ದಕ್ಷಿಣ ಕನ್ನಡ

 ಪೊಲೀಸ್‌  ಠಾಣೆ ಹೆಡ್ ಕಾನ್ ಸ್ಟೇಬಲ್ ನಾರಾಯಣ ಕಳಿಗೆ ಅವರಿಗೆ  ಠಾಣೆ ವತಿಯಿಂದ ಅಂತಿಮ ನಮನ

ಸುಬ್ರಹ್ಮಣ್ಯ : ಭಾನುವಾರ ನಿಧನರಾದ ಪೊಲೀಸ್‌  ಠಾಣೆ ಹೆಡ್ ಕಾನ್ ಸ್ಟೇಬಲ್ ನಾರಾಯಣ ಕಳಿಗೆ ಅವರಿಗೆ  ಠಾಣೆ ವತಿಯಿಂದ ಸೋಮವಾರ ಅಂತಿಮ ನಮನ ಸಲ್ಲಿಸಲಾಯಿತು. ಕಾನ್ ಸ್ಟೇಬಲ್ ನಾರಾಯಣ ಕಳಿಗೆ ಅವರು ಭಾನುವಾರ ಅಸೌಖ್ಯದಿಂದ ನಿಧನರಾಗಿದ್ದರು  ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಎಸ್.ಪಿ ರಿಷ್ಯಂತ್, ಸುಬ್ರಹ್ಮಣ್ಯ ಠಾಣಾ ಎಸ್.ಐ ಕಾರ್ತಿಕ್ ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

 ಪೊಲೀಸ್‌  ಠಾಣೆ ಹೆಡ್ ಕಾನ್ ಸ್ಟೇಬಲ್ ನಾರಾಯಣ ಕಳಿಗೆ ಅವರಿಗೆ  ಠಾಣೆ ವತಿಯಿಂದ ಅಂತಿಮ ನಮನ Read More »

ಮುದಿಮಾರ  ಶ್ರೀ ಕಟೀಲೇಶ್ವರಿ  ಭಜನಾ ಮಂಡಳಿಯಿಂದ  ಪುಸ್ತಕ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ

 ಬಂಟ್ಠಾಳ : ತಾಲೂಕಿನ ಮುದಿಮಾರ  ಶ್ರೀ ಕಟೀಲೇಶ್ವರಿ  ಭಜನಾ ಮಂಡಳಿ ವತಿಯಿಂದ ಪುಸ್ತಕ ವಿತರಣೆ ಮತ್ತು ಸಮಾಜ ಸೇವಕ ಅರ್ಜುನ್ ಭಂಡಾರ್ಕರ್ ಗೆ ಸನ್ಮಾನ., ತುಳುನಾಡ ಪೊರ್ಲು ಸೇವಾ ಟ್ರಸ್ಟ್ ಸಂಸ್ಥೆಗೆ ಗೌರವಾರ್ಪಣೆ ಹಾಗೂ  ಮುದಿಮಾರ ನೂತನ ಬಸ್ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮ  ಮುದಿಮಾರ ಬಸ್ ನಿಲ್ದಾಣದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ  ಅರ್ಜುನ್ ಭಂಡಾರ್ಕರ್, ಭಜನಾ ಮಂಡಳಿ ಸ್ಥಾಪಕ ವಸಂತ್ ಮುದಿಮಾರ  ಹಾಗೂ ಗಣ್ಯರು ಉಪಸ್ಥಿತರಿದ್ದರು ಸಂದೇಶ್ ಕುಪ್ಪೆಪದವು ಕಾರ್ಯಕ್ರಮ ‍ ನಿರೂಪಿಸಿದರು.

ಮುದಿಮಾರ  ಶ್ರೀ ಕಟೀಲೇಶ್ವರಿ  ಭಜನಾ ಮಂಡಳಿಯಿಂದ  ಪುಸ್ತಕ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ Read More »

