ಅಪರಾಧ

ಅಡ್ಯನಡ್ಕ ಕರ್ಣಾಟಕ ಬ್ಯಾಂಕ್‍ ದರೋಡೆ | ಪ್ರಮುಖ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ

ವಿಟ್ಲ: ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಶೇಷ ತಂಡ ಮೂವರು ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ರಫೀಕ್ ಯಾನೆ ಗೂಡಿನ ಬಳಿ ರಫೀಕ್, ಮೂಲತಃ ಸುಳ್ಯದ ಕೊಯಿಲ, ಕಾಸರಗೋಡಿನ ಚೌಕಿ ನಿವಾಸಿ ಖಲಂದರ್ ಹಾಗೂ ಬಾಯಾರು ನಿವಾಸಿ ದಯಾನಂದ ಬಂಧಿತ ಪ್ರಮುಖ ಆರೋಪಿಗಳು. ಫೆ. 7 ರಂದು ರಾತ್ರಿ ಬ್ಯಾಂಕ್ ಕಟ್ಟಡದ ಹಿಂಬದಿ ಕಿಟಕಿಯ ಸರಳುಗಳನ್ನು ತುಂಡರಿಸಿ ಒಳನುಗ್ಗಿದ ಆರೋಪಿಗಳು ಕೋಟ್ಯಾಂತರ ಮೌಲ್ಯದ ಚಿನ್ನಾಭರಣ […]

ಅಡ್ಯನಡ್ಕ ಕರ್ಣಾಟಕ ಬ್ಯಾಂಕ್‍ ದರೋಡೆ | ಪ್ರಮುಖ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ Read More »

ಕಾನೂನು ಬಾಹಿರ ಆಟೋ ಚಾಲನೆ | ದಂಡ ವಿಧಿಸಿದ ಪೊಲೀಸರು | ಚಾಲಕನಿಂದ ಸರಕಾರಿ ವಾಹನಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನ

ಬಂಟ್ವಾಳ: ಆಟೋರಿಕ್ಷಾ ಚಲಾಯಿಸುತ್ತಿದ್ದ ವ್ಯಕ್ತಿಯೋರ್ವನನ್ನು ಟ್ರಾಫಿಕ್ ಪೋಲೀಸರು ತಡೆದು ದಂಡ ಹಾಕಿದ್ದಾರೆ. ಈ ಕಾರಣಕ್ಕೆ ಆವೇಶಕ್ಕೊಳಗಾದ ಆಟೋ ಚಾಲಕ, ಟ್ರಾಫಿಕ್ ಎಸ್.ಐ. ಹಾಗೂ ಸರಕಾರಿ ‌ವಾಹನಕ್ಕೆ ಮತ್ತು ಅಟೋ ರಿಕ್ಷಾಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾದ ಘಟನೆ ಬಿಸಿರೋಡಿನ ‌ಕೈಕಂಬದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಗೂಡಿನಬಳಿ ನಿವಾಸಿ ಮಹಮ್ಮದ್ ಅನ್ಸಾರ್ ಪ್ರಕರಣದ ಆರೋಪಿಯಾಗಿದ್ದು ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಈತ ಕಾನೂನುಬಾಹಿರವಾಗಿ ಯೂನಿಫಾರ್ಮ್‍ ಹಾಕದೆ, ಮೊಬೈಲ್‍ನಲ್ಲಿ ಮಾತನಾಡಿಕೊಂಡು ಆಟೋ ಓಡಿಸುತ್ತಿದ್ದ. ತಕ್ಷಣ ಪೊಲೀಸರು ಈತನನ್ನು ತಡೆಹಿಡಿದು ಎರಡು ಸಾವಿರ

ಕಾನೂನು ಬಾಹಿರ ಆಟೋ ಚಾಲನೆ | ದಂಡ ವಿಧಿಸಿದ ಪೊಲೀಸರು | ಚಾಲಕನಿಂದ ಸರಕಾರಿ ವಾಹನಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನ Read More »

ಭಾರತೀಯ ಮೂಲದ ಮಹಿಳೆ ಚೈತನ್ಯ ಶವ ಆಸ್ಟ್ರೇಲಿಯಾದ ಕಸದ ತೊಟ್ಟಿಯಲ್ಲಿ ಪತ್ತೆ | ಪತಿಯೇ ಕೃತ್ಯ ಎಸಗಿರುವ ಶಂಕೆ

