ದಕ್ಷಿಣ ಕನ್ನಡ

ಉಳ್ಳಾಲ ಸಮುದ್ರ ಪಾಲಾದ ವಿದ್ಯಾರ್ಥಿಗಳ ಮೃತದೇಹ ಪತ್ತೆ

ಉಳ್ಳಾಲ: ಸಮುದ್ರತೀರಕ್ಕೆ ವಿಹಾರಕ್ಕೆ ತೆರಳಿದ್ದ ಸಂದರ್ಭ ಸಮುದ್ರಪಾಲಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆಯಾಗಿದೆ. ಸೊಮೇಶ್ವರ ಪರಿಜ್ಞಾನ ಕಾಲೇಜಿನಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಓದುತ್ತಿದ್ದ  ವಿದ್ಯಾರ್ಥಿಗಳಾದ ಯಶ್ವಿತ್‌, ಯುವರಾಜ ಸೇರಿದಂತೆ ಒಟ್ಟು ಆರು ಮಂದಿ ವಿದ್ಯಾರ್ಥಿಗಳು ಶನಿವಾರ ಮದ್ಯಾಹ್ನ 12.40ಕ್ಕೆ ಕಾಲೇಜು ಮುಗಿಸಿ ಸೋಮೇಶ್ವರ ಶ್ರೀ ಸೊಮನಾಥ ದೇವಸ್ಥಾನಕ್ಕೆ ತೆರಳಿದ್ದರು. ಪೂಜೆಯ ಬಳಿಕ ದೇವಸ್ಥಾನದಲ್ಲಿ ಮುಗಿಸಿ ಅಲ್ಲೇ ಪಕ್ಕದ ಮರದಡಿಯಲ್ಲಿ ಕುಳಿತಿದ್ದರು. ಸುಮಾರು ಮೂರು ಗಂಟೆಯ ಬಳಿಕ ಸ್ಥಳೀಯ ಗೂಡಂಗಡಿಯಿಂದ ತಿಂಡಿ ತೆಗೆದುಕೊಂಡು ಸೋಮೇಶ್ವರ ದೇವಸ್ಥಾನದಿಂದ ಉಚ್ಚಿಲದ ಕಡೆಗೆ […]

ಉಳ್ಳಾಲ ಸಮುದ್ರ ಪಾಲಾದ ವಿದ್ಯಾರ್ಥಿಗಳ ಮೃತದೇಹ ಪತ್ತೆ Read More »

ಡಿ.12 : ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಒಕ್ಕೂಟದಿಂದ ಪ್ರತಿಭಟನೆ | ಸೇವೆಯಲ್ಲಿ ಉಂಟಾಗಲಿದೆ ವ್ಯತ್ಯಯ

ಮಂಗಳೂರು: ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಒಕ್ಕೂಟ  ಹಾಗೂ ಗ್ರಾಮೀಣ ಅಂಚೆ ಸೇವಕರ ರಾಷ್ಟ್ರೀಯ ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ ಸಹಯೋಗದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ. 12ರಿಂದ ಮುಷ್ಕರ ಹಮ್ಮಿಕೊಂಡಿದ್ದು, ಗ್ರಾಮೀಣ ಭಾಗಗಳಲ್ಲಿ ಅಂಚೆ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಮುಷ್ಕರ ಹಿನ್ನೆಲೆಯಲ್ಲಿ ಸೇವೆಯನ್ನು ಸ್ಥಗಿತಗೊಳಿಸಿ, ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಐಜಿಡಿಎಸ್‌ಯು ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಮಹದೇವಯ್ಯ ಸಭೆಯೊಂದರಲ್ಲಿ ತಿಳಿಸಿದ್ದಾರೆ. ರಾಜ್ಯದಲ್ಲಿ 16.5 ಸಾವಿರ ಗ್ರಾಮೀಣ ಅಂಚೆ ಸೇವಕರು ಕಾರ್ಯನಿರ್ವಹಿಸುತ್ತಿದ್ದು, ಅಂಚೆ ಸೇವೆಗಳನ್ನು

ಡಿ.12 : ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಒಕ್ಕೂಟದಿಂದ ಪ್ರತಿಭಟನೆ | ಸೇವೆಯಲ್ಲಿ ಉಂಟಾಗಲಿದೆ ವ್ಯತ್ಯಯ Read More »

ಮಾಸ್ಟರ್ ಶೆಫ್ ಇಂಡಿಯಾ ಪ್ರಶಸ್ತಿ ಪಡೆದ ಮಂಗಳೂರಿನ ಮುಹಮ್ಮದ್ ಆಶಿಕ್

ಸೋನಿ ಲೈವ್ ಒಟಿಟಿ ವೇದಿಕೆ ಮುಂಬಯಿಯಲ್ಲಿ ಆಯೋಜಿಸಿದ ಮಾಸ್ಟರ್ ಶೆಫ್ ಇಂಡಿಯಾ ಸ್ಪರ್ಧೆಯ ಫೈನಲ್ ನಲ್ಲಿ ಮಂಗಳೂರಿನ ಯುವಕ ಮುಹಮ್ಮದ್ ಆಶಿಕ್ ಅವರು ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ಅಂತಿಮ ಸುತ್ತು ತಲುಪಿದ ರುಖ್ಸಾರ್ ಸಯೀದ್, ಸೂರಜ್ ಥಾಪಾ, ನಂಬಿ ಜೆಸ್ಸಿಕಾ ಮರಕ್ ಸೇರಿದಂತೆ ನಾಲ್ವರಲ್ಲಿ ಮುಹಮ್ಮದ್ ಆಶಿಕ್ ಒಬ್ಬರಾಗಿದ್ದರು. ಶುಕ್ರವಾರ ಸ್ಪರ್ಧೆಯ ಫೈನಲ್ ಸಂಚಿಕೆ ವಿಜೇತರಾಗಿ ಹೊರ ಹೊಮ್ಮಿದ್ದಾರೆ. ಅಲ್ಲದೆ ಈ ಸ್ಪರ್ಧೆಯನ್ನು ಗೆದ್ದ ದಕ್ಷಿಣ ಭಾರತದ ಪ್ರಥಮ ಸ್ಪರ್ಧಿ ಎಂಬ ಹೆಗ್ಗಳಿಯನ್ನು ಅವರು ಪಡೆದಿದ್ದಾರೆ.

ಮಾಸ್ಟರ್ ಶೆಫ್ ಇಂಡಿಯಾ ಪ್ರಶಸ್ತಿ ಪಡೆದ ಮಂಗಳೂರಿನ ಮುಹಮ್ಮದ್ ಆಶಿಕ್ Read More »

ಮುಂಬಾಗಿಲಿಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದ ಗ್ಯಾಂಗನ್ನು ಸೆರೆ ಹಿಡಿದ ಪೊಲೀಸರು!!

ಮನೆಯಂಗಳಕ್ಕೆ ಪ್ರವೇಶಿಸಿದ ನಾಲ್ಕೈದು ಮಂದಿಯ ಗುಂಪು ಮನೆಯ ಬಾಗಿಲಿಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಮೀಟರ್ ಬಡ್ಡಿ ವಸೂಲಿಗಾರ ಸುಮಿತ್ ಆಳ್ವ ಅಲಿಯಾಸ್ ಸುಮ್ಮಿ, ಮಹಮ್ಮದ್ ಜುನೈದ್, ಸೀಯಾನ್ ಮತ್ತು ಮಹಮ್ಮದ್ ತೌಫೀಕ್ ನನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಗೇಟ್ ಮುರಿದು ಮುಂಬಾಗಿಲಿಗೆ

ಮುಂಬಾಗಿಲಿಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದ ಗ್ಯಾಂಗನ್ನು ಸೆರೆ ಹಿಡಿದ ಪೊಲೀಸರು!! Read More »

ತುಳು ಸಿನಿಮಾಗಳಲ್ಲೂ ಮಿಂಚಿದ್ದ ಲೀಲಾವತಿ!

ಮಂಗಳೂರು: ತುಳುವಿನ 8 ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಲೀಲಾವತಿ ಅವರು, ತುಳು ಸಿನಿಮಾಗಳ ನಿರ್ಮಾಣಕ್ಕೂ ಸಹಾಯ ಹಸ್ತ ಚಾಚಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದವರಾಗಿರುವ ಅವರು, ಕಂಕನಾಡಿಯ ಸೈಂಟ್ ಜೋಸೆಫ್ ಎಲಿಮೆಂಟರಿ ಸ್ಕೂಲಿನಲ್ಲಿ 2ನೇ ತರಗತಿ ಕಲಿತವರು. ಆಗ ಲೀಲಾ ಕಿರಣ್ ಎಂಬ ಹೆಸರಿನಿಂದ ಕರೆಸಿಕೊಂಡಿದ್ದ ಅವರು, ಬಳಿಕ ಲೀಲಾವತಿಯಾಗಿ ಕರುನಾಡಿನ ಕಣ್ಮಣಿಯಾಗಿ ಬೆಳೆದರು. ತುಳು ಭಾಷೆಯ 2ನೇ ಸಿನಿಮಾ 1971ರಲ್ಲಿ ತೆರೆಕಂಡ `ದಾರೆದ ಬುಡೆದಿ’, 1972ರಲ್ಲಿ ತೆರೆಕಂಡ `ಪಗೆತ ಪುಗೆ’ ಹಾಗೂ `ಬಿಸತ್ತಿ ಬಾಬು’,

