ದಕ್ಷಿಣ ಕನ್ನಡ

ಕಕ್ಕಿಂಜೆ ಶಾಲಾ ಮಕ್ಕಳ ಮೇಲೆ ಹೆಜ್ಜೇನು ದಾಳಿ

ಬೆಳ್ತಂಗಡಿ :  ಕಕ್ಕಿಂಜೆ ಹಿ.ಪ್ರಾ ಶಾಲೆಯಲ್ಲಿ ಮಕ್ಕಳ ಮೇಲೆ ಹಜ್ಜೆನು ದಾಳಿ ನಡೆಸಿದ ಘಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದ್ದು  ಸುಮಾರು 10ಮಕ್ಕಳು  ಹೆಜ್ಜೇನುದಾಳಿಯಿಂದ  ಅಸ್ವಸ್ಥರಾಗಿದ್ದು  ,ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ,  ಮಕ್ಕಳು ಶಾಲೆಯಲ್ಲಿ ಇದ್ದ ವೇಳೆ ಏಕಾಏಕಿ ಹೆಜ್ಜೇನು ದಾಳಿ ನಡೆಸಿದೆ. ಮಕ್ಕಳು ಚಲ್ಲಾಪಿಲ್ಲಿಯಾಗಿ ಓಡಿದ್ದು ಹಲವರಿಗೆ ಹೆಜ್ಜೇನು ಕಚ್ಚಿದೆ. ಮಕ್ಕಳ ಅಳು ಕೇಳಿ ಸ್ಥಳೀಯರು ಶಾಲೆಗೆ ಧಾವಿಸಿದ್ದು ಮಕ್ಕಳನ್ನು ರಕ್ಷಿಸುವ ಪ್ರಯತ್ನ ನಡೆಸಿದ್ದಾರೆ. ಹಲವು ಮಕ್ಕಳಿಗೆ ಈ ವೇಳೆ ಹಜ್ಜೇನು ಕಚ್ಷಿದ್ದು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. […]

ಕಕ್ಕಿಂಜೆ ಶಾಲಾ ಮಕ್ಕಳ ಮೇಲೆ ಹೆಜ್ಜೇನು ದಾಳಿ Read More »

ಮಂಗಳೂರಿನ ಪ್ಯಾರಾಮೆಡಿಕಲ್  ವಿದ್ಯಾರ್ಥಿ ನಾಪತ್ತೆ

ಮಂಗಳೂರು: ಬಜ್ಪೆ ವಲಯದ ಮೂಡುಪೆರಾರ ಗ್ರಾಮದ ಅರ್ಕೆ ಪದವು ನಿವಾಸಿ ನಿತಿನ್ ಬೆಲ್ಚಡ ಕಾಣೆಯಾಗಿದ್ದಾರೆ. ನಾಪತ್ತೆಯಾದವರ ಈ ಕುರಿತು ಘಟನೆ ಬಜ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾಗಿರುವ ಯುವಕ ವಿದ್ಯಾರ್ಥಿ ಮಂಗಳ ಕಾಲೇಜು ಪ್ಯಾರಾಮೆಡಿಕಲ್ ಸೈನ್ಸ್ ನಲ್ಲಿ ವ್ಯಾಸಂಗ ಮಾಡುತ್ತಿದ್ದು, ಫೆಬ್ರವರಿ 13ರಂದು ಕಾಲೇಜ್‍ನಿಂದ ಮನೆಗೆ ಬಂದು ಯಾರಿಗೂ ಹೇಳದೆ ಹೊರಗೆ ಹೋದವ ಮನೆಗೆ ಬಾರದೆ ನಾಪತ್ತೆಯಾಗಿದ್ದಾನೆ. ನಿತಿನ್ ಬೆಲ್ಚಡ 5 ಅಡಿ 5 ಇಂಚು ಉದ್ದ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಕಾಣೆಯಾದ ದಿನ

ಮಂಗಳೂರಿನ ಪ್ಯಾರಾಮೆಡಿಕಲ್  ವಿದ್ಯಾರ್ಥಿ ನಾಪತ್ತೆ Read More »

