ಅಪರಾಧ

ಧರ್ಮಸ್ಥಳ : ಮೂವರು ಯೂಟ್ಯೂಬರ್‌ಗಳ ವಿರುದ್ಧ ಹಲ್ಲೆ ಕೇಸ್‌ ದಾಖಲು

ಬೆಳ್ತಂಗಡಿ: ಬೈಕ್ ಸವಾರನನ್ನು ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಮೂವರು ಯೂಟ್ಯೂಬರ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆ.6ರಂದು ಘಟನೆ ನಡೆದಿದ್ದು, ಈ ಬಗ್ಗೆ ಹರೀಶ್ ನಾಯ್ಕ ಎಂಬವರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ. ತಾನು ಬೈಕ್‌ನಲ್ಲಿ ಹೋಗುತ್ತಿದ್ದ‌ ವೇಳೆ ಪಾಂಗಳ ಕ್ರಾಸ್ ಬಳಿ ತಡೆದು ನಿಲ್ಲಿಸಿದ ಯುಟ್ಯೂಬರ್‌ಗಳು ತಾವು ಕುಡ್ಲ ರಾಂಪೇಜ್‌ನವರು ಎಂದು ಹೇಳಿದ್ದು, ಈ ರಸ್ತೆಯ ಪಕ್ಕದಲ್ಲಿ ಹೆಣಗಳನ್ನು ಹೂತು ಹಾಕಿದ್ದೀರಾ? ಇದರ ಬಗ್ಗೆ ನಿಮಗೆ ಗೊತ್ತಿದೆಯಾ […]

ಧರ್ಮಸ್ಥಳ : ಮೂವರು ಯೂಟ್ಯೂಬರ್‌ಗಳ ವಿರುದ್ಧ ಹಲ್ಲೆ ಕೇಸ್‌ ದಾಖಲು Read More »

ಪುತ್ತೂರು : 10 ಕೆಜಿ ಭಾರದ ಘಂಟೆ ಕದ್ದವ ಸೆರೆ

ಪುತ್ತೂರು : ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ತಾಮ್ರದ ಗಂಟೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪುತ್ತೂರು, ಕಬಕ ನಿವಾಸಿ ಸಂಶುದ್ದೀನ್ ಯಾನೆ ಸಂಶು (50) ಬಂಧಿತ ಆರೋಪಿ. 10 ಕೆಜಿ ತೂಕದ ಸುಮಾರು 8,000 ರೂ. ಬೆಲೆ ಬಾಳುವ ತಾಮ್ರದ ಗಂಟೆ ಕಳವು ಘಟನೆಗೆ ಸಂಬಂಧಿಸಿದಂತೆ ಜುಲೈ 26ರಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪುತ್ತೂರು ನಗರ ಠಾಣಾ ಪೊಲೀಸರು ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ.

ಪುತ್ತೂರು : 10 ಕೆಜಿ ಭಾರದ ಘಂಟೆ ಕದ್ದವ ಸೆರೆ Read More »

ಧರ್ಮಸ್ಥಳ ಪ್ರಕರಣ : ಗಲಭೆಗೆ ಸಂಬಂಧಿಸಿ ಆರು ಮಂದಿ ಬಂಧನ, ಬಿಡುಗಡೆ

ಪತ್ರಕರ್ತ ವಸಂತ ಗಿಳಿಯಾರ್‌ ವಿರುದ್ಧ ಎಫ್‌ಐಆರ್‌ ಬೆಳ್ತಂಗಡಿ: ಧರ್ಮಸ್ಥಳದ ಪಾಂಗಳ ಕ್ರಾಸ್ ಬಳಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ಪ್ರಕರಣ‌ಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸರು 6 ಜನರನ್ನು ಶನಿವಾರ ಬಂಧಿಸಿದ್ದಾರೆ. ನ್ಯಾಯಾಲಯ ಎಲ್ಲರನ್ನು ಷರತ್ತುಬದ್ಧ ಜಾಮೀನಿನಲ್ಲಿ ಬಿಡುಗಡೆಗೊಳಿಸಿದೆ. ಪದ್ಮಪ್ರಸಾದ್, ಸುಹಾಸ್, ಗುರುಪ್ರಸಾದ್, ಶಶಿಕುಮಾರ್, ಕಲಂದರ್, ಚೇತನ್ ಬಂಧಿತ ಆರೋಪಿಗಳು. ಯೂಟ್ಯೂಬರ್‌ಗಳ ಮೇಲೆ ಹಲ್ಲೆ ನಡೆದ ಬಳಿಕ ನಡೆದ ಗುಂಪು ಘರ್ಷಣೆ ನಡೆದಿತ್ತು. ಈ ಸಂದರ್ಭದಲ್ಲಿ ನಿಯಂತ್ರಣ ಮಾಡಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದರು. ಪೊಲೀಸ್‌ ಅಧಿಕಾರಿಯಿಂದ ದೂರು