ಪುತ್ತೂರು: ಭಾರತೀಯ ಮೂಲದ ಮಹಿಳೆಯೊಬ್ಬರ ಶವ ಕಸದ ತೊಟ್ಟಿಯಲ್ಲಿ ಪತ್ತೆಯಾದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಹೈದರಾಬಾದ್ ಮೂಲದ ಚೈತನ್ಯ ಮದಗಣಿ (36) ಮೃತ ಮಹಿಳೆ. ಈಕೆಯ ಶವ ಆಸ್ಟ್ರೇಲಿಯಾದ ಬಕ್ಲಿಯ ರಸ್ತೆ ಬದಿಯಲ್ಲಿ ಇರಿಸಿದ್ದ ಕಸದ ತೊಟ್ಟಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಚೈತನ್ಯ ಹಲವು ವರ್ಷಗಳಿಂದ ತನ್ನ ಪತಿ ಅಶೋಕ್‍ ಜತೆ ಆಸ್ಟ್ರೇಲಿಯಾದ ಪಾಯಿಂಟ್ ಕುಕ್ಕ್ ಎಂಬಲ್ಲಿ ವಾಸವಾಗಿದ್ದು, ಒಂದು ಗಂಡು ಮಗು ಹೊಂದಿದ್ದಾರೆ. ಶನಿವಾರ ಪೊಲೀಸರು ಮಹಿಳೆಯ ಶವವನ್ನು ಪತ್ತೆ ಹಚ್ಚಿದ್ದು, ಪ್ರಾಥಮಿಕ ತನಿಖೆ

ಭಾರತೀಯ ಮೂಲದ ಮಹಿಳೆ ಚೈತನ್ಯ ಶವ ಆಸ್ಟ್ರೇಲಿಯಾದ ಕಸದ ತೊಟ್ಟಿಯಲ್ಲಿ ಪತ್ತೆ | ಪತಿಯೇ ಕೃತ್ಯ ಎಸಗಿರುವ ಶಂಕೆ Read More »

ಕಾಲೇಜು ವಿದ್ಯಾರ್ಥಿ ವಿಘ್ನೇಶ್ ಆತ್ಮಹತ್ಯೆ !

ಧರ್ಮಸ್ಥಳ: ಕಾಲೇಜು ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಧರ್ಮಸ್ಥಳ ಗ್ರಾಮದ ಮುಳಿಕ್ಕಾರ್ ಬಳಿಯ ಕಜೋಡಿ ಎಂಬಲ್ಲಿ ನಡೆದಿದೆ. ಕಜೋಡಿ ನಿವಾಸಿ ವಿಘ್ನೇಶ್ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ರಾಮಣ್ಣ ಹಾಗೂ ಗೀತಾ ದಂಪತಿ ಪುತ್ರನಾಗಿರುವ ವಿಘ್ನೇಶ್ ಮನೆಯ ಕೊಟ್ಟಿಗೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಲೇಜು ವಿದ್ಯಾರ್ಥಿ ವಿಘ್ನೇಶ್ ಆತ್ಮಹತ್ಯೆ ! Read More »

ಹಿಂದೂ ಮಹಿಳೆ ಹಾಗೂ ಮಕ್ಕಳ ಮೇಲೆ ಹಲ್ಲೆ | ಆರೋಪಿ ಸಿದ್ದೀಕ್ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಜೀವ ಮಠಂದೂರು ಸೂಚನೆ

ಪುತ್ತೂರು: ಅಕ್ರಮವಾಗಿ ಮನೆಗೆ ಪ್ರವೇಶಿಸಿ ಹಿಂದೂ ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ ಎಸಗಿದ ಸಿದ್ದೀಕ್ ಎಂಬ ಅನ್ಯ ಕೋಮಿನ ವ್ಯಕ್ತಿಯ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಮಾಜಿ ಶಾಸಕ ಸಂಜೀವ ಮಠಂದೂರು ಪೋಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ. ಆಸ್ಪತ್ರೆಗೆ ಭೇಟೀ ನೀಡಿ ಮಹಿಳೆಯ ಆರೋಗ್ಯ ವಿಚಾರಿಸಿದ ಅವರು ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ವಿನಾಕಾರಣ ಶಾಂತಿ ಕದಡುವ ವ್ಯಕ್ತಿಗಳ ಮೇಲೆ ನಿಷ್ಪಕ್ಷಪಾತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ಹಿಂದೂ ಮಹಿಳೆ ಹಾಗೂ ಮಕ್ಕಳ ಮೇಲೆ ಹಲ್ಲೆ | ಆರೋಪಿ ಸಿದ್ದೀಕ್ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಜೀವ ಮಠಂದೂರು ಸೂಚನೆ Read More »

ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ದರೋಡೆ | ಹೂತಿಟ್ಟಿದ್ದ 7 ಕೆ.ಜಿ. ಚಿನ್ನ ಪತ್ತೆ

