ದಕ್ಷಿಣ ಕನ್ನಡ

ಕಲ್ಲಡ್ಕ ಪ್ರಸಿದ್ಧ ಹೊಟೇಲ್ ಶ್ರೀ ಲಕ್ಷ್ಮೀನಿವಾಸದಲ್ಲಿ ಕಳ್ಳತನ

ಬಂಟ್ವಾಳ: ಕಲ್ಲಡ್ಕದಲ್ಲಿ ಕಳೆದ ಹಲವಾರು ವರ್ಷಗಳಿಂದ ಮನೆಮಾತಾಗಿರುವ ಪ್ರಸಿದ್ಧ ಹೊಟೇಲ್ ಗೆ ಕಳ್ಳನೋರ್ವ ನುಗ್ಗಿದ ಘಟನೆ ನಡೆದಿದ್ದು, ಸಿಸಿ ಟಿವಿ ದೃಶ್ಯಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಲ್ಲಡ್ಕದಲ್ಲಿರುವ ಶ್ರೀ ಲಕ್ಮೀನಿವಾಸ ಕೆ.ಟಿ.ಹೋಟೆಲ್ ಗೆ ಕಳ್ಳನೋರ್ವ ನುಗ್ಗಿದ್ದು, ಹೊಟೇಲ್‍ ನಲ್ಲಿ ಇರಿಸಿದ್ದ ದೇವರ ಹುಂಡಿಯನ್ನು ಕಳವು ಮಾಡಿದ್ದಾನೆ. ಈ ಬಗ್ಗೆ ಮಾಲಕರು ಯಾವುದೇ ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ದೇವರ ಡಬ್ಬಿಯಲ್ಲಿದ್ದ ಚಿಲ್ಲರೆ ಹಣವನ್ನು ಕಳವು ಮಾಡಿದ ಕಳ್ಳ ಇತರ ಕಡೆಗಳಲ್ಲಿ ಜಾಲಾಡಿರುವ ದೃಶ್ಯ ‌ಸಿಸಿ.ಟಿ.ವಿಯಲ್ಲಿ ಸೆರೆಯಾಗಿದೆ.

ಕಲ್ಲಡ್ಕ ಪ್ರಸಿದ್ಧ ಹೊಟೇಲ್ ಶ್ರೀ ಲಕ್ಷ್ಮೀನಿವಾಸದಲ್ಲಿ ಕಳ್ಳತನ Read More »

ವಲಯ ಮಟ್ಟದ ಕ್ರೀಡಾಕೂಟ : ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ       

ಸವಣೂರು: ಪಟ್ಟೆ ವಿದ್ಯಾಸ೦ಸ್ಥೆಯಲ್ಲಿ ನಡೆದ ಸವಣೂರು ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿ ಮೂವರು  ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಾದ 7ನೇ ತರಗತಿಯ ಮಿಲನ್ ಜಿ. 100 ಮೀ. ಮತ್ತು 200 ಮೀ. ಓಟದಲ್ಲಿ ಪ್ರಥಮ ಸ್ಥಾನ, ಗು೦ಡೆಸೆತದಲ್ಲಿ ತೃತೀಯ, 8ನೇ ತರಗತಿಯ ಹೃತೇಶ್ ಬಿ.ಎಸ್. 200 ಮೀ ಓಟದಲ್ಲಿ ದ್ವಿತೀಯ, ಮತ್ತು 100 ಮೀ. ಓಟದಲ್ಲಿ ತೃತೀಯ,  10ನೇ ತರಗತಿಯ ಮಹಮ್ಮದ್ ಶಮ್ಮಾಸ್ 400 ಮೀ ಓಟದಲ್ಲಿ ತೃತೀಯ ಸ್ಥಾನ ಗಳಿಸಿ ತಾಲೂಕು

ವಲಯ ಮಟ್ಟದ ಕ್ರೀಡಾಕೂಟ : ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ        Read More »

