ಅಪರಾಧ

ಭಾರತವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದ ಶೇಖ್‌ ಹಸೀನಾ ಮರಣದಂಡನೆ ತೀರ್ಪು

ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದ ಮಾಜಿ ಪ್ರಧಾನಿಯನ್ನು ಗಡಿಪಾರು ಮಾಡಲಾಗುತ್ತದೆಯೇ? ನವದೆಹಲಿ : ಬಾಂಗ್ಲಾದೇಶದ ದೇಶಭ್ರಷ್ಟ ಮಾಜಿ ಪ್ರಧಾನಮಂತ್ರಿ ಶೇಖ್ ಹಸೀನಾ ಅವರಿಗೆ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪ ಹೊರಿಸಿ ಬಾಂಗ್ಲಾದ ನ್ಯಾಯಾಲಯ ಮರಣದಂಡನೆ ವಿಧಿಸಿದ ತೀರ್ಪು ಭಾರತವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಕಳೆದ ವರ್ಷ ಜುಲೈ-ಆಗಸ್ಟ್ ತಿಂಗಳಲ್ಲಿ ನಡೆದ ವಿದ್ಯಾರ್ಥಿ ಹೋರಾಟದ ಸಂದರ್ಭದಲ್ಲಿ ನಡೆದ ಹಿಂಸಾಚಾರ ಮತ್ತು ನರಮೇಧಕ್ಕೆ ಸಂಬಂಧಿಸಿದಂತೆ ಢಾಕಾದ ಅಂತಾರಾಷ್ಟ್ರೀಯ ಅಪರಾಧಗಳ ಟ್ರಿಬ್ಯೂನಲ್‌ ಈ ಐತಿಹಾಸಿಕ ತೀರ್ಪನ್ನು ನೀಡಿದೆ. ಪ್ರಸ್ತುತ ಶೇಖ್‌ ಹಸೀನಾ ಭಾರತದಲ್ಲಿ […]

ಭಾರತವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದ ಶೇಖ್‌ ಹಸೀನಾ ಮರಣದಂಡನೆ ತೀರ್ಪು Read More »

ನ.28ರಂದು ಕಡಬದಲ್ಲಿ ಲೋಕಾಯುಕ್ತ ಜನಸಂಪರ್ಕ ಸಭೆ

ಕಡಬ: ಲೋಕಾಯುಕ್ತ ಜನಸಂಪರ್ಕ ಸಭೆ ನವೆಂಬರ್ 28ರಂದು ಬೆಳಿಗ್ಗೆ 11 ಗಂಟೆಯಿಂದ ಕಡಬ ತಾಲೂಕು ಕಚೇರಿಯಲ್ಲಿ ನಡೆಯಲಿದೆ. ಮಂಗಳೂರು ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕರು, ಪೊಲೀಸ್ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರು ನವೆಂಬರ್ 28ರಂದು ರಂದು ಕಡಬ ತಾಲೂಕು ಕಚೇರಿಗೆ ಭೇಟಿ ನೀಡಿ, ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ದೂರು ಅರ್ಜಿಯ ನಮೂನೆಗಳನ್ನು ವಿತರಿಸಿ, ಭರ್ತಿ ಮಾಡಿ, ಅಫಿದಾವಿತ್ ಮಾಡಿಸಿದ ದೂರು ಅರ್ಜಿಗಳನ್ನು ಸ್ವೀಕರಿಸಲಾಗುವುದು. ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಸರಕಾರಿ

ನ.28ರಂದು ಕಡಬದಲ್ಲಿ ಲೋಕಾಯುಕ್ತ ಜನಸಂಪರ್ಕ ಸಭೆ Read More »

ಜಾನುವಾರು ಅಕ್ರಮ ಸಾಗಾಟ : ಮೂವರು ಆರೋಪಿಗಳು ಸೆರೆ

ಮಂಗಳೂರು: ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮೂಡಬಿದಿರೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಅದ್ಯಪಾಡಿ ಅಲಿಯಾಸ್‌ ಮೊಹಮ್ಮದ್ ಮನ್ಸೂರ್ ವಿರುದ್ಧ ಮಾತ್ರ ಈಗಾಗಲೇ 29ಕ್ಕೂ ಹೆಚ್ಚು ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದು, ಇದು 30ನೇ ಪ್ರಕರಣವಾಗಿದೆ. ಮೂಡಬಿದಿರೆ ತಾಲೂಕು ಹೊಸ್ಮಾರು – ನೆಲ್ಲಿಕಾರು ರಸ್ತೆಯಲ್ಲಿ ಟಾಟಾ ಎಸಿ ಕಂಟೈನರ್ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತುತು. ತಕ್ಷಣ ದಾಳಿ ನಡೆಸಿ ಆರೋಪಿಗಳಾದ ಮನ್ಸೂರ್ ಅದ್ಯಪಾಡಿ @

