ಅಪರಾಧ

ಕೌಟುಂಬಿಕ ಜಗಳ : ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಮೂಡುಬಿದಿರೆ : ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಯುವಕನ ಮೃತದೇಹ ಬುಧವಾರ ಸಂಜೆ ನೆತ್ತೋಡಿ ಎಂಬಲ್ಲಿ ಪತ್ತೆಯಾಗಿದೆ. ಕಾರ್ಕಳ ತಾಲೂಕು ಮಿಯ್ಯಾರು ಗ್ರಾಮದ ಲತೀಶ ಪೂಜಾರಿ (42) ಆತ್ಮಹತ್ಯೆ ಮಾಡಿಕೊಂಡವರು. ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ವಿದೇಶದಲ್ಲಿದ್ದ ಲತೀಶ ಪೂಜಾರಿ ಇತ್ತೀಚೆಗಷ್ಟೇ ಊರಿಗೆ ಬಂದಿದ್ದರು. ಭಾನುವಾರ ಮೂಡುಬಿದಿರೆಯ ಹೊಸಂಗಡಿಯಲ್ಲಿರುವ ಹೆಂಡತಿ ಬಂದಿದ್ದರೆನ್ನಲಾಗಿದೆ. ಯಾವುದೋ ವಿಷಯಕ್ಕೆ ಜಗಳ ನಡೆದಿತ್ತೆನ್ನಲಾಗಿದ್ದು ಮಿಯ್ಯಾರಿನಲ್ಲಿರುವ ತನ್ನ ಅಣ್ಣನ ಮೊಬೈಲ್‌ಗೆ ಮೆಸೇಜ್ ಮಾಡಿ ಈ ಬಗ್ಗೆ ಹೇಳಿಕೊಂಡಿದ್ದರು. ಅಣ್ಣ ಸರಿಮಾಡುವ, ಆತುರದ ನಿರ್ಧಾರ ಬೇಡ ಎಂದು […]

ಕೌಟುಂಬಿಕ ಜಗಳ : ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ Read More »

ಕೆನಡಾದಲ್ಲಿ ಭಾರತೀಯ ಮಹಿಳೆಯ ಹತ್ಯೆ: ಆರೋಪಿಯ ಪತ್ತೆಗೆ ಬಲೆ ಬೀಸಿರುವ ಪೊಲೀಸರು

ಟೊರೊಂಟೊ: ಕೆನಡಾದಲ್ಲಿ ಭಾರತೀಯ ಮಹಿಳೆಯೊಬ್ಬರ ಹತ್ಯೆಯಾಗಿದ್ದು, ಶಂಕಿತ ಆರೋಪಿಯ ಗುರುತು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಆರೋಪಿಯನ್ನು ಅಬ್ದುಲ್ ಗಫೂರ್ (32) ಎಂದು ಗುರುತಿಸಲಾಗಿದೆ. ಹತ್ಯೆಯಾದ ‌ಮಹಿಳೆಯನ್ನು ಹಿಮಾಂಶಿ ಖುರಾನಾ (30) ಎಂದು ಗುರುತಿಸಲಾಗಿದೆ. ಆಕೆಯ ಪ್ರಿಯಕರನೇ ಈ ಹತ್ಯೆ ನಡೆಸಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ಆರೋಪಿಯ ಪತ್ತೆಗಾಗಿ ಹುಡುಕಾಟ ಆರಂಭಿಸಲಾಗಿದೆ. ಡಿ. 19 ರಂದು ಹಿಮಾಂಶಿ ನಾಪತ್ತೆ ಎಂಬುದಾಗಿ ಪೋಲೀಸ್ ಠಾಣೆಗೆ ಕರೆ ಬಂದಿದ್ದು, ಡಿ. 20 ರಂದು ಆಕೆಯ ಶವವನ್ನು ಅವರು ಕಾಣೆಯಾಗಿದ್ದಾರೆ ಎಂದು

