ದಕ್ಷಿಣ ಕನ್ನಡ

ದೀಕ್ಷಿತ್ – ರಕ್ಷಿತಾ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ

ಪುತ್ತೂರು: ತಾಲೂಕಿನ ಬೆಳ್ಳಿಪ್ಪಾಡಿ ಗ್ರಾಮದ ಮಳುವೇಲು ಮನೆ ಯಶೋದಾ ಮತ್ತು ಗಂಗಾಧರ ಗೌಡರ ಪುತ್ರ ದೀಕ್ಷಿತ್ ಅವರ ವಿವಾಹ ನಿಶ್ಚಿತಾರ್ಥ ಕಡಬ ತಾಲೂಕಿನ ಎಣ್ಮೂರು ಗ್ರಾಮದ ಹೇಮಳ ಕೂರಂಬೇಲು ಭುವನೇಶ್ವರಿ ಮತ್ತು ಬಾಲಕೃಷ್ಣ ಗೌಡರ ಪುತ್ರಿ ರಕ್ಷಿತಾ ಅವರೊಂದಿಗೆ ಕೆಮ್ಮಲೆ ಹೇಮಳದಲ್ಲಿರುವ ಭ್ರಮರಾಂಬಿಕ ನಿಲಯದಲ್ಲಿ ಇಂದು ನಡೆಯಿತು. ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹಲವಾರು ಗಣ್ಯರು ಆಗಮಿಸಿ ಶುಭ ಹಾರೈಸಿದರು. ವಿವಾಹ ಸಮಾರಂಭ ಫೆ.16, 2025 ನೇ ಶನಿವಾರ ಪುತ್ತೂರಿನ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ.

ದೀಕ್ಷಿತ್ – ರಕ್ಷಿತಾ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ Read More »

ದಂಪತಿ ಶವ ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ಪತ್ತೆ

ಧರ್ಮಸ್ಥಳ: ಕಾಣೆಯಾಗಿದ್ದ ದಂಪತಿಯ ಶವ ಧರ್ಮಸ್ಥಳ ಗ್ರಾಮದ ನೇತ್ರಾವತಿ ನದಿಯ ದೊಂಡೋಲೆ ಪವರ್ ಪ್ರಾಜೆಕ್ಟ್ ಬಳಿ ಭಾನುವಾರ ಪತ್ತೆಯಾಗಿದೆ. ಮೃತ ದಂಪತಿಯನ್ನು ಚಿಂತಾಮಣಿ ತಾಲೂಕಿನ ಮದ್ದಿರೆಡ್ಡಿ (61), ಈಶ್ವರಮ್ಮ (52) ಎಂದು ಗುರುತಿಸಲಾಗಿದೆ. ಅ.31 ರಂದು ದಂಪತಿಗಳು ನಾಪತ್ತೆಯಾಗಿದ್ದು. ಈ ಬಗ್ಗೆ ಅನುಮಾನಗೊಂಡ ಕುಟುಂಬಸ್ಥರು ಹುಡುಕಿಕೊಂಡು ಧರ್ಮಸ್ಥಳಕ್ಕೆ ಬಂದಿದ್ದು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಸಂಶಯದಲ್ಲಿ‌‌ ಶೌರ್ಯ ತಂಡ ಹಾಗೂ ಪೊಲೀಸರ ಸಹಕಾರದಲ್ಲಿ ನೇತ್ರಾವತಿ ಸ್ನಾನಘಟ್ಟ ಸೇರಿದಂತೆ ನದಿಯಲ್ಲಿ ಹುಡುಕಾಡಿದಾಗ ದೊಂಡೋಲೆ ಬಳಿಯ ಪವರ್ ಪ್ರಾಜೆಕ್ಟ್ ನ

ದಂಪತಿ ಶವ ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ಪತ್ತೆ Read More »

ಯುವಕ ನೇಣು ಬಿಗಿದು ಆತ್ಮಹತ್ಯೆ !

