ಅಪರಾಧ

ಮಾದಕ ವಸ್ತು ಸೇವನೆ, ಮಾರಾಟ ಆರೋಪಿಗಳಿಗೆ ಶಿಕ್ಷೆ ಪ್ರಕಟ

ಉಪ್ಪಿನಂಗಡಿ: ಮಾದಕ ವಸ್ತು ಸೇವನೆ ಮತ್ತು ಮಾರಾಟಕ್ಕೆ ಸಂಬಂಧಿಸಿದ ಹಾಗೆ ಮೂವರು ಆರೋಪಿಗಳಿಗೆ ಹತ್ತು ಸಾವಿರ ರೂ. ದಂಡ ಮತ್ತು ಒಂದು ವರ್ಷ ಸಾದಾ ಜೈಲು ಶಿಕ್ಷೆ ಪ್ರಕಟಿಸಿ ನ್ಯಾಯಾಲಯ ಆದೇಶ ನೀಡಿದೆ. ಆರೋಪಿಗಳನ್ನು ಸಲೀಂ ಹುಸೇನ್, ಶಹಜ್ ಅಹಮದ್, ಮಹಮದ್ ಶಾಫಿ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ, ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ಪ್ರಕಟಿಸಿರುವುದಾಗಿದೆ.

ಮಾದಕ ವಸ್ತು ಸೇವನೆ, ಮಾರಾಟ ಆರೋಪಿಗಳಿಗೆ ಶಿಕ್ಷೆ ಪ್ರಕಟ Read More »

ಮದುವೆ ಮನೆಗೆ ಕನ್ನ ಹಾಕಿ ಅಡಿಕೆ ಹೊತ್ತೊಯ್ದ ಕಳ್ಳರು

ಪುತ್ತೂರು: ಮಗಳ ಮದುವೆಯ ಸಂಭ್ರಮದಲ್ಲಿದ್ದ ಕುಟುಂಬವೊಂದರ ಮೇಲೆ ಕಳ್ಳರು ವಕ್ರದೃಷ್ಟಿ ಬೀರಿದ್ದು, ಮದುವೆ ಮನೆಯಿಂದ ಸುಮಾರು 1 ಲಕ್ಷ ರೂ. ಮೌಲ್ಯದ ಅಡಿಕೆ ಕಳ್ಳತನ ಮಾಡಿ ಶಾಕ್ ನೀಡಿದೆ. ಈ ಸಂಬಂಧ ಮನೆಯ ಮಾಲೀಕ ವೀರಮಂಗಲದ ಸುಳಿಮೇಲು ‌ನಿವಾಸಿ ಅಚ್ಯುತ ಗೌಡ (57) ಎಂಬವರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಗಳ ನಿಶ್ಚಿತಾರ್ಥ, ಮದುವೆಯ ಕಾರ್ಯಗಳಲ್ಲಿ ಕುಟುಂಬ ಬ್ಯುಸಿ ಯಾಗಿದ್ದ ಸಮಯದಲ್ಲಿ ಕಳ್ಳರು ಕೈಚಳಕ ತೋರಿರುವುದಾಗಿದೆ. ಅಚ್ಯುತ ಗೌಡ ಅವರು ಸುಮಾರು 36 ಗೋಣಿ

ಮದುವೆ ಮನೆಗೆ ಕನ್ನ ಹಾಕಿ ಅಡಿಕೆ ಹೊತ್ತೊಯ್ದ ಕಳ್ಳರು Read More »

