ಅಪರಾಧ

ಬೆಂಕಿಯಿಟ್ಟು ಯುವಕನ ಬರ್ಬರ ಹತ್ಯೆ | ಆರೋಪಿ ಬಂಧನ | ಶಾರ್ಟ್ ಸರ್ಕ್ಯೂಟ್ ನಿಂದ ಸಾವು ಎಂದು ಆರೋಪಿಯಿಂದ ನಾಟಕ

ಮಂಗಳೂರು : ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಮುಳಿಹಿತ್ಲುವಿನಲ್ಲಿ ನಡೆದಿದೆ. ಜಗ್ಗು (35) ಹತ್ಯೆಯಾದ ಯುವಕ. ಹತ್ಯೆಗೈದ ಆರೋಪಿ ತೌಸಿಫ್ ಹುಸೈನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಶನಿವಾರ ಬೆಳಿಗ್ಗೆ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಜಗ್ಗು ನನ್ನು ಕ್ಷುಲ್ಲಕ ಕಾರಣಕ್ಕೆ ಬೆಂಕಿಯಿಟ್ಟು ಸುಟ್ಟುಹಾಕಿದ್ದು, ಸ್ಥಳೀಯರು ತಕ್ಷಣ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಪ್ರಕರಣದಿಂದ ತಪ್ಪಿಸಿಕೊಳ್ಳಲು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮೃತಪಟ್ಟಿದ್ದಾನೆ ಎಂದು ಸಾರ್ವಜನಿಕರಲ್ಲಿ […]

ಬೆಂಕಿಯಿಟ್ಟು ಯುವಕನ ಬರ್ಬರ ಹತ್ಯೆ | ಆರೋಪಿ ಬಂಧನ | ಶಾರ್ಟ್ ಸರ್ಕ್ಯೂಟ್ ನಿಂದ ಸಾವು ಎಂದು ಆರೋಪಿಯಿಂದ ನಾಟಕ Read More »

ನಗರದ ಲಾಡ್ಜ್ ನಲ್ಲಿ ಕುಳಿತ ಸ್ಥಿತಿಯಲ್ಲೇ ಮೃತದೇಹ ಪತ್ತೆ

ಪುತ್ತೂರು: ನಗರದ ಮುಖ್ಯರಸ್ತೆಯಲ್ಲಿರುವ ಲಾಡ್ಜ್ ನ ರೂಂ ಒಂದರಲ್ಲಿ ಕುಳಿತಲ್ಲೇ ಮೃತಪಟ್ಟ ಮೃತದೇಹ ಶನಿವಾರ ಸಂಜೆ ಪತ್ತೆಯಾಗಿದೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಇರುವ ತಂಪು ಪಾನೀಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಶಿವಪ್ರಸಾದ್ (40) ಎಂದು ಗುರತಿಸಲಾಗಿದೆ. ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿದು ಬಂದಿದ್ದು, ಕಳೆದ ಹಲವಾರು ವರ್ಷಗಳಿಂದ ತಂಪು ಪಾನೀಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಶಿವಪ್ರಸಾದ್ ಕೆಲವೊಮ್ಮೆ ಇದೇ ಲಾಡ್ಜ್ ನಲ್ಲಿ ರೂಮ್ ಪಡೆದು ತಂಗುತ್ತಿದ್ದರು ಎನ್ನಲಾಗಿದೆ. ನಗರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ

ನಗರದ ಲಾಡ್ಜ್ ನಲ್ಲಿ ಕುಳಿತ ಸ್ಥಿತಿಯಲ್ಲೇ ಮೃತದೇಹ ಪತ್ತೆ Read More »

ಪಶ್ಚಿಮ ಬಂಗಾಳದಲ್ಲಿ ಪಂಚಾಯಿತಿ ಚುನಾವಣೆ ವೇಳೆ ಹಿಂಸಾಚಾರ | ಒಂಭತ್ತು ಮಂದಿ ಮೃತ್ಯು

ಕೊಲ್ಕತ್ತಾ: ಪಂಚಾಯಿತಿ ಚುನಾವಣೆ ವೇಳೆ ಹಿಂಸಾಚಾರ ಭುಗಿಲೆದ್ದ ಪರಿಣಾಮ ಒಂಭತ್ತು ಮಂದಿ ಸಾವನ್ನಪ್ಪಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ಮೂರು ಹಂತದ ಪಂಚಾಯತಿ ಚುನಾವಣೆಗೆ ಮತದಾನ ನಡೆಯುತ್ತಿದ್ದು, ನಾಮಪತ್ರ ಸಲ್ಲಿಕೆ ವೇಳೆ ತೀವ್ರ ಹಿಂಸಾಚಾರ ನಡೆದಿತ್ತು. ಪರಿಣಾಮ ಟಿಎಂಸಿ ಕಾರ್ಯಕರ್ತ ಸಹಿತ ಒಂಭತ್ತು ಮಂದಿ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಮತದಾನ ಆರಂಭಕ್ಕೂ ಕೆಲವೇ ಗಂಟೆಗಳ ಮೊದಲು ಮುರ್ಷಿದಾಬಾದ್‌ನಲ್ಲಿ ತಡರಾತ್ರಿ ಟಿಎಂಸಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದು, ಮನೆಯೊಂದನ್ನು ಧ್ವಂಸಮಾಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಪಂಚಾಯಿತಿ ಚುನಾವಣೆ ವೇಳೆ ಹಿಂಸಾಚಾರ | ಒಂಭತ್ತು ಮಂದಿ ಮೃತ್ಯು Read More »

ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಕೊಯಮತ್ತೂರು ಡಿಐಜಿ ವಿಜಯಕುಮಾರ್

ಕೊಯಮತ್ತೂರು: ಕೊಯಮತ್ತೂರು ಡಿಐಜಿ ವಿಜಯಕುಮಾರ್ ಅವರು ತಮ್ಮ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. 2009ರ ಐಪಿಎಸ್ ಬ್ಯಾಚ್‌ನವರಾಗಿದ್ದ ಇವರು, 2022 ಜನವರಿ 6ರಂದು ಚೆನ್ನೈನ ಅಣ್ಣಾನಗರ ಡೆಪ್ಯುಟಿ ಕಮಿಷನರ್‌ನಿಂದ ಕೊಯಮತ್ತೂರು ಡಿಐಜಿಯಾಗಿ ಭಡ್ತಿ ಪಡೆದಿದ್ದರು ಎನ್ನಲಾಗಿದೆ. ಕಾಂಚೀಪುರಂ, ಕಡಲೂರು, ನಾಗಪಟ್ಟಿಣಂ ಮತ್ತು ತಿರುವರೂರ್ನಲ್ಲಿ ಡಿಎಸ್ಪಿಯಾಗಿ ಕೆಲಸ ಮಾಡಿದ್ದಾರೆ. ಈ ಕುರಿತು ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ವರದಿಗಳ ಪ್ರಕಾರ, ಐಪಿಎಸ್ ಅಧಿಕಾರಿ ತಮ್ಮ ಬೆಳಗಿನ ವಾಕಿಂಗ್ ಬಳಿಕ

ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಕೊಯಮತ್ತೂರು ಡಿಐಜಿ ವಿಜಯಕುಮಾರ್ Read More »

ನೀರಿನ ಟ್ಯಾಂಕಿಗೆ ಹಾರಿ ಮಹಿಳೆ ಆತ್ಮಹತ್ಯೆ

ವಿಟ್ಲ : ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ನೆಕ್ಕರೆ ಮಠ ಎಂಬಲ್ಲಿ ಮಹಿಳೆಯೊಬ್ಬರು ನೀರಿನ‌ ಟ್ಯಾಂಕಿಗೆ ಹಾರಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಶಾಂತಲಾ (41) ಆತ್ಮಹತ್ಯೆ ಮಾಡಿಕೊಂಡವರು. ವಿಪರೀತ ಸೊಂಟ ನೋವಿನಿಂದ ಬಳಲುತ್ತಿದ್ದು ಅವರು, ಜೀವನದಲ್ಲಿ ಜಿಗುಪ್ಸೆಗೊಂಡು ನೀರಿನ ಟ್ಯಾಂಕ್ ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ.

ನೀರಿನ ಟ್ಯಾಂಕಿಗೆ ಹಾರಿ ಮಹಿಳೆ ಆತ್ಮಹತ್ಯೆ Read More »

ಕೊಲೆ ಪ್ರಕರಣ ಆರೋಪಿ ಬಂಧನ

ಪುತ್ತೂರು : ಕೊಲೆ ಪ್ರಕರಣ ಸಂಬಂಧಿಸಿದ ಆರೋಪಿಯೋರ್ವನನ್ನು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೊಳ್ತಿಗೆ ಪಾಂಬಾರು ಸಿಆರ್ ಸಿ ಕಾಲನಿ ನಿವಾಸಿ ವಿಜಯ ಬಂಧಿತ ಆರೋಪಿ. ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯಲ್ಲಿ ಈತನನ್ನು ಬಂಧಿಸಿದ್ದು, ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ಸತ್ರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಕೊಲೆ ಪ್ರಕರಣ ಆರೋಪಿ ಬಂಧನ Read More »

ಸೌಜನ್ಯ ಹತ್ಯೆ ಪ್ರಕರಣದ ನಿಜವಾದ ಆರೋಪಿಗಳ ಪತ್ತೆಗೆ ದೈವದ ಮೊರೆ ಹೋದ ಸೌಜನ್ಯ ಕುಟುಂಬ | 6 ತಿಂಗಳೊಳಗೆ ಶಿಕ್ಷೆಯಾದ್ರೆ ಕಾನತ್ತೂರು ದೈವ, ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ಹರಕೆ

ಬೆಳ್ತಂಗಡಿ: ಧರ್ಮಸ್ಥಳದ ಸಮೀಪ ನೇತ್ರಾವತಿಯ ಪಕ್ಕದ ಕಾಡಿನಲ್ಲಿ ಭೀಕರ ