ದಕ್ಷಿಣ ಕನ್ನಡ

ನೆಲ್ಯಾಡಿ ಉಪ ಅಂಚೆ ಕಚೇರಿಯ ಅಂಚೆ ಪಾಲಕ ಡಿ.ರಾಮಣ್ಣ ಶೆಟ್ಟಿ ನಾಳೆ ಸೇವೆಯಿಂದ ನಿವೃತ್ತಿ

ನೆಲ್ಯಾಡಿ: ಅಂಚೆ ಇಲಾಖೆಯಲ್ಲಿ 41 ವರ್ಷ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ನೆಲ್ಯಾಡಿ ಉಪ ಅಂಚೆ ಕಚೇರಿಯಲ್ಲಿ ಅಂಚೆ ಪಾಲಕರಾಗಿರುವ ಡಿ. ರಾಮಣ್ಣ ಶೆಟ್ಟಿ ಅವರು ಮಾ.31 ರಂದು ನಿವೃತ್ತಿಯಾಗಲಿದ್ದಾರೆ. 1983, ಮಾ.14 ರಂದು ಕೊಕ್ಕಡ ಅಂಚೆ ಕಚೇರಿಯಲ್ಲಿ ಇಲಾಖೇತರ ನೌಕರರಾಗಿ ಸೇವೆ ಆರಂಭಿಸಿದ ರಾಮಣ್ಣ ಶೆಟ್ಟಿಯವರು ಬಳಿಕ ಇಲಾಖಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 1991, ನ.16 ರಂದು ಕಾರ್ಕಳ ಪ್ರಧಾನ ಅಂಚೆ ಕಚೇರಿಯಲ್ಲಿ ಅಂಚೆ ನೌಕರರಾಗಿ ಸೇವೆಗೆ ಸೇರ್ಪಡೆಗೊಂಡಿದ್ದರು. 1997, ಏ.26ರಂದು ಗ್ರೂಫ್ ಸಿ ನೌಕರರಾಗಿ […]

ನೆಲ್ಯಾಡಿ ಉಪ ಅಂಚೆ ಕಚೇರಿಯ ಅಂಚೆ ಪಾಲಕ ಡಿ.ರಾಮಣ್ಣ ಶೆಟ್ಟಿ ನಾಳೆ ಸೇವೆಯಿಂದ ನಿವೃತ್ತಿ Read More »

ಕಾಪು ಠಾಣಾ ಮಹಿಳಾ ಪೇದೆ ಆತ್ಮಹತ್ಯೆ !

ಕಾಪು : ಮಹಿಳಾ ಪೇದೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಪು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾವು ಠಾಣೆಯ ಪೇದೆ ಜ್ಯೋತಿ (29) ಆತ್ಮಹತ್ಯೆ ಮಾಡಿಕೊಂಡವರು. ಮೂಲತಃ ಬಾಗಲಕೋಟೆಯವರಾಗಿರುವ ಜ್ಯೋತಿ ಕಾಪು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶುಕ್ರವಾರ ಎಂದಿನಂತೆ ಕರ್ತವ್ಯ ನಿರ್ವಹಿಸಿದ್ದ ಅವರು ರಾತ್ರಿ ಕ್ವಾಟ್ರಸ್ ಗೆ ಮರಳಿದ್ದು ಶನಿವಾರ ಬೆಳಿಗ್ಗೆ ಕ್ವಾಟ್ರಸ್‍ ನಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎನ್ನಲಾಗಿದೆ. ಮೃತ ಪೊಲೀಸ್ ಸಿಬಂದಿಯ ಪತಿ ಕೆ.ಎಸ್.ಆರ್.ಟಿ.ಸಿ ಸಿಬಂದಿಯಾಗಿದ್ದು ಪತಿ ಬೆಳಿಗ್ಗೆ ಕರ್ತವ್ಯಕ್ಕೆ ಹೋಗಿದ್ದರು.

ಕಾಪು ಠಾಣಾ ಮಹಿಳಾ ಪೇದೆ ಆತ್ಮಹತ್ಯೆ ! Read More »

ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಭೇಟಿ

ಸುಳ್ಯ: ಚುನಾವಣಾ ಪ್ರಚಾರಕ್ಕಾಗಿ ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಮಾ. 30ರಂದು ಸುಳ್ಯಕ್ಕೆ ಭೇಟಿ ನೀಡಿದರು. ಬೆಳಿಗ್ಗೆ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ಪ್ರಚಾರ ಆರಂಭಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಸುಳ್ಯ ಕ್ಷೇತ್ರದ ಡಿಸಿಸಿ ಉಸ್ತುವಾರಿ ಎನ್.ಜಯಪ್ರಕಾಶ್ ರೈ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಪ್ರಮುಖರಾದ ರಾಧಾಕೃಷ್ಣ ಬೊಳ್ಳೂರು, ಕಿರಣ್ ಬುಡ್ಲೆಗುತ್ತು, ವಿಜಯ ಕುಮಾರ್ ಸೊರಕೆ, ಡಾ. ಎನ್.ಎ.

ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಭೇಟಿ Read More »

ಡಾ. ಅನುರಾಧಾ ಕುರುಂಜಿಯವರಿಗೆ ಶಿವಶರಣೆ ನೀಲಾಂಬಿಕೆ  ಪ್ರಶಸ್ತಿ  ಪ್ರದಾನ

ಸುಳ್ಯ: ಸುಳ್ಯದ ಉಪನ್ಯಾಸಕರು, ವ್ಯಕ್ತಿತ್ವ ವಿಕಸನ ತರಬೇತುದಾರರಾದ ಡಾ. ಅನುರಾಧಾ ಕುರುಂಜಿಯವರಿಗೆ ಶಿವಶರಣೆ ನೀಲಾಂಬಿಕೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಬೆಂಗಳೂರಿನ ವಿಶ್ವ ಕನ್ನಡ ಸಂಸ್ಥೆಯವರು ಕೊಡ ಮಾಡುವ ಪ್ರಶಸ್ತಿಯನ್ನು ಮಾ.29 ರಂದು ಬೆಂಗಳೂರಿನ ಬಾಗಲಕುಂಟೆ ಮಹಾಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ  ನಡೆದ ವಿಶ್ವ ಕನ್ನಡ ರಾಜ್ಯ ಮಟ್ಟದ  ಪ್ರಥಮ ಮಹಿಳಾ ಸಮ್ಮೇಳನದಲ್ಲಿ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷೆ ಕಮಲ ರಾಜೇಶ್, ಸಮಾಜ ಸೇವಕಿ, ಸೂರಜ್ ಫೌಂಡೇಷನ್ ಸಂಸ್ಥಾಪಕಿ ಸುಜಾತ ಎಸ್ ಮುನಿರಾಜು,

ಡಾ. ಅನುರಾಧಾ ಕುರುಂಜಿಯವರಿಗೆ ಶಿವಶರಣೆ ನೀಲಾಂಬಿಕೆ  ಪ್ರಶಸ್ತಿ  ಪ್ರದಾನ Read More »

ಆನೆ ದಾಳಿ | ತೆಂಗು, ಅಡಿಕೆ, ಬಾಳೆಗಿಡಗಳ ನಾಶ

ಸುಳ್ಯ: ತಾಲೂಕಿನ ಪೇರಲ್‍ ಗುತ್ತು ಎಂಬಲ್ಲಿ ಆನೆ ದಾಳಿ ಮಾಡಿ ಕೃಷಿ ನಾಶಗೊಳಿಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಪೇರಲ್‍ ಗುತ್ತು ದಿ.ಬಾಲಕೃಷ್ಣ ಭಂಡಾರಿ ಅವರ ಮನೆಗೆ ಆನೆ ದಾಳಿ ಮಾಡಿದ್ದು,  10 ರಿಂದ 15 ತೆಂಗಿನ ಮರ, ಅಡಿಕೆ ಮರ, ಬಾಳೆ ಗಿಡ ಸಹಿತ ಇತರ ಕೃಷಿಗಳಿಗೆ ಹಾನಿಯಾಗಿದೆ. ಇಂದು ಮುಂಜಾನೆ ಹಠಾತ್ ಆನೆಯೊಂದು ದಾಳಿ ಮಾಡಿದ್ದು, ಕೃಷಿಗೆ ಹಾನಿ ಮಾಡಿ ಬಳಿಕ ಅಲ್ಲಿಂದ ಕಾಲ್ಕಿತ್ತಿದೆ.