ನಿಷೇಧಿತ ಮಾದಕ ವಸ್ತು ಮಾರಾಟ: ಮುಸ್ತಫಾ ವಶಕ್ಕೆ

ಪುತ್ತೂರು: ಅಕ್ರಮವಾಗಿ ನಿಷೇಧಿತ ಮಾದಕ ವಸ್ತು MDMA ಯನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ನಗರದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಕಬಕದ ಮಹಮ್ಮದ್ ಮುಸ್ತಫಾ(36) ಎಂದು ಗುರುತಿಸಲಾಗಿದೆ. ಆರೋಪಿ ಮುಕ್ರಂಪಾಡಿ ಸಮೀಪದ ಬಾಡಿಗೆ ಮನೆಯೊಂದರಲ್ಲಿ 14 ಗ್ರಾಂ ನಿಷೇಧಿತ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದನು. ಆರೋಪಿಯ ವಿರುದ್ಧ ಈಗಾಗಲೇ ಪೋಕ್ಸೋ ಪ್ರಕರಣ ಸಹ ದಾಖಲಾಗಿ, ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಸಹ ಮುಗಿಸಿದ್ದ ಎಂದು ತಿಳಿದು ಬಂದಿದೆ. 2024 ರಲ್ಲಿಯೂ ಈತನ ವಿರುದ್ಧ ಮಾದಕ ವಸ್ತುಗಳನ್ನು ಮಾರಾಟ

ನಿಷೇಧಿತ ಮಾದಕ ವಸ್ತು ಮಾರಾಟ: ಮುಸ್ತಫಾ ವಶಕ್ಕೆ Read More »

ಧರ್ಮಸ್ಥಳ ಪ್ರಕರಣ : ಬರೋಬ್ಬರಿ 4 ಸಾವಿರ ಪುಟಗಳ ಚಾರ್ಜ್‌ಶೀಟ್‌ ರೆಡಿ

ಇಂದು ನ್ಯಾಯಾಲಯಕ್ಕೆ ಸಲ್ಲಿಕೆ ; ತನಿಖೆ ನಿಲ್ಲಿಸಲು ಬುರುಡೆ ಗ್ಯಾಂಗ್‌ನಿಂದ ಶತ ಪ್ರಯತ್ನ ಧರ್ಮಸ್ಥಳ: ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಬರೋಬ್ಬರಿ 4,000 ಪುಟಗಳ ಚಾರ್ಜ್‌ಶೀಟ್‌ ಸಿದ್ಧಪಡಿಸಿದೆ. ನಾಲ್ಕು ತಿಂಗಳ ಕಾಲ ತನಿಖೆ ನಡೆಸಿರುವ ಪೊಲೀಸರು ಎಲ್ಲ ಅಂಶಗಳನ್ನು ಎಲ್ಲ ಆಯಾಮದಿಂದ ಪರಿಶೀಲಿಸಿದ್ದಾರೆ. ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ ಸಂಬಂಧ ಎಸ್‌ಐಟಿ ಚಾರ್ಜ್‌ಶೀಟ್ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ. ಇಂದು ಬೆಳ್ತಂಗಡಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಎಸ್‌ಐಟಿ ತನಿಖಾಧಿಕಾರಿ ಜಿತೇಂದ್ರ ಕುಮಾರ್

ಧರ್ಮಸ್ಥಳ ಪ್ರಕರಣ : ಬರೋಬ್ಬರಿ 4 ಸಾವಿರ ಪುಟಗಳ ಚಾರ್ಜ್‌ಶೀಟ್‌ ರೆಡಿ Read More »

