ಅಪರಾಧ

ಅಕ್ರಮ ಮರಳುಗಾರಿಕೆ ಮೇಲೆ ದಾಳಿ : ಲಕ್ಷಾಂತರ ರೂ. ಮೌಲ್ಯದ ಸೊತ್ತು ವಶ

ಬೆಳ್ತಂಗಡಿ : ಸರ್ಕಾರಕ್ಕೆ ರಾಜಧನ ಕಟ್ಟದೆ ನದಿಯ ಕಿನಾರೆಯಿಂದ ಹಿಟಾಚಿ ಬಳಸಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಅಡ್ಡೆ ಮೇಲೆ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜ.8 ರಂದು ಬೆಳಗ್ಗೆ 7 ಗಂಟೆಗೆ ಸಿಬ್ಬಂದಿ ಜೊತೆ ಬೆಳ್ತಂಗಡಿ ಸಬ್‌ಇನ್ಸ್‌ಪೆಕ್ಟರ್ ಆನಂದ್ ಎಂ ರೌಂಡ್‌ ಕರ್ತವ್ಯದಲ್ಲಿರುವಾಗ ಮಾಹಿತಿದಾರರಿಂದ ಸಿಕ್ಕ ಖಚಿತ ಮಾಹಿತಿ ಮೇರೆಗೆ ಕಡಿರುದ್ಯಾವರ ಗ್ರಾಮದ ಗಂಡಿಬಾಗಿಲು ಎಂಬಲ್ಲಿ ದಾಳಿ ಮಾಡಿದಾಗ ನೇತ್ರಾವತಿ ನದಿ ಕಿನಾರೆಯಿಂದ ಮರಳು ಕಳ್ಳತನ ಮಾಡಿ ಹಿಚಾಚಿ ಮೂಲಕ ಟಿಪ್ಪರ್ ಲಾರಿಗೆ ತುಂಬಿಸಿ […]

ಅಕ್ರಮ ಮರಳುಗಾರಿಕೆ ಮೇಲೆ ದಾಳಿ : ಲಕ್ಷಾಂತರ ರೂ. ಮೌಲ್ಯದ ಸೊತ್ತು ವಶ Read More »

ಬಳ್ಳಾರಿ ಬ್ಯಾನರ್‌ ಗಲಾಟೆ ಪ್ರಕರಣದ ತನಿಖೆ ಸಿಐಡಿಗೆ ವಹಿಸಿದ ಸರ್ಕಾರ

ಕಾಂಗ್ರೆಸ್‌ ಕಾರ್ಯಕರ್ತನ ಸಾವಿನ ಬಳಿಕ ರಾಜಕೀಯ ಕಚ್ಚಾಟಕ್ಕೆ ತಿರುಗಿದ ಪ್ರಕರಣ ಬೆಂಗಳೂರು: ಬ್ಯಾನರ್‌ ಅಳವಡಿಸುವ ವಿಚಾರದಲ್ಲಿ ನಡೆದ ಗಲಭೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತ ಸಾವಿಗೀಡಾದ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಲ್ಲ ಪ್ರಕರಣಗಳನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ಘಟನೆ ರಾಜಕೀಯ ಸ್ವರೂಪ ಪಡೆದುಕೊಂಡು ತೀವ್ರ ವಿವಾದ ಸೃಷ್ಟಿಸಿರುವ ಹಿನ್ನೆಲೆ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದೆ. ಬಳ್ಳಾರಿ ಪ್ರಕರಣ ಸಿಐಡಿಗೆ ವಹಿಸುವ ವಿಚಾರ ಸಂಬಂಧ ಇಂದೇ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಚರ್ಚೆ

ಬಳ್ಳಾರಿ ಬ್ಯಾನರ್‌ ಗಲಾಟೆ ಪ್ರಕರಣದ ತನಿಖೆ ಸಿಐಡಿಗೆ ವಹಿಸಿದ ಸರ್ಕಾರ Read More »