ರೈಲ್ವೆ ಪೊಲೀಸರಿಂದ ವಾಯುಪಡೆಯ ನಿವೃತ್ತ ಅಧಿಕಾರಿಗೆ ಹಲ್ಲೆ  ನಡೆಸಿರುವ ಆರೋಪ

ಮಂಗಳೂರು: ಮಂಗಳೂರಿನ ಸೆಂಟ್ರಲ್ ರೈಲ್ವೆ ನಿಲ್ದಾಣದ ಬೆಂಚ್ ಮೇಲೆ ನಿಶಕ್ತಿಯಿಂದ ಮಲಗಿದ್ದ ವ್ಯಕ್ತಿಗೆ ರೈಲ್ವೆ ಪೊಲೀಸರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಪೊಲೀಸರು ಹಲ್ಲೆ ಮಾಡಿದ ಪರಿಣಾಮ ಕಾಲು ತುಂಡರಿಸುವಂತಾಗಿದೆ ಎಂದು ಕೇರಳ ಮೂಲದ ವಾಯುಪಡೆಯ ನಿವೃತ್ತ ಅಧಿಕಾರಿ ಪಿ.ವಿ. ಸುರೇಶನ್ ಎಂಬವರ ಆರೋಪವನ್ನು ದಕ್ಷಿಣ ರೈಲ್ವೇಯ ಪಾಲಕ್ಕಾಡ್ ವಿಭಾಗ ತಳ್ಳಿಹಾಕಿದೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ಚಿತ್ರಣ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕರ್ತವ್ಯದಲ್ಲಿದ್ದ ರೈಲ್ವೆ ಪೊಲೀಸ್ ಸಿಬ್ಬಂದಿ ಫೆ.1 ರಂದು ದೂರುದಾರ ಸುರೇಶನ್‌ಗೆ

ರೈಲ್ವೆ ಪೊಲೀಸರಿಂದ ವಾಯುಪಡೆಯ ನಿವೃತ್ತ ಅಧಿಕಾರಿಗೆ ಹಲ್ಲೆ  ನಡೆಸಿರುವ ಆರೋಪ Read More »

ಕಲಾಪೋಷಕ ಟಿ.ಶಾಮ್ ಭಟ್ ಗೆ ಯಕ್ಷಭಾರತಿ ದಶಮಾನೋತ್ಸವ ಗೌರವ

ಸುಳ್ಯ : ಸಂಪಾಜೆ ಯಕ್ಷೋತ್ಸವ, ಯಕ್ಷಗಾನ  ಮತ್ತು ವಿವಿಧ ಕ್ಷೇತ್ರಗಳಲ್ಲಿ ಪರಿಣತರಾದಕಲಾವಿದ,ವಿದ್ವಾಂಸರಿಗೆ ಗೌರವ,  ತಾಳಮದ್ದಳೆ, ವಿದ್ಯಾರ್ಥಿಗಳಿಗೆ ಯಕ್ಷಗಾನ ಸ್ಪರ್ಧೆ, ಕಲಾವಿದರಿಗೆ ನೆರವು, ಯಕ್ಷಗಾನ ಮೇಳದ ಮೂಲಕ ರುಚಿ ಶುದ್ದಿಯ ಯಕ್ಷಗಾನ ಪ್ರದರ್ಶನ ನೀಡುವಲ್ಲಿ ಮಾರ್ಗದರ್ಶಕರಾದ ಕಲಾಪೋಷಕ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ನಿವೃತ್ತ ಐಎಎಸ್ ಅಧಿಕಾರಿ ಟಿ. ಶ್ಯಾಮ್ ಭಟ್ ಇವರಿಗೆ ಯಕ್ಷ ಭಾರತಿ ರಿ. ಬೆಳ್ತಂಗಡಿ ಸಂಸ್ಥೆಯ ದಶಮಾನೋತ್ಸವದ ಗೌರವ ಸನ್ಮಾನವನ್ನು  ಪ್ರದಾನ ಮಾಡಲಾಯಿತು. ಸನ್ಮಾನ ಸ್ವೀಕರಿಸಿದ ಶ್ಯಾಮ್ ಭಟ್ ಅವರು ಯಕ್ಷ

ಕಲಾಪೋಷಕ ಟಿ.ಶಾಮ್ ಭಟ್ ಗೆ ಯಕ್ಷಭಾರತಿ ದಶಮಾನೋತ್ಸವ ಗೌರವ Read More »

ಹೃದಯಾಘಾತದಿಂದ ಯುವತಿ ನಿಧನ

ಮಡುಕೋಡಿ: ಗ್ರಾಮದ ನಡ್ತಿರಲ್ಲು ಅರ್ಬು ಮನೆ, ಸುಂದರರವರ ಪುತ್ರಿ ಸುಕನ್ಯಾ (18 ವರ್ಷ ) ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ತಂದೆ ಸುಂದರ, ತಾಯಿ ಕುಸುಮ, ಸಹೋದರ ಶ್ರವಣ್ ಕುಮಾರ್, ಸಹೋದರಿ ಧನ್ಯ ಇವರನ್ನು ಅಗಲಿದ್ದಾರೆ.