ಜಾನುವಾರು ಅಕ್ರಮ ಸಾಗಾಟ : ಮೂವರು ಆರೋಪಿಗಳು ಸೆರೆ Read More »

ಟೆಕ್ಕಿ ಮಹಿಳೆಯನ್ನೇ ಡಿಜಿಟಲ್‌ ಅರೆಸ್ಟ್‌ ಖೆಡ್ಡಾಕ್ಕೆ ಕೆಡವಿ 31.83 ಕೋ.ರೂ. ದೋಚಿದ ಸೈಬರ್‌ ಖದೀಮರು

ರಾಜ್ಯದ ಅತಿದೊಡ್ಡ ಸೈಬರ್‌ ವಂಚನೆಗೆ ಬಲಿಪಶುವಾದ ವಿದ್ಯಾವಂತ ಮಹಿಳೆ ಬೆಂಗಳೂರು : ಡಿಜಿಟಲ್ ಅರೆಸ್ಟ್ ವಂಚನೆಗೆ ಒಳಗಾಗಿ ಬೆಂಗಳೂರಿನ ಮಹಿಳಾ ಟೆಕ್ಕಿಯೊಬ್ಬರು ಬರೋಬ್ಬರಿ 31.83 ಕೋಟಿ ರೂ. ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಇದು ಕರ್ನಾಟಕದಲ್ಲೇ ಡಿಜಿಟಲ್ ಅರೆಸ್ಟ್ ಪ್ರಕರಣಗಳಲ್ಲಿ ವ್ಯಕ್ತಿಯೊಬ್ಬರು ಕಳೆದುಕೊಂಡ ಗರಿಷ್ಠ ಮೊತ್ತ ಎಂಬುದಾಗಿ ಪೊಲೀಸ್ ಮೂಲಗಳು ಹೇಳಿವೆ. ಇಂದಿರಾನಗರದ ನಿವಾಸಿ 57 ವರ್ಷ ವಯಸ್ಸಿನ ಮಹಿಳಾ ಟೆಕ್ಕಿಯನ್ನು ಸೈಬರ್ ಪಾತಕಿಗಳು ಆರು ತಿಂಗಳಿಗೂ ಹೆಚ್ಚು ಕಾಲ ನಿರಂತರ ಡಿಜಿಟಲ್‌ ಅರೆಟ್ಸ್‌ನಲ್ಲಿರಿಸಿ ಹಣ ದೋಚಿ

ಟೆಕ್ಕಿ ಮಹಿಳೆಯನ್ನೇ ಡಿಜಿಟಲ್‌ ಅರೆಸ್ಟ್‌ ಖೆಡ್ಡಾಕ್ಕೆ ಕೆಡವಿ 31.83 ಕೋ.ರೂ. ದೋಚಿದ ಸೈಬರ್‌ ಖದೀಮರು Read More »

ಬಂಟ್ವಾಳ : ಅಕ್ರಮ ಕಸಾಯಿಖಾನೆಗೆ ದಾಳಿ, ಓರ್ವ ಆರೋಪಿ ಬಂಧನ

ಮನೆಯ ಶೆಡ್‌ನ್ನು ಕಸಾಯಿಖಾನೆಯಾಗಿ ಪರಿವರ್ತಿಸಿ ಜಾನುವಾರು ವಧೆ ಬಂಟ್ವಾಳ : ಇಲ್ಲಿನ ಅರಳ ಗ್ರಾಮದಲ್ಲಿ ಕಾರ್ಯಾಚರಿಸುತ್ತಿದ್ದ ಅಕ್ರಮ ಕಸಾಯಿಖಾನೆಗೆ ಪೊಲೀಸರು ಭಾನುವಾರ ದಾಳಿ ಮಾಡಿ ನಾಲ್ಕು ಜಾನುವಾರುಗಳನ್ನು ರಕ್ಷಿಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಅರಳ ಗ್ರಾಮದ ನಿವಾಸಿ ಮಯ್ಯದ್ದಿ (57) ಬಂಧಿತ ಆರೋಪಿ. ಇತರ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಮನೆಯ ಆವರಣದಲ್ಲಿರುವ ಶೆಡ್ ಬಳಿ ಜಾನುವಾರುಗಳನ್ನು ವಧೆ ಮಾಡಿ ಮಾಂಸ ಮಾಡುತ್ತಿರುವ ಬಗ್ಗೆ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ.