ತುಳು ಸಿನಿಮಾಗಳಲ್ಲೂ ಮಿಂಚಿದ್ದ ಲೀಲಾವತಿ! Read More »

ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷರಾಗಿ ಹರೀಶ್ ಉಬರಡ್ಕ

ಪುತ್ತೂರು: ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಉಬರಡ್ಕ ನೇಮಕಗೊಂಡಿದ್ದಾರೆ. ಮಹಾ ಒಕ್ಕೂಟದ ರಾಜ್ಯಾಧ್ಯಕ್ಷರಾದ ಕಾಡಶೆಟ್ಟಿಹಳ್ಳಿ ಸತೀಶ್ ಅವರು ಈ ನೇಮಕ ಮಾಡಿದ್ದಾರೆ. ಹರೀಶ್ ಉಬರಡ್ಕ ಅವರು ನಾಲ್ಕು ಬಾರಿ ಉಬರಡ್ಕ ಗ್ರಾಪಂನ ಅಧ್ಯಕ್ಷರಾಗಿ, ಸದಸ್ಯರಾಗಿ, ಸಹಕಾರಿ ಸಂಘದ ನಿರ್ದೇಶಕರಾಗಿ, ಸುಳ್ಯ ತಾಲೂಕು ಸಹಕಾರಿ ಯೂನಿಯನ್ ಅಧ್ಯಕ್ಷರಾಗಿ, ವಿವಿಧ ಸಂಘ – ಸಂಸ್ಥೆಗಳಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದಾರೆ. ಬೆಂಗಳೂರಿನ

ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷರಾಗಿ ಹರೀಶ್ ಉಬರಡ್ಕ Read More »

ಬೆಳ್ತಂಗಡಿ ಮೂಲದ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ವಿಧಿವಶ!

ಬೆಂಗಳೂರು: ಕನ್ನಡ ಚಲನಚಿತ್ರ ರಂಗದ ಹಿರಿಯ ನಟಿ ಲೀಲಾವತಿ (85) ಅವರು ಶುಕ್ರವಾರ ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಕೆಲವು ಸಮಯಗಳಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಬಳಿಕ ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ತೀರಾ ಹದಗೆಟ್ಟಿದ್ದು, ಚಿತ್ರರಂಗದ ಹಲವು ನಟರು ಆಗಮಿಸಿ ಆರೋಗ್ಯ ವಿಚಾರಿಸಿದ್ದರು. 1938ರಲ್ಲಿ ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನಲ್ಲಿ ಜನಿಸಿದ್ದ ಲೀಲಾವತಿ ಅವರು ಕನ್ನಡ, ತೆಲುವು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸಿ, ರಾಜ್ಯದ ಮನೆಮಾತಾಗಿದ್ದರು. ನಾಗಕನ್ನಿಕೆ ಚಿತ್ರದ

ಬೆಳ್ತಂಗಡಿ ಮೂಲದ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ವಿಧಿವಶ! Read More »

ಎಸ್.ಆರ್.ಕೆ. ಲ್ಯಾಡರ್ಸಿನ ಬೆಳ್ಳಿಹಬ್ಬ ಲೋಗೊ ಅನಾವರಣಗೈದ ಡಾ. ಡಿ. ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ: ಎಸ್.ಆರ್.ಕೆ. ಲ್ಯಾಡರ್ಸ್ ಸಂಸ್ಥೆಯ ಬೆಳ್ಳಿಹಬ್ಬದ ಲೋಗೊವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅನಾವರಣಗೊಳಿಸಿದರು. 25ನೇ ವರ್ಷದ ಸಂಭ್ರಮದಲ್ಲಿರುವ ಎಸ್.ಆರ್.ಕೆ. ಲ್ಯಾಡರ್ಸ್, ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ ಮಳಿಗೆಯನ್ನು ತೆರೆದಿದೆ. ಈ ಮಳಿಗೆಗೆ ಆಗಮಿಸಿದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಲೋಗೊ ಅನಾವರಣಗೊಳಿಸಿ, ಶುಭಹಾರೈಸಿದರು. ಈ ಸಂದರ್ಭ ಸಹಾಯಕ ಆಯುಕ್ತ ಗಿರೀಶ್ ನಂದನ್, ಮೊದಲಾದವರು ಉಪಸ್ಥಿತರಿದ್ದರು.