ಬೆಳ್ತಂಗಡಿ: ಯುವಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಲಾಯಿಲ ಕುಂಠಿನ ಎಂಬಲ್ಲಿ ನಡೆದಿದೆ. ಲಾಯಿಲ ಗ್ರಾಮದ ಕುಂಟಿನಿ ನಿವಾಸಿ ನಿತಿನ್ (26) ಆತ್ಮಹತ್ಯೆ ಮಾಡಿಕೊಂಡ ಯುವಕ. ಕಳೆದ ಕೆಲವು ಸಮಯಗಳಿಂದ ಗೂಡ್ಸ್ ರಿಕ್ಷಾದಲ್ಲಿ ಮೀನು ವ್ಯಾಪಾರ ಮಾಡಿಕೊಂಡಿದ್ದ, ನಿನ್ನೆ ಕೂಡ ಕುಂಟಿನಿಯಲ್ಲಿ ಮೀನು ವ್ಯಾಪಾರ ಮಾಡಿ ನಂತರ ತನ್ನ ಸಂಬಂಧಿಕರ ಮನೆಗೆ ತೆರಳಿದ್ದಾನೆ. ಅಲ್ಲಿ ಯಾವುದೋ ಕಾರಣಕ್ಕಾಗಿ ತನ್ನ ಮನೆಯವರೊಂದಿಗೆ ಜಗಳವಾಗಿದೆ. ಇದೇ ವೇಳೆ ಮನೆಗೆ ಬಂದ ನಿತಿನ್ ಬಾಗಿಲು ಹಾಕಿ ನೇಣು ಬಿಗಿದುಕೊಂಡಿದ್ದಾನೆ.

ಯುವಕ ನೇಣು ಬಿಗಿದು ಆತ್ಮಹತ್ಯೆ ! Read More »

ಅನ್ಯ ಕೋಮಿನ ಯುವಕನಿಂದ ಹಿಂದೂ ಯುವತಿಗೆ ಮೆಸೇಜ್ | ತಂಡದಿಂದ ಹಲ್ಲೆ

ಸುಳ್ಯ: ಅನ್ಯಕೋಮಿನ ಯುವಕನನೋರ್ವ ಹಿಂದೂ ಯುವತಿಗೆ ಮೆಸೇಜ್ ಮಾಡುತ್ತಿದ್ದಾನೆ ಎಂದು ಆರೋಪಿಸಿ ತಂಡವೊಂದು ಯುವಕನಿಗೆ ಹಲ್ಲೆ ನಡೆಸಿದ ಸುಳ್ಯ ತಾಲೂಕಿನ ಎಲಿಮಲೆಯಲ್ಲಿ ನಡೆದಿದೆ. ನಯಾಜ್‍ ಎಂಬಾತ ಮೆಸೇಜ್ ಮಾಡುತ್ತಿದ್ದಾನೆ ಎಂದು ಆರೋಪಿಸಿ ಯುವಕರ ತಂಡ ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದ್ದು, ಹಲ್ಲೆಗೊಳಗಾದ ಯುವಕ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ ಎನ್ನಲಾಗಿದೆ. ಯುವಕನ್ನು ಸ್ಥಳೀಯ ನಿವಾಸಿಯೋರ್ವ ಮಾತನಾಡಲು ಇದೆ ಎಂದು ಗ್ಯಾರೇಜಿಗೆ ಕರೆಸಿಕೊಂಡು, ತಾನು ಹೋದಾಗ ಗುಂಪು ಸೇರಿಸಿ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿರುವುದಾಗಿ ಯುವಕ ಪೊಲೀಸರಿಗೆ

ಅನ್ಯ ಕೋಮಿನ ಯುವಕನಿಂದ ಹಿಂದೂ ಯುವತಿಗೆ ಮೆಸೇಜ್ | ತಂಡದಿಂದ ಹಲ್ಲೆ Read More »

ದ್ವಿಚಕ್ರ ವಾಹನದ ಮೇಲೆ ಬಿದ್ದ ಮರ : ಸವಾರ ಮೃತ್ಯು

ಕಡಬ: ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ಮರ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕಡಬದಲ್ಲಿ ನಡೆದಿದೆ. ಕಡಬ ತಾಲೂಕಿನ ಸ್ಪಂದನ ಸಮುದಾಯ ಸಹಕಾರಿ ಸಂಘದ ಪಿಗ್ಮಿ ಸಂಗ್ರಾಹಕರಾದ ಸೀತಾರಾಮ ಗೌಡ ದೇವಸ್ಯ ಮೃತಪಟ್ಟವರು. ಕಡಬ ಸ್ಪಂದನ ಸಮುದಾಯ ಸಹಕಾರಿ ಸಂಘದ ಸಿಬ್ಬಂದಿ ಶಿಲ್ಪಾ ಅವರ ತಂದೆಯಾಗಿದ್ದಾರೆ.

