ಅಪರಾಧ

ಸಿಬಿಐಯವರು ಎಂದು ಹೇಳಿ ಮಹಿಳೆ ಖಾತೆಯಿಂದ 24 ಲ.ರೂ. ಲಪಟಾಯಿಸಿದ ವಂಚಕರು

ಪೊಲೀಸ್ ಸಮವಸ್ತ್ರ ಧರಿಸಿ ವೀಡಿಯೊ ಕಾಲ್‌ ಮಾಡಿದ್ದ ಆರೋಪಿ ಕಾರ್ಕಳ : ಸಿಬಿಐ ಅಧಿಕಾರಿ ಹೆಸರಿನಲ್ಲಿ ಆನ್‌ಲೈನ್ ಮುಖಾಂತರ ಮಹಿಳೆಗೆ 24 ಲಕ್ಷ ರೂ. ವಂಚಿಸಿದ ಘಟನೆ ಜ. 7ರಂದು ಕಾರ್ಕಳದಲ್ಲಿ ಸಂಭವಿಸಿದೆ. ಪ್ರೀಮ ಶರಿಲ್ ಡಿಸೋಜ ವಂಚನೆಗೊಳಗಾದವರು. ಇವರ ಮೊಬೈಲ್‌ಗೆ ಜ. 7ರಂದು ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ ತಾನು ದಿಲ್ಲಿ ಟೆಲಿಕಾಂ ಇಲಾಖೆಯಿಂದ ಕಾಲ್ ಮಾಡುತ್ತಿದ್ದು ನಿಮ್ಮ ಆಧಾರ್ ನಂಬರ್‌ನಿಂದ ಉತ್ತರ ಪ್ರದೇಶದಲ್ಲಿ ಬೇರೆ ಸಿಮ್ ಖರೀದಿಸಿ ಬೇರೆ ಬೇರೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ […]

ಸಿಬಿಐಯವರು ಎಂದು ಹೇಳಿ ಮಹಿಳೆ ಖಾತೆಯಿಂದ 24 ಲ.ರೂ. ಲಪಟಾಯಿಸಿದ ವಂಚಕರು Read More »

ಶರಣಾಗುವ ನಕ್ಸಲರಿಗೆ ಸಿಗಲಿದೆ ಸರಕಾರದ ಭರ್ಜರಿ ಪ್ಯಾಕೇಜ್‌

ನಕ್ಸಲರ ಪುನರ್‌ವಸತಿಗಾಗಿ ಲಕ್ಷಗಟ್ಟಲೆ ವ್ಯಯಿಸಲಿದೆ ಸರಕಾರ ಬೆಂಗಳೂರು: ಆರು ನಕ್ಸಲರು ಇಂದು ಶಸ್ತ್ರತ್ಯಾಗ ಮಾಡಿ ಶರಣಾಗುವುದು ಬಹುತೇಕ ಖಚಿತವಾಗಿದ್ದು, ಶರಣಾಗತಿಗಾಗಿ ಚಿಕ್ಕಮಗಳೂರು ಪೊಲೀಸರು ಮತ್ತು ಜಿಲ್ಲಾಡಳಿತ ತಯಾರಿ ಮಾಡಿಕೊಂಡಿದೆ. ಎಲ್ಲವೂ ಯೋಜನೆ ಪ್ರಕಾರ ನಡೆದು ನಕ್ಸಲರು ಶರಣಾದರೆ ಅದು ರಾಜ್ಯದ ನಕ್ಸಲ್‌ ನಿಗ್ರಹ ಹೋರಾಟದ ಇತಿಹಾದಲ್ಲೇ ಒಂದು ಮೈಲುಗಲ್ಲು ಆಗಲಿದೆ. ಶರಣಾಗುವ ನಕ್ಸಲರಿಗೆ ಸರಕಾರ ಏನೆಲ್ಲ ಸೌಲಭ್ಯ ಕೊಡಲಿದೆ ಎಂಬ ಕುತೂಹಲ ಇದೆ. ಶರಣಾಗಲು ಬಯಸಿರುವ ನಕ್ಸಲರು ಈಗಾಗಲೇ ತಮ್ಮ ಬೇಡಿಕೆಗಳನ್ನು ಸರಕಾರದ ಮುಂದೆ ಇಟ್ಟಿದ್ದಾರೆ. ಸರಕಾರ