ಆನೆ ದಾಳಿ | ತೆಂಗು, ಅಡಿಕೆ, ಬಾಳೆಗಿಡಗಳ ನಾಶ Read More »

ತಾಯಿ ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆ

ಪುತ್ತೂರು: ತಾಯಿ ಮಗುವಿನೊಂದಿಗೆ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಡ್ಯಾರ್ ಪದವು ನಿವಾಸಿ ಚೈತ್ರ, ಹಾಗೂ ಒಂದು ವರ್ಷದ ಮಗು ದಿಯಾಂಶ್‍ ಎಂಬವರ ಮೃತದೇಹ ಹರೇಕಳ ಸೇತುವೆ ಬಳಿ ಪತ್ತೆಯಾಗಿದೆ. ಶುಕ್ರವಾರ ಮಧ್ಯಾಹ್ನ ತಾಯಿ-ಮಗು ನಾಪತ್ತೆಯಾಗಿದ್ದ ಹಿನ್ನಲೆಯಲ್ಲಿ ಹುಡುಕಾಟಕ್ಕೆ ಸಂಬಂಧಿಕರು ಮನವಿ ಮಾಡಿದ್ದರು. ಈ ನಡುವೆ ಶುಕ್ರವಾರವೇ ಮಗುವಿನ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ದೇರಳಕಟ್ಟೆ ಸೇವಾಶ್ರಮದಲ್ಲಿ ಆಚರಿಸಿದ್ದರು ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣಗಳು ತಿಳಿದು ಬಂದಿಲ್ಲ.

ತಾಯಿ ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆ Read More »

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ | ಓರ್ವ ಮೃತ್ಯು, ಇಬ್ಬರಿಗೆ ಗಾಯ

ಬೆಳ್ತಂಗಡಿ: ಕಾರು ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿಯಾದ ಪರಿಣಾಮ ಕಾರು ಪಲ್ಟಿಯಾಗಿ ಓರ್ವರು ಮೃತಪಟ್ಟು,, ಇಬ್ಬರು ಗಾಯಗೊಂಡ  ಘಟನೆ ಗುರುವಾಯನಕೆರೆ ಶಕ್ತಿನಗರದ ಬಳಿ ನಡೆದಿದೆ. ಲಾಯಿಲ ಮೋರ್ನಿಂಗ್ ಸ್ಟಾರ್ ನಿವಾಸಿ ವಿವಿ ಮ್ಯಾಥ್ಯೂ ಅವರ ಪುತ್ರ ಕಾರು ಚಾಲಕ ಪ್ರೈಸ್ ಮ್ಯಾಥ್ಯೂ (32) ಮೃತಪಟ್ಟವರು. ಇಬ್ಬರು ಗಾಯಗೊಂಡಿದ್ದಾರೆ. ಬೆಳ್ತಂಗಡಿ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ | ಓರ್ವ ಮೃತ್ಯು, ಇಬ್ಬರಿಗೆ ಗಾಯ Read More »

ಕೊಕ್ಕೊ ಧಾರಣೆ ಏರಿಕೆ : ರೈತರ ಮುಖದಲ್ಲಿ ಸಂತಸ

ಸುಳ್ಯ: ರೈತರ ಪಾಲಿನ ಆಶಾದಾಯಕ ಬೆಳೆ ಎನಿಸಿರುವ ಕೊಕ್ಕೊ ದರ ಇತಿಹಾಸದಲ್ಲೇ ಕೆ.ಜಿಗೆ ಡಬಲ್ ಸೆಂಚುರಿ ಬಾರಿಸಿ ಮುನ್ನುಗ್ಗುತ್ತಿದ್ದು, ಸಾರ್ವಕಾಲಿಕ ದಾಖಲೆ ಬರೆದಿದೆ. ಅತೀ ಹೆಚ್ಚು ಕೊಕ್ಕೊ ಬೆಳೆಯುವ ಪ್ರದೇಶಗಳಲ್ಲಿ ಸುಳ್ಯವೂ ಒಂದು. ರೈತರ ಪಾಲಿಗಿಂದು ಆಶಾದಾಯಕ ಬೆಳೆಯಾಗಿ ಆದಾಯ ಒದಗಿಸುತ್ತಿದೆ. ಈ ಮೊದಲು ಅಡಕೆ ದರ ಏರುತ್ತಾ ಹೋದಾಗ ಕೊಕ್ಕೊ ದರ ಕುಂಟುತ್ತಲೇ ಸಾಗಿತ್ತು. ಮಾ.27ರಂದು ಸುಳ್ಯದಲ್ಲಿ ಕೆಜಿಗೆ 215 ರೂ.ಗೆ ಖರೀದಿಸಲಾಗುತ್ತಿದೆ. ಉತ್ತಮ ದರ ಇದ್ದರೂ ಕೊಕ್ಕೊ ಬೆಳೆ ಫಸಲು ಕಡಿಮೆ ಆಗಿರುವ ಕಾರಣ

