ಸೌಜನ್ಯಳ ನ್ಯಾಯಕ್ಕಾಗಿ ಸಂಘರ್ಷ ಹೋರಾಟಕ್ಕೂ ಸಿದ್ಧ : ಅರುಣ್ ಕುಮಾರ್ ಪುತ್ತಿಲ| ಪುತ್ತಿಲ ಪರಿವಾರದಿಂದ “ನಮ್ಮ ನಡೆ ನ್ಯಾಯದ ಕಡೆ” ಘೋಷ ವಾಕ್ಯದೊಂದಿಗೆ ಬೃಹತ್ ಮೌನಮೆರವಣಿಗೆ | ಬೃಹತ್ ಸಂಖ್ಯೆಯಲ್ಲಿ ಸೇರಿದ ಜನಸಮೂಹ
ಪುತ್ತೂರು: ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ನೈಜ ಆರೋಪಿಗಳನ್ನು ಪತ್ತೆಹಚ್ಚಿ ಸೂಕ್ತ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಪುತ್ತಿಲ ಪರಿವಾರ ಸಂಘಟನೆ ವತಿಯಿಂದ ಬೃಹತ್ ಮೌನ ಮೆರವಣಿಗೆ, ಪ್ರತಿಭಟನಾ ಸಭೆ ಸೋಮವಾರ ನಡೆಯಿತು. “ನಮ್ಮ ನಡೆ ನ್ಯಾಯದ ಕಡೆ “ ಎಂಬ ಘೋಷ ವಾಕ್ಯದೊಂದಿಗೆ ನಗರದ ದರ್ಬೆ ವೃತ್ತದಲ್ಲಿ ಮೌನ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಜನ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಸೌಜನ್ಯ ಕುಟುಂಬದವರಿಗೆ ನ್ಯಾಯಕ್ಕಾಗಿ ಘೋಷಣೆಗಳನ್ನು ಕೂಗಿದರು. ಪ್ರಥಮ ಬಾರಿ ಎಂಬಂತೆ ಪ್ರತಿಭಟನೆಯಲ್ಲಿ ಬೃಹತ್ […]