ಶರಣಾಗುವ ನಕ್ಸಲರಿಗೆ ಸಿಗಲಿದೆ ಸರಕಾರದ ಭರ್ಜರಿ ಪ್ಯಾಕೇಜ್‌ Read More »

ಅಶ್ಲೀಲವಾಗಿ ವರ್ತಿಸಿದ ಕಾಮುಕ ಬಶೀರ್ | ಆರೋಪಿ ಬಶೀರ್ ಅರೆಸ್ಟ್

ಪುತ್ತೂರು :  ಅಂಗನವಾಡಿಗೆ ಮಗುವನ್ನು ಬಿಟ್ಟು ಮನೆಗೆ ಬರುತ್ತಿದ್ದ ವೇಳೆ ಮಹಿಳೆಯೊಂದಿಗೆ ಕಾಮುಕ ವ್ಯಕ್ತಿಯೋರ್ವ ಆಶ್ಲೀಲವಾಗಿ ವರ್ತಿಸಿದ ಘಟನೆ ಪುತ್ತೂರಿನ ಕುಂಜುರುಪಂಜದಲ್ಲಿ ನಡೆದಿದೆ. ಅಸಭ್ಯ ವರ್ತನೆ ತೋರಿದ ವ್ಯಕ್ತಿ ಬಶೀರ್‍ ಎಂದು ಪತ್ತೆ ಹಚ್ಚಲಾಗಿದೆ. ಕಾಮುಕ ಬಶೀರ್  ಮಹಿಳೆಯನ್ನು ತಾಗಿಕೊಂಡು ಹೋಗಿದ್ದು, ನಂತರ ಆಕೆಯನ್ನು ಮನೆ ತನಕ ಹಿಂಬಾಲಿಸಿದ್ದಾನೆ. ಬಳಿಕ ಮನೆಯ ಎದುರು ಭಾಗದಲ್ಲೇ ಮರ್ಮಾಂಗವನ್ನು ತೋರಿಸಿ, ಆಶ್ಲೀಲವಾಗಿ ನಡೆದುಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಈ ವೇಳೆ ಮಹಿಳೆಯು ಗಾಬರಿಗೊಂಡು ಜೋರಾಗಿ ಬೊಬ್ಬೆ ಹಾಕಿದ್ದಾಳೆ. ಕಿರುಚಿದ ಶಬ್ದಕ್ಕೆ

ಅಶ್ಲೀಲವಾಗಿ ವರ್ತಿಸಿದ ಕಾಮುಕ ಬಶೀರ್ | ಆರೋಪಿ ಬಶೀರ್ ಅರೆಸ್ಟ್ Read More »

ಬೀಡಿ ಉದ್ಯಮಿ ಮನೆಯಲ್ಲಿ ದರೋಡೆ : ವದಂತಿಗಳದ್ದೇ ಕಾರುಬಾರು

ಸುಳಿವಿಗಾಗಿ ತಡಕಾಡುತ್ತಿರುವ ಪೊಲೀಸರು ವಿಟ್ಲ: ಇಲ್ಲಿಗೆ ಸಮೀಪದ ಬೋಳಂತೂರು ನಾರ್ಶದ ಬೀಡಿ ಉದ್ಯಮಿ ಸುಲೈಮಾನ್ ಹಾಜಿ ಅವರ ಮನೆಯಿಂದ ಸಿನಿಮೀಯ ರೀತಿಯಲ್ಲಿ ನಡೆದ ದರೋಡೆ ಪ್ರಕರಣದ ಸುಳಿವಿಗಾಗಿ ಪೊಲೀಸರು ಇನ್ನೂ ತಡಕಾಡುತ್ತಿದ್ದಾರೆ. ಬಾಲಿವುಡ್‌ನ ಸ್ಪೆಷಲ್‌ 26 ಸಿನೆಮಾ ಮಾದರಿಯಲ್ಲಿ ಕಳೆದ ಶುಕ್ರವಾರ ರಾತ್ರಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಸೋಗು ಹಾಕಿಕೊಂಡು ಬಂದ ಆರು ಮಂದಿ ಚಾಲಾಕಿ ದರೋಡೆಕೋರರು ಸುಮಾರು ಎರಡೂವರೆ ತಾಸು ಇಡೀ ಮನೆಯನ್ನು ಜಾಲಾಡಿ ನಗದು ಹಣವನ್ನು ಮೂಟೆಕಟ್ಟಿ ಕಾರಿಗೆ ತುಂಬಿಸಿಕೊಂಡು ಹೋಗಿದ್ದಾರೆ. ಈ ದರೋಡೆ