ಕೊಕ್ಕೊ ಧಾರಣೆ ಏರಿಕೆ : ರೈತರ ಮುಖದಲ್ಲಿ ಸಂತಸ Read More »

ಕಡಬದಲ್ಲಿ ಅಕ್ರಮ ಗೋ ವಧೆ ಮಾಡಿ ಮಾಂಸ ತಯಾರಿಕೆ | ಪೊಲೀಸರಿಂದ ದಾಳಿ

ಕಡಬ : ಅಕ್ರಮವಾಗಿ ಗೋವಧೆ ಮಾಡಿ ಮಾಂಸ ಮಾಡುತ್ತಿದ್ದ ಮನೆಯೊಂದಕ್ಕೆ ಪೊಲೀಸರು ದಾಳಿ ನಡೆಸಿದ ಘಟನೆ ಕಡಬ ತಾಲೂಕಿನ ಕೊಯಿಲಾ ಕೆಮ್ಮಾರ ಆಕೀರ ಎಂಬಲ್ಲಿ ನಡೆದಿದೆ. ಕಡಬ ತಾಲೂಕು ಕೊಯಿಲಾ ಗ್ರಾಮದ ಕೆಮ್ಮಾರ ಆಕೀರ ಎಂಬಲ್ಲಿ, ಇಲ್ಯಾಸ್ ಎಂಬಾತನ ಮನೆಯಲ್ಲಿ ಅಕ್ರಮವಾಗಿ ದನವನ್ನು ವಧೆ ಮಾಡಿ ಮಾಂಸ ಮಾಡುತ್ತಿರುವ ಕುರಿತು ಮಾಹಿತಿ ತಿಳಿಸಿದ ಕಡಬ ಪೊಲೀಸ್ ಠಾಣಾ ಪಿ.ಎಸ್.ಐ ಅಭಿನಂಧನ್ ಎಂ.ಎಸ್ ಹಾಗೂ ಸಿಬ್ಬಂದಿಗಳು ಮಾ.28 ರಂದು ಬೆಳಿಗ್ಗೆ ದಾಳಿ ಮಾಡಿದ್ದು, ಕೊಯಿಲ ಗ್ರಾಮದ ಇಲ್ಯಾಸ್ ಮತ್ತು

ಕಡಬದಲ್ಲಿ ಅಕ್ರಮ ಗೋ ವಧೆ ಮಾಡಿ ಮಾಂಸ ತಯಾರಿಕೆ | ಪೊಲೀಸರಿಂದ ದಾಳಿ Read More »

ದ್ವಿಚಕ್ರ ವಾಹನ ಡಿಕ್ಕಿ : ವ್ಯಕ್ತಿ  ಮೃತ್ಯು

ಬೆಳ್ತಂಗಡಿ: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಮೃತ ಪಟ್ಟ ಘಟನೆ ಬೆಳ್ತಂಗಡಿ ಸಂತೆಕಟ್ಟೆ ಬಳಿ ಗುರುವಾರ ರಾತ್ರಿ ನಡೆದಿದೆ. ಬೆಳ್ತಂಗಡಿ ತೋಟಗಾರಿಕೆ ಇಲಾಖೆ ಸಮೀಪದ ನಿವಾಸಿ, ವಿಜಯ ಬ್ಯಾಂಕ್ ನಿವೃತ್ತ ಉದ್ಯೋಗಿ ಹೇರಾಜೆ ಶೇಖರ‌ ಬಂಗೇರ (66) ಮೃತಪಟ್ಟವರು. ಸ್ಥಳೀಯ ಹೋಟೆಲ್ ಒಂದರಿಂದ ಪಾರ್ಸೆಲ್ ಪಡೆದು ರಸ್ತೆ ದಾಟುತ್ತಿದ್ದ ಸಂದರ್ಭ ದ್ವಿಚಕ್ರ ವಾಹನ ಬಡಿದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ದಾರಿಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ದ್ವಿಚಕ್ರ ಸವಾರರು ಕೂಡಾ  ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ

ದ್ವಿಚಕ್ರ ವಾಹನ ಡಿಕ್ಕಿ : ವ್ಯಕ್ತಿ  ಮೃತ್ಯು Read More »

error: Content is protected !!
Scroll to Top