ಬಂಟ್ವಾಳ : ಬುರ್ಖಾ ಧರಿಸಿಕೊಂಡು ಬಂದು ಜವುಳಿ ಅಂಗಡಿ ಮಾಲಕನ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿದ ಪತ್ನಿ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಂಗಡಿಯಲ್ಲೇ ನಡೆದ ಘಟನೆ ಬಂಟ್ವಾಳ : ಜವುಳಿ ಅಂಗಡಿಗೆ ಮಾರುವೇಷದಲ್ಲಿ ಬಂದ ಪತ್ನಿ ಗಂಡನಿಗೆ ಕತ್ತಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬಿ.ಸಿ.ರೋಡಿನಲ್ಲಿ ಬುಧವಾರ ರಾತ್ರಿ ನಡೆದಿದೆ. ಜವುಳಿ ಅಂಗಡಿ ಮಾಲಕ ಕೃಷ್ಣ ಕುಮಾರ್ ಸೋಮಯಾಜಿ ಎಂಬವರಿಗೆ ಪತ್ನಿ ಜ್ಯೋತಿ ಸೋಮಯಾಜಿ ಎಂಬವರು ಕತ್ತಿಯಿಂದ ಕಡಿದು ಗಾಯಗೊಳಿಸಿದ್ದಾರೆ. ಬಿ.ಸಿ.ರೋಡಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಸಮೀಪ ಇರುವ ಸೋಮಯಾಜಿ ಟೆಕ್ಸ್‌ಟೈಲ್ಸ್‌ ಮಳಿಗೆಗೆ ನುಗ್ಗಿದ ಜ್ಯೋತಿ ಕ್ಯಾಶ್ ಕೌಂಟರ್‌ನಲ್ಲಿ ಕುಳಿತಿದ್ದ ಗಂಡನಿಗೆ ಪತ್ನಿ ಕತ್ತಿಯಿಂದ ಕಡಿದು

ಬಂಟ್ವಾಳ : ಬುರ್ಖಾ ಧರಿಸಿಕೊಂಡು ಬಂದು ಜವುಳಿ ಅಂಗಡಿ ಮಾಲಕನ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿದ ಪತ್ನಿ Read More »

ಸುಖಾನಂದ ಶೆಟ್ಟಿ ಕೊಲೆ ಪ್ರಕರಣದ ಆರೋಪಿ 19 ವರ್ಷದ ಬಳಿಕ ಸೆರೆ

ಹಳೆ ಮನೆಯನ್ನು ಕೆಡವಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಆರೋಪಿ ಮಂಗಳೂರು : ಸುರತ್ಕಲ್‌ನಲ್ಲಿ 2006ರಲ್ಲಿ ನಡೆದ ಸುಖಾನಂದ ಶೆಟ್ಟಿ ಕೊಲೆ ಪ್ರಕರಣದ ಓರ್ವ ಆರೋಪಿಯನ್ನು ಪೊಲೀಸರು ಬರೋಬ್ಬರಿ 19 ವರ್ಷಗಳ ಬಳಿಕ ಸೆರೆ ಹಿಡಿದಿದ್ದಾರೆ. ಡಿಸೆಂಬರ್ 1, 2006ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಬಳಿ ಸುಖಾನಂದ ಶೆಟ್ಟಿಯನ್ನು ಕಬೀರ್ ಮತ್ತು ಆತನ ಸಹಚರರು ಕೊಲೆ ಮಾಡಿದ್ದರು. ಇದು ಕರಾವಳಿಯಲ್ಲಿ ನಡೆದ ಮೊದಲ ಕೋಮುಹತ್ಯೆ ಪ್ರಕರಣವಾಗಿತ್ತು. ಕರಾವಳಿಯಲ್ಲಿ ನಂತರ ನಡೆದ ಅನೇಕ ಕೋಮು ಹಿಂಸಾಚಾರಗಳಿಗೆ ಇದೇ

ಸುಖಾನಂದ ಶೆಟ್ಟಿ ಕೊಲೆ ಪ್ರಕರಣದ ಆರೋಪಿ 19 ವರ್ಷದ ಬಳಿಕ ಸೆರೆ Read More »

