ಅಪರಾಧ

ದ್ಚಿಚಕ್ರ ವಾಹನ ಕಳವು | ಪ್ರಕರಣ ದಾಖಲು

ಉಪ್ಪಿನಂಗಡಿ: ಗ್ರಾಮ ಪಂಚಾಯಿತಿ ನೀರು ನಿರ್ವಾಹಕ ಉಮೇಶ್ ನಾಯಕ್ ಅವರ  ದ್ವಿಚಕ್ರ ವಾಹನವನ್ನು ಕಳವುಗೈದ ಕುರಿತು ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಉಮೇಶ್ ನಾಯಕ್ ಅವರು ಗಾಂಧೀ ಪಾರ್ಕ್ ನ ಹೈ ಮಾಸ್ಕ್ ವಿದ್ಯುತ್ ಕಂಬದ ಬಳಿ ಹೊಂಡಾ ಆ್ಯಕ್ಟಿವಾವನ್ನು ನಿಲ್ಲಿಸಿದ್ದರು. ಬಳಿಕ ಅದೇ ಸ್ಥಳಕ್ಕೆ ಬಂದಾಗ ವಾಹನ ಕಳವುಗೈದಿರುವ ಕುರಿತು ಗಮನಕ್ಕೆ ಬಂದಿದೆ. ತಕ್ಷಣ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ದ್ಚಿಚಕ್ರ ವಾಹನ ಕಳವು | ಪ್ರಕರಣ ದಾಖಲು Read More »

ಕರ್ನಾಟಕ ಬ್ಯಾಂಕ್‍ ಅಡ್ಯನಡ್ಕ ಶಾಖೆಗೆ ನುಗ್ಗಿದ ಕಳ್ಳರು | ಲಕ್ಷಾಂತರ ಮೌಲ್ಯದ ನಗ, ನಗದು ಕಳವು

ವಿಟ್ಲ: ಅಡ್ಯನಡ್ಕ ಕರ್ನಾಟಕ ಬ್ಯಾಂಕ್‍ಗೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನ, ಹಣ ಕಳವು ಮಾಡಿ ಪರಾರಿಯಾದ ಘಟನೆ ಬುಧವಾರ ತಡರಾತ್ರಿ ನಡೆದಿದೆ. ವಿಟ್ಲ ಅಡ್ಯನಡ್ಕದಲ್ಲಿ ಕಾರ್ಯಾಚರಿಸುತ್ತಿದ್ದ ಸುಮಾರು 20 ವರ್ಷ ಹಳೆಯ ಕಟ್ಟಡದಲ್ಲಿರುವ ಕರ್ನಾಟಕ ಬ್ಯಾಂಕ್ ಶಾಖೆಯ ಕಿಟಕಿಗಳನ್ನು ಮುರಿದು ಕಳ್ಳರು ಒಳನುಗ್ಗಿದ್ದಾರೆ. ಯಾವುದೇ ಭದ್ರತೆಯಿಲ್ಲದ ಈ ಬ್ಯಾಂಕ್ ನಿಂದ ಕಳ್ಳತನಕ್ಕೆ ಅಜಾಗರೂಕತೆಯೇ ಕಾರಣ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕಳವಾದ ಸೊತ್ತುಗಳ ನಿಖರವಾದ ಮೌಲ್ಯ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.

ಕರ್ನಾಟಕ ಬ್ಯಾಂಕ್‍ ಅಡ್ಯನಡ್ಕ ಶಾಖೆಗೆ ನುಗ್ಗಿದ ಕಳ್ಳರು | ಲಕ್ಷಾಂತರ ಮೌಲ್ಯದ ನಗ, ನಗದು ಕಳವು Read More »