ಬೀಡಿ ಉದ್ಯಮಿ ಮನೆಯಲ್ಲಿ ದರೋಡೆ : ವದಂತಿಗಳದ್ದೇ ಕಾರುಬಾರು Read More »

ದ್ವಿ ಚಕ್ರ ವಾಹನ – ರಿಕ್ಷಾ ಡಿಕ್ಕಿ

ವಿಟ್ಲ: ಸುಬ್ರಹ್ಮಣ್ಯ ಮಂಜೇಶ್ವರ ಹೆದ್ದಾರಿಯ ಪುಣಚದಲ್ಲಿ ರಿಕ್ಷಾವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಂದಕಕ್ಕೆ ಬಿದ್ದ ಘಟನೆ ಸೋಮವಾರ ನಡೆದಿದೆ. ಪುಣಚ ಪೇಟೆಯಿಂದ ಗರಡಿ ಕಡೆಗೆ ಹೋಗುತ್ತಿದ್ದ ದ್ವಿಚಕ್ರವಾಹನಕ್ಕೆ ಬುಳೇರಿಕಟ್ಟೆ ಕಡೆಯಿಂದ ಬಂದ ರಿಕ್ಷಾ ಗುದ್ದಿದೆ. ಗುದ್ದಿದ ಪರಿಣಾಮ ರಿಕ್ಷಾ ಚಾಲಕ ನಿಯಂತ್ರಣ ಕಳೆದುಕೊಂಡು ಬಲ ಬದಿಗೆ ಹೋಗಿ ಚರಂಡಿಗೆ ಬಿದ್ದಿದೆ. ರಿಕ್ಷಾ ಹಾಗೂ ದ್ವಿಚಕ್ರವಾಹನ ಜಖಂಗೊಂಡಿದೆ. ಅಪಘಾತದ ತೀವ್ರತೆಗೆ ದ್ವಿಚಕ್ರವಾಹನದಿಂದ ಬಾಲಕ ರಸ್ತೆಗೆ ಎಸೆಯಲ್ಪಟ್ಟಿದ್ದು. ಕೆಲ ಕಾಲ ಆತಂಕ ಮೂಡಿಸಿತ್ತು. ರಿಕ್ಷಾ ಚಾಲಕ ಅತಿಯಾದ

ದ್ವಿ ಚಕ್ರ ವಾಹನ – ರಿಕ್ಷಾ ಡಿಕ್ಕಿ Read More »

ವಿಕ್ರಂ ಗೌಡ ಎನ್‌ಕೌಂಟರ್‌ನ ನ್ಯಾಯಾಂಗ ತನಿಖೆ, ಗೌರವಯುತವಾದ ಬದುಕಿಗೆ ವ್ಯವಸ್ಥೆ…

ಶರಣಾಗಲು ನಕ್ಸಲರು ಇಟ್ಟಿದ್ದಾರೆ ಬೇಡಿಕೆಗಳ ದೀರ್ಘ ಪಟ್ಟಿ ಬೆಂಗಳೂರು: ನಿರುದ್ಯೋಗಿಗಳಿಗೆ ಉದ್ಯೋಗ, ತಮ್ಮ ಮೇಲಿನ ಸುಳ್ಳು ಕೇಸ್​ಗಳನ್ನು ಖುಲಾಸೆಗೊಳಿಸುವುದು ಮತ್ತು ವಿಕ್ರಂ ಗೌಡ ಎನ್​​ಕೌಂಟರ್​​ ಪ್ರಕರಣವನ್ನು ನ್ಯಾಯಾಂಗ ತನಿಖೆ…ಹೀಗೆ ಶರಣಾಗಲು ಬಯಸಿರುವ ನಕ್ಸಲರು ಸರಕಾರದ ಮುಂದೆ ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಮುಖ್ಯವಾಹಿನಿಗೆ ಬರುವ ಪ್ರಕ್ರಿಯೆ ಘನತೆಯಿಂದ ನಡೆಯಬೇಕು. ನಮ್ಮ ಆತ್ಮಗೌರವ ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ಆಗುವ ಯಾವುದೇ ರೀತಿಯ ಒತ್ತಡ ಹೇರಬಾರದು. ಕೇಸ್‌ಗಳ ನೆಪದಲ್ಲಿ ವರ್ಷಗಟ್ಟಲೆ ಜೈಲಿನಲ್ಲಿ ಕೊಳೆಸಬಾರದು, ಸಮಾಜದಲ್ಲಿ ಗೌರವಯುತವಾದ ಜೀವನ ನಡೆಸಲು ವ್ಯವಸ್ಥೆ ಕಲ್ಪಿಸಬೇಕೆಂಬ

