುವಕ ಮಂಡಲದಿಂದ ಸ್ವಚ್ಚತಾ ಕಾರ್ಯ Read More »

ಮಹೇಶ್ ಬಸ್ ಮಾಲಕ ಆತ್ಮಹತ್ಯೆಗೆ ಶರಣು!!

ಮಂಗಳೂರು : ಮಂಗಳೂರಿನ ಖಾಸಗಿ ಬಸ್ ನ ಮಾಲೀಕರೊಬ್ಬರು ತಾವು ಇರುವ ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನು ಮಹೇಶ್ ಬಸ್ ಮಾಲೀಕ ಪ್ರಕಾಶ್ (40) ಎಂದು ಗುರುತಿಸಲಾಗಿದೆ. ಅವರು ಕದ್ರಿ ಕಂಬಳ ಸಮೀಪ ಇರುವ ಅಪಾರ್ಟ್ ಮೆಂಟ್ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಹೇಶ್ ಹೆಸರಿನಲ್ಲಿ ಹಲವಾರು ಸಿಟಿ ಬಸ್ ಗಳು ದಿನನಿತ್ಯ ಸಂಚರಿಸುತ್ತಿದ್ದು, ಜನಮನ್ನಣೆ ಪಡೆದಿದೆ. ಕದ್ರಿ ಪೊಲೀಸ್

ಮಹೇಶ್ ಬಸ್ ಮಾಲಕ ಆತ್ಮಹತ್ಯೆಗೆ ಶರಣು!! Read More »

ಸುಬ್ರಹ್ಮಣ್ಯ ಲಯನ್ಸ್ ಕ್ಲಬ್’ನಿಂದ ಕುಟುಂಬ ಸಮ್ಮಿಲನ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ವತಿಯಿಂದ ಗುರುವಾರ ಕುಟುಂಬ ಸಮ್ಮಿಲನ ಕಾರ್ಯಕ್ರಮ ಕುಲ್ಕುಂದ ಕುಮಾರಧಾರ ಹೋಂ ಸ್ಟೇ ರೆಸಾರ್ಟಿನಲ್ಲಿ ಜರಗಿತು. ಮುಖ್ಯ ಅತಿಥಿಗಳಾಗಿದ್ದ ಲಯನ್ಸ್ ಜಿಲ್ಲಾ ಎಕ್ಸ್’ಟೆನ್ಷನ್ ಚೇಯರ್ಮೆನ್ ಜಯರಾಮ ದೇರಪ್ಪಜ್ಜನ ಮನೆ ಮಾತನಾಡಿ, ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯೇ ಒಂದು ದೊಡ್ಡ ಕುಟುಂಬ. ಈ ಕುಟುಂಬದಲ್ಲಿರುವ ಎಲ್ಲಾ ಲಯನ್ಸ್ ಸದಸ್ಯರು ಸೇವಾ ಮನೋಭಾವನೆಯನ್ನು ಹೊಂದಿದ್ದಾರೆ. ಅಶಕ್ತರಿಗೆ, ಅಗತ್ಯ ಉಳ್ಳವರಿಗೆ, ಬಡತನದಲ್ಲಿರುವವರಿಗೆ ಸಹಾಯ ಮಾಡುವುದೇ ನಮ್ಮ ಉದ್ದೇಶ. ಲಯನ್ಸ್ ಸಂಸ್ಥೆಯಲ್ಲಿ ಹಿಂದಿಗಿಂತಲೂ ಅಧಿಕ ಸದಸ್ಯರು ಸೇರ್ಪಡೆಯಾಗುತ್ತಾರೆ. ಸುಬ್ರಮಣ್ಯ

ಸುಬ್ರಹ್ಮಣ್ಯ ಲಯನ್ಸ್ ಕ್ಲಬ್’ನಿಂದ ಕುಟುಂಬ ಸಮ್ಮಿಲನ Read More »

ಕುಮಾರ ಪರ್ವತ ಚಾರಣ ನಿರ್ಬಂಧ ಮುಕ್ತ! | ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿದ ಚಾರಣಿಗರು