ಸಿಡಿಲು ಬಡಿದು ನಾಯಿ, ಹಸು ಮೃತ್ಯು | ವಿದ್ಯುತ್‍ ಉಪಕರಣಗಳಿಗೂ ಹಾನಿ

ಬೆಳ್ತಂಗಡಿ: ಭಾನುವಾರ ಸಂಜೆ ಭಾರೀ ಸಿಡಿಲಿಗೆ ಮನೆಯೊಂದರ ಸಾಕು ನಾಯಿ ಹಾಗೂ ಹಸು ಮೃತಪಟ್ಟ ಘಟನೆ ರೆಖ್ಯ ಗ್ರಾಮದಲ್ಲಿ ನಡೆದಿದೆ. ಭಾನುವಾರ ಸಂಜೆ ತಾಲೂಕಿನಲ್ಲಿ ಮಳೆಯಾಗಿದ್ದು ಈ ಸಂದರ್ಭದಲ್ಲಿ ರೆಖ್ಯ ಗ್ರಾಮದ ಸುಂದರ ಗೌಡ ಕುರುಡೇಲು ಎಂಬವರ ಮನೆಗೆ ಸಿಡಿಲು ಬಡಿದು ಮನೆಯ ವಿದ್ಯುತ್ ವೈಯರುಗಳು, ವಿದ್ಯುತ್ ಉಪಕರಣಗಳು ಸುಟ್ಟು ಹೋಗಿವೆ. ಅಲ್ಲದೆ ಹಟ್ಟಿಯಲ್ಲಿದ್ದ ಹಸು ಹಾಗೂ ಮನೆಯ ಅಂಗಳದಲ್ಲಿದ್ದ ನಾಯಿ ಸಿಡಿಲಿಗೆ ಬಲಿಯಾಗಿವೆ. ಕೊಕ್ಕಡದ ಹಳ್ಳಿಂಗೇರಿಯ ನಿತೇಶ್ ರವರ ಮನೆಗೆ ಸಿಡಿಲು ವಿದ್ಯುತ್ ಉಪಕರಣಗಳಾದ ಫ್ಯಾನ್,

ಸಿಡಿಲು ಬಡಿದು ನಾಯಿ, ಹಸು ಮೃತ್ಯು | ವಿದ್ಯುತ್‍ ಉಪಕರಣಗಳಿಗೂ ಹಾನಿ Read More »

ಮಡಿಕೇರಿ ಉಪತಹಶೀಲ್ದಾರ್ ಸುನಿಲ್ ಹೃದಯಾಘಾತದಿಂದ ನಿಧನ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಉಪ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿ ಪದೋನ್ನತಿ ಹೊಂದಿ ಮಡಿಕೇರಿಗೆ ತೆರಳಿದ್ದ ಸುನಿಲ್ (42) ಹೃದಯಾಘಾತದಿಂದ ಭಾನುವಾರ ನಿಧನರಾದರು. ಕಂದಾಯ ಇಲಾಖೆಯಲ್ಲಿ ಗ್ರಾಮ ಕರಣಿಕರಾಗಿ ಸೇವೆ ಸಲ್ಲಿಸಿ, ಉಪ ತಹಶೀಲ್ದಾರ್ ಆಗಿ ಪದೋನ್ನತಿ ಹೊಂದಿದ್ದ ಸುನಿಲ್ ಅವರು ಉಪ ತಹಸಿಲ್ದಾರ್ ಆಗಿ ಮಡಿಕೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬೆಳ್ತಂಗಡಿ ಆಡಳಿತ ಕಂದಾಯ ಇಲಾಖೆಯಲ್ಲಿ ಗ್ರಾಮ ಕಾರಣಿಕರಾಗಿ ಬಳಿಕ ಆಡಳಿತ ಸೌಧದಲ್ಲಿ ಭೂಮಿ ಶಾಖೆಯ ನಿರ್ವಹಖರಾಗಿ ಸೇವೆ ಸಲ್ಲಿಸಿದ್ದರು.

ಮಡಿಕೇರಿ ಉಪತಹಶೀಲ್ದಾರ್ ಸುನಿಲ್ ಹೃದಯಾಘಾತದಿಂದ ನಿಧನ Read More »

ಉಜಿರೆ ಕಾಲೇಜು ವಿದ್ಯಾರ್ಥಿನಿ ನಾಪತ್ತೆ !