ವಿಕ್ರಂ ಗೌಡ ಎನ್‌ಕೌಂಟರ್‌ನ ನ್ಯಾಯಾಂಗ ತನಿಖೆ, ಗೌರವಯುತವಾದ ಬದುಕಿಗೆ ವ್ಯವಸ್ಥೆ… Read More »

ಬಸ್ ನಿಲ್ದಾಣದ ಶೌಚಾಲಯದಲ್ಲಿ ಮಹಿಳೆಯ ಫೋಟೋ ತೆಗೆದ ದುಷ್ಕರ್ಮಿ| ಆರೋಪಿ ವಿರುದ್ದ ದೂರು ದಾಖಲು

ಸುಳ್ಯ : ಇಲ್ಲಿಯ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಹಿಂಬದಿಯಲ್ಲಿದ್ದ ಮಹಿಳಾ ಶೌಚಾಲಯದಲ್ಲಿ ಮಹಿಳೆಯೊಬ್ಬರ ಅಪರಿಚಿತ ವ್ಯಕ್ತಿ ಫೋಟೋ ತೆಗೆದು ಪರಾರಿಯಾಗಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಶೌಚಾಲಯಕ್ಕೆ ಮಹಿಳೆ ಹೋಗಿದ್ದಾಗ ಹಿಂಬದಿಯಲ್ಲಿರುವ ಕಿಟಕಿಯ ಮೂಲಕ ಫೋಟೋ ತೆಗೆದಿರುವುದಾಗಿ ಮಹಿಳೆ ಆರೋಪಿಸಿದ್ದಾರೆ. ಶೌಚಾಲಯದ  ಕಿಟಕಿಯ ಗ್ಲಾಸ್‍ ಸರಿದಿದ್ದು, ಸರಿದ ಭಾಗದಿಂದ ಫೋಟೋವನ್ನು ಕ್ಲಿಕ್ಕಿಸಿದ್ದಾನೆ. ಈ ವೇಳೆ ಮಹಿಳೆ ಗಾಭಾರಿಗೊಂಡು ಜೋರಾಗಿ ಕಿರುಚಿಕೊಂಡಾಗ ಆತ ಪರಾರಿಯಾಗಿದ್ದಾನೆ ಎಂದು  ಮಹಿಳೆ ಸುಳ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ದೂರಿನನ್ವಯ ತನಿಖೆ ಪ್ರಾರಂಭಿಸಿದ್ದಾರೆ.

ಬಸ್ ನಿಲ್ದಾಣದ ಶೌಚಾಲಯದಲ್ಲಿ ಮಹಿಳೆಯ ಫೋಟೋ ತೆಗೆದ ದುಷ್ಕರ್ಮಿ| ಆರೋಪಿ ವಿರುದ್ದ ದೂರು ದಾಖಲು Read More »

ನಾಳೆ ಆರು ನಕ್ಸಲರಿಂದ ಶಸ್ತ್ರ ತ್ಯಾಗ?

ಮುಖ್ಯವಾಹಿನಿಗೆ ಬರಲಿಚ್ಚಿಸಿದ ಮುಂಡಗಾರು ಲತಾ ನೇತೃತ್ವದ ನಕ್ಸಲ್‌ ಟೀಮ್‌ ಬೆಂಗಳೂರು: ನಕ್ಸಲ್‌ ಮುಖಂಡ ವಿಕ್ರಂ ಗೌಡ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಬಳಿಕ ಎದೆಗುಂದಿರುವ ಕೆಲವು ನಕ್ಸಲರು ಶರಣಾಗಲು ಬಯಸಿದ್ದು, ನಾಳೆ ಶರಣಾಗತಿ ಪ್ರಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಜ.8ರಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠರ ಸಮ್ಮುಖದಲ್ಲಿ ಆರು ನಕ್ಸಲರು ಶಸ್ತ್ರತ್ಯಾಗ ಮಾಡಿ ಸಮಾಜದ ಮುಖ್ಯವಾಹಿನಿಗೆ ಸೇರಲಿದ್ದಾರೆ ಎನ್ನಲಾಗಿದೆ. ನಕ್ಸಲ್‌ ಶರಣಾಗತಿ ಪ್ಯಾಕೇಜ್‌ ಅಡಿಯಲ್ಲಿ ಸಕ್ರಿಯ ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಕ್ರಿಯೆ ನಡೆಯುತ್ತಿದ್ದು, ವಿಕ್ರಂ

