ಅಪರಾಧ

ವಿದ್ಯಾರ್ಥಿ ಮೇಲೆ ರ‍್ಯಾಗಿಂಗ್ : ಮೂವರು ಬಾಲಕರು, ಶಾಲೆಯ ವಿರುದ್ಧ ಕೇಸ್‌

13ರ ಹರೆಯದ ಬಾಲಕನ ಮೇಲೆ ಸಹಪಾಠಿಗಳಿಂದ ಬರ್ಬರ ಹಲ್ಲೆ ಮೈಸೂರು : ಮೈಸೂರಿನ ಪ್ರತಿಷ್ಠಿತ ಶಾಲೆಯೊಂದರಲ್ಲಿ ವಿದ್ಯಾರ್ಥಿಯ ಮೇಲೆ ನಡೆದ ರ‍್ಯಾಗಿಂಗ್ ಕೃತ್ಯಕ್ಕೆ ಸಂಬಂಧಿಸಿ ಪೊಲೀಸರು ಮತ್ತು ರ‍್ಯಾಗಿಂಗ್ ನಡೆಸಿದ ಬಾಲಕರು ಮತ್ತು ಶಾಲೆಯ ಆಡಳಿತ ಮಂಡಳಿ ವಿರುದ್ಧ ಕೇಸ್‌ದಾಖಲಿಸಿಕೊಂಡಿದೆ. ವಿದ್ಯಾರ್ಥಿಯೊಬ್ಬನ ಮೇಲೆ ಕೆಲವು ಹುಡುಗರು ಸೇರಿಕೊಂಡು ಬರ್ಬರವಾಗಿ ರ್‍ಯಾಗಿಂಗ್ ಮಾಡಿದ ಘಟನೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಹಲ್ಲೆಗೊಳಗಾದ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆಗೆ ಮುಂದಾಗಿದ್ದಾರೆ. ಮೈಸೂರಿನ […]

ವಿದ್ಯಾರ್ಥಿ ಮೇಲೆ ರ‍್ಯಾಗಿಂಗ್ : ಮೂವರು ಬಾಲಕರು, ಶಾಲೆಯ ವಿರುದ್ಧ ಕೇಸ್‌ Read More »

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜು : ಬಿಜೆಪಿ ಆಕ್ರೋಶ

ಗರಿಷ್ಠ ಭದ್ರತೆ ಇರುವ ನಿರ್ಬಂಧಿತ ಪ್ರದೇಶದಲ್ಲಿ ನಮಾಜು ಮಾಡಲು ಅನುಮತಿ ಕೊಟ್ಟದ್ದು ಯಾರು ಎಂದು ಪ್ರಶ್ನೆ ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿ ಸಾಮೂಹಿಕ ನಮಾಜ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹಜ್ ಯಾತ್ರಿಕರನ್ನು ಬೀಳ್ಕೊಡಲು ಬಂದಿದ್ದ ಕೆಲವರು ವಿಮಾನ ನಿಲ್ದಾಣದ ಟರ್ಮಿನಲ್ ಒಳಭಾಗದಲ್ಲೇ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಸಾಮೂಹಿಕ ನಮಾಜ್ ನಡೆಯುತ್ತಿದ್ದರೂ ಸಿಬ್ಬಂದಿ ನೋಡುತ್ತಾ ಮೌನವಾಗಿದ್ದರು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಮಾನ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜು : ಬಿಜೆಪಿ ಆಕ್ರೋಶ Read More »