ಅಡ್ಯನಡ್ಕ: ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ವಿಚಾರಣೆ ವೇಳೆ ಕೋಟ್ಯಾಂತರ ಮೌಲ್ಯದ ಚಿನ್ನ ಹೂತಿಟ್ಟಿರುವುದಾಗಿ ಬಾಯಿಬಿಟ್ಟಿದ್ದಾರೆ. ಕಳವು ಪ್ರಕರಣಕ್ಕೆ ಸಂಬಂಧಿಸಿದ ವಿಶೇಷ ಪೊಲೀಸ್ ತಂಡ ನಾಲ್ವರನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿತ್ತು. ಕಳ್ಳರು ನೀಡಿದ ಮಾಹಿತಿ ಆಧರಿಸಿ ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ಕಾಸರಗೋಡಿನ ಪೈವಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಯಾರ್ ಸಜಂಕಿಲ ಎಂಬಲ್ಲಿ ಹೂತಿಟ್ಟಿ ರೀತಿಯಲ್ಲಿ ಪತ್ತೆಯಾಗಿದೆ. ಸದ್ಯದಲ್ಲೇ ಈ ಕುರಿತು ಹೆಚ್ಚಿನ ಮಾಹಿತಿ ಹೊರಬೀಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಡ್ಯನಡ್ಕ

ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ದರೋಡೆ | ಹೂತಿಟ್ಟಿದ್ದ 7 ಕೆ.ಜಿ. ಚಿನ್ನ ಪತ್ತೆ Read More »

ರಾಮೇಶ್ವರಂ ಕೆಫೆ ಬಾಂಬ್‍ ಸ್ಪೋಟ | ಮಾಡ್ಯೂಲ್ ಕುಖ್ಯಾತಿಯ ಮಿನಾಜ್ ಅಲಿಯಾಸ್ ಸುಲೇಮಾನ್ ಎನ್‍ ಐ ಎ ವಶ

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್‍ ಸ್ಪೋಟಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯಲ್ಲಿ ಮಹತ್ತರ ಬೆಳವಣಿಗೆಯಾಗಿದ್ದು, ಓರ್ವನನ್ನು ಎನ್‍ ಐ ಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಳ್ಳಾರಿ ಮಾಡ್ಯೂಲ್ ಕುಖ್ಯಾತಿಯ ಮಿನಾಜ್ ಅಲಿಯಾಸ್ ಸುಲೇಮಾನ್‍ ಎಂಬಾತನನ್ನು ಎನ್‍ ಐ ಎ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ಸ್ಪೋಟದ ನಂತರ ಬಾಂಬರ್ ಬೆಂಗಳೂರಿನಿಂದ ಬೀದರ್ ಬಸ್ಸಿನಲ್ಲಿ ತೆರಳಿ ಭಟ್ಕಳ ಕಡೆಗೆ ಹೋಗಿದ್ದಾನೆ ಎಂಬ ಶಂಕೆ ಸಿಸಿಟಿವಿ ಪೂಟೇಜ್‍ ಮೂಲಕ ವ್ಯಕ್ತವಾಗಿದ್ದು, ಉಗ್ರನ ಪತ್ತೆಗೆ ತನಿಖೆಗೆ ತೀವ್ರಗೊಳಿಸಲಾಗಿದೆ. ಮಿನಾಜ್

ರಾಮೇಶ್ವರಂ ಕೆಫೆ ಬಾಂಬ್‍ ಸ್ಪೋಟ | ಮಾಡ್ಯೂಲ್ ಕುಖ್ಯಾತಿಯ ಮಿನಾಜ್ ಅಲಿಯಾಸ್ ಸುಲೇಮಾನ್ ಎನ್‍ ಐ ಎ ವಶ Read More »