ಬೆಂಗಳೂರಿನಲ್ಲಿ 7.11 ಕೋ. ರೂ. ದರೋಡೆ : ಸಿಎಂಎಸ್‌ ವಾಹನ ಸಿಬ್ಬಂದಿ ತೀವ್ರ ವಿಚಾರಣೆ

ಹಾಡಹಗಲೇ ನಗರ ಮಧ್ಯದಲ್ಲಿ ನಡೆದ ದರೋಡೆ ಕೃತ್ಯದಿಂದ ಸರ್ಕಾರಕ್ಕೆಎ ತೀವ್ರ ಮುಜುಗರ ಬೆಂಗಳೂರು: ಬೆಂಗಳೂರಿನಲ್ಲಿ ಬುಧವಾರ ಹಾಡಹಗಲೇ ನಡೆದ ಸಿನಿಮೀಯ ಶೈಲಿಯ ದರೋಡೆ ಕೃತ್ಯದಲ್ಲಿ ಸಿಎಂಎಸ್‌ ವಾಹನ ಚಾಲಕ ಮತ್ತು ಸಿಬ್ಬಂದಿ ಮೇಲೆಯೇ ಅನುಮಾನ ಮೂಡಿದೆ. ಎಟಿಎಂಗೆ ಹಣ ತುಂಬುವ ಸಿಎಂಎಸ್‌ ವಾಹನವನ್ನು ಅಡ್ಡಗಟ್ಟಿ 7 ಕೋಟಿ 11 ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿರುವ ಘಟನೆಯಿಂದ ಬೆಂಗಳೂರು ನಗರ ಬೆಚ್ಚಿಬಿದ್ದಿದ್ದು, ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ. ಸರ್ಕಾರಕ್ಕೆ ಈ ದರೋಡೆ ಕೃತ್ಯದಿಂದ ಬಹಳ ಮುಜುಗರವಾಗಿದೆ.

ಬೆಂಗಳೂರಿನಲ್ಲಿ 7.11 ಕೋ. ರೂ. ದರೋಡೆ : ಸಿಎಂಎಸ್‌ ವಾಹನ ಸಿಬ್ಬಂದಿ ತೀವ್ರ ವಿಚಾರಣೆ Read More »

ಪಾಲಕರಿಂದ ಉಗ್ರನಾಗುವಂತೆ ಒತ್ತಡ: ಬಾಲಕನಿಂದ ಪೊಲೀಸರಿಗೆ ದೂರು

ತಿರುವನಂತಪುರ: ತನ್ನನ್ನು ಉಗ್ರನಾಗುವಂತೆ ಪಾಲಕರು ಪೀಡಿಸುತ್ತಿರುವುದಾಗಿ ‌ಕೇರಳದ ಬಾಲಕನೊಬ್ಬ ಪೊಲೀಸರಿಗೆ ದೂರು ನೀಡಿರುವ ಘಟನೆ ನಡೆದಿದೆ. ತನ್ನ ತಾಯಿ ಮತ್ತು ಮಲತಂದೆ ಮತೀಯವಾದದ ವಿಡಿಯೋ‌ಗಳನ್ನು ತೋರಿಸಿ, ತನ್ನನ್ನು ಉಗ್ರಗಾಮಿಯಾಗುವಂತೆ ಒತ್ತಡ ಹೇರುತ್ತಿದ್ದಾರೆ ಎಂದು 16 ವರ್ಷದ ಹುಡುಗನೊಬ್ಬ ಪೊಲೀಸರ ಮೊರೆ ಹೋಗಿರುವುದಾಗಿದೆ. ಈತನ ದೂರನ್ನಾಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಪ್ರಕರಣವನ್ನು ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ದಾಖಲು ಮಾಡಿಕೊಳ್ಳಲಾಗಿದೆ. ಬಾಲಕನ ದೂರನ್ನು ಪರಿಶೀಲಿಸಿ, ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.

ಪಾಲಕರಿಂದ ಉಗ್ರನಾಗುವಂತೆ ಒತ್ತಡ: ಬಾಲಕನಿಂದ ಪೊಲೀಸರಿಗೆ ದೂರು Read More »