ಸುಬ್ರಹ್ಮಣ್ಯ: ಅರಣ್ಯ ಇಲಾಖೆ ಮೇ ತಿಂಗಳಿನಿಂದ ಕುಕ್ಕೆ ಸುಬ್ರಹ್ಮಣ್ಯದ ಕುಮಾರ ಪರ್ವತ ಚಾರಣಕ್ಕೆ ಹೇರಿದ್ದ ನಿರ್ಬಂಧವನ್ನು ಇದೀಗ ಮುಕ್ತಗೊಳಿಸಿದೆ. ಮೇ ತಿಂಗಳಿನಿಂದ ಕುಕ್ಕೆ ಸುಬ್ರಹ್ಮಣ್ಯದಿಂದ ಕುಮಾರ ಪರ್ವತಕ್ಕೆ ಪ್ರತಿ ವರ್ಷ ಚಾರಣಿಗರ ಸಂಖ್ಯೆ ಜಾಸ್ತಿಯಾಗುತ್ತದೆ. ಈ ವರ್ಷ ಮೇ ತಿಂಗಳಿನಿಂದ ಅರಣ್ಯ ಇಲಾಖೆಯವರು ಚಾರಣಕ್ಕೆ ಪ್ರವಾಸಿಗರಿಗೆ /ಚಾರಣಿಗರಿಗೆ ನಿರ್ಬಂಧ ಗೋಳಿಸಿದ್ದರು. ಇದೀಗ ನಿರ್ಬಂಧ ಮುಕ್ತಗೊಳಿಸಿ ಚಾರಣಿಗರಿಗೆ ಅರಣ್ಯ ಇಲಾಖೆಯವರು ಅವಕಾಶ ನೀಡಿರುತ್ತಾರೆ. ನಿರ್ಬಂಧ ಮುಕ್ತಗೊಳಿಸಿದ ಬೆನ್ನಲ್ಲೇ ಶನಿವಾರ ಬೃಹತ್ ಸಂಖ್ಯೆಯಲ್ಲಿ ಅಂದರೆ ಸುಮಾರು 750ಕ್ಕೂ ಅಧಿಕ ಚಾರಣಿಗರು

ಕುಮಾರ ಪರ್ವತ ಚಾರಣ ನಿರ್ಬಂಧ ಮುಕ್ತ! | ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿದ ಚಾರಣಿಗರು Read More »

ಎಂ.ಜಿ. ಕಾವೇರಮ್ಮನವರಿಗೆ ಅಚಲ ಪ್ರಕಾಶನದಿಂದ ಅಭಿನಂದನೆ

ಸುಳ್ಯ: ಅರೆಭಾಷೆ ಲೇಖಕಿ ಕಾವೇರಮ್ಮ ಎಂ.ಜಿ. ಅವರಿಗೆ ಸುಳ್ಯದ ಅಚಲ ಪ್ರಕಾಶನದಿಂದ ಅಭಿನಂದನೆ ಸಲ್ಲಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಕಾವೇರಮ್ಮ ಎಂ.ಜಿ. ಅವರು ತನ್ನ ಇಳಿವಯಸ್ಸಿನಲ್ಲಿಯೂ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ವಾಟ್ಸಾಪ್, ಫೇಸ್ಬುಕ್ ಗಳಲ್ಲಿ ವ್ಯವಹರಿಸಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಅವರ ವಿವಿಧ ಕ್ಷೇತ್ರಗಳ ಸಾಧನೆಗಳನ್ನು ಗಮನಿಸಿ ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು. ಅಚಲ ಪ್ರಕಾಶನದ ಅಧ್ಯಕ್ಷ ಚಂದ್ರಶೇಖರ ಬಿಳಿನೆಲೆ ಮತ್ತು ಸಂಚಾಲಕಿ ಡಾ. ಅನುರಾಧಾ ಕುರುಂಜಿ ಸನ್ಮಾನಿಸಿದರು. ಅಂಶಲ್ ಬಿಳಿನೆಲೆ ಮತ್ತು ಅಂಕಣಗಾರ್ತಿ ಚಂದ್ರಾವತಿ ಬಡ್ಡಡ್ಕ

ಎಂ.ಜಿ. ಕಾವೇರಮ್ಮನವರಿಗೆ ಅಚಲ ಪ್ರಕಾಶನದಿಂದ ಅಭಿನಂದನೆ Read More »

ಕರಾವಳಿಯಲ್ಲಿ ಭಾರಿ ಮಳೆಯ ಸೂಚನೆ | ಮೀನುಗಾರರಿಗೆ ಸೂಚನೆ ನೀಡಿದ ಐಎಂಡಿ!!