ಶಾಲಾ ಬಾಲಕಿಯರಿಗೆ ಕಿರುಕುಳ ನೀಡಿದ ಆಟೋ ಚಾಲಕನ ವಿರುದ್ಧ ಕೇಸ್‌

ಮಂಗಳೂರು: ಶಾಲೆಗೆ ತೆರಳುತ್ತಿದ್ದ ಅಪ್ರಾಪ್ತ ಪ್ರಾಯದ ಇಬ್ಬರು ಬಾಲಕಿಯರಿಗೆ ಆಟೋರಿಕ್ಷಾ ಚಾಲಕ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ.ಅಪ್ರಾಪ್ತ ಪ್ರಾಯದ ಮಗಳು ಹಾಗೂ ಮತ್ತೊಬ್ಬ ವಿದ್ಯಾರ್ಥಿನಿ ಸ್ಥಳೀಯ ಶಾಲೆಗೆ ಹೋಗುವಾಗ ಕೆಲವು ದಿನಗಳ ಹಿಂದೆ ಅವರು ಶಾಲೆಗೆ ತೆರಳುತ್ತಿದ್ದಾಗ, ಒಬ್ಬ ಅಪರಿಚಿತ ವ್ಯಕ್ತಿ ಆಟೋ ರಿಕ್ಷಾದಲ್ಲಿ ಹಿಂಬಾಲಿಸಿ ಕಿರುಕುಳ ನೀಡಿದ್ದಾನೆ ಎಂದು ಓರ್ವ ಬಾಲಕಿಯ ತಂದೆ ದೂರು ನೀಡಿದ್ದಾರೆ. ಈ ಕಿರುಕುಳ ಮುಂದುವರಿದಿದ್ದು ಅ.8ರಂದು ಬೆಳಗ್ಗೆ ಅದೇ ವ್ಯಕ್ತಿ ಮತ್ತೆ ಆಟೋರಿಕ್ಷಾದಲ್ಲಿ ಬಂದು ಇಬ್ಬರು ಬಾಲಕಿಯರಿಗೆ ಕಿರುಕುಳ

ಶಾಲಾ ಬಾಲಕಿಯರಿಗೆ ಕಿರುಕುಳ ನೀಡಿದ ಆಟೋ ಚಾಲಕನ ವಿರುದ್ಧ ಕೇಸ್‌ Read More »

ಎಂಟು ವರ್ಷದ ಹಿಂದೆ ಕಾಣೆಯಾದ ವಿದ್ಯಾರ್ಥಿಯ ಪತ್ತೆಗೆ ಮನವಿ

ಉಳ್ಳಾಲದ ಕಾಲೇಜಿನಿಂದ ನಾಪತ್ತೆಯಾದ ವಿದ್ಯಾರ್ಥಿ ಮಂಗಳೂರು: ಸುಮಾರು ಎಂಟು ವರ್ಷದ ಹಿಂದೆ ಕಾಣೆಯಾಗಿರುವ ನಗರದ ಕಾಲೇಜೊಂದರ ವಿದ್ಯಾರ್ಥಿಯ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಿಂದ ಮನವಿ ಮಾಡಿದ್ದಾರೆ. 18-04-2018ರಂದು ಉಳ್ಳಾಲ ತಾಲೂಕಿನ ಕೈರಂಗಳ ಗ್ರಾಮದ ಪಿ.ಎ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಶರೀಫ್‌ ಅವರು ಕೊಣಾಜೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರಕಾರ, ಅವರ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿ ಕಾಸರಗೋಡು ಪಚ್ಚಕಾಡ್‌ನ ಸಲೀಂ ಕೆ.ಎಂ ಎಂಬವರ ಪುತ್ರ ಮೊಹಮ್ಮದ್ ಶಾಮೀಲ್ (21) 17-04-2018ರಂದು ಬೆಳಗ್ಗೆ 11.34ಕ್ಕೆ ಕಾಲೇಜಿನ ಪಾರ್ಕಿಂಗ್

ಎಂಟು ವರ್ಷದ ಹಿಂದೆ ಕಾಣೆಯಾದ ವಿದ್ಯಾರ್ಥಿಯ ಪತ್ತೆಗೆ ಮನವಿ Read More »

ಮನೆಗೆ ನುಗ್ಗಿ ನಗ-ನಗದು ಕಳವು

ಪುತ್ತೂರು: ಬಲ್ನಾಡಿನ ಪಾಲೆಚ್ಚಾರ್ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣ ಮತ್ತು ನಗದು ಎಗರಿಸಿದ ಘಟನೆ ನಡೆದಿದ್ದು, ಈ ಸಂಬಂಧ ಮನೆಯಲ್ಲಿ ವಾಸ್ತವ್ಯ ಇರುವ ಉಮಾವತಿ ಅವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕುದ್ದುಪದವಿನ ಅಂಗನವಾಡಿಯಲ್ಲಿ ‌ಸಹಾಯಕಿಯಾಗಿ ಕೆಲಸ ಮಾಡುತ್ತಿರುವ ಉಮಾವತಿ ಅವರು ಅಲ್ಲೇ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅಕ್ಟೋಬರ್ 22 ರಂದು ತಮ್ಮ ಪಾಲೆಚ್ಚಾರ್ ಮನೆಗೆ ಹೋಗಿ ಬಂದಿದ್ದರು. ಆ ಬಳಿಕ ನ. 5 ರಂದು ಮತ್ತೆ ಪಾಲೆಚ್ಚಾರ್ ಮನೆಗೆ ಹೋದಾಗ ಕಳ್ಳತನವಾಗಿರುವುದು

ಮನೆಗೆ ನುಗ್ಗಿ ನಗ-ನಗದು ಕಳವು Read More »

ಜಾನುವಾರು ಅಕ್ರಮ ಸಾಗಾಟ ಪ್ರಕರಣ : ಜಪ್ತಿ ಮಾಡಿದ ಮನೆ ವಾಪಸು ನೀಡಲು ಆದೇಶ

ಕರು ಮಾರಾಟ ಮಾಡಿದವರ ಮನೆ ಜಪ್ತಿ ಮಾಡಿದ್ದು ಕಾನೂನು ವ್ಯಾಪ್ತಿ ಮೀರಿದ ಕ್ರಮ ಎಂದ ಪುತ್ತೂರು ಎಸಿ ಬೆಳ್ತಂಗಡಿ : ದನ ಮಾರಾಟ ಮಾಡಿದ ಕಾರಣಕ್ಕೆ ಪಟ್ರಮೆ ಗ್ರಾಮದ ಪಟ್ಟೂರಿನಲ್ಲಿ ಮನೆ ಜಪ್ತಿ ಮಾಡಿದ ಪ್ರಕರಣದಲ್ಲಿ ಧರ್ಮಸ್ಥಳ ಪೊಲೀಸರು ಕಾನೂನು ವ್ಯಾಪ್ತಿಯನ್ನು ಮೀರಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಜೊಹರಾ ಸಾರಮ್ಮ ಅವರ ವಾಸದ ಮನೆಯನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಪುತ್ತೂರು ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಅಕ್ರಮವಾಗಿ ಕಾರಿನಲ್ಲಿ ದನ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಧರ್ಮಸ್ಥಳ

ಜಾನುವಾರು ಅಕ್ರಮ ಸಾಗಾಟ ಪ್ರಕರಣ : ಜಪ್ತಿ ಮಾಡಿದ ಮನೆ ವಾಪಸು ನೀಡಲು ಆದೇಶ Read More »

ವಂಚಕ ರೋಷನ್‌ ಸಲ್ಡಾನನ 2.85 ಕೋ. ರೂ. ಮೌಲ್ಯದ ಆಸ್ತಿ ಜಪ್ತಿ

ಉದ್ಯಮಿಗಳಿಗೆ ಸಾಲ ಕೊಡಿಸುವುದಾಗಿ ನಂಬಿಸಿ 200 ಕೋ. ರೂ. ವಂಚಿಸಿದ್ದ ಆರೋಪಿ ಮಂಗಳೂರು: ಉದ್ಯಮಿಗಳಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಕೋಟಿಗಟ್ಟಲೆ ರೂಪಾಯಿ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಂಚಕ ರೋಷನ್ ಸಲ್ಡಾನನ 2.85 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಮಂಗಳೂರು ಉಪವಲಯ ಕಚೇರಿ ಅಧಿಕಾರಿಗಳು ರೋಷನ್ ಸಲ್ಡಾನನ ಮನೆ ಮತ್ತು ಬ್ಯಾಂಕ್ ಖಾತೆ ಸೇರಿ 2.85 ಕೋಟಿ ರೂ. ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿದ್ದಾರೆ. ರೋಷನ್ ಸಲ್ಡಾನ ಸಾಲ

ವಂಚಕ ರೋಷನ್‌ ಸಲ್ಡಾನನ 2.85 ಕೋ. ರೂ. ಮೌಲ್ಯದ ಆಸ್ತಿ ಜಪ್ತಿ Read More »

ಅಲ್‌ಖೈದಾ ಜಿಹಾದಿಗಳಿಂದ ಐವರು ಭಾರತೀಯರ ಅಪಹರಣ

ಹಿಂಸಾತ್ರಸ್ತ ಮಾಲಿಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಪ್ರಜೆಗಳು ಮಾಲಿ : ಅಶಾಂತಿ ಮತ್ತು ಜಿಹಾದಿ ಹಿಂಸಾಚಾರದಿಂದ ತತ್ತರಿಸಿರುವ ಪಶ್ಚಿಮ ಆಫ್ರಿಕಾದ ದೇಶವಾದ ಮಾಲಿಯಲ್ಲಿ ಅಲ್‌ ಖೈದಾ ಜಿಹಾದಿಗಳು ಐವರು ಭಾರತೀಯ ಪ್ರಜೆಗಳನ್ನು ಅಪಹರಿಸಿದ್ದಾರೆ ಎಂದು ಅವರ ಕಂಪನಿ ಮತ್ತು ಭದ್ರತಾ ಮೂಲಗಳು ತಿಳಿಸಿವೆ. ಪಶ್ಚಿಮ ಮಾಲಿಯ ಕೊಬ್ರಿ ಬಳಿ ಗುರುವಾರ ಬಂದೂಕುಧಾರಿಗಳು ಕಾರ್ಮಿಕರನ್ನು ಅಪಹರಿಸಿದ್ದಾರೆ. ವಿದ್ಯುದೀಕರಣ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ಐವರು ಭಾರತೀಯ ಪ್ರಜೆಗಳ ಅಪಹರಣವನ್ನು ನಾವು ದೃಢಪಡಿಸುತ್ತೇವೆ ಎಂದು