ಕನ್ನಡ ಜಾನಪದ ಪರಿಷತ್ ಕೊಡಮಾಡುವ ಜಾನಪದ ರಾಜ್ಯ ಪ್ರಶಸ್ತಿಗೆ ಡೊಂಬಯ್ಯ ನಲಿಕೆ ಆಯ್ಕೆ

ಸವಣೂರು: ಕಡಬ ತಾಲೂಕಿನ ಕುದ್ಮಾರು ಗ್ರಾಮದ ಕಾಪೆಜಾಲು ನಿವಾಸಿ ಡೊಂಬಯ್ಯ ನಲಿಕೆ ಅವರು ಕನ್ನಡ ಜಾನಪದ ಪರಿಷತ್ ಕೊಡಮಾಡುವ ಜಾನಪದ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಎಸ್‍.ಬಾಜಾಲಿ ಪ್ರಶಸ್ತಿಯನ್ನು ಪ್ರಕಟಿಸಿದ್ದು, ದ..ಕ ದಿಂದ ಡೊಂಬಯ್ಯ ನಲಿಕೆ ಅವರನ್ನು ಸೇರಿಸಿ ರಾಜ್ಯದ 20 ಜನರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಸಂಘಟಕ, ಕಾರ್ಯಕ್ರಮ ಅಧಿಕಾರಿ ಆಗಿದ್ದ ದಿ.ಟಿ.ಕೆ. ಗೌಡ ಅವರು ಸ್ಥಾಪಿಸಿದ ದತ್ತಿಯಿಂದ ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರಶಸ್ತಿ 5 ಸಾವಿರ ನಗದು ಪುರಸ್ಕಾರದ ಜತೆಗೆ ರಾಜ್ಯಮಟ್ಟದ ಗೌರವ

ಕನ್ನಡ ಜಾನಪದ ಪರಿಷತ್ ಕೊಡಮಾಡುವ ಜಾನಪದ ರಾಜ್ಯ ಪ್ರಶಸ್ತಿಗೆ ಡೊಂಬಯ್ಯ ನಲಿಕೆ ಆಯ್ಕೆ Read More »

ಅ.26-27 : ಸದಾಶಯದೊಂದಿಗೆ ‘ಗಾಯತ್ರೀ ಸಂಗಮ’ ಸಾಂಘಿಕ ಕೋಟಿ ಗಾಯತ್ರಿ ಜಪ ಯಜ್ಞ

ಪುತ್ತೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮಂಗಳೂರು ನೇತೃತ್ವದಲ್ಲಿ ಕುಳಾಯಿ ಚಿತ್ರಾಪುರ ಮನೆ ಸಹಯೋಗದೊಂದಿಗೆ ‘ಸಾಮರಸ್ಯದಿ ಜಗವ ಬೆಳಗುವ ಬ್ರಹ್ಮ ತೋಟದ ಬೆಳಕಿ’ ಎಂಬ ಸದಾಶಯದೊಂದಿಗೆ ‘ಗಾಯತ್ರೀ ಸಂಗಮ’ ಸಾಂಘಿಕ ಕೋಟಿ ಗಾಯತ್ರಿ ಜಪ ಯಜ್ಞ ಅ.26 ಹಾಗೂ 27 ರಂದು ಮಂಗಳೂರು ಕುಳಾಯಿ ಚಿತ್ರಾಪುರ ಮಠದ ಆವರಣದಲ್ಲಿ ನಡೆಯಲಿದೆ ಎಂದು ಯಾಗ ಸಮಿತಿ ಉಪಾಧ್ಯಕ್ಷ, ನ್ಯಾಯವಾದಿ ಎನ್‍.ಕೆ.ಜಗನ್ಜಿವಾಸ ರಾವ್ ತಿಳಿಸಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅ.26 ರಂದು

ಅ.26-27 : ಸದಾಶಯದೊಂದಿಗೆ ‘ಗಾಯತ್ರೀ ಸಂಗಮ’ ಸಾಂಘಿಕ ಕೋಟಿ ಗಾಯತ್ರಿ ಜಪ ಯಜ್ಞ Read More »