ದ್ವಿಚಕ್ರ ವಾಹನದ ಮೇಲೆ ಬಿದ್ದ ಮರ : ಸವಾರ ಮೃತ್ಯು Read More »

ಯೋಧರೊಂದಿಗೆ ದೀಪಾವಳಿ ಆಚರಿಸಿಕೊಂಡ ಸಂಸದ ಕ್ಯಾ. ಬ್ರಿಜೇಶ್ ಚೌಟ | ಮೋದಿ ಹಾದಿ ಅನುಸರಿಸಿದ ಸಂಸದರು

ಮಂಗಳೂರು:  ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕರಾವಳಿ ಭದ್ರತಾ ಪಡೆಯ ಸೈನಿಕರೊಂದಿಗೆ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಿಕೊಂಡಿದ್ದಾರೆ. ಕ್ಯಾ. ಚೌಟ ಅವರು ಶುಕ್ರವಾರ ತಮ್ಮ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಸಾರ್ವಜನಿಕರು ಹಾಗೂ  ಪಕ್ಷದ ಕಾರ್ಯಕರ್ತರೊಂದಿಗೆ ದೀಪಾವಳಿ ಆಚರಿಸಿಕೊಂಡಿದ್ದು, ಸಂಜೆ ಪಣಂಬೂರಿನಲ್ಲಿರುವ ಕರಾವಳಿ ಭದ್ರತಾ ಪಡೆಯ ಮಂಗಳೂರು ಘಟಕಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅವರು ಯೋಧರೊಂದಿಗೆ ಸಿಹಿ ಹಂಚಿಕೊಂಡು, ಜವಾನರೊಂದಿಗೆ ಉಭಯ ಕುಶಲೋಪರಿ ನಡೆಸುವ ಮೂಲಕ ದೀಪಾವಳಿಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಬಳಿಕ ಮಾತನಾಡಿದ ಸಂಸದರು

ಯೋಧರೊಂದಿಗೆ ದೀಪಾವಳಿ ಆಚರಿಸಿಕೊಂಡ ಸಂಸದ ಕ್ಯಾ. ಬ್ರಿಜೇಶ್ ಚೌಟ | ಮೋದಿ ಹಾದಿ ಅನುಸರಿಸಿದ ಸಂಸದರು Read More »

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ ಕನ್ನಡ ವಿಭಾಗದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಶುಕ್ರವಾರ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಪ್ರಸಾದ್ ಎನ್ ವಹಿಸಿದರು. ಕೆ ಎಸ್ ಎಸ್ ಕಾಲೇಜಿನ ಕಚೇರಿ ಸಿಬ್ಬಂದಿ ಸುಬ್ರಹ್ಮಣ್ಯ ಕೆ. ಉದ್ಘಾಟಿಸಿದರು. ಅತಿಥಿಗಳು ಕನ್ನಡ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ದಿಶಾಂತ್, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಅನ್ವಿತಾ ಹಚ್ಚೇವು ಕನ್ನಡದ ದೀಪ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ Read More »

ಗಾಂಜಾ ಮಾರಾಟ ಮಾಡುತ್ತಿದ್ದ ದಂಪತಿ ಬಂಧನ | ಉಳ್ಳಾಲ ಪೊಲೀಸರು ಹಾಗೂ ತಹಶೀಲ್ದಾರ್ ತಂಡದಿಂದ ಕಾರ್ಯಾಚರಣೆ

ಉಳ್ಳಾಲ: ಗಾಂಜಾ ಮಾರಾಟ ಮಾಡುತ್ತಿದ್ದ ಸಂದರ್ಭ ದಾಳಿ ನಡೆಸಿದ ಉಳ್ಳಾಲ ಪೊಲೀಸರು  ದಂಪತಿಯನ್ನು ಬಂಧಿಸಿದ್ದಾರೆ. ಉಳ್ಳಾಲ ಠಾಣಾ ವ್ಯಾಪ್ತಿಯ ಕಿನ್ಯ ಗ್ರಾಮದ ರಹ್ಮತ್ ನಗರದ ಎಲ್ಲ್ ಪಡ್ಪು ಎಂಬಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎಸಿಪಿ ಧನ್ಯ ನಾಯಕ್ ನೇತೃತ್ವದ ಉಳ್ಳಾಲ ಪೊಲೀಸರು ಹಾಗೂ ಉಳ್ಳಾಲ ತಹಶೀಲ್ದಾರ್ ನೇತೃತ್ವದ ತಂಡ ದಂಪತಿಯನ್ನು ಬಂಧಿಸಿದ್ದಾರೆ. ನಝೀರ್ ಹಾಗೂ ಆತನ ಪತ್ನಿ ಅಸ್ಮ ಬಂಧಿತ ದಂಪತಿ. ಕಾರಿನಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದರು ಎನ್ನಲಾಗಿದ್ದು, ಬಂಧಿತ ಆರೋಪಿಗಳಿಂದ 6.800ಕೆಜಿ