ಜಮೀನಿನ ನಕ್ಷೆ ನೀಡಲು ಸರ್ವೆಯರ್‍ ನಿಂದ ಲಂಚ ಸ್ವೀಕಾರ : ಲೋಕಾಯುಕ್ತರ ಬಲೆಗೆ

ಮಂಗಳೂರು: ಲಂಚ ಸ್ವೀಕರಿಸುತ್ತಿರುವ ಸಂದರ್ಭ ಸರ್ವೆಯರ್ ಶೀತಲ್ ರಾಜ್ ಎಂಬವರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಜಮೀನಿನ ನಕ್ಷೆ ನೀಡಲು ಲಂಚ ಸ್ವೀಕರಿಸಿದ ಆರೋಪದಲ್ಲಿ ಬಂಧಿಸಲಾಗಿದೆ. ನೀರುಮಾರ್ಗದ ಲಿಲ್ಲಿ ಪೀಟರ್ ವಾಸ್ ಇವರ ಪರವಾಗಿ ಸ್ಟೆಲ್ಲಾ ಜಾನೆಟ್ ವಾಸ್ ಅವರ ಹೆಸರಿಗೆ ತತ್ಕಾಲ್ ಪೋಡಿ ಮಾಡಿಕೊಡುವ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯ ಪಹಣಿ ವಿಭಾಗದಲ್ಲಿ ಆನ್‌ಲೈನ್ ಮುಖಾಂತರ ಜಮೀನಿನ ತತ್ಕಾಲ್ ಪೋಡಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಸಮಯ ಸರಕಾರಿ ಶುಲ್ಕ 1500 ರೂ. ಪಾವತಿಸಿ ರಶೀದಿ ಪಡೆದಿದ್ದರು.

ಜಮೀನಿನ ನಕ್ಷೆ ನೀಡಲು ಸರ್ವೆಯರ್‍ ನಿಂದ ಲಂಚ ಸ್ವೀಕಾರ : ಲೋಕಾಯುಕ್ತರ ಬಲೆಗೆ Read More »

ಮುರಳೀಕೃಷ್ಣ ಹಸಂತಡ್ಕ ಬಂಧನ : ಬಜರಂಗದಳ ಖಂಡನೆ

ಪುತ್ತೂರು: ಭಯೋತ್ಪಾದನೆ ವಿರುದ್ಧ ಭಾಷಣ ಮಾಡಲು ತುಮಕೂರಿಗೆ ತೆರಳಿದ ಬಜರಂಗಳದ ಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತಡ್ಕರನ್ನು ತುಮಕೂರು ಪೊಲೀಸರು ಬಂಧಿಸಿರುವ ಘಟನೆಯನ್ನು ಬಜರಂಗದಳ ಖಂಡಿಸಿದೆ. ಭಯೋತ್ಪಾದನಾ ವಿರೋಧಿ ಹೋರಾಟ ಸಮಿತಿಯಿಂದ ನಡೆಯಬೇಕಾಗಿರುವ ಸಭೆಗೆ ತೆರಳುತ್ತಿದ್ದ ಬಜರಂಗದಳದ ಪ್ರಾಂತ ಸಹ ಸಂಯೋಜಕರಾದ ಮುರಳಿ ಕೃಷ್ಣ ಹಸಂತಡ್ಕ ಇವರನ್ನು ಬಂಧಿಸಿರುವುದು ಖಂಡನೀಯ ಸರಕಾರದ ಈ ಹೇಯ ಕೃತ್ಯವನ್ನು ವಿಶ್ವಹಿಂದು ಪರಿಷತ್ ಪುತ್ತೂರು ಜಿಲ್ಲೆ ಉಗ್ರವಾಗಿ ಖಂಡಿಸುತ್ತದೆ. ಭಯೋತ್ಪಾದನೆಯ ವಿರುದ್ಧ ನಡೆಯುತ್ತಾ ಇದ್ದಂತಹ ಈ ಸಭೆಯನ್ನ ಹತ್ತಿಕ್ಕಲು ನೋಡುತ್ತಿರುವಂತಹ ಈ ಸರಕಾರ

ಮುರಳೀಕೃಷ್ಣ ಹಸಂತಡ್ಕ ಬಂಧನ : ಬಜರಂಗದಳ ಖಂಡನೆ Read More »

ಸುಳ್ಯ ಲಾರಿ ಚಾಲಕ ಇಸಾಕ್‍ ಆತ್ಮಹತ್ಯೆ !

ಸುಳ್ಯ: ವ್ಯಕ್ತಿಯೊಬ್ಬರು ಸುಳ್ಯದ ರೆಸಿಡೆನ್ಸಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ. ಪೈಚಾರ್ ನಿವಾಸಿ ಲಾರಿ ಚಾಲಕ ಇಸಾಕ್‍ ಆತ್ಮಹತ್ಯೆ ಮಾಡಿಕೊಂಡವರು. ಸುಳ್ಯ ಜೂನಿಯರ್ ಕಾಲೇಜು ರಸ್ತೆ ಬಳಿ ಇರುವ ಸದರ್ನ್ ರೆಸಿಡೆನ್ಸಿಯಲ್ಲಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಈ ಕುರಿತು ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಯ ಲಾರಿ ಚಾಲಕ ಇಸಾಕ್‍ ಆತ್ಮಹತ್ಯೆ ! Read More »

error: Content is protected !!
Scroll to Top