ನನ್ನ ಜತೆ ಸಹಕರಿದಿದ್ದರೆ 24 ತುಂಡು | ವಾಟ್ಸಪ್ ಸಂದೇಶ ರವಾನಿಸಿದ ಅನ್ಯಕೋಮಿನ ಯುವಕ

ಸುರತ್ಕಲ್ : ನನ್ನ ಜೊತೆ ಸಹಕರಿಸದಿದ್ದರೆ 24 ತುಂಡು ಮಾಡುವೆ ಎಂದು ಸುರತ್ಕಲ್ ಇಡ್ಯಾ ನಿವಾಸಿಯೋರ್ವ ವಾಟ್ಸಪ್ ಮೂಲಕ ಸಂದೇಶ ರವಾನಿಸಿದ್ದು, ಯುವತಿಯ ಕುಟುಂಬ ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ಮನೆ ಸಮೀಪ ವಾಸಿಸುವ ಯುವತಿ ಸಹೋದರನ  ವಾಟ್ಸಪ್ ಮೆಸೇಜ್ ಮಾಡಿದ್ದಾನೆ ಎನ್ನಲಾಗುತ್ತಿದ್ದು, ಸುರತ್ಕಲ್ ಇಡ್ಯಾ ನಿವಾಸಿ, ಸದಾಶಿವನಗರದ ಶಾರಿಕ್ ನೂರ್ಜಹಾನ್ ಮೆಸೇಜ್ ಮಾಡಿದಾತ ಎಂದು ತಿಳಿದು ಬಂದಿದೆ. ಯುವತಿಯ ಸಹೋದರನಿಗೆ ವಾಟ್ಸಪ್ ಮೆಸೇಜ್ ಮಾಡಿ ಈ ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ. ಕಿರುಕುಳ ನೀಡಿದ ವಿಚಾರಕ್ಕೆ

ನನ್ನ ಜತೆ ಸಹಕರಿದಿದ್ದರೆ 24 ತುಂಡು | ವಾಟ್ಸಪ್ ಸಂದೇಶ ರವಾನಿಸಿದ ಅನ್ಯಕೋಮಿನ ಯುವಕ Read More »

ವಿಧಾನ ಪರಿಷತ್ ಉಪಚುನಾವಣೆ : ಬಿರುಸಿನ ಮತದಾನ

ಪುತ್ತೂರು: ದ.ಕ.ಸ್ಥಳೀಯ ಪ್ರಾಧೀಕಾರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆಯುವ ಉಪ ಚುನಾವಣೆ ಇಂದು ಬೆಳಿಗ್ಗೆಯಿಂದ ಆರಂಭಗೊಂಡಿದ್ದು, ಬಿರುಸಿನಿಂದ ಸಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯನ್ನೊಳಗೊಂಡ ಈ ಕ್ಷೇತ್ರದಲ್ಲಿ ಒಟ್ಟು 392 ಮತಗಟ್ಟೆಗಳಿದ್ದು, 6032 ಮಂದಿ ಮತದಾರರಿದ್ದಾರೆ. ಉಭಯ ಜಿಲ್ಲೆಗಳ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು, ಶಾಸಕರು ಹಾಗೂ ಸಂಸದರು ಮತದಾನ ಮಾಡಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿರುಸಿನಿಂದ ಮತದಾನ ಆರಂಭಗೊಂಡಿದ್ದು, ಹಲವೆಡೆ ಬಿಜೆಪಿಯ ಚುನಾಯಿತ ಸದಸ್ಯರನ್ನೊಳಗೊಂಡ ಮತದಾರರು

ವಿಧಾನ ಪರಿಷತ್ ಉಪಚುನಾವಣೆ : ಬಿರುಸಿನ ಮತದಾನ Read More »