ಧರ್ಮಸ್ಥಳ ಪ್ರಕರಣ : ಗಲಭೆಗೆ ಸಂಬಂಧಿಸಿ ಆರು ಮಂದಿ ಬಂಧನ, ಬಿಡುಗಡೆ Read More »

ಕೆದಿಲದ ಮಹಿಳೆಯ ನಿಗೂಢ ಸಾವಿನ ಪ್ರಕರಣ : ಇಂದು ಬೆಳಗ್ಗೆ ಮನೆಗೆ ಬಂದ ಬಾವ

ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಬಾವ ಇಂದು ದಿಢೀರ್‌ ಪ್ರತ್ಯಕ್ಷ ಪುತ್ತೂರು : ಕೆದಿಲ ಗ್ರಾಮದ ಕಾಂತಕೋಡಿ ಎಂಬಲ್ಲಿ ಕಳೆದ ಆ.6ರಂದು ಮಹಿಳೆಯ ಮೃತದೇಹ ಪತ್ತೆಯಾದ ದಿನವೇ ಮನೆಯಿಂದ ನಾಪತ್ತೆಯಾಗಿದ್ದ ಮಹಿಳೆಯ ಗಂಡನ ಅಣ್ಣ (ಮೃತರ ಬಾವ) ಭಾನುವಾರ ಬೆಳಗ್ಗೆ ವಾಪಸು ಬಂದಿದ್ದಾರೆ. ಕೆದಿಲ ಒಳಕುಮೇರಿಯ ಗಣಪತಿ ಯಾನೆ ರಾಮಣ್ಣ ಗೌಡ ಎಂಬವರ ಪತ್ನಿ ಮಮತಾ ಎಂಬವರ ಮೃತದೇಹ ಆ.6ರಂದು ಬೆಳಗ್ಗೆ ಕೆದಿಲ ಗ್ರಾಮದ ತೋಡಿನಲ್ಲಿ ಪತ್ತೆಯಾಗಿತ್ತು. ಅದೇ ದಿನ ರಾಮಣ್ಣ ಗೌಡರ ಅಣ್ಣ ಸುಂದರ ಯಾನೆ ಲೋಕಯ್ಯ

ಕೆದಿಲದ ಮಹಿಳೆಯ ನಿಗೂಢ ಸಾವಿನ ಪ್ರಕರಣ : ಇಂದು ಬೆಳಗ್ಗೆ ಮನೆಗೆ ಬಂದ ಬಾವ Read More »

ಮಾದಕ ವಸ್ತು ಮಾರಾಟ : ಏಳು ಆರೋಪಿಗಳ ಬಂಧನ

ಇಂಜಿನಿಯರಿಂಗ್‌ ವಿದ್ಯಾರ್ಥಿಯಿಂದಲೂ ಡ್ರಗ್ಸ್‌ ದಂಧೆ ಮಂಗಳೂರು : ಡ್ರಗ್ಸ್‌ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಮಂಗಳೂರು ಪೊಲೀಸರು ಪ್ರತ್ಯೇಕ ಪ್ರಕರಣಗಳಲ್ಲಿ ಕಳೆದ ಶುಕ್ರವಾರದಿಂದೀಚೆಗೆ 7 ಮಂದಿಯನ್ನು ಬಂಧಿಸಿ ಕೇಸ್‌ ದಾಖಲಿಸಿಕೊಂಡಿದ್ದಾರೆ. ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಾಲೇಜು ವಿದ್ಯಾರ್ಥಿಗಳು, ಯುವಕರು ಮತ್ತು ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಮಾದಕವಸ್ತು ಮಾರಾಟ ಮಾಡುತ್ತಿದ್ದವರ ಮೇಲೆ ಕಾರ್ಯಾಚರಣೆ ನಡೆಸಿರುವ ಪೊಲೀಸರು 5 ಕೆಜಿಯಷ್ಟು ಗಾಂಜಾ ವಶಪಡಿಸಿಕೊಂಡಿದ್ದಾರೆ. ಶೈಕ್ಷಣಿಕ ಮತ್ತು ವಸತಿ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತ ಗಾಂಜಾ ಮಾರಾಟ ಮಾಡುತ್ತಿರುವ ವ್ಯಕ್ತಿಗಳ ಬಗ್ಗೆ ನಿರ್ದಿಷ್ಟ

ಮಾದಕ ವಸ್ತು ಮಾರಾಟ : ಏಳು ಆರೋಪಿಗಳ ಬಂಧನ Read More »

ಧರ್ಮಸ್ಥಳ ಪ್ರಕರಣ : 11 ದಿನ 16 ಗುಂಡಿ ಅಗೆದರೂ ಸಿಕ್ಕಿದ್ದು ಬರೀ ಕಲ್ಲುಮಣ್ಣು!