ಕೆನಡಾದಲ್ಲಿ ಭಾರತೀಯ ಮಹಿಳೆಯ ಹತ್ಯೆ: ಆರೋಪಿಯ ಪತ್ತೆಗೆ ಬಲೆ ಬೀಸಿರುವ ಪೊಲೀಸರು Read More »

ಖತರ್‌ನಾಕ್‌ ಹನಿಟ್ರ್ಯಾಪ್‌ ಗ್ಯಾಂಗ್‌ ಬಂಧನ

ಆನ್‌ಲೈನ್‌ನಲ್ಲಿ ಬಲೆಗೆ ಬೀಳಿಸಿ ಸುಲಿಗೆ ಮಾಡುತ್ತಿದ್ದ ಗ್ಯಾಂಗ್‌ ಬೆಂಗಳೂರು : ಆನ್‌ಲೈನ್‌ನಲ್ಲಿ ಹನಿಟ್ರ್ಯಾಪ್‌ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ಗಾಂಗನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಮೋಹದ ಬಲೆಗೆ ಬೀಳಿಸಿ ಸುಲಿಗೆ ಮಾಡುತ್ತಿದ್ದ ಗ್ಯಾಂಗ್‌ನ ಇಬ್ಬರು ಯುವತಿಯರು ಸೇರಿ ಐವರನ್ನು ಆರ್‌ ಆರ್‌ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸುಮಲತಾ ಅಲಿಯಾಸ್ ಅಂಜಲಿ (28), ಹರ್ಷಿಣಿ ಅಲಿಯಾಸ್ ಸ್ವೀಟಿ (26) ಹಾಗೂ ಅವರ ಸಹಚರರಾದ ಜಗದೀಶ್ (35), ಮಂಜುನಾಥ್ (30) ಮತ್ತು ಲೋಕೇಶ್ (32) ಎಂದು ಗುರುತಿಸಲಾಗಿದೆ. ಸಾಫ್ಟ್‌ವೇರ್

ಖತರ್‌ನಾಕ್‌ ಹನಿಟ್ರ್ಯಾಪ್‌ ಗ್ಯಾಂಗ್‌ ಬಂಧನ Read More »

ಕೊಲೆ ಪ್ರಕರಣ : ಶಾಸಕ ಬೈರತಿ ಬಸವರಾಜ್‌ ವಿರುದ್ಧ ಲುಕ್‌ಔಟ್‌ ನೋಟಿಸ್‌ ಜಾರಿ

ಬಂಧನ ಭೀತಿಯಲ್ಲಿ ತಲೆಮರೆಸಿಕೊಂಡಿರುವ ಶಾಸಕ ಬೆಂಗಳೂರು: ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ಸಿಐಡಿ ಅಧಿಕಾರಿಗಳು ಲುಕ್‌ಔಟ್ ನೋಟಿಸ್ ಜಾರಿಮಾಡಿದ್ದಾರೆ. ಹೀಗಾಗಿ ಬೈರತಿಗೆ ಬಂಧನ ಭೀತಿ ಹೆಚ್ಚಾಗಿದ್ದು, ಯಾವುದೇ ಕ್ಷಣದಲ್ಲಿ ಅರೆಸ್ಟ್ ಮಾಡುವ ಸಾಧ್ಯತೆಯಿದೆ. ಕಳೆದ ಐದು ದಿನಗಳಿಂದ ಬೈರತಿ ಬಸವರಾಜ್ ನಾಪತ್ತೆಯಾಗಿದ್ದು, ಮಹಾರಾಷ್ಟ್ರ ತಮಿಳುನಾಡು, ಗೋವಾದಲ್ಲಿ ಮೂರು ವಿಶೇಷ ತಂಡಗಳು ಹುಡುಕಾಟ ನಡೆಸಿವೆ. ನಿರೀಕ್ಷಣಾ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ಬೈರತಿ ಬಸವರಾಜ್‌ಗೆ ಕೋರ್ಟ್