ಕೇರ್ಪಡ ದಲ್ಲಿ ಹಿಂದೂ ಧಾರ್ಮಿಕ  ಶಿಕ್ಷಣ ಪ್ರಾರಂಭ

ಕಡಬ: ಕೇರ್ಪಡ ಧಾರ್ಮಿಕ ಮತ್ತು ಭಜನಾ ಶಿಕ್ಷಣ ಕೇಂದ್ರದ ವತಿಯಿಂದ ಕಡಬ ತಾಲೂಕಿನ ಎಡಮಂಗಲ ಗ್ರಾಮದ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸಭಾಂಗಣದಲ್ಲಿ ಧಾರ್ಮಿಕ ಶಿಕ್ಷಣ ತರಗತಿಯನ್ನು ಆರಂಭಿಸಲಾಯಿತು. ದೇವಾಲಯಗಳ ಸಂವರ್ಧನಾ ಸಮಿತಿ ಮಂಗಳೂರು ವಿಭಾಗ ಪ್ರಮುಖ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ  ಕೇಶವಪ್ರಸಾದ್ ಮುಳಿಯ ಹಾಗೂ ಮುರಳೀಕೃಷ್ಣ ಹಸಂತಡ್ಕ ಅವರ ಮಾರ್ಗದರ್ಶನದಲ್ಲಿ ಆರಂಭಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಕೃಷ್ಣವೇಣಿ ಪ್ರಸಾದ್ ಮುಳಿಯ ದೀಪ ಪ್ರಜ್ವಲನೆಗೊಳಿಸಿ ಕಥೆ, ಭಜನೆ ಹಾಗೂ ವಿವಿಧ ಚಟುವಟಿಕೆಗಳ ಮೂಲಕ 100

ಕೇರ್ಪಡ ದಲ್ಲಿ ಹಿಂದೂ ಧಾರ್ಮಿಕ  ಶಿಕ್ಷಣ ಪ್ರಾರಂಭ Read More »

ಬಳ್ಪ ಮನೆಯೊಂದಕ್ಕೆ ನುಗ್ಗಿದ ಕಳ್ಳರು : ಚಿನ್ನಾಭರಣ ಕಳವು

ಸುಬ್ರಹ್ಮಣ್ಯ: ಬಳ್ಪ ಗ್ರಾಮದ ಅಕ್ಕೇಣಿ ಸುಂದರ ಗೌಡ ಎಂಬವರ ಮನೆಯಿಂದ ಅಪಾರ ಪ್ರಮಾಣದ ಚಿನ್ನ ಮತ್ತು ಹಣ ಕಳವು ಮಾಡಿದ ಘಟನೆ ನಡದಿದೆ. 12 ಲಕ್ಷ ರೂಪಾಯಿ ನಗದು ಮತ್ತು 28 ಪವನ್ ಚಿನ್ನ ಕಳ್ಳತನವಾಗಿರುವುದು ಭಾನುವಾರ  ಬೆಳಕಿಗೆ ಬಂದಿದೆ. ಅಕ್ಕೇಣಿ ಸುಂದರ ಗೌಡ ಅವರು ತಮ್ಮ ಕುಟುಂಬದೊಂದಿಗೆ ಅ. 17ರಂದು ಸಂಜೆ ಮನೆಗೆ ಬೀಗ ಹಾಕಿ ತಮ್ಮ ಮಗಳ ಮನೆ ಪೆರಿಗೇರಿಗೆ ಹೋಗಿದ್ದರು. ಭಾನುವಾರ ಮಧ್ಯಾಹ್ನ ಮನೆಗೆ ಹಿಂತಿರುಗಿ ಬಂದಾಗ ಮನೆಯ ಎದುರು ಬಾಗಿಲಿನ ಬೀಗ

ಬಳ್ಪ ಮನೆಯೊಂದಕ್ಕೆ ನುಗ್ಗಿದ ಕಳ್ಳರು : ಚಿನ್ನಾಭರಣ ಕಳವು Read More »

ರೆಂಜಿಲಾಡಿ: ಸೂರ್ಯ-ಚಂದ್ರ ಜೋಡುಕರೆ ಕಂಬಳ ಉದ್ಘಾಟನೆ | ಕಂಬಳ ಆಯೋಜನೆ ಮೂಲಕ ಪ್ರೋತ್ಸಾಹ ಅಭಿನಂದನೀಯ ; ಚಂದ್ರಹಾಸ

