ದಕ್ಷಿಣ ಕನ್ನಡ

ಲೀಗ್ ಮಾದರಿಯ ವಾಲಿಬಾಲ್ ಪಂದ್ಯ| ಸುಬ್ರಹ್ಮಣ್ಯ ಶ್ರೀ ರಕ್ಷಾ ತಂಡ ಪ್ರಥಮ, ಪ್ರಶಾಂತ್ ಸ್ಪೋರ್ಟ್ಸ್ ಕ್ಲಬ್‍ ದ್ವಿತೀಯ

ಸುಬ್ರಹ್ಮಣ್ಯ: ಸುಬ್ರಹ್ಮಣ್ಯದಲ್ಲಿ ನಡೆದ ಲೀಗ್ ಮಾದರಿಯ ಹೊನಲು ಬೆಳಕಿನ ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಉದಯಶಂಕರ ಭಟ್ ಮಾಲಕತ್ವದ ಶ್ರೀ ರಕ್ಷಾ ಸುಬ್ರಹ್ಮಣ್ಯ ತಂಡ ಪ್ರಥಮ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಉಮೇಶ ಕೆ.ಎನ್. ಮಾಲಕತ್ವದ ಪ್ರಶಾಂತ್ ಸ್ಪೋರ್ಟ್ಸ್ ಕ್ಲಬ್ ದ್ವಿತೀಯ ಸ್ಥಾನ ಹಾಗೂ ಜೀವನ್ ಮಾಲಕತ್ವದ ತಸ್ವಿಕ ಫ್ರೆಂಡ್ಸ್ ಸುಬ್ರಹ್ಮಣ್ಯ ತೃತೀಯ ಸ್ಥಾನವನ್ನು ತನ್ನದಾಗಿಸಿದೆ. ಹೊನಲು ಬೆಳಕಿನ ಲೀಗ್ ಮಾದರಿಯ ಪಂದ್ಯಾಟದಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಿದ್ದವು. ಸಮಾರೋಪ ಸಮಾರಂಭದಲ್ಲಿ ಸುಬ್ರಹ್ಮಣ್ಯ ಕುಕ್ಕೆಶ್ರೀ ಫ್ರೆಂಡ್ಸ್ ಅಧ್ಯಕ್ಷ ಭವಿಷ್, ಉದ್ಯಮಿ […]

ಲೀಗ್ ಮಾದರಿಯ ವಾಲಿಬಾಲ್ ಪಂದ್ಯ| ಸುಬ್ರಹ್ಮಣ್ಯ ಶ್ರೀ ರಕ್ಷಾ ತಂಡ ಪ್ರಥಮ, ಪ್ರಶಾಂತ್ ಸ್ಪೋರ್ಟ್ಸ್ ಕ್ಲಬ್‍ ದ್ವಿತೀಯ Read More »

ನಾಳೆ (ಡಿ.6): ಬಿಜಿಎಸ್ ಶಿಕ್ಷಣ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟ

ಮಂಗಳೂರು: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನಡಿ ಮಂಗಳೂರಿನ ಕಾವೂರಿನಲ್ಲಿ ಕಾರ್ಯಾಚರಿಸುತ್ತಿರುವ ಬಿಜಿಎಸ್ ಶಿಕ್ಷಣ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟ ಡಿ.6 ಬುಧವಾರ ನಡೆಯಲಿದೆ. ಬೆಳಿಗ್ಗೆ 9 ಗಂಟೆಯಿಂದ ಬಿಜಿಎಸ್‍ ಪಿಯು ಕಾಲೇಜು ಕ್ರೀಡಾಂಗಣದಲ್ಲಿ ಕ್ರೀಡಾಕೂಟ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿ ದಿವ್ಯ ಉಪಸ್ಥಿತರಿರುವರು. ಮುಖ್ಯ ಅತಿಥಿಯಾಗಿ ಸಂಸ್ಥೆಯ ಮ್ಯಾನೇಜರ್ ಸುಬ್ಬ ಕಾರಡ್ಕ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ನಾಳೆ (ಡಿ.6): ಬಿಜಿಎಸ್ ಶಿಕ್ಷಣ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟ Read More »

ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟ

ಸುಬ್ರಹ್ಮಣ್ಯ: ಕುಕ್ಕೆ ಫ್ರೆಂಡ್ಸ್ ಹಾಗೂ ಕಡಬ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಜಂಟಿ ಆಶ್ರಯದಲ್ಲಿ ಆಹ್ವಾನಿತ ಆರು ತಂಡಗಳ ಲೀಗ್ ಮಾದರಿಯ ಹೊನ್ನಲು ಬೆಳಕಿನ ಪುರುಷರ ವಾಲಿಬಾಲ್ ಪಂದ್ಯಾಟ ಕಾಶಿ ಕಟ್ಟೆ ಬಳಿಯ ಕ್ರೀಡಾಂಗಣದಲ್ಲಿ ನಡೆಯಿತು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಶ್ರೀವತ್ಸ ದೀಪ ಬೆಳಗಿ ಉದ್ಘಾಟಿಸಿ, ಗ್ರಾಮೀಣ ಪ್ರದೇಶವಾದ ಸುಬ್ರಹ್ಮಣ್ಯದಲ್ಲಿ ಯುವಕರು ಸಂಘಟಿಸಿ ನಡೆಸಿದ ಈ ವಾಲಿಬಾಲ್ ಪಂದ್ಯಾಟ ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಕಡಬ ತಾಲೂಕು ವಾಲಿಬಾಲ್

ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟ Read More »

ಡಿ. 5ರಿಂದ ಕೆಂಪು ಕಲ್ಲು ಸಾಗಾಟ ಅನಿರ್ಧಿಷ್ಟಾವಧಿ ಬಂದ್

ಪುತ್ತೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಂಪು ಕಲ್ಲು ಸಾಗಾಟವನ್ನು ಡಿ. 5ರಿಂದ ಅನಿರ್ದಿಷ್ಟಾವಧಿಗಳ ಕಾಲ ಬಂದ್’ಗೆ ಕರೆ ನೀಡಲಾಗಿದೆ. ಕಡಬ ಹಾಗೂ ಪುತ್ತೂರು ತಾಲೂಕಿನಲ್ಲಿ ಡಿ. 5ರಿಂದ 12ರವರೆಗೆ ಅನಿರ್ಧಿಷ್ಟಾವಧಿ ಬಂದ್ ನಡೆಯಲಿದೆ. ಲಾರಿ ಬಿಡಿ ಭಾಗಗಳಿಗೆ ಮತ್ತು ಡಿಸೇಲ್ ಬೆಲೆ ಏರಿಕೆ ಆಗುತ್ತಿರುವುದನ್ನು ವಿರೋಧಿಸಿ, ಕೆಂಪು ಕಲ್ಲು ಸಾಗಾಟದಲ್ಲಿ ಬ್ರೋಕರ್’ಗಳ ಹಾವಳಿಯನ್ನು ವಿರೋಧಿಸಿ ಬಂದ್’ಗೆ ಕರೆ ನೀಡಲಾಗಿದೆ. ಕೆಂಪು ಕಲ್ಲು ಸಾಗಾಟ ಮಾಡಿ, ತೀರಾ ಕಡಿಮೆ ದರಕ್ಕೆ ಇಳಿಸುವುದು ಕಂಡುಬಂದಿದೆ. ಇದರಿಂದಾಗಿ ಎಲ್ಲಾ ಕೆಂಪು

ಡಿ. 5ರಿಂದ ಕೆಂಪು ಕಲ್ಲು ಸಾಗಾಟ ಅನಿರ್ಧಿಷ್ಟಾವಧಿ ಬಂದ್ Read More »

ಬಂಟ್ವಾಳ ತಾಲೂಕು ಗೌಡರ ಕ್ರೀಡೋತ್ಸವ | ಬೆಂಗಳೂರು ಕಂಬಳದಲ್ಲಿ ಕೋಣ ಓಡಿಸಿದ ವಿಜೇತರಿಗೆ, ಕ್ರೀಡಾ ಸಾಧಕರಿಗೆ ಸನ್ಮಾನ

ವಿಟ್ಲ: ಇಲ್ಲಿನ ಬಂಟ್ವಾಳ ತಾಲೂಕು ಗೌಡರ ಯುವ ವೇದಿಕೆ ನೇತೃತ್ವದಲ್ಲಿ ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ, ಬಂಟ್ವಾಳ ತಾಲೂಕು ಗೌಡರ ಮಹಿಳಾ ಘಟಕದ ಸಹಕಾರದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಗೌಡರ ಕ್ರೀಡೋತ್ಸವ ಡಿ. 3ರಂದು ವಿಟ್ಲ ವಿಠಲ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕ ಸಂಜೀವ ಮಠಂದೂರು, ರಾಷ್ಟ್ರಧ್ವಜವನ್ನು ವಿಶ್ವ ಮಟ್ಟಕ್ಕೆ ಎತ್ತಿ ತೋರಿಸಲು ಇರುವ ಏಕೈಕ ಕ್ಷೇತ್ರ ಕ್ರೀಡೆ. ಒಲಿಂಪಿಕ್ ಕ್ರೀಡಾಕೂಟದಲ್ಲೂ ಭಾರತದ ತ್ರಿವರ್ಣ ಧ್ವಜವನ್ನು