ಕಾರು ಸ್ಫೋಟ ಪ್ರಕರಣ : ಅಲ್‌ ಫಲಾಹ್‌ ವಿವಿ ಸ್ಥಾಪಕನನ್ನು ಕಸ್ಟಡಿಗೊಪ್ಪಿಸಿದ ಕೋರ್ಟ್‌

ವೈಟ್‌ ಕಾಲರ್‌ ಟೆರರ್‌ ಜಾಲದ ಕೇಂದ್ರವಾಗಿದ್ದ ವಿವಿಯ ಸ್ಥಾಪಕ ನವದೆಹಲಿ: ದೆಹಲಿಯ ಕೆಂಪುಕೋಟೆ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಅಲ್ ಫಲಾಹ್ ವಿಶ್ವವಿದ್ಯಾಲಯದ ಸಂಸ್ಥಾಪಕ ಜಾವೆದ್ ಅಹ್ಮದ್ ಸಿದ್ದಿಕಿಯನ್ನು ನ್ಯಾಯಾಲಯ ಡಿಸೆಂಬರ್ 1ರವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿದೆ. ದೆಹಲಿ ಸ್ಫೋಟ ಮತ್ತು ವೈಟ್ ಕಾಲರ್ ಉಗ್ರ ಜಾಲದ ಹಿಂದಿನ ಭಯೋತ್ಪಾದಕ ಘಟಕದ ಕೇಂದ್ರ ಬಿಂದುವಾಗಿರುವ ಅಲ್ ಫಲಾಹ್ ವಿಶ್ವವಿದ್ಯಾಲಯದ ಸ್ಥಾಪಕ ಜವಾದ್ ಅಹ್ಮದ್ ಸಿದ್ದಿಕಿಯನ್ನು ಮಂಗಳವಾರ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ

ಕಾರು ಸ್ಫೋಟ ಪ್ರಕರಣ : ಅಲ್‌ ಫಲಾಹ್‌ ವಿವಿ ಸ್ಥಾಪಕನನ್ನು ಕಸ್ಟಡಿಗೊಪ್ಪಿಸಿದ ಕೋರ್ಟ್‌ Read More »

ವೈಟ್‌ ಕಾಲರ್‌ ಟೆರರ್‌ ಜಾಲದ ಉಗ್ರ ಡಾ.ಅಹ್ಮದ್‌ ಮೇಲೆ ಜೈಲಿನಲ್ಲಿ ಹಲ್ಲೆ

ಅಪಾಯಕಾರಿ ರಿಸಿನ್‌ ವಿಷ ತಯಾರಿಸಿ ಜನರನ್ನು ಸಾಯಿಸಲು ಸಂಚು ಮಾಡಿದ್ದ ಉಗ್ರ ಅಹಮದಾಬಾದ್ : ರಿಸಿನ್ ಎಂಬ ಅತ್ಯಂತ ಅಪಾಯಕಾರಿ ವಿಷ ಪದಾರ್ಥದ ಮೂಲಕ ದೇಶಾದ್ಯಂತ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿದ್ದ ಡಾ.ಅಹ್ಮದ್ ಮೊಹಿಯುದ್ದೀನ್ ಸಯ್ಯದ್ ಮೇಲೆ ಜೈಲಿನಲ್ಲಿ ಸಹಕೈದಿಗಳು ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ. ವೈಟ್‌ ಕಾಲರ್‌ ಟೆರರ್‌ ಜಾಲದ ಭಾಗವಾಗಿರುವ ಡಾ.ಅಹ್ಮದ್‌ನನ್ನು ಇತ್ತೀಚೆಗೆ ಹೈದರಾಬಾದ್​ನಿಂದ ಬಂಧಿಸಿ ಗುಜರಾತ್‌ನ ಸಬರಮತಿ ಜೈಲಿನಲ್ಲಿರಿಸಲಾಗಿತ್ತು. ಜೈಲಿನಲ್ಲಿ ಕೈದಿಗಳ ನಡುವೆ ನಡೆದ ಗಲಾಟೆಯಲ್ಲಿ ಡಾ.ಅಹ್ಮದ್ ಮೇಲೆ ಸಹ ಕೈದಿಗಳು ಹಲ್ಲೆ

ವೈಟ್‌ ಕಾಲರ್‌ ಟೆರರ್‌ ಜಾಲದ ಉಗ್ರ ಡಾ.ಅಹ್ಮದ್‌ ಮೇಲೆ ಜೈಲಿನಲ್ಲಿ ಹಲ್ಲೆ Read More »

error: Content is protected !!
Scroll to Top