ಅಲ್‌ಖೈದಾ ಜಿಹಾದಿಗಳಿಂದ ಐವರು ಭಾರತೀಯರ ಅಪಹರಣ Read More »

ನ್ಯಾಯಾಲಯಕ್ಕೆ ನಕಲಿ ದಾಖಲೆಗಳನ್ನು ನೀಡಿದಾತ ಸೆರೆ

ಪುತ್ತೂರು: ಆರೋಪಿಯೊಬ್ಬನಿಗೆ ಜಾಮೀನು ನೀಡಲು ನಕಲಿ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ತಾಲೂಕಿನ ಪಡುವನ್ನೂರು ನಿವಾಸಿ ಅಬ್ದುಲ್ ಹಾಶೀಮ್ (34) ಬಂಧಿತ ಆರೋಪಿ. ಆರೋಪಿಯು ಪುತ್ತೂರು ನಿವಾಸಿಯೊಬ್ಬರಿಗೆ ಸೇರಿದ ಆರ್‌ಟಿಸಿ (ಹಕ್ಕುಗಳು, ಬಾಡಿಗೆ ಮತ್ತು ಬೆಳೆಗಳ ದಾಖಲೆ) ದಾಖಲೆಯನ್ನು ತನ್ನದು ಎಂದು ನಂಬಿಸಿ, ಮತ್ತೊಬ್ಬ ಆರೋಪಿಗೆ ಜಾಮೀನು ನೀಡಲು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನೀಡಿ ಆರೋಪಿಗೆ ಜಾಮೀನು ನೀಡುವಂತೆ ಮಾಡಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ವಂಚನೆ

ನ್ಯಾಯಾಲಯಕ್ಕೆ ನಕಲಿ ದಾಖಲೆಗಳನ್ನು ನೀಡಿದಾತ ಸೆರೆ Read More »

ಯುವ ಕಂಬಳ ಸಂಘಟಕ ಅಭಿಷೇಕ್‌ ಆಳ್ವ ಶವ ಪಡುಬಿದ್ರೆ ನದಿ ಕಿನಾರೆಯಲ್ಲಿ ಪತ್ತೆ

ಬುಧವಾರ ರಾತ್ರಿಯಿಂದ ನಾಪತ್ತೆಯಾಗಿದ್ದ ಅಭಿಷೇಕ್‌ ಆಳ್ವ ಉಡುಪಿ: ಕಂಬಳ ಸಂಘಟಕ ವಾಮಂಜೂರು ತಿರುವೈಲುಗುತ್ತು ನವೀನ್‌ಚಂದ್ರ ಆಳ್ವ ಅವರ ಪುತ್ರ ಉದ್ಯಮಿ ಅಭಿಷೇಕ್‌ ಆಳ್ವ (29) ಅವರ ಮೃತದೇಹ ಶುಕ್ರವಾರ ಮುಂಜಾನೆ ಕಾಪು ತಾಲೂಕಿನ ಹೆಜಮಾಡಿ ಸಮೀಪ ಶಾಂಭ ವಿ ನದಿ ಕಿನಾರೆಯಲ್ಲಿ ಕಂಡುಬಂದಿದೆ. ಅವರು ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. ತಂದೆಯಂತೇ ಅಭಿಷೇಕ್‌ ಆಳ್ವ ಕೂಡ ಕಂಬಳ ಪ್ರೇಮಿಯಾಗಿದ್ದು, ಜೊತೆಗೆ ತಂದೆಯ ಉದ್ಯಮವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದರು. ವಾಮಂಜೂರು ತಿರುವೈಲು ಕಂಬಳ ಬಹಳ ಪ್ರಸಿದ್ಧವಾಗಿದ್ದು, ಇದನ್ನು ಸಂಘಟಿಸಲು ಅಭಿಷೇಕ್‌

ಯುವ ಕಂಬಳ ಸಂಘಟಕ ಅಭಿಷೇಕ್‌ ಆಳ್ವ ಶವ ಪಡುಬಿದ್ರೆ ನದಿ ಕಿನಾರೆಯಲ್ಲಿ ಪತ್ತೆ Read More »

error: Content is protected !!
Scroll to Top