ಬಂಟ್ವಾಳ ತಾಲೂಕು ಗೌಡರ ಕ್ರೀಡೋತ್ಸವ | ಬೆಂಗಳೂರು ಕಂಬಳದಲ್ಲಿ ಕೋಣ ಓಡಿಸಿದ ವಿಜೇತರಿಗೆ, ಕ್ರೀಡಾ ಸಾಧಕರಿಗೆ ಸನ್ಮಾನ Read More »

ಗೂಡಂಗಡಿ ಧ್ವಂಸ: ಪ್ರಕರಣ ದಾಖಲು

ರಸ್ತೆ ಬದಿಯಲ್ಲಿದ್ದ ಗೂಡಂಗಡಿಯನ್ನು ಕಿಡಿಗೇಡಿ ಗಳು ರಾತ್ರಿ ವೇಳೆ ಧ್ವಂಸಗೊಳಿಸಿದ ಘಟನೆ ಸಂಭವಿಸಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿಡ್ಲೆ ಗ್ರಾಮದ ಬೂಡುಜಾಲು ಎಂಬಲ್ಲಿ ಘಟನೆ ನಡೆದಿದೆ. ಕೊಕ್ಕಡ ಗ್ರಾಮದ ಮಲ್ಲಿಗೆ ಮಜಲು ನಿವಾಸಿ ಅಬ್ದುಲ್‌ ಅಜೀಜ್‌ ಅವರು ಕಳೆದ ಮೂರು ವರ್ಷಗಳಿಂದ ರಾಜ್ಯ ಹೆದ್ದಾರಿಯ ಬದಿಯಲ್ಲಿ ಗೂಡಂಗಡಿ ಇರಿಸಿ ವ್ಯಾಪಾರ ನಡೆಸುತ್ತಿದ್ದರು. ಶುಕ್ರವಾರ ರಾತ್ರಿಯ ವೇಳೆ ಎಂದಿನಂತೆ ಅಂಗಡಿಯನ್ನು ಮುಚ್ಚಿ ಹೋಗಿದ್ದ ಅಬ್ದುಲ್‌ ಅಜೀಜ್‌ ಶನಿವಾರ ಬೆಳಗ್ಗೆ ಬಂದು ನೋಡಿದಾಗ ಅಂಗಡಿಯನ್ನು

ಗೂಡಂಗಡಿ ಧ್ವಂಸ: ಪ್ರಕರಣ ದಾಖಲು Read More »

ಕ್ರೀಡಾ ಕಾರಂಜಿಯ ಕ್ರೀಡಾಜ್ಯೋತಿಗೆ ದರ್ಬೆಯಲ್ಲಿ ಭವ್ಯ ಸ್ವಾಗತ

ಪುತ್ತೂರು: ರಾಜ್ಯಮಟ್ಟದ 17ರ ವಯೋಮಾನದ ಪ್ರೌಢಶಾಲಾ ಬಾಲಕ – ಬಾಲಕಿಯರ ಕ್ರೀಡಾಕೂಟಕ್ಕೆ ಶನಿವಾರ ಸಂಜೆ ದರ್ಬೆ ವೃತ್ತದಲ್ಲಿ ಸ್ವಾಗತಿಸಲಾಯಿತು. ಶುಕ್ರವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ ಕ್ರೀಡಾಕೂಟದ ಜ್ಯೋತಿಗೆ ಚಾಲನೆ ನೀಡಿದ್ದು, ತಾಲೂಕಿನ ವಿವಿಧ ಪ್ರದೇಶಗಳಿಗೆ ಸಂಚರಿಸಿ ಇಂದು ದರ್ಬೆಗೆ ತಲುಪಿತು. ದರ್ಬೆಯಲ್ಲಿ ಕ್ರೀಡಾ ಜ್ಯೋತಿಯನ್ನು ಸ್ವಾಗತಿಸಿ, ಬೃಹತ್ ಮೆರವಣಿಗೆಯಲ್ಲಿ ಕೊಂಬೆಟ್ಟು ತಾಲೂಕು ಕ್ರೀಡಾಂಗಣಕ್ಕೆ ತರಲಾಯಿತು. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ,  ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಸವಣೂರು

ಕ್ರೀಡಾ ಕಾರಂಜಿಯ ಕ್ರೀಡಾಜ್ಯೋತಿಗೆ ದರ್ಬೆಯಲ್ಲಿ ಭವ್ಯ ಸ್ವಾಗತ Read More »