ಸುಬ್ರಹ್ಮಣ್ಯ: ಜಾನಪದ ಕ್ರೀಡೆ ಕಂಬಳವನ್ನು ಗ್ರಾಮೀಣ ಭಾಗದಲ್ಲೂ ಆಯೋಜಿಸುವ ಮೂಲಕ ಕಂಬಳವನ್ನು ಪ್ರೋತ್ಸಾಹಿಸುತ್ತಿರುವುದು ಅಭಿನಂದನಾರ್ಹ ಎಂದು  ಪುತ್ತೂರು ಕೋಟಿ ಚೆನ್ನಯ್ಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಅವರು ಹೇಳಿದರು. ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಸಾಕೋಟೆಜಾಲು ದಿ| ಆರ್.ಸಾಂತಪ್ಪ ಗೌಡ ಅವರ ಗದ್ದೆಯಲ್ಲಿ ನಡೆದ ನೂಜಿಬಾಳ್ತಿಲ- ರೆಂಜಿಲಾಡಿ ಗ್ರಾಮಸ್ಥರ ಸಹಕಾರದಲ್ಲಿ ನೂಜಿಬೈಲ್ ತುಳುನಾಡ ತುಡರ್ ಯುವಕ ಮಂಡಲದ ವತಿಯಿಂದ ಯುವಕ ಮಂಡಲದ ಮೂರನೇ ವರ್ಷದ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ನಡೆದ ಸಬ್ ಜೂನಿಯರ್ ವಿಭಾಗದ

ರೆಂಜಿಲಾಡಿ: ಸೂರ್ಯ-ಚಂದ್ರ ಜೋಡುಕರೆ ಕಂಬಳ ಉದ್ಘಾಟನೆ | ಕಂಬಳ ಆಯೋಜನೆ ಮೂಲಕ ಪ್ರೋತ್ಸಾಹ ಅಭಿನಂದನೀಯ ; ಚಂದ್ರಹಾಸ Read More »

ಕುಪ್ಪೆಪದವು ರಾಮ್ ಸೇನಾ ವಾಯುಪುತ್ರ ಘಟಕದಿಂದ ಐದು ಕುಟುಂಬಗಳಿಗೆ ಧನ ಸಹಾಯ ಹಸ್ತಾಂತರ

ಕುಪ್ಪೆಪದವು ರಾಮ್ ಸೇನಾ ವಾಯುಪುತ್ರ ಘಟಕದ ವತಿಯಿಂದ ನವರಾತ್ರಿ ಸಂದರ್ಭದಲ್ಲಿ ನಡೆದ ಮೂರನೇ ವರುಷದ ಭವತಿ ಭೀಕ್ಷಂದೆಹಿ ಮೂಲಕ ಸಂಗ್ರಹಿಸಿದ 124,149 ರೂಪಾಯಿ ಒಟ್ಟು 5 ಕುಟುಂಬಗಳಿಗೆ ಕುಪ್ಪೆಪದವು ದುರ್ಗೆಶ್ವರಿ ದೇವಸ್ಥಾನದಲ್ಲಿ ಹಸ್ತಾಂತರ ಮಾಡಲಾಯಿತು ಬಂಟ್ವಾಳ ಪಿಲತ್ತಬೆಟ್ಟು ಗ್ರಾಮದ ವಸಂತಿ ಮತ್ತು ದತ್ತು ಪುತ್ರಿ ಉಮಾವತಿ ಅವರ ಚಿಕಿತ್ಸೆ ಹಾಗೂ ಜೀವನ ನಿರ್ವಹಣೆಗೆ 70,149 ನೀಡಲಾಯಿತು. ಬಂಟ್ವಾಳ ಬಿಳಿಯೂರು ಗ್ರಾಮದ ಯೋಗೀಶ್ ಚಿಕಿತ್ಸೆಗೆ 22,500, ಕುಪ್ಪೆಪದವು ನಿವಾಸಿ ವಸಂತಿ ಅವರಿಗೆ 10500, ಮುತ್ತೂರು ನಿವಾಸಿ ಸುನಂದಾ ಅವರ

ಕುಪ್ಪೆಪದವು ರಾಮ್ ಸೇನಾ ವಾಯುಪುತ್ರ ಘಟಕದಿಂದ ಐದು ಕುಟುಂಬಗಳಿಗೆ ಧನ ಸಹಾಯ ಹಸ್ತಾಂತರ Read More »

error: Content is protected !!
Scroll to Top