ಗಾಂಜಾ ಮಾರಾಟ ಮಾಡುತ್ತಿದ್ದ ದಂಪತಿ ಬಂಧನ | ಉಳ್ಳಾಲ ಪೊಲೀಸರು ಹಾಗೂ ತಹಶೀಲ್ದಾರ್ ತಂಡದಿಂದ ಕಾರ್ಯಾಚರಣೆ Read More »

ಡಿಸೇಲ್ ಟ್ಯಾಂಕರ್ ಪಲ್ಟಿ : ಡೀಸೆಲ್ ಸೋರಿಕೆ

ಸುಳ್ಯ : ಡೀಸೆಲ್ ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ ಪಲ್ಟಿಯಾದ ಘಟನೆ ಮಾಣಿ-ಮೈಸೂರು ಹೆದ್ದಾರಿಯ ಜಾಲ್ಸೂರು ಗ್ರಾಮದ ಬೈತಡ್ಕ ತಿರುವಿನಲ್ಲಿ ನಡೆದಿದೆ. ಮಂಗಳೂರಿನಿಂದ ಮಡಿಕೇರಿ ಕಡೆಗೆ ಡೀಸೆಲ್ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಬೈತಡ್ಕ ತಿರುವಿನಲ್ಲಿ ರಸ್ತೆ ಮಧ್ಯೆ ಪಲ್ಟಿಯಾಗಿದೆ. ಪರಿಣಾಮ ಟ್ಯಾಂಕರ್ ನಲ್ಲಿ ಡೀಸಲ್ ಸೋರಿಕೆಯಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ, ಕಾರ್ಯಾಚರಣೆ ನಡೆಸುತ್ತಿದ್ದಾರೆ. ಟ್ಯಾಂಕರ್ ಚಾಲಕನಿಗೆ ಗಾಯವಾಗಿದ್ದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ವಲ್ಪ ಹೊತ್ತು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.

ಡಿಸೇಲ್ ಟ್ಯಾಂಕರ್ ಪಲ್ಟಿ : ಡೀಸೆಲ್ ಸೋರಿಕೆ Read More »

ವಕ್ಫ್ ಬೋರ್ಡ್ ನಿಂದ ಭೂಮಿ ಕಬಳಿಕೆ : ಭೂದಾಖಲೆಗಳನ್ನು ಪರಿಶೀಲಿಸುವಂತೆ ಹಿಂದೂ ಸಮಾಜಕ್ಕೆ ವಿಶ್ವ ಹಿಂದೂ ಪರಿಷದ್ ಕರೆ

ರಾಜ್ಯದ ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರೈತರ ಭೂಮಿ, ಮಠ, ಆಶ್ರಮಗಳ ಜಮೀನು ವಕ್ಫ್ ಆಸ್ತಿಯೆಂದು ಪಹಣಿ (RTC)ನಮೂದಾದ ಬಗ್ಗೆ ವರದಿಗಳು ಕೇಳಿ ಬರುತ್ತಿದೆ. ವಖ್ಫ್ ಬೋರ್ಡ್ ಮತ್ತು ವಕ್ಫ್ ಕಾನೂನು ಮುಖಾಂತರ ದೇಶದಲ್ಲಿ ಲಕ್ಷಾಂತರ ಎಕರೆ ಭೂಮಿಯನ್ನು ಕಬಳಿಕೆ ಮಾಡುವ ಹುನ್ನಾರ ನಡೆಯುತ್ತಿದೆ. ಈ ಕುರಿತು ಭೂದಾಖಲೆಗಳನ್ನು ಪರಿಶೀಲಿಸುವಂತೆ ಹಿಂದೂ ಸಮಾಜಕ್ಕೆ ವಿಶ್ವ ಹಿಂದೂ ಪರಿಷದ್ ಕರೆ ನೀಡಿದೆ. ಈ ಕುರಿತು ವಿಶ್ವ ಹಿಂದೂ ಪರಿಷದ್ ಪ್ರಾಂತ ಕಾರ್ಯದರ್ಶಿ ಶರಣ್‍ ಪಂಪ್‍ ವೆಲ್‍ ಹೇಳಿಕೆ ನೀಡಿ,

ವಕ್ಫ್ ಬೋರ್ಡ್ ನಿಂದ ಭೂಮಿ ಕಬಳಿಕೆ : ಭೂದಾಖಲೆಗಳನ್ನು ಪರಿಶೀಲಿಸುವಂತೆ ಹಿಂದೂ ಸಮಾಜಕ್ಕೆ ವಿಶ್ವ ಹಿಂದೂ ಪರಿಷದ್ ಕರೆ Read More »

error: Content is protected !!
Scroll to Top