ನಾಳೆ ಆರು ನಕ್ಸಲರಿಂದ ಶಸ್ತ್ರ ತ್ಯಾಗ? Read More »

ಇಬ್ಬರು ಮಕ್ಕಳನ್ನು ಸಾಯಿಸಿ ಸಾಫ್ಟ್‌ವೇರ್‌ ಇಂಜಿನಿಯರ್‌ ದಂಪತಿ ಆತ್ಮಹತ್ಯೆ

ಬೆಂಗಳೂರು: ಇಬ್ಬರು ಮಕ್ಕಳನ್ನು ಹತ್ಯೆ ಮಾಡಿ ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಸದಾಶಿವ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಅನೂಪ್‌ (38) ಮತ್ತು ರಾಖಿ(35) ಎಂಬ ದಂಪತಿ ಮಕ್ಕಳಾದ ಅನುಪ್ರಿಯಾ (5) ಮತ್ತು ಪ್ರಿಯಾಂಶ್ (2) ಅವರನ್ನು ಕೊಂದು ಬಳಿಕ ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಅನೂಪ್‌ ಉತ್ತರ ಪ್ರದೇಶ ಮೂಲದವರಾಗಿದ್ದು ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್‌ ಕನ್ಸಲ್ಟೆಂಟ್‌ ಆಗಿ ಕೆಲಸ ಮಾಡುತ್ತಿದ್ದರು. ಇಂದು ಬೆಳಗ್ಗೆ ಮನೆಗೆ ಕೆಲಸದವರು ಬಂದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ರಾತ್ರಿ ಇಬ್ಬರು

ಇಬ್ಬರು ಮಕ್ಕಳನ್ನು ಸಾಯಿಸಿ ಸಾಫ್ಟ್‌ವೇರ್‌ ಇಂಜಿನಿಯರ್‌ ದಂಪತಿ ಆತ್ಮಹತ್ಯೆ Read More »

ಸಿಲಿಂಡರ್‌ ಸ್ಪೋಟಿಸಿದ ಬಿರುಸಿಗೆ ಮನೆ ಗೋಡೆ ಛಿದ್ರ : ಇಬ್ಬರಿಗೆ ಗಾಯ

ಬೆಂಗಳೂರು: ಬೆಂಗಳೂರು ಸಮೀಪ ಆನೇಕಲ್ ತಾಲೂಕಿನ ಕಿತ್ತಾಗನಹಳ್ಳಿ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಸಿಲಿಂಡರ್ ಸ್ಫೋಟಗೊಂಡು ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಕೇರಳ ಮೂಲದ ಸುನೀಲ್ ಜೋಸೆಫ್ ಮತ್ತು ವಿಷ್ಣು ಜಯರಾಜ್ ಎಂಬವರು ಗಾಯಗೊಂಡಿದ್ದು, ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಪೋಟದ ತೀವ್ರತೆಗೆ ಮನೆ ಗೋಡೆಗಳು, ಕಿಟಕಿ, ಬಾಗಿಲು ಛಿದ್ರವಾಗಿವೆ. ಅಕ್ಕಪಕ್ಕದ ನಾಲ್ಕೈದು ಮನೆಗಳು, ಕೆಲವು ವಾಹನಗಳಿಗೂ ಹಾನಿಯಾಗಿದೆ. ಸೂರ್ಯಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂದು

ಸಿಲಿಂಡರ್‌ ಸ್ಪೋಟಿಸಿದ ಬಿರುಸಿಗೆ ಮನೆ ಗೋಡೆ ಛಿದ್ರ : ಇಬ್ಬರಿಗೆ ಗಾಯ Read More »

error: Content is protected !!
Scroll to Top