20 ಅಡಿ ಅಗಲ, 10 ಅಡಿ ಆಳಕ್ಕೆ ಗುಂಡಿ ತೋಡಿದರೂ ಸಿಕ್ಕಿಲ್ಲ ಯಾವುದೇ ಕುರುಹು ಧರ್ಮಸ್ಥಳ: ಧರ್ಮಸ್ಥಳ ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ 11 ದಿನಗಳಿಂದ ದೂರುದಾರ ಮುಸುಕುಧಾರಿ ವ್ಯಕ್ತಿ ತೋರಿಸಿದ ಎಲ್ಲ ಸ್ಥಳಗಳನ್ನು ಅಗೆದರೂ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ. ಆದರೂ ದೂರುದಾರ ತೋರಿಸುವ ಎಲ್ಲ ಸ್ಥಳಗಳನ್ನು ಪರೀಶೀಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಭಾನುವಾರ ಕಾರ್ಯಾಚರಣೆ ಸ್ಥಗಿತ ಮಾಡಲಿರುವ ಎಸ್‌ಐಟಿ ಸೋಮವಾರ ಕಾರ್ಯಾಚರಣೆ ಮುಂದುವರಿಸಲಿದೆ. 11 ದಿನದಲ್ಲಿ 16ಕ್ಕೂ ಹೆಚ್ಚು ಜಾಗ ತೋರಿಸಿದ ಸ್ಥಳಗಳಲ್ಲಿ ಸಿಕ್ಕಿದ್ದು ಕಲ್ಲು, ಮಣ್ಣು, ಬಂಡೆಮಾತ್ರ.

ಧರ್ಮಸ್ಥಳ ಪ್ರಕರಣ : 11 ದಿನ 16 ಗುಂಡಿ ಅಗೆದರೂ ಸಿಕ್ಕಿದ್ದು ಬರೀ ಕಲ್ಲುಮಣ್ಣು! Read More »

ನಟ ಧ್ರುವ ಸರ್ಜಾ ವಿರುದ್ಧ 3.15 ಕೋ. ರೂ. ವಂಚನೆ ಆರೋಪ

ನಿರ್ಮಾಪಕರಿಂದ ಮುಂಬೈಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಬೆಂಗಳೂರು: ಕನ್ನಡ ನಟ ಧ್ರುವ ಸರ್ಜಾ ವಿರುದ್ಧ ಜಗ್ಗು ದಾದ ಸಿನಿಮಾದ ನಿರ್ದೇಶಕ ಹಾಗೂ ನಿರ್ಮಾಪಕ ರಾಘವೇಂದ್ರ ಹೆಗ್ಡೆ 9.58 ಕೋ. ರೂ. ವಂಚಿಸಿದ ಕುರಿತು ದೂರು ನೀಡಿದ್ದಾರೆ. ಮುಂಬೈಯ ಅಂಬೋಲಿ ಪೊಲೀಸ್​ ಠಾಣೆಯಲ್ಲಿ ರಾಘವೇಂದ್ರ ಹೆಗ್ಡೆ ದೂರು ದಾಖಲಿಸಿದ್ದಾರೆ. 3.15 ಕೋಟಿ ರೂಪಾಯಿ ವಂಚನೆ ಕೇಸ್ ಇದಾಗಿದ್ದು, ಬಡ್ಡಿ ಸೇರಿ ಆ ಹಣ ಈಗ 9 ಕೋಟಿ ರೂಪಾಯಿ ಆಗಿದೆ ಎಂದು ನಿರ್ಮಾಪಕ ಆರೋಪಿಸಿದ್ದಾರೆ. 2016ರಲ್ಲಿ ನನ್ನ

ನಟ ಧ್ರುವ ಸರ್ಜಾ ವಿರುದ್ಧ 3.15 ಕೋ. ರೂ. ವಂಚನೆ ಆರೋಪ Read More »