ಶಬರಿಮಲೆ ದೇಗುಲದ ಚಿನ್ನ ಕಳ್ಳತನ ಪ್ರಕರಣ : ಮುಖ್ಯ ಅರ್ಚಕ ಬಂಧನ

ಭಾರಿ ಪ್ರಮಾಣದ ಚಿನ್ನ ಕಳ್ಳತನವಾಗಿರುವ ಶಂಕೆ ತಿರುವನಂತಪುರಂ: ಶಬರಿಮಲೆ ದೇಗುಲದ ಚಿನ್ನ ಕಳ್ಳತನ ಪ್ರಕರಣದ ಮಹತ್ವದ ಬೆಳವಣಿಯಲ್ಲಿ ಎಸ್‌ಐಟಿ ಅಧಿಕಾರಿಗಳು ದೇಗುಲದ ಪ್ರಧಾನ ಅರ್ಚಕನನ್ನು ಅರೆಸ್ಟ್ ಮಾಡಿದ್ದಾರೆ. ಕಂಡರಾರು ರಾಜೀವ್ ಬಂಧಿತ ಆರೋಪಿಯಾಗಿದ್ದು, ದೇಗುಲದ ಪ್ರಧಾನ ಅರ್ಚಕನಾಗಿ ಕೆಲಸ ಮಾಡುತ್ತಿದ್ದರು. ಚಿನ್ನ ಕಳ್ಳತನದ ಹಿಂದೆ ದೊಡ್ಡ ಸಂಚು ಮತ್ತು ಮಧ್ಯವರ್ತಿಗಳ ಲಿಂಕ್ ಇರುವ ಬಗ್ಗೆ ಎಸ್‌ಐಟಿ ಶಂಕೆ ವ್ಯಕ್ತಪಡಿಸಿದೆ. ಕಂಡರಾರು ರಾಜೀವ್, ತಂತ್ರಿ ಉಣ್ಣಿಕೃಷ್ಣನ್ ಪೊಟ್ಟಿಯವರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ. ದೇವಸ್ಥಾನದ ಫಲಕಗಳಿಗೆ ಚಿನ್ನ ಲೇಪಿಸುವ

ಶಬರಿಮಲೆ ದೇಗುಲದ ಚಿನ್ನ ಕಳ್ಳತನ ಪ್ರಕರಣ : ಮುಖ್ಯ ಅರ್ಚಕ ಬಂಧನ Read More »

ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧವಾದ ಮಹಿಳೆಯ ಮನವೊಲಿಸಿದ ಡೆಲಿವರಿ ಬಾಯ್

ಚೆನ್ನೈ: ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ಮಹಿಳೆಯೊಬ್ಬರು ‌ಮಧ್ಯರಾತ್ರಿ ವೇಳೆ ಬ್ಲಿಂಕಿಟ್ ಮೂಲಕ ಇಲಿಪಾಶಾಣ ಆರ್ಡರ್ ಮಾಡಿದ್ದು, ಆರ್ಡರ್ ತಂದು ಕೊಡಲು ಬಂದ ಡೆಲಿವರಿ ಬಾಯ್ ಆಕೆಯ ಜೀವ ಉಳಿಸಿದ ಘಟನೆ ನಡೆದಿದೆ. ಈ ವಿಷಯವನ್ನು ಡೆಲಿವರಿ ಕೊಡಲು ಹೋಗಿ, ಮಹಿಳೆಯ ಮನಃಪರಿವರ್ತನೆ ಮಾಡಿದ ಯುವಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮಧ್ಯರಾತ್ರಿ ಇಲಿ ಪಾಷಾಣದ ಆರ್ಡರ್ ಸಿಕ್ಕಾಗ ನನಗೆ ಅನುಮಾನ ಬಂತು. ಆ ಪಾರ್ಸೆಲ್ ಡೆಲಿವರಿಗೆ ಹೋದಾಗ ಆರ್ಡರ್ ಮಾಡಿದ ಮಹಿಳೆ ಅಳುತ್ತಾ ಬಾಗಿಲು ತೆರೆದರು. ತಾನು ಡೆಲಿವರಿ

ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧವಾದ ಮಹಿಳೆಯ ಮನವೊಲಿಸಿದ ಡೆಲಿವರಿ ಬಾಯ್ Read More »

ಕಾರು ವ್ಯಾಪಾರಕ್ಕೆ ಸಂಬಂಧಿಸಿದ ಮಾತುಕತೆ: ಚೂರಿ ಇರಿತ, ದೂರು ದಾಖಲು

ಪುತ್ತೂರು: ಕಾರು ವ್ಯಾಪಾರಕ್ಕೆ ಸಂಬಂಧಿಸಿದ ಮಾತುಕತೆ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರಿಗೆ ‌ತಂಡವೊಂದು ಚೂರಿಯಿಂದ ತಿವಿದು, ಹಲ್ಲೆ ನಡೆಸಿರುವ ಘಟನೆ ಕೆದಿಲದ ಸತ್ತಿಕಲ್ಲು ಪೆಟ್ರೋಲ್ ಪಂಪ್ ಬಳಿ ನಡೆದಿದೆ. ಗಾಯಾಳುವನ್ನು ಸರೋಳಿ ನಿವಾಸಿ ಅಬ್ಬುಬಕ್ಕರ್ ರಾಶೀಕ್(28) ಎಂದು ಗುರುತಿಸಲಾಗಿದೆ. ರಾಶೀಕ್ ಅವರಿಗೆ ಬೆಂಗಳೂರಿನ ಶ್ರೀರಾಮ ಫೈನಾನ್ಸ್‌ನವರು ಸ್ವಾಧೀನಕ್ಕೆ ತೆಗೆದುಕೊಂಡ ಇನ್ನೋವಾ ಕಾರನ್ನು ಮಾರಾಟ ಮಾಡಲಾಗಿತ್ತು. ಆದರೆ ಕಾರಿನ ಮಾಲೀಕ ಸೂರಜ್ ಎಂಬವರು ಈ ಕಾರನ್ನು ಮತ್ತೆ ಖರೀದಿ ಮಾಡಲು ತಮ್ಮ ಏಳೆಂಟು ಮಂದಿ ಸ್ನೇಹಿತರ ಜೊತೆಗೆ ರಾಶೀಕ್ ಅವರೊಂದಿಗೆ

ಕಾರು ವ್ಯಾಪಾರಕ್ಕೆ ಸಂಬಂಧಿಸಿದ ಮಾತುಕತೆ: ಚೂರಿ ಇರಿತ, ದೂರು ದಾಖಲು Read More »

ಮಾಜಿ ಸಚಿವ ಈಶ್ವರಪ್ಪನವರಿಗೆ ವಿದೇಶದಿಂದ ಬೆದರಿಕೆ ಕರೆ

ಭದ್ರತೆ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಕಳವಳ ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಅವರಿಗೆ ವಿದೇಶದಿಂದ ಮತ್ತೊಮ್ಮೆ ಬೆದರಿಕೆ ಕರೆ ಬಂದಿದೆ. ಈ ಸಂಬಂಧ ಅವರು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದಾರೆ. ಜ.7ರಂದು ಈಶ್ವರಪ್ಪ ಅವರಿಗೆ ವಿದೇಶದಿಂದ ಬಂದ ಬೆದರಿಕೆ ಕರೆ ಅವರ ಭದ್ರತೆ ಕುರಿತಾಗಿ ಮತ್ತೊಮ್ಮೆ ಆತಂಕ ಹುಟ್ಟುಹಾಕಿದೆ. ಈಶ್ವರಪ್ಪ ಅವರಿಗೆ ಈ ಹಿಂದೆಯೂ ಬೆದರಿಕೆ ಕರೆಗಳು ಬಂದ ಹಿನ್ನೆಲೆ ಪೊಲೀಸ್ ಭದ್ರತೆ ಹಾಗೂ

