ಪ್ರಾಮಾಣಿಕವಾಗಿ ದುಡಿಯುವುದು ಕೂಡ ದೇಶಪ್ರೇಮವೇ – ನಿವೃತ್ತ ಯೋಧ ರಮೇಶ್ ರಾವ್ ಮಂಚಿ | ಕನ್ಯಾನ ಪದವಿಪೂರ್ವ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ್
ಕನ್ಯಾನ : ದೇಶ ಪ್ರೇಮವೆಂದರೆ ಗಡಿಯಲ್ಲಿ ಶಸ್ತ್ರ ಹಿಡಿದು ಹೋರಾಡುವುದು ಮಾತ್ರ ಅಲ್ಲ. ನಾವು ಮಾಡುವ ಪ್ರತಿಯೊಂದು ಕೆಲಸವನ್ನು ಪ್ರಾಮಾಣಿಕತೆಯನ್ನು ಮಾಡಿದರೆ ಅದು ದೇಶ ಕಟ್ಟುವ ಕೆಲಸ ಎಂದು ನಿವೃತ್ತ ಯೋಧ ರಮೇಶ್ ರಾವ್ ಮಂಚಿ ಹೇಳಿದರು. ಕೇಂದ್ರ ಸಮಾನ ಇಲಾಖೆ ಮಂಗಳೂರು ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಕನ್ಯಾನ ಇವರ ಜಂಟಿ ಆಶ್ರಯದಲ್ಲಿ ಕನ್ಯಾನ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಕಾರ್ಗಿಲ್ ವಿಜಯ ದಿವಸ ರಜತ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. […]