ಕೇರಳಕ್ಕೆ ಸಾಗಿಸುತ್ತಿದ್ದ 20.80 ಲ.ರೂ. ವಶ : ಆರೋಪಿ ಬಂಧನ

ದಾಖಲೆ ಪತ್ರಗಳಿಲ್ಲದೆ ಮಂಗಳೂರಿನಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಅಪಾರ ಹಣ ಸಾಗಾಟ ಮಂಗಳೂರು : ಮಂಗಳೂರಿನಿಂದ ಕೇರಳಕ್ಕೆ ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 20.80 ಲ.ರೂ.ಯನ್ನು ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣಿಕನಿಂದ ವಶಪಡಿಸಿಕೊಳ್ಳಲಾಗಿದೆ. ಮಂಗಳೂರಿನಿಂದ ಕಾಸರಗೋಡಿಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಪ್ರಯಾಣಿಕನಿಂದ 20.80 ಲಕ್ಷ ರೂ. ನಗದು ಹಣವನ್ನು ಮಂಜೇಶ್ವರ ಅಬಕಾರಿ ದಳದ ಸಿಬಂದಿ ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮಂಗಳೂರಿನ ಜಯಶೀಲ ಪುಟ್ಟಣ್ಣ ಶೆಟ್ಟಿ(52) ಎಂಬಾತನನ್ನು ಬಂಧಿಸಲಾಗಿದೆ. ವಾಹನ ತಪಾಸಣೆ ಮಾಡುತ್ತಿದ್ದ ಅಬಕಾರಿ ಸಿಬ್ಬಂದಿಗಳು ಈತನ ಬ್ಯಾಗನ್ನು ಪರಿಶೀಲಿಸಿದಾಗ ನಗದು ಪತ್ತೆಯಾಗಿದೆ.

ಕೇರಳಕ್ಕೆ ಸಾಗಿಸುತ್ತಿದ್ದ 20.80 ಲ.ರೂ. ವಶ : ಆರೋಪಿ ಬಂಧನ Read More »

ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ಮಾಡಿದ ದುರುಳರು

ಯುವತಿಯ ಸಹೋದರನಿಗೇ ವಿಡಿಯೋ ಕಳುಹಿಸಿ ವಿಕೃತಿ ಹಾಸನ: ಬುದ್ಧಿಮಾಂದ್ಯ ಯುವತಿಯ ಮೇಲೆ ದುರುಳರು ಸಾಮೂಹಿಕ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ಹಾಸನದಲ್ಲಿ ನಡೆದಿದೆ. ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರದ ವಿಡಿಯೋ ಮಾಡಿ ಯುವತಿ ಸಹೋದರನಿಗೆ ಕಳುಹಿಸಿದ್ದಾರೆ. ಕೂಡಲೇ ಸಹೋದರ ಅತ್ಯಾಚಾರದ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ವಿಡಿಯೋ ಕಳುಹಿಸಿದ ನಂತರ ದುರುಳರು ಡಿಲೀಟ್ ಮಾಡಿದ್ದರು. ಆದರೆ ಅಷ್ಟುಹೊತ್ತಿಗಾಗಲೇ ಸಂತ್ರಸ್ತೆ ಸಹೋದರ ವಿಡಿಯೋವನ್ನು ತನ್ನ ಸ್ನೇಹಿತನ ಮೊಬೈಲ್‌ಗೆ ಫಾರ್ವರ್ಡ್ ಮಾಡಿದ್ದ. ಘಟನೆ ಸಂಬಂಧ ಅಬ್ದುಲ್ ಅಫ್ತಾಬ್, ರಾಜಿಕ್ ಪಾಷ, ಉಮ್ರಾನ್ ವಿರುದ್ಧ

ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ಮಾಡಿದ ದುರುಳರು Read More »

ಪುತ್ತೂರು : ಕುಖ್ಯಾತ ಆರೋಪಿಯ ಬಂಧನ

ಪುತ್ತೂರು : ಕೇರಳ ಹಾಗೂ ಕರ್ನಾಟಕಕ್ಕೆ ಬೇಕಾಗಿದ್ದ ಅಂತರ್‌ರಾಜ್ಯ ಆರೋಪಿ ಇಲಿಯಾಸ್ ಪಿ.ಎ. ಎಂಬಾತನನ್ನು ಪೊಲೀಸರು ಬಂಧಿಸಿ ಶುಕ್ರವಾರ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಕೇರಳ ರಾಜ್ಯದ ತೃಶ್ಶೂರ್ ಜಿಲ್ಲೆಯ ವಿಯ್ಯೂರು ಎಂಬಲ್ಲಿನ ನಿವಾಸಿಯಾದ ಇಲಿಯಾಸ್ ವಿರುದ್ಧ ಪುತ್ತೂರು ನಗರ ಠಾಣೆ, ಉಪ್ಪಿನಂಗಡಿ ಹಾಗೂ ಧರ್ಮಸ್ಥಳ ಠಾಣೆಗಳಲ್ಲಿ ಹಲವು ಪ್ರಕರಣಗಳಿದ್ದು, ತೃಶ್ಶೂರ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಸುಮಾರು 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪುತ್ತೂರು ಉಪವಿಭಾಗದ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಉಪ್ಪಿನಂಗಡಿ ಪೊಲೀಸ್ ಉಪನಿರೀಕ್ಷಕ ಕೌಶಿಕ್

ಪುತ್ತೂರು : ಕುಖ್ಯಾತ ಆರೋಪಿಯ ಬಂಧನ Read More »

error: Content is protected !!
Scroll to Top