ಮಾಜಿ ಸಚಿವ ಈಶ್ವರಪ್ಪನವರಿಗೆ ವಿದೇಶದಿಂದ ಬೆದರಿಕೆ ಕರೆ Read More »

ಬುರ್ಖಾ, ಹಿಜಾಬ್‌ ಧರಿಸಿದವರಿಗೆ ಚಿನ್ನದಂಗಡಿಗಳಿಗೆ ಪ್ರವೇಶವಿಲ್ಲ!

ಚಿನ್ನ ಖರೀದಿಸಬೇಕಾದರೆ ಮುಖ ತೋರಿಸಲೇಬೇಕೆಂಬ ನಿಯಮ ಜಾರಿ ಪಾಟ್ನಾ: ಬಿಹಾರದಾದ್ಯಂತ ಆಭರಣದ ಅಂಗಡಿಗಳಲ್ಲಿ ಹಿಜಾಬ್, ನಿಖಾಬ್, ಬುರ್ಖಾ, ಮಾಸ್ಕ್, ಹೆಲ್ಮೆಟ್ ಧರಿಸಿದ ಗ್ರಾಹಕರಿಗೆ ಪ್ರವೇಶವಿಲ್ಲ ಎಂದು ನೋಟಿಸ್ ಹಾಕಲಾಗಿದೆ. ಹಾಗೆಂದು ಇದು ಯಾವುದೇ ಧಾರ್ಮಿಕ ದ್ವೇಷದ ಕ್ರಮವಲ್ಲ. ಮುಖ ಸಂಪೂರ್ಣವಾಗಿ ಅಥವಾ ಭಾಗಶಃ ಮುಚ್ಚಿರುವ ಗ್ರಾಹಕರಿಗೆ ಪ್ರವೇಶ ನಿರಾಕರಿಸುವ ತೀರ್ಮಾನವನ್ನು ಅಲ್ಲಿನ ಆಭರಣ ವ್ಯಾಪಾರಿಗಳು ಕೈಗೊಂಡಿದ್ದಾರೆ. ಆಭರಣ ಅಂಗಡಿಗಳಲ್ಲಿ ಕಳ್ಳತನ ಮತ್ತು ದರೋಡೆ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭದ್ರತೆಯ ದೃಷ್ಠಿಯಿಂದ ಅಖಿಲ ಭಾರತ ಜುವೆಲ್ಲರ್ಸ್ ಮತ್ತು ಗೋಲ್ಡ್

ಬುರ್ಖಾ, ಹಿಜಾಬ್‌ ಧರಿಸಿದವರಿಗೆ ಚಿನ್ನದಂಗಡಿಗಳಿಗೆ ಪ್ರವೇಶವಿಲ್ಲ! Read More »

ಮೇಯಲು ಬಿಟ್ಟಿದ್ದ ದನಗಳನ್ನು ಕದ್ದವ ಸೆರೆ

ವಿಟ್ಲ : ಮೇಯಲು ಬಿಟ್ಟಿದ್ದ ಹಸುಗಳನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ವಿಟ್ಲ ಪೋಲೀಸರು ಬಂಧಿಸಿದ್ದಾರೆ. ಮಂಗಳೂರು ತಾಲೂಕಿನ ಉಳ್ಳಾಲ ನಿವಾಸಿ ಝಲ್ಫಾನ್ ಮಾಲಿಕ್ (30) ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈತ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಸೊಸೈಟಿ ಅವಣದಿಂದ ಹುಲ್ಲು ಮೇಯಲು ಹೋಗಿದ್ದ ಗಣೇಶ್ ರೈ ಹಾಗೂ ನಾರಾಯಣ ನಾಯ್ಕ್ ಎಂಬವರ ಒಟ್ಟು 4 ದನಗಳನ್ನು ಕಳ್ಳತನ ಮಾಡಿದ ಅರೋಪಿಯಾಗಿದ್ದು, ಈತನನ್ನು ವಿಟ್ಲ ಪೋಲೀಸರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮೇಯಲು ಬಿಟ್ಟಿದ್ದ ದನಗಳನ್ನು ಕದ್ದವ ಸೆರೆ Read More »