ಕೊಲೆ ಪ್ರಕರಣ : ಶಾಸಕ ಬೈರತಿ ಬಸವರಾಜ್‌ ವಿರುದ್ಧ ಲುಕ್‌ಔಟ್‌ ನೋಟಿಸ್‌ ಜಾರಿ Read More »

ಷೇರು ಮಾರ್ಕೆಟಿಂಗ್ ಹೂಡಿಕೆಯ ನೆಪದಲ್ಲಿ 85.68 ಲ.ರೂ. ಮೋಸ

ಮಂಗಳೂರು : ಷೇರು ಮಾರ್ಕೆಟಿಂಗ್ ಹೂಡಿಕೆಯ ನೆಪದಲ್ಲಿ ವ್ಯಕ್ತಿಯೊಬ್ಬರಿಗೆ ಆನ್‌ಲೈನ್ ಮೂಲಕ ಬರೋಬ್ಬರಿ 85,68,387 ರೂ. ವಂಚನೆ ಮಾಡಿರುವ ಪ್ರಕರಣವೊಂದು ಮಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು, ಈ ಕುರಿತು ಸೆನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ, ಪ್ರಸ್ತುತ ನಿರುದ್ಯೋಗಿಯಾಗಿರುವ ವ್ಯಕ್ತಿ ಮೋಸ ಹೋಗಿದ್ದಾರೆ. ಇನ್‌ಸ್ಟಾಗ್ರಾಂ ನೋಡುತ್ತಿರುವಾಗ ಷೇರು ಮಾರುಕಟ್ಟೆ ಆನ್‌ಲೈನ್ ಟ್ರೇಡಿಂಗ್ ಕ್ಲಾಸ್‌ಗೆ ಲಿಂಕ್ ಮೂಲಕ ಸೇರ್ಪಡೆಗೊಂಡೆ. ಅ.31ರಂದು ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ತನ್ನ ಮೊಬೈಲ್ ನಂಬರ್ ಸೇರ್ಪಡೆಯಾಗಿದೆ. ಬಳಿಕ ಗ್ರೂಪ್‌ನಲ್ಲಿದ್ದ ಕಾವ್ಯ ಎಂಬಾಕೆ ಅಸಿಸ್ಟೆಂಟ್ ಆಗಿ

ಷೇರು ಮಾರ್ಕೆಟಿಂಗ್ ಹೂಡಿಕೆಯ ನೆಪದಲ್ಲಿ 85.68 ಲ.ರೂ. ಮೋಸ Read More »

ಪತಿಯನ್ನು ಕೊಂದರೂ ಪತ್ನಿ ಅಪರಾಧಿಯಲ್ಲ!

ಕೊಲೆ ಪ್ರಕರಣದಲ್ಲಿ ಮಹಿಳೆಯನ್ನು ಖುಲಾಸೆಗೊಳಿಸಿದ ನ್ಯಾಯಾಲಯ ಮಂಗಳೂರು : ಪತಿಯನ್ನು ಪತ್ನಿಯೇ ಕೊಂದಿರುವುದು ಸಾಬೀತಾಗಿದ್ದರೂ ನ್ಯಾಯಾಲಯ ಪತ್ನಿಯನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ. ಹೀಗೊಂದು ಅಪರೂಪದ ತೀರ್ಪು ನೀಡಿರುವುದು ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ. ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದಲ್ಲಿ ನಡೆದ ಪತಿ ಹತ್ಯೆ ಪ್ರಕರಣದಲ್ಲಿ ಈ ಅಪರೂಪದ ನ್ಯಾಯಾಂಗ ನಿರ್ಣಯ ಹೊರಬಿದ್ದಿದೆ. ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮೋಹನ ಜೆ.ಎಸ್. ಅವರು, ಆರೋಪಿಯಾದ ಎಲಿಯಮ್ಮ ಎಂಬವರು ಗಂಡನನ್ನು ಕೊಂದಿರುವುದು ಸಾಬೀತಾದರೂ,