ಬೆಳ್ತಂಗಡಿ: ಉಜಿರೆಯ ಎಸ್.ಡಿ ಎಂ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಯೋರ್ವಳು ನಾಪತ್ತೆಯಾದ ಬಗ್ಗೆ ವರದಿಯಾಗಿದೆ. ಕ್ರೀಡಾ ವಸತಿ ಶಾಲೆಯ ಪ್ರಥಮ ಪಿ.ಯು.ಸಿ ವಿಧ್ಯಾರ್ಥಿ ಬೇಲೂರಿನ ದಿವ್ಯಾ ನಾಪತ್ತೆಯಾದವಳು. ಮೇ 29ರಂದು ಬೆಳಿಗ್ಗೆ ಕ್ರೀಡಾಂಗಣಕ್ಕೆ ಹೋಗಿ ಬರುವುದಾಗಿ ಹೇಳಿ ನಿಲಯ ಪಾಲಕರಲ್ಲಿ ತಿಳಿಸಿ ಹೋದವಳು ಹಾಸ್ಟೆಲ್ ಗೂ ಹಿಂತಿರುಗದ ಮನೆಗೂ ಹೋಗದೆ ನಾಪತ್ತೆಯಾಗಿದ್ದಾಳೆ ಎಂದು ತಿಳಿದು ಬಂದಿದೆ. ಉಜಿರೆ ಶ್ರೀ ಧರ್ಮಸ್ಥಳ ಕ್ರೀಡಾ ವಸತಿ ನಿಲಯದ ಸಹಾಯಕ ನಿಲಯ ಪಾಲಕಿ ನೀಡಿರುವ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಉಜಿರೆ ಕಾಲೇಜು ವಿದ್ಯಾರ್ಥಿನಿ ನಾಪತ್ತೆ ! Read More »

ಬೈಕ್-ಟಿಪ್ಪರ್ ಡಿಕ್ಕಿ : ಬೈಕ್ ಸವಾರ ಮೃತ್ಯು

ಬೆಳ್ತಂಗಡಿ : ಬೈಕ್ ಹಾಗೂ ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಬೆಳ್ತಂಗಡಿ ಹಳೆಕೋಟೆ ಪೆಟ್ರೋಲ್ ಪಂಪ್ ಬಳಿ ಇಂದು ನಡೆದಿದೆ. ಅಪಘಾತದಿಂದ ಗಂಭೀರ ಗಾಯಗೊಂಡ ಬೈಕ್‍ ಸವಾರನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಈ ವೇಳೆ ಮೃತಪಟ್ಟರೆನ್ನಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಬೈಕ್-ಟಿಪ್ಪರ್ ಡಿಕ್ಕಿ : ಬೈಕ್ ಸವಾರ ಮೃತ್ಯು Read More »

ಸಿಆರ್ ಪಿಎಫ್‍ ಇನ್‍ ಸ್ಪೆಕ್ಟರ್ ಜ.ಖಾಸಿಂ ಇಂದು ಸೇವಾ ನಿವೃತ್ತಿ

ಕಡಬ: 36 ವರ್ಷಗಳ ಸುದೀರ್ಘ ಕಾಲ ಸಿಆರ್‍ ಪಿಎಫ್‍ ಇನ್‍ ಸ್ಪೆಕ್ಟರ್ ಹುದ್ದೆಯಲ್ಲಿದ್ದುಕೊಂಡು ಸೇವೆ ಸಲ್ಲಿಸಿದ ಜ.ಖಾಸಿಂ ಅವರು ಇಂದು ಸೇವಾ ನಿವೃತ್ತಿಯಾಗಿದ್ದಾರೆ. ಹಳೆನೇರೆಂಕಿ ನಿವಾಸಿಯಾಗಿರುವ ಖಾಸಿಂ ಅವರು ಹಳೆನೇರೆಂಕಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ರಾಮಕುಂಜದ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರೌಢಶಿಕ್ಷಣ ಹಾಗೂ ಪುತ್ತೂರು ಸಂತ ಫಿಲೋಮಿನ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪೂರೈಸಿರುತ್ತಾರೆ. ಬಳಿಕ ಸಿಆರ್‍ ಪಿಎಫ್‍ ಪೊಲೀಸ್ ಇನ್‍ ಸ್ಪೆಕ್ಟರ್ ಆಗಿ ಸುದೀರ್ಘ 36 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ

ಸಿಆರ್ ಪಿಎಫ್‍ ಇನ್‍ ಸ್ಪೆಕ್ಟರ್ ಜ.ಖಾಸಿಂ ಇಂದು ಸೇವಾ ನಿವೃತ್ತಿ Read More »