ಕುಖ್ಯಾತ ಕ್ರಿಮಿನಲ್‌ ವಿಟ್ಲದಿಂದ ಮೂಡಿಗೆರೆಗೆ ಗಡಿಪಾರು

ವಿಟ್ಲ: ವಿಟ್ಲ ಕಸಬ ಗ್ರಾಮದ ನಿವಾಸಿ ಅಬ್ದುಲ್ ಖಾದರ್ ಯಾನೆ ಶೌಕತ್ ಎಂಬ ಕ್ರಿಮಿನಲ್‌ನನ್ನು ಪೊಲೀಸರು ಚಿಕ್ಕಮಗಳೂರಿಗೆ ಗಡಿಪಾರು ಮಾಡಿದ್ದಾರೆ. ಈತನ ವಿರುದ್ಧ ಹಲ್ಲೆ, ನಿಷೇಧಿತ ಮಾದಕ ವಸ್ತುಗಳ ಸೇವನೆ ಮತ್ತು NDPS ಕಾಯ್ದೆಯಡಿ ಉಲ್ಲಂಘನೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಿವೆ. ಗುರುವಾರ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಗಡಿಪಾರು ಮಾಡಲಾಗಿದೆ. ವಿಟ್ಲ ಕಸಬ ಗ್ರಾಮ ಬಂಟ್ವಾಳ ತಾಲೂಕಿನ ಅಬ್ದುಲ್‌ ಖಾದರ್‌ ಗಡಿಪಾರು ಆದ ಆರೋಪಿ. ಆರೋಪಿ ವಿರುದ್ಧ ಹಲ್ಲೆ ದೊಂಬಿ, ನಿಷೇಧಿತ ಮಾದಕ ದ್ರವ್ಯ ಸೇವನೆ, ಎನ್‌ಡಿಪಿಎಸ್

ಕುಖ್ಯಾತ ಕ್ರಿಮಿನಲ್‌ ವಿಟ್ಲದಿಂದ ಮೂಡಿಗೆರೆಗೆ ಗಡಿಪಾರು Read More »

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ: ಆತಂಕ ವ್ಯಕ್ತಪಡಿಸಿ ಪ್ರಧಾನಿ ಮೋದಿ ಅವರಿಗೆ ಪೇಜಾವರ ಶ್ರೀ ಪತ್ರ

ಉಡುಪಿ: ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಅಮಾನವೀಯ ಕೃತ್ಯದ ಬಗ್ಗೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವ ಅವರು ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಪತ್ರದಲ್ಲಿ ಹಿಂದೂ ಸಮಾಜವು ಯಾವಾಗಲೂ ಶಾಂತಿ ಮತ್ತು ಸಹಬಾಳ್ವೆಯ ತತ್ವಗಳನ್ನು ಪಾಲಿಸುತ್ತಾ ಬಂದಿದೆ. ಯಾರ ಮೇಲೆಯೂ ಹಿಂಸೆಯನ್ನು ಅಸ್ತ್ರವಾಗಿ ಬಳಸಿ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ: ಆತಂಕ ವ್ಯಕ್ತಪಡಿಸಿ ಪ್ರಧಾನಿ ಮೋದಿ ಅವರಿಗೆ ಪೇಜಾವರ ಶ್ರೀ ಪತ್ರ Read More »

error: Content is protected !!
Scroll to Top