ಬ್ಯಾಂಕ್‍ ಸಿಬ್ಬಂದಿಯೆಂದು ಒಟಿಪಿ ಪಡೆದು ಲಕ್ಷಾಂತರ ವಂಚನೆ | ಪ್ರಕರಣ ದಾಖಲು

ಪುತ್ತೂರು : ಕೆವೈಸಿ ಅಪ್‍ಡೇಟ್ ಇದೆ ಎಂದು ವ್ಯಕ್ತಿಯೊಬ್ಬರಿಂದ ಬ್ಯಾಂಕ್ ಸಿಬ್ಬಂದಿ ಎಂದು ಹೇಳಿಕೊಂಡು ಒಟಿಪಿ ಪಡೆದು ಖಾತೆಯಿಂದ ಲಕ್ಷಾಂತರ ರೂ. ವಂಚಿಸಿದ ಘಟನೆ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಂದ್ರಶೇಖರ ಭಟ್ (62) ಒಟಿಪಿ ನೀಡಿ ಲಕ್ಷಾಂತರ ರೂಪಾಯಿ ಕಳೆದುಕೊಂಡವರು. ಮಂಗಳವಾರ ಚಂದ್ರಶೇಖರ ಭಟ್ ಅವರ ಮೊಬೈಲಿಗೆ ಕೆವೈಸಿ ಅಪ್‍ ಡೇಟ್ ಮಾಡುವ ಕುರಿತು ಸಂದೇಶ ಬಂದಿದೆ. ಸಂದೇಶದಲ್ಲಿ ತಿಳಿಸಿದ ದೂರವಾಣಿ ಸಂಖ್ಯೆಗೆ ಅವರು ಕರೆ ಮಾಡಿದಾಗ ನಿಮ್ಮ ಖಾತೆ ಬ್ಲಾಕ್ ಆಗಿದೆ.

ಬ್ಯಾಂಕ್‍ ಸಿಬ್ಬಂದಿಯೆಂದು ಒಟಿಪಿ ಪಡೆದು ಲಕ್ಷಾಂತರ ವಂಚನೆ | ಪ್ರಕರಣ ದಾಖಲು Read More »

ರಸ್ತೆ ಬದಿ ಮಾದಕ ವಸ್ತುಗಳ ಮಾರಾಟ | ಆರೋಪಿಗಳಿಬ್ಬರು ಪೊಲೀಸರ ವಶಕ್ಕೆ

ಮಂಗಳೂರು : ರಸ್ತೆ ಬದಿಯಲ್ಲಿ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೇಂದ್ರ ಉಪ-ವಿಭಾಗ ಆ್ಯಂಟಿ ಡ್ರಗ್ ತಂಡದ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಅತ್ತಾವರದ ಆದಿತ್ಯ ಕೆ (29), ಅಡ್ಯಾರ್ ಪದವು ನಿವಾಸಿ ರೋಹನ್‌ ಸಿಕ್ಕೇರಾ (33) ಬಂಧಿತ ಆರೋಪಿಗಳು. ಮಂಗಳೂರು ನಗರ ಪೊಲೀಸ್‌ ಆಯುಕ್ತ ಅನುಪಮ್ ಅಗ್ರವಾಲ್ ಅವರ ನಿರ್ದೇಶನದಂತೆ, ಉಪ ಪೊಲೀಸ್ ಆಯುಕ್ತ ಸಿದ್ದಾರ್ಥ್ ಗೋಯಲ್ ಐ.ಪಿ.ಎಸ್, ಉಪ ಪೊಲೀಸ್‌ ಆಯುಕ್ತ ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ, ಕೇಂದ್ರ ಉಪ

ರಸ್ತೆ ಬದಿ ಮಾದಕ ವಸ್ತುಗಳ ಮಾರಾಟ | ಆರೋಪಿಗಳಿಬ್ಬರು ಪೊಲೀಸರ ವಶಕ್ಕೆ Read More »

ನವವಿವಾಹಿತೆ ಶೋಭಾ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು: ಪುತ್ತೂರು: ನವವಿವಾಹಿತೆ ಶೋಭಾ (26) ಪುತ್ತೂರಿನ ಕುರಿಯ ಗಡಾಜೆ ಎಂಬಲ್ಲಿ ತನ್ನ ಪತಿಯ ಮನೆಯಲ್ಲಿ ಸೋಮವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಕುಕ್ಕಾಜೆ ರಾಮಣ್ಣ ಗೌಡ ಮತ್ತು ಪುಷ್ಪ ದಂಪತಿ ಪುತ್ರಿಯಾಗಿರುವ ಶೋಭಾ ಅವರನ್ನು ಕಳೆದ ಒಂದೂವರೆ ತಿಂಗಳ ಹಿಂದೆ ಪುತ್ತೂರು ಗಡಾಜೆ ರೋಹಿತ್ ಅವರಿಗೆ ಮದುವೆ ಮಾಡಿ ಕೊಡಲಾಗಿತ್ತು. ಸೋಮವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರಣ

ನವವಿವಾಹಿತೆ ಶೋಭಾ ನೇಣು ಬಿಗಿದು ಆತ್ಮಹತ್ಯೆ Read More »

ನೈತಿಕ ಪೊಲೀಸ್‍ ಗಿರಿ ! | ಮೂವರು ಪೊಲೀಸರ ವಶಕ್ಕೆ

ಅನ್ಯಕೋಮಿನ ಯುವಕ ಯುವತಿಗೆ  ಹಿಂದೂ ಸಂಘಟನೆ ಕಾರ್ಯಕರ್ತರು ತಡೆದು ಕಿರಿಕ್ ಮಾಡುವ ಮೂಲಕ ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ಮಂಗಳೂರಿನ ಪ್ರವಾಸಿ ತಾಣವಾದ ಪಣಂಬೂರು ಬೀಚ್ ನಲ್ಲಿ ನಡೆದಿದೆ. ಕೇರಳದ ಯುವಕ ಹಾಗೂ ಬೆಂಗಳೂರಿನ ಯುವತಿ ಪಣಂಬೂರು ಬೀಚ್ ಗೆ ಬಂದಿದ್ದರು. ಈ ವೇಳೆ ಅಲ್ಲಿಗೆ ಬಂದ  ಹಿಂದೂ ಸಂಘಟನೆ ಕಾರ್ಯಕರ್ತರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.  ಈ ಸಂದರ್ಭದಲ್ಲಿ  ಸ್ಥಳಕ್ಕೆ ಆಗಮಿಸಿದ ಪೊಲೀಸರು ಅನ್ಯಜೋಡಿ ಹಾಗೂ ಹಿಂದೂ ಕಾರ್ಯಕರ್ತರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಈ

ನೈತಿಕ ಪೊಲೀಸ್‍ ಗಿರಿ ! | ಮೂವರು ಪೊಲೀಸರ ವಶಕ್ಕೆ Read More »

ಅಕ್ರಮ ಗೋಮಾಂಶ ವಶ | ಇಬ್ಬರು ಪೊಲೀಸರ ವಶಕ್ಕೆ

ಬಿ.ಸಿ.ರೋಡು: ಅಕ್ರಮ ಗೋಮಾಂಸವನ್ನು ಪತ್ತೆಹಚ್ಚಿ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಕಲ್ಲಡ್ಕದಲ್ಲಿ ಇಂದು ಮುಂಜಾನೆ ನಡೆದಿದೆ. ಬಜರಂಗದಳ ಕಲ್ಲಡ್ಕ ಪ್ರಖಂಡದ ಮಾಹಿತಿ ಮೇರೆಗೆ ಇಂದು ಮುಂಜಾನೆ ಕಲ್ಲಡ್ಕ ಮದಕ ಬಳಿ ಬಿಸಿ ರೋಡ್ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಅಂದಾಜು 2 ಕಿಂಟ್ಟಾಲ್ ಗೋ ಮಾಂಸ, ಒಂದು ಆಟೋ , ಆಲ್ಟೋ ಕಾರು ಹಾಗೂ ಬೈಕ್ ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಆರೋಪಿಗಳ ಪೈಕಿ ಓರ್ವ ಪರಾರಿಯಾಗಿದ್ದಾನೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಅಕ್ರಮ ಗೋಮಾಂಶ ವಶ | ಇಬ್ಬರು ಪೊಲೀಸರ ವಶಕ್ಕೆ Read More »