ಪತಿಯನ್ನು ಕೊಂದರೂ ಪತ್ನಿ ಅಪರಾಧಿಯಲ್ಲ! Read More »

ಅಪಘಾತವಾಗಿ ಬಿದ್ದಿದ್ದ ವ್ಯಕ್ತಿಯ ಮೊಬೈಲ್‌ ಮೂಲಕ 80 ಸಾವಿರ ರೂ. ಎಗರಿಸಿದ ಪಾಪಿಗಳು

ಸಹಾಯ ಮಾಡಲೆಂದು ಬಂದು ಹಣ ವರ್ಗಾಯಿಸಿ ಪರಾರಿಯಾಗಿದ್ದ ಇಬ್ಬರ ಸೆರೆ ಮೈಸೂರು: ಅಪಘಾತವಾಗಿ ಬಿದ್ದಿದ್ದ ವ್ಯಕ್ತಿಗೆ ಸಹಾಯ ಮಾಡುವ ನೆಪದಲ್ಲಿ ಬಂದು ಅವರ ಮೊಬೈಲ್‌ನ ಯುಪಿಐ ಬಳಸಿ 80 ಸಾವಿರ ರೂಪಾಯಿ ಎಗರಿಸಿದ ಅಮಾನವೀಯ ಘಟನೆ ಮೈಸೂರಿನಲ್ಲಿ ಸಂಭವಿಸಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ರಮೇಶ್ ಮತ್ತು ಮನು ಎಂದು ಗುರುತಿಸಲಾಗಿದೆ. ಮೈಸೂರು ತಾಲೂಕಿನ ಕಡಕೊಳದ ಬಳಿ ಡಿ.19ರಂದು ಗಣೇಶ್ ಎಂಬವರು ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿ ಮಧ್ಯರಾತ್ರಿ ಮನೆಗೆ ಬರುವಾಗ ಅಪಘಾತವಾಗಿತ್ತು. ಆಸ್ಪತ್ರೆಗೆ ಸೇರಿಸುವ

ಅಪಘಾತವಾಗಿ ಬಿದ್ದಿದ್ದ ವ್ಯಕ್ತಿಯ ಮೊಬೈಲ್‌ ಮೂಲಕ 80 ಸಾವಿರ ರೂ. ಎಗರಿಸಿದ ಪಾಪಿಗಳು Read More »

ರಾಜ್ಯವನ್ನು ಬೆಚ್ಚಿಬೀಳಿಸಿದ ಹುಬ್ಬಳ್ಳಿಯ ಮರ್ಯಾದಾ ಹತ್ಯೆ ಘಟನೆ

ತುಂಬು ಗರ್ಭಿಣಿ ಮಗಳನ್ನು ಗುದ್ದಲಿಯಿಂದ ಹೊಡೆದು ಕೊಂದ ತಂದೆ ಬೆಂಗಳೂರು : ಅನ್ಯ ಜಾತಿಯ ಯುವಕನನ್ನು ಮದುವೆಯಾದ ಮಗಳನ್ನು ತಂದೆಯೇ ಬರ್ಬರವಾಗಿ ಕೊಲೆ ಮಾಡಿರುವ ಮರ್ಯಾದಾ ಹತ್ಯೆ ಘಟನೆ ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ನಡೆದಿದ್ದು, ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಇನಾಂವೀರಾಪುರ ಗ್ರಾಮದ ಮಾನ್ಯಾ (19) ಹತ್ಯೆಯಾದ ಯುವತಿ. ಈಕೆ ಅದೇ ಗ್ರಾಮದ ವಿವೇಕಾನಂದ ಎಂಬವನನ್ನು ಪ್ರೀತಿಸಿ ಮದುವೆಯಾಗಿದ್ದಳು. ಯುವಕ ಅನ್ಯಜಾತಿಯವನು ಎಂಬ ಕಾರಣಕ್ಕೆ ಆಕೆಯ ತಂದೆ ಪ್ರಕಾಶಗೌಡ ಮನೆಗೆ ನುಗ್ಗಿ, ಮಗಳು 7 ತಿಂಗಳ ಗರ್ಭಿಣಿ