ಹೃದಯಾಘಾತದಿಂದ ಯುವತಿ ನಿಧನ Read More »

ರೈಲು ಹಳಿಯ ಕಬ್ಬಿಣ ಹೆಕ್ಕಿದ ಬಾಲಕರಿಗೆ ಹಲ್ಲೆ ಮಾಡಿದ ಕೊಂಕಣ ರೈಲ್ವೇ ಗ್ಯಾಂಗ್‌ಮ್ಯಾನ್

ರೈಲ್ವೇ ಗ್ಯಾಂಗ್‌ಮ್ಯಾನ್ ವಿರುದ್ದ ಪ್ರಕರಣ ದಾಖಲು ಪಡುಬಿದ್ರಿ : ರೈಲು ಹಳಿಯ ಕಬ್ಬಿಣ ಹೆಕ್ಕಿದ ಬಾಲಕರಿಗೆ ಕೊಂಕಣ ರೈಲ್ವೇ ಗ್ಯಾಂಗ್‌ಮ್ಯಾನ್ ಹಲ್ಲೆ ನಡೆಸಿರುವ ಘಟನೆ ಫೆ. 17ರಂದು ನಡೆದಿದೆ. ಹಲ್ಲೆ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿರುವ ಕೊಂಕಣ ರೈಲ್ವೇ ಗ್ಯಾಂಗ್‌ಮ್ಯಾನ್ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕನೋರ್ವನ ತಂದೆ ಹೆಜಮಾಡಿಯ ಅಬ್ದುಲ್ ಖಾದರ್ ಈ ಬಗ್ಗೆ ಪೊಲೀಸರಿಗೆ ದೂರಿದ್ದಾರೆ. ಗ್ರಾಮದ ಅವರಾಲು ಮಟ್ಟು ಎಂಬಲ್ಲಿರುವ ಅಜ್ಜನ ಮನೆಗೆ ಬಾಲಕನೋರ್ವ ತನ್ನ ಗೆಳೆಯನೊಂದಿಗೆ

ರೈಲು ಹಳಿಯ ಕಬ್ಬಿಣ ಹೆಕ್ಕಿದ ಬಾಲಕರಿಗೆ ಹಲ್ಲೆ ಮಾಡಿದ ಕೊಂಕಣ ರೈಲ್ವೇ ಗ್ಯಾಂಗ್‌ಮ್ಯಾನ್ Read More »

ಬೆಲೆಬಾಳುವ ಪಾರ್ಸಲನ್ನು ಅಪರಿಚಿತ ವ್ಯಕ್ತಿಯ ಕೈಗೊಪ್ಪಿಸಿದ ಫಾಲ್ಗುಣಿ ಬಸ್ ಡ್ರೈವರ್

ವಿಟ್ಲ : ಖಾಸಗಿ ಬಸ್‌ನಲ್ಲಿ ಹಾಕಿದ ಬೆಲೆಬಾಳುವ ಪಾರ್ಸೆಲ್‌ವೊಂದನ್ನು ಅಪರಿಚಿತರು ಬಸ್ ಡ್ರೈವರ್ ಬಳಿ ಕೇಳಿ ಕೊಂಡೊಯ್ದ ಘಟನೆ ವಿಟ್ಲದಲ್ಲಿ ನಡೆದಿದೆ. ಫೆ 13 ರಂದು ಬಿಸಿ ರೋಡಿನಿಂದ 12:45 ಕ್ಕೆ ಹೊರಡುವ ಫಾಲ್ಗುಣಿ (KA 20 AC 0719) ಬಸ್ಸಲ್ಲಿ ಬಿ ಸಿ ರೋಡ್ ಏಜೆಂಟ್ ಆದ ಭಾಸ್ಕರ್ ನ ಮುಖಾಂತರ ಸಂತೋಷ್ ಕೆಲಿಂಜ ಎಂಬವರ 15000 ಬೆಲೆಬಾಳುವ ಒಂದು ಪಾರ್ಸೆಲ್ ಕೆಲಿಂಜಕ್ಕೆ ಕಳುಹಿಸಲಾಗಿತ್ತು 1.15 ಕ್ಕೆ ಮುಟ್ಟಬೇಕಾದ ಬಸ್ 1.05 ಕ್ಕೆ ಕೆಲಿಂಜ ಮಾರ್ಗದಲ್ಲಿ

ಬೆಲೆಬಾಳುವ ಪಾರ್ಸಲನ್ನು ಅಪರಿಚಿತ ವ್ಯಕ್ತಿಯ ಕೈಗೊಪ್ಪಿಸಿದ ಫಾಲ್ಗುಣಿ ಬಸ್ ಡ್ರೈವರ್ Read More »