ಎಡಮಂಗಲ: ಸಾಯಿ ಮೆಡಿಕಲ್ಸ್ ಶುಭಾರಂಭ

ಸುಳ್ಯ: ಎಡಮಂಗಲ ಕೆ.ಜಿ.ಜೆ. ಕಾಂಪ್ಲೆಕ್ಸ್ ನಲ್ಲಿ ಸಾಯಿ ಮೆಡಿಕಲ್ಸ್ ಶನಿವಾರ ಶುಭಾರಂಭಗೊಂಡಿತು. ಶಾಸಕಿ ಭಾಗೀರಥಿ ಮುರುಳ್ಯ ಅವರು ಉದ್ಘಾಟಿಸಿ, ಸಂಸ್ಥೆಗೆ ಶುಭಹಾರೈಸಿದರು. ತಾಲೂಕು ಮಹಿಳಾ ಬಿಜೆಪಿ ಅಧ್ಯಕ್ಷೆ ಶುಭದಾ ರೈ, ಪಂಜಿಮುಗೇರು ರಘುನಾಥ್ ರೈ ಮೊದಲಾದವರು ಉಪಸ್ಥಿತರಿದ್ದರು. ಮಾಲಕರಾದ ಭಾರತಿ ಶೆಟ್ಟಿ ಹಾಗೂ ರಘುಪ್ರಸಾದ್ ಶೆಟ್ಟಿ ಎಣ್ಮೂರುಗುತ್ತು ಅತಿಥಿಗಳನ್ನು ಸ್ವಾಗತಿಸಿ, ವಂದಿಸಿದರು.

ಎಡಮಂಗಲ: ಸಾಯಿ ಮೆಡಿಕಲ್ಸ್ ಶುಭಾರಂಭ Read More »

ನೀರಿನಲ್ಲಿ ಮುಳುಗಿ ಮೃತ್ಯು ! ಮೃತದೇಹ ಪತ್ತೆ

ಸುಳ್ಯ: ಸ್ನಾನಕ್ಕೆ ಇಳಿದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಆರಂಬೂರು ಬಳಿಯ ಪಯಸ್ವಿನಿ ನದಿಯಲ್ಲಿ ಇಂದು ನಡೆದಿದೆ. ಮಡಿಕೇರಿ ಮದೆನಾಡು ಮೂಲದ ವೆಂಕಟರಮಣ ಮೃತಪಟ್ಟವರು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಆಗಮಿಸಿ ಮೃತದೇಹ ಹುಡುಕಾಟದಲ್ಲಿ ತೊಡಗಿಕೊಂಡಿದ್ದರು. ಇದೀಗ ಬಂದ ಮಾಹಿತಿಯಂತೆ, ಪೈಚಾರ್ ಮುಳುಗು ತಜ್ಞರು ಆಗಮಿಸಿ ಮೃತದೇಹವನ್ನು ಹೊರ ತೆಗೆದಿದ್ದಾರೆ ಎಂದು ಹೇಳಲಾಗಿದೆ.

ನೀರಿನಲ್ಲಿ ಮುಳುಗಿ ಮೃತ್ಯು ! ಮೃತದೇಹ ಪತ್ತೆ Read More »

ಸಂಭ್ರಮಾಚರಣೆ ಮುನ್ನದಿನವೇ ಸುರತ್ಕಲ್ ಟೋಲ್ ಗೇಟ್ ಬೂತ್ ತೆರವು!!

ಸುರತ್ಕಲ್: ಸುರತ್ಕಲ್ ನಿರುಪಯುಕ್ತ ಟೋಲ್ ಗೇಟ್ ನ ಕೆಲವು ಟೋಲ್ ಸಂಗ್ರಹ ಬೂತ್ ಗಳನ್ನು ಹೆದ್ದಾರಿ ಪ್ರಾಧಿಕಾರ ತೆರವುಗೊಳಿಸಿದೆ. ದು ವರ್ಷದಿಂದ ಪಾಳು ಬಿದ್ದಿರುವ, ಮತ್ತೆ ಸುಂಕ ಸಂಗ್ರಹ ಆರಂಭದ ಕುರಿತು ಜನಸಾಮಾನ್ಯರಲ್ಲಿ ವದಂತಿ, ಆತಂಕಕ್ಕೆ ಇದು ಕಾರಣವಾಗಿತ್ತು. ಈ ಬಗ್ಗೆ ಮಾತನಾಡಿದ ಸುರತ್ಕಲ್‌ ಟೋಲ್ ಗೇಟ್ ತೆರವು ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಡಿ. 1ರಂದು ಸುರತ್ಕಲ್ ಟೋಲ್ ಸಂಗ್ರಹ ರದ್ದು ಗೊಂಡು ಹೋರಾಟ ಗೆಲುವು ಸಾಧಿಸಿದ ದಿನ. ಟೋಲ್ ಗೇಟ್ ವಿರೋಧಿ ಹೋರಾಟ

ಸಂಭ್ರಮಾಚರಣೆ ಮುನ್ನದಿನವೇ ಸುರತ್ಕಲ್ ಟೋಲ್ ಗೇಟ್ ಬೂತ್ ತೆರವು!! Read More »

error: Content is protected !!
Scroll to Top