ಗ್ಯಾಸ್ ಟ್ಯಾಂಕರ್ ಪಲ್ಟಿ : ಸಂಚಾರಕ್ಕೆ ಅಡೆತಡೆ

ಬಂಟ್ವಾಳ : ಗ್ಯಾಸ್‌ ಟ್ಯಾಂಕ‌ರ್ ಪಲ್ಟಿಯಾಗಿ ಡಿವೈಡರ್ ಗೆ ಬಿದ್ದ ಘಟನೆ ತುಂಬೆ ಸಮೀಪದ ಕಡೆಗೋಳಿಯಲ್ಲಿ ನಡೆದಿದೆ. ಮಂಗಳೂರಿನಿಂದ ಗ್ಯಾಸ್‌ ತುಂಬಿಕೊಂಡು ಹೋಗುತ್ತಿದ್ದ ಟ್ಯಾಂಕ್‌ಗಳು ಪಲ್ಟಿಯಾಗಿದ್ದು, ಯಾವುದೇ ಲಿಕೇಜ್ ಉಂಟಾಗಿಲ್ಲ. ಬಂಟ್ವಾಳ ಅಗ್ನಿಶಾಮಕ ದಳದವರು, ಸಂಚಾರ ಪೊಲೀಸರು, ಸ್ಥಳೀಯರು ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.

ಗ್ಯಾಸ್ ಟ್ಯಾಂಕರ್ ಪಲ್ಟಿ : ಸಂಚಾರಕ್ಕೆ ಅಡೆತಡೆ Read More »

ಲೋಕಸಭೆ ಚುನಾವಣೆ ಮತ ಎಣಿಕೆ l 144 ಸೆಕ್ಷನ್ ಜಾರಿ

ಮಂಗಳೂರು: ಎರಡು ಹಂತಗಳಲ್ಲಿ ನಡೆದ ಸಾರ್ವತ್ರಿಕ ಲೋಕಸಭೆ ಚುನಾವಣೆ-2024 ರ ಹಿನ್ನಲೆಯಲ್ಲಿ ಮತ ಎಣಿಕೆಯು ಜೂನ್.4ರಂದು ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ. ಈ ಹಿನ್ನಲೆಯಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಸುಗಮವಾಗಿರುವಂತೆ ನೋಡಿಕೊಳ್ಳಲು ಜೂನ್.04 ರಂದು ಬೆಳಗ್ಗೆ ಗಂಟೆ 6 ರಿಂದ ಜೂನ್.05 ರ ಬೆಳಗ್ಗೆ ಗಂಟೆ 6.00 ರವರೆಗೆ 144 ಸೆಕ್ಷನ್ ಅಡಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಲು ಆಯಾ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಈ ಸಂದರ್ಭ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಅದರಲ್ಲಿ ನಿಷೇದಾಜ್ಞೆ ಜಾರಿ

ಲೋಕಸಭೆ ಚುನಾವಣೆ ಮತ ಎಣಿಕೆ l 144 ಸೆಕ್ಷನ್ ಜಾರಿ Read More »

ಡಾ. ಎಂ. ಮೋಹನ  ಆಳ್ವ -72 | ಇಂದು ಕಾರ್ಕಳ ಜ್ಞಾನಸುಧಾದಲ್ಲಿ “ಸವ್ಯಸಾಚಿ” ಸಂಭ್ರಮ

ಮೂಡಬಿದ್ರೆ: ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಕ್ರೀಡಾ, ಆರೋಗ್ಯ, ದೇಶಸೇವೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ಸಮರ್ಪಿಸಿಕೊಂಡು ಅದ್ವಿತೀಯ ಸಾಧನೆ ಮಾಡಿರುವ ಆಧುನಿಕ ಮೂಡುಬಿದಿರೆಯ ನಿರ್ಮಾತೃ ಡಾ. ಎಂ. ಮೋಹನ ಆಳ್ವರಿಗೆ ಕಾರ್ಕಳ ಗಣಿತ ನಗರದ ಜ್ಞಾನಸುಧಾ ಆವರಣದಲ್ಲಿ ಮೇ 31ರ ಶುಕ್ರವಾರ ಸಂಜೆ 5:30ಕ್ಕೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಆಶೀರ್ವಚನ ನೀಡಲಿದ್ದಾರೆ. ನಿಟ್ಟೆ ಎಜ್ಯುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಎನ್.  ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಪುಸ್ತಕ ಅನಾವರಣ ಆಳ್ವರಿಗೆ

ಡಾ. ಎಂ. ಮೋಹನ  ಆಳ್ವ -72 | ಇಂದು ಕಾರ್ಕಳ ಜ್ಞಾನಸುಧಾದಲ್ಲಿ “ಸವ್ಯಸಾಚಿ” ಸಂಭ್ರಮ Read More »

error: Content is protected !!
Scroll to Top