ವಿಟ್ಲ ಶ್ರೀ ಭಗವಾನ್ ಚಂದ್ರನಾಥ ಸ್ವಾಮಿ ಪ್ರತಿಷ್ಠಾ ಮಹೋತ್ಸವ | ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆ ಮತ್ತು  ಶೌರ್ಯ ವಿಪತ್ತು ಘಟಕದಿಂದ  ಸೇವಾಕಾರ್ಯ

ವಿಟ್ಲ : ಮೇಗಿನಪೇಟೆ ಚಂದ್ರ ಸ್ವಾಮೀ ಬಸದಿಯಲ್ಲಿ ನಡೆದ ಪಂಚ ಕಲ್ಯಾಣ ಮಹೋತ್ಸವ ಪೂರಕವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆ ಮತ್ತು  ಶೌರ್ಯ ವಿಪತ್ತು ಘಟಕದಿಂದ  ಸೇವಾಕಾರ್ಯ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಕೇಪು,ಮಾಣಿ ವಲಯದ ಸೇವಪ್ರಾತಿನಿಧಿಗಳು, ಸಿ ಎಸ್  ಸಿ ಸೇವಾದಾರರು, ಶೌರ್ಯ ತಂಡದ ಸದಸ್ಯರು, ಹಾಗೂ ಒಕ್ಕೂಟದ ಪದಾಧಿಕಾರಿಗಳು  ಒಟ್ಟು ಸೇರಿ  5 ನೇ  ದಿನದ ಕಾರ್ಯಕ್ರಮಕ್ಕೆ ಪೂರಕವಾಗಿ ಕೆಲಸ ಕಾರ್ಯ ವನ್ನು ನೆರವೇರಿಸಿದ್ದಾರೆ.

ವಿಟ್ಲ ಶ್ರೀ ಭಗವಾನ್ ಚಂದ್ರನಾಥ ಸ್ವಾಮಿ ಪ್ರತಿಷ್ಠಾ ಮಹೋತ್ಸವ | ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆ ಮತ್ತು  ಶೌರ್ಯ ವಿಪತ್ತು ಘಟಕದಿಂದ  ಸೇವಾಕಾರ್ಯ Read More »

ಹೃದಯಾಘಾತದಿಂದ ಪದವಿ ವಿದ್ಯಾರ್ಥಿ  ಮೃತ್ಯು

ಬೆಳ್ತಂಗಡಿ : ಹೃದಯಾಘಾತದಿಂದ ಪದವಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯ ತೋಟತ್ತಾಡಿ ಗ್ರಾಮದಲ್ಲಿ ನಡೆದಿದೆ. ಹೃದಯಾಘಾತದಿಂದ ಮೃತಪಟ್ಟವರು ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿ ಜಯರಾಮ (19) ಎಂದು ತಿಳಿದು ಬಂದಿದೆ. ಇಂದು(ಫೆ.17) ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಹೃದಯಾಘಾತದಿಂದ ಪದವಿ ವಿದ್ಯಾರ್ಥಿ  ಮೃತ್ಯು Read More »

ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ | ಇಬ್ಬರ ಬಂಧನ

ಗುರುವಾಯನಕೆರೆ : ಶಕ್ತಿನಗರದಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಕಸಾಯಿಖಾನೆಗೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿದ್ದಾರೆ. ಹಿಂದೂ ಸಂಘಟನೆಯ ಕಾರ್ಯಕರ್ತರು ನೀಡಿದ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರಿಗೆ ದನದ ಮಾಂಸ ಕತ್ತರಿಸುತ್ತಿದ್ದ ಇಬ್ಬರು ಸಿಕ್ಕಿಹಾಕಿಕೊಂಡಿದ್ದಾರೆ. ದಾಳಿ ವೇಳೆ ದನದ ಮಾಂಸ ಮತ್ತು ಪುಟ್ಟ ಕರು ಪತ್ತೆಯಾಗಿದ್ದು, ಪೊಲೀಸರ ಕಣ್ಣು ತಪ್ಪಿಸಲು ರಾತ್ರಿಯ ಬದಲು ಹಗಲಿನಲ್ಲಿ ಕಾರ್ಯಾಚರಿಸುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ ಅನ್ವ‌ರ್ ಎಂಬವರಿಗೆ ಸೇರಿದ ಜಾಗದಲ್ಲಿ ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದು, ವಿಷಯ ತಿಳಿದು ಸ್ಥಳೀಯರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು.

ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ | ಇಬ್ಬರ ಬಂಧನ Read More »

error: Content is protected !!
Scroll to Top