ಬೆಂಗಳೂರು: ಮುಂದಿನ 24 ಗಂಟೆಯಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಕರಾವಳಿಯಲ್ಲಿ ಮಳೆ ಅಬ್ಬರಿಸಿದ್ದರೆ, ಒಳನಾಡಿನಲ್ಲಿ ಪ್ರತ್ಯೇಕ ಕಡೆಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಐಎಂಡಿ (ಭಾರತೀಯ ಹವಾಮಾನ ಇಲಾಖೆ) ಏಳು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಬಳ್ಳಾಪುರ, ಬೆಳಗಾವಿ, ಬೀದರ್, ಕೋಲಾರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆಯ ಎಚ್ಚರಿಕೆ ಇದೆ. ಹೀಗಾಗಿ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯ ಒಂದೆರಡು ಕಡೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ

ಕರಾವಳಿಯಲ್ಲಿ ಭಾರಿ ಮಳೆಯ ಸೂಚನೆ | ಮೀನುಗಾರರಿಗೆ ಸೂಚನೆ ನೀಡಿದ ಐಎಂಡಿ!! Read More »

ಸುಳ್ಯ ವೃತ್ತ ನಿರೀಕ್ಷಕರಾಗಿ ಮೋಹನ್ ಕೊಠಾರಿ ಅಧಿಕಾರ ಸ್ವೀಕಾರ

ಸುಳ್ಯ: ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಾಗಿ ಮೋಹನ್ ಕೊಠಾರಿ ಅಧಿಕಾರ ಸ್ವೀಕರಿಸಿದ್ದಾರೆ. ಈಗಾಗಲೇ ಸುಳ್ಯ ಠಾಣೆಯಿಂದ ವರ್ಗಾವಣೆಯಾಗಿರುವ ನವೀನ್ ಚಂದ್ರ ಜೋಗಿ ಅವರು ಮೋಹನ್ ಕೊಠಾರಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಮಂಗಳೂರಿನವರಾದ ಕೊಠಾರಿ ಅವರು, ಮಂಗಳೂರಿನಲ್ಲಿ ಇನ್ ಸ್ಪೆಕ್ಟರ್ ಆಗಿದ್ದು, ಇದೀಗ ಸುಳ್ಯ ವೃತ್ತ ನಿರೀಕ್ಷಕರಾಗಿ ನೇಮಕಗೊಂಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಸುಳ್ಯ ವೃತ್ತ ನಿರೀಕ್ಷಕರಾಗಿದ್ದ ನವೀನ್ ಚಂದ್ರ ಜೋಗಿ ರಾಜ್ಯ ಪೊಲೀಸ್ ಗುಪ್ತಚರ ವಿಭಾಗಕ್ಕೆ ವರ್ಗಾವಣೆಗೊಂಡಿದ್ದಾರೆ.

ಸುಳ್ಯ ವೃತ್ತ ನಿರೀಕ್ಷಕರಾಗಿ ಮೋಹನ್ ಕೊಠಾರಿ ಅಧಿಕಾರ ಸ್ವೀಕಾರ Read More »

ಕಡಬದಲ್ಲಿ ಆನೆ ದಾಳಿ: ಗಾಯಾಳು ಚೋಮ ಆಸ್ಪತ್ರೆಗೆ

ಕಡಬ: ಕಡಬ ತಾಲೂಕಿನ ಮರ್ಧಾಳ ಸಮೀಪದ ನೆಲ್ಯಡ್ಕ ಎಂಬಲ್ಲಿ ವ್ಯಕ್ತಿಯೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ನಡೆದಿದೆ. ಚೋಮ ಎಂಬವರು ಕಾಡಾನೆ ದಾಳಿಯಿಂದ ಗಾಯಗೊಂಡವರು. ಗಾಯಗೊಂಡ ಚೋಮ ಅವರು ಕಡಬ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಪರಿಸರದಲ್ಲಿ ಮತ್ತೆ ಜನರಲ್ಲಿ ಆತಂಕ ಶುರುವಾಗಿದೆ.

ಕಡಬದಲ್ಲಿ ಆನೆ ದಾಳಿ: ಗಾಯಾಳು ಚೋಮ ಆಸ್ಪತ್ರೆಗೆ Read More »

error: Content is protected !!
Scroll to Top