ಬಂಟ್ವಾಳ : ಅಕ್ರಮ ಕಸಾಯಿಖಾನೆಗೆ ದಾಳಿ, ಓರ್ವ ಆರೋಪಿ ಬಂಧನ Read More »

ಕಡಬ: ಮಹಿಳೆಗೆ ಕಿರುಕುಳ ನೀಡಿದ ಆರೋಪಿ ಬಂಧನ

ಕಡಬ: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ವ್ಯಕ್ತಿಯನ್ನು ಕಡಬ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಡಬ ನಿವಾಸಿ ಉಮೇಶ್ ಗೌಡ ಬಂಧಿತ ಆರೋಪಿ. ನ.13ರಂದು ರಾತ್ರಿ ಸಂತ್ರಸ್ತ ಮಹಿಳೆ ಮನೆಯ ಹೊರ ಭಾಗದ ಕೊಟ್ಟಿಗೆಯಲ್ಲಿ ನಿದ್ರಿಸುತ್ತಿದ್ದ ವೇಳೆ ಆರೋಪಿ ಅಲ್ಲಿಗೆ ಅಕ್ರಮವಾಗಿ ಪ್ರವೇಶಿಸಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ ಈ ವೇಳೆ ಸಂತ್ರಸ್ತೆ ಸಹಾಯಕ್ಕಾಗಿ ಬೊಬ್ಬೆ ಹೊಡೆದಿದ್ದು, ಮನೆಯೊಳಗಿದ್ದ ಆಕೆಯ ಪತಿ, ಮಕ್ಕಳು ಬಂದು ಆರೋಪಿಯನ್ನು ಹಿಡಿಯಲು ಯತ್ನಿಸಿದಾಗ ಆರೋಪಿ ಹಲ್ಲೆ

ಕಡಬ: ಮಹಿಳೆಗೆ ಕಿರುಕುಳ ನೀಡಿದ ಆರೋಪಿ ಬಂಧನ Read More »

ಪಾಕಿಸ್ತಾನದಲ್ಲಿ ಜಾಫರ್‌ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಮತ್ತೆ ದಾಳಿ : ಹಲವು ಸೈನಿಕರ ಸಾವು

ಬಾಂಬ್‌ ಸ್ಫೋಟಿಸಿ ರೈಲಿನ ಹಳಿತಪ್ಪಿಸಿದ ಬಂಡುಕೋರರು ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಕ್ವೆಟ್ಟಾದಿಂದ ಪೇಶಾವರಕ್ಕೆ ಹೋಗುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ಮೇಲೆ ಮತ್ತೆ ದಾಳಿ ನಡೆದಿದೆ. ಸಿಬಿ ಜಿಲ್ಲೆಯ ಬಳಿಯ ನಾಸಿರಾಬಾದ್ ಪ್ರದೇಶದಲ್ಲಿ ಜಾಫರ್ ಎಕ್ಸ್‌ಪ್ರೆಸ್ ಮೇಲೆ ಈ ದಾಳಿ ನಡೆಸಲಾಗಿದೆ. ಈ ಬಾರಿ ಬಾಂಬ್‌ ಸ್ಫೋಟದಲ್ಲಿ ಜಾಫರ್ ಎಕ್ಸ್‌ಪ್ರೆಸ್‌ನ ಹಲವಾರು ಬೋಗಿಗಳು ಹಳಿತಪ್ಪಿವೆ. ಬಲೂಚ್ ರಿಪಬ್ಲಿಕನ್ ಗಾರ್ಡ್‌ (ಬಿಆರ್‌ಜಿ) ಬಂಡುಕೋರರ ಗುಂಪು ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಈ ದಾಳಿಯಲ್ಲಿ ಹಲವಾರು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಅವರು

ಪಾಕಿಸ್ತಾನದಲ್ಲಿ ಜಾಫರ್‌ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಮತ್ತೆ ದಾಳಿ : ಹಲವು ಸೈನಿಕರ ಸಾವು Read More »

ಬೆಳಗಾವಿ ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವಿನ ಸಂಖ್ಯೆ 30ಕ್ಕೇರಿಕೆ

ಬ್ಯಾಕ್ಟೀರಿಯ ಇನ್‌ಫೆಕ್ಷನ್‌ನಿಂದ ಸಾಯುತ್ತಿರುವ ಪ್ರಾಣಿಗಳು ಬೆಳಗಾವಿ : ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಬಳಿಯಿರುವ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಮತ್ತೊಂದು ಕೃಷ್ಣಮೃಗ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ. ಆ ಮೂಲಕ ಕೃಷ್ಣಮೃಗಗಳ ಸಾವಿನ ಸಂಖ್ಯೆ 30ಕ್ಕೆ ಏರಿಕೆ ಆಗಿದೆ. ಬ್ಯಾಕ್ಟೀರಿಯಾ ಇನ್‌ಪೆಕ್ಷನ್‌ನಿಂದಲೇ ಕೃಷ್ಣಮೃಗಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ನವೆಂಬರ್ 13ರಂದು 8, ಶನಿವಾರ ಒಂದೇ ದಿನ 20, ತಡರಾತ್ರಿ ಒಂದು, ನಿನ್ನೆ ಸಂಜೆ ಗಂಡು ಕೃಷ್ಣಮೃಗ ಸಾವನ್ನಪ್ಪಿವೆ. ಆ ಮೂಲಕ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಈವರೆಗೆ 30 ಕೃಷ್ಣಮೃಗಗಳ ಸಾವಾಗಿದೆ.

ಬೆಳಗಾವಿ ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವಿನ ಸಂಖ್ಯೆ 30ಕ್ಕೇರಿಕೆ Read More »

ಡಾಕ್ಟರ್‌ಗಳ ವೈಟ್‌ ಕಾಲರ್‌ ಉಗ್ರ ಜಾಲಕ್ಕೆ ಹರಿದು ಬಂದಿದೆ ಅಪಾರ ಹಣ

ಕಾರು ಸ್ಫೋಟಿಸಿಕೊಂಡು ಸತ್ತಿರುವ ಡಾ.ಉಮರ್‌ ನಬಿಯ ಖಾತೆಯಲ್ಲಿ ಲಕ್ಷಾಂತರ ರೂ. ವ್ಯವಹಾರ ಪತ್ತೆ ನವದೆಹಲಿ: ಇತ್ತೀಚೆಗೆ ಪೊಲೀಸರು ಬಯಲಿಗೆಳೆದಿರುವ ಡಾಕ್ಟರ್‌ಗಳು ಒಳಗೊಂಡಿರುವ ವೈಟ್‌ ಕಾಲರ್‌ ಉಗ್ರ ಜಾಲಕ್ಕೆ ಅಪಾರ ಪ್ರಮಾಣದಲ್ಲಿ ಹಣ ಹರಿದು ಬಂದಿರುವುದು ತನಿಖೆಯಿಂದ ಬಯಲಾಗಿದೆ. ದೆಹಲಿ ಕೆಂಪುಕೋಟೆ ಬಳಿ ಕಾರು ಸ್ಫೋಟಿಸಿಕೊಂಡು ಸತ್ತಿರುವ ಡಾ.ಉಮರ್‌ ನಬಿಯ ಒಂದು ಖಾತೆಗೆ ಸುಮಾರು 20 ಲ.ರೂ. ವರ್ಗಾಯಿಸಿದ್ದನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ಇತರ ವೈಟ್‌ ಕಾಲರ್‌ ಉಗ್ರರ ಹಣಕಾಸು ವಹಿವಾಟುಗಳ ಕುರಿತು ತೀವ್ರ ತನಿಖೆ ನಡೆಯುತ್ತಿದೆ.

ಡಾಕ್ಟರ್‌ಗಳ ವೈಟ್‌ ಕಾಲರ್‌ ಉಗ್ರ ಜಾಲಕ್ಕೆ ಹರಿದು ಬಂದಿದೆ ಅಪಾರ ಹಣ Read More »

error: Content is protected !!
Scroll to Top