ಕುಮಾರಧಾರ ನದಿ ಸಮೀಪ ಶವ ಪತ್ತೆ
ಕಡಬ: ಕುಮಾರಧಾರ ನದಿ ಸಮೀಪದ ಅರ್ಬಿತೋಡು ಎಂಬಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿರುವುದು ವರದಿಯಾಗಿದೆ. ಐತ್ತೂರು ಗ್ರಾ.ಪಂ ವ್ಯಾಪ್ತಿಯ ನೆಕ್ಕಿಲಾಡಿ ಗ್ರಾಮದ ಕೆರ್ಮಾಯಿಯ ರಮೇಶ ఎంబ ವ್ಯಕ್ತಿ ಎಂದು ಹೇಳಲಾಗುತ್ತಿದೆ. ಕೆ.ಎಫ್,ಡಿ ಸಿ ಯ ಅರ್ಬಿತೋಡು ಬಳಿ ನದಿಯಲ್ಲಿ ಬರುವ ತೆಂಗಿನ ಕಾಯಿ ತೆಗೆಯುವ ಸಲುವಾಗಿ ನದಿ ಪಕ್ಕ ಇಳಿದಿರುವ ಶಂಕೆ ವ್ಯಕ್ತವಾಗಿದೆ. ಹೆಚ್ಚಿನ ಮಾಹಿತಿ ಪೊಲೀಸರ ಪರಿಶೀಲನೆ ಬಳಿಕ ತಿಳಿದು ಬರಲಿದೆ.
ಕುಮಾರಧಾರ ನದಿ ಸಮೀಪ ಶವ ಪತ್ತೆ Read More »