ರಾಜ್ಯವನ್ನು ಬೆಚ್ಚಿಬೀಳಿಸಿದ ಹುಬ್ಬಳ್ಳಿಯ ಮರ್ಯಾದಾ ಹತ್ಯೆ ಘಟನೆ Read More »

ಹಾವು ಕಡಿತದಿಂದ ಮಹಿಳೆ ಸಾವು

ಬೆಳ್ತಂಗಡಿ: ಶಿಶಿಲ ಗ್ರಾಮದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಹಿಳೆಯೊಬ್ಬರು ಹಾವಿನ ಕಡಿತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಡಿ. 21ರಂದು ನಡೆದಿದೆ. ಇಲ್ಲಿನ ಗುಡ್ಡೆತೋಟ ನಿವಾಸಿ ಪ್ರೇಮ ( ವ. 55) ಮೃತ ಮಹಿಳೆ. ಮಧ್ಯಾಹ್ನದ ವೇಳೆ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಇವರಿಗೆ ನಾಗರಹಾವು ಕಡಿದಿದೆ. ಹಾವು ಕಡಿದ ತಕ್ಷಣ ಪುತ್ತೂರು ಸರ್ಕಾರಿ ಆಸ್ಪತ್ರೆಗೆಶೌರ್ಯ ವಿಪತ್ತು ತಂಡದ ಸದಸ್ಯರ ಸಹಾಯದೊಂದೊಂದಿಗೆ ಕರೆದೋಯ್ಯಲಾಯಿತಾದರೂ ವಿಷ ವಿಪರೀತ ಅವರಿಸಿರುವ ಕಾರಣ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಹಾವು ಕಡಿತದಿಂದ ಮಹಿಳೆ ಸಾವು Read More »

ಕೇಪು ಕೋಳಿಅಂಕ ಅಖಾಡಕ್ಕೆ ಬಿಜೆಪಿ ಎಂಟ್ರಿ : ರಾಜಕೀಯ ಮೇಲಾಟ

ಮಾಜಿ ಶಾಸಕರ ಸಹಿತ 27 ಮಂದಿಯ ವಿರುದ್ಧ ಕೇಸ್‌ ದಾಖಲು ವಿಟ್ಲ: ಕೇಪು ಉಳ್ಳಾಲ್ತಿ ಕಜಂಬು ಉತ್ಸವದಂಗವಾಗಿ ನಡೆಯುವ ಕೋಳಿಅಂಕದ ವಿವಾದ ಈಗ ರಾಜಕೀಯ ಮೇಲಾಟವಾಗಿ ಬದಲಾಗಿದೆ. ಶನಿವಾರ ಶಾಸಕ ಅಶೋಕ್‌ ರೈಯವರು ತಾನೇ ಮುಂದೆ ನಿಂತು ಕೋಳಿಅಂಕ ಮಾಡಿಸಿದ ಬಳಿಕ ಭಾನುವಾರ ಬಿಜೆಪಿಯವರು ಕೋಳಿಅಂಕ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕೇಪು ಗ್ರಾಮದ ಮುರಳೀಧರ ರೈ ಎಂಬವರ ಗದ್ದೆಯಲ್ಲಿ ಭಾನುವಾರವೂ ಕೋಳಿಅಂಕ ನಡೆದಿದ್ದು, ಈ ಕೋಳಿಅಂಕಕ್ಕೆ ಬಿಜೆಪಿ ನಾಯಕರು ರಕ್ಷಣೆ ಕೊಟ್ಟಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ

ಕೇಪು ಕೋಳಿಅಂಕ ಅಖಾಡಕ್ಕೆ ಬಿಜೆಪಿ ಎಂಟ್ರಿ : ರಾಜಕೀಯ ಮೇಲಾಟ Read More »

error: Content is protected !!
Scroll to Top