ಅಕ್ರಮ ವೇಶ್ಯಾವಾಟಿಕೆ ದಂಧೆ : ಮೂವರು ಪೊಲೀಸ್ ವಶಕ್ಕೆ

ಮಣಿಪಾಲ: ಅಕ್ರಮವಾಗಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮೂವರನ್ನು ಮಣಿಪಾಲ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಪವನ್, ಚೇತನ್ ಸಿ.ಬಿ. ಹಾಗೂ ಪಂಜು ಬಂಧಿತ ಆರೋಪಿಗಳು ಮಹಿಳೆಯರನ್ನು ಪುಸಲಾಯಿಸಿ ಕರೆ ತಂದು ಅಕ್ರಮ ವೇಶ್ಯಾವಾಟಿಕೆಗೆ ಕಳುಹಿಸಿಕೊಡುತ್ತಿರುವ ಕುರಿತು ಬಂದ ಮಾಹಿತಿಯಂತೆ ಸ್ಥಳಕ್ಕೆ ಮಣಿಪಾಲ ಪೊಲೀಸರು ದಾಳಿ ನಡೆಸಿ ಮೊದಲಿಗೆ ಆರೋಪಿ ಪವನ್‌ ಎಂಬವನನ್ನು ವಶಕ್ಕೆ ಪಡೆದಿದ್ದಾರೆ. ಪವನ್ ಹೇಳಿಕೆಯಂತೆ ಉಡುಪಿ ತಾಲೂಕು ಬೊಮ್ಮರಬೆಟ್ಟು ಮನೆಗೆ ದಾಳಿ ನಡೆಸಿ ಆರೋಪಿ ಚೇತನ್‌ ಸಿ.ಬಿ. ಹಾಗೂ ಆರೋಪಿ ಪಂಜು ಎಂಬವರನ್ನು ವಶಕ್ಕೆ

ಅಕ್ರಮ ವೇಶ್ಯಾವಾಟಿಕೆ ದಂಧೆ : ಮೂವರು ಪೊಲೀಸ್ ವಶಕ್ಕೆ Read More »

ಮಹಿಳೆಯಿಂದ ಚಿನ್ನದ ಸರ ಸುಲಿಗೆ | ಇಬ್ಬರು ಆರೋಪಿಗಳ ಬಂಧನ

ಬೆಳ್ಳಾರೆ: ಚಿನ್ನದ ಸರ ಸುಲಿಗೆ ಮಾಡಿದ ಇಬ್ಬರು ಅಪರಿಚಿತ ಆರೋಪಿಗಳನ್ನು ಬೆಳ್ಳಾರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೇರಳ ನಿವಾಸಿ ಚಂದ್ರಮೋಹನ್ (42) ಹಾಗೂ ನರಿಮೊಗರು ನಿವಾಸಿ ನೌಶಾದ್ ಬಿ.ಎ. (36) ಬಂಧಿತ ಆರೋಪಿಗಳು ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪಾಂಬಾರ್ ಎಂಬಲ್ಲಿ ಜ.11 ರಂದು ಇಬ್ಬರು ಅಪರಿಚಿತರು ಮಹಿಳೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಸರ ಎಳೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಶೀಘ್ರ ಪತ್ತೆಗಾಗಿ ವಿಶೇಷ ತನಿಖಾ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗಿತ್ತು. ಇದೀಗ

ಮಹಿಳೆಯಿಂದ ಚಿನ್ನದ ಸರ ಸುಲಿಗೆ | ಇಬ್ಬರು ಆರೋಪಿಗಳ ಬಂಧನ Read More »

ಟಿಪ್ಪು ಭಾವಚಿತ್ರಕ್ಕೆ ಚಪ್ಪಲಿ ಹಾರ | ಕಿಡಿಗೇಡಿಗಳನ್ನು ಬಂಧಿಸುವಂತೆ ಪ್ರತಿಭಟನೆ

ರಾಯಚೂರು: ಕಿಡಿಗೇಡಿಗಳು ಟಿಪ್ಪುಸುಲ್ತಾನ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ ಪರಿಣಾಮ ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಮುಸ್ಲಿಂ ಸಮುದಾಯ ರಸ್ತೆ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದೆ. ಸಿರವಾರ ಪಟ್ಟಣದ ಮಾರ್ಕೆಟ್ ಬಳಿ ಇರುವ ಟಿಪ್ಪು ಸರ್ಕಲ್ ನಲ್ಲಿ ಹಾಕಲಾಗಿದ್ದ ಟಿಪ್ಪು ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕುವ ಮೂಲಕ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿತ್ತು. ಆಕ್ರೋಶಗೊಂಡ ಪ್ರತಿಭಟನಾಕಾರರು ಚಪ್ಪಲಿ ಹಾರ ಹಾಕಿದವರನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದೆ. ಮಾಹಿತಿ ತಿಳಿದ ಪೊಲೀಸರು ಮುಖಂಡರ ಜತೆ

ಟಿಪ್ಪು ಭಾವಚಿತ್ರಕ್ಕೆ ಚಪ್ಪಲಿ ಹಾರ | ಕಿಡಿಗೇಡಿಗಳನ್ನು ಬಂಧಿಸುವಂತೆ ಪ್ರತಿಭಟನೆ Read More »

error: Content is protected !!
Scroll to Top