ಎಸ್.ಆರ್.ಕೆ. ಲ್ಯಾಡರ್ಸಿನ ಬೆಳ್ಳಿಹಬ್ಬ ಲೋಗೊ ಅನಾವರಣಗೈದ ಡಾ. ಡಿ. ವೀರೇಂದ್ರ ಹೆಗ್ಗಡೆ Read More »

ವಿದೇಶದಿಂದ ಬಂದ ಯುವಕ ಬೈಕ್ ಅಪಘಾತದಲ್ಲಿ ಮೃತ್ಯು

ಮೂಡಬಿದ್ರೆ: ಮೂರು ದಿನಗಳ ಹಿಂದೆ ವಿದೇಶದಿಂದ ಊರಿಗೆ ಬಂದಿದ್ದ ಯುವಕನ ಬೈಕ್ ಅಪಘಾತದಲ್ಲಿ ಮೃತಪಟ್ಟ ಘಟನೆ ಮೂಡಬಿದ್ರೆ ಠಾಣಾ ವ್ಯಾಪ್ತಿಯ ಕಲ್ಲಬೆಟ್ಟುವಿನಲ್ಲಿ ನಡೆದಿದೆ. ಮೂಡಬಿದ್ರೆ ಮಹಾವೀರ ಕಾಲೇಜು ಬಳಿ ನಿವಾಸಿ ಪ್ರದೀಪ್ ಶೆಟ್ಟಿ (38) ಮೃತಪಟ್ಟ ಯುವಕ. ಪ್ರದೀಪ್ ಅವರು ತನ್ನ ಮನೆಯಲ್ಲಿ ರಾತ್ರಿ ಊಟ ಮುಗಿಸಿ ಬೈಕ್ ನಲ್ಲಿ ಮೂಡುಬಿದಿರೆಯಿಂದ ಗಂಟಲ್ ಕಟ್ಟೆಗೆ ಬರುತ್ತಿದ್ದ ಸಂದರ್ಭದಲ್ಲಿ ಬೆಳ್ತಂಗಡಿಯಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಬರುತ್ತಿದ್ದ ಕಾರು ಕಲ್ಲಬೆಟ್ಟು ಬಳಿ ಢಿಕ್ಕಿ ಹೊಡೆದಿದೆ. ಆಗ ಬೈಕ್ ನಿಂದ ರಸ್ತೆಗೆ

ವಿದೇಶದಿಂದ ಬಂದ ಯುವಕ ಬೈಕ್ ಅಪಘಾತದಲ್ಲಿ ಮೃತ್ಯು Read More »

ಖಾಸಗಿ ಬಸ್ ಡಿಕ್ಕಿ : ಸ್ಕೂಟರ್ ಸವಾರ ಮೃತ್ಯು

ಬಂಟ್ವಾಳ: ಸ್ಕೂಟರ್ ಗೆ ಖಾಸಗಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಪಲ್ಲಮಜಲು ಕ್ರಾಸ್ ನಲ್ಲಿ ನಡೆದಿದೆ. ಸ್ಕೂಟರ್ ಸವಾರ ನಾರಾಯಣ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಪಲ್ಲಮಜಲು ಕ್ರಾಸ್ ಈ ಅಪಘಾತ ಸಂಭವಿಸಿದ್ದು. ಸ್ಕೂಟರ್ ಸವಾರ ನಾರಾಯಣ ಅವರು ರಸ್ತೆಗೆ ಎಸೆಯಲ್ಪಟು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ವೈದ್ಯರು ಪರೀಕ್ಷಿಸಿ

ಖಾಸಗಿ ಬಸ್ ಡಿಕ್ಕಿ : ಸ್ಕೂಟರ್ ಸವಾರ ಮೃತ್ಯು Read More »

error: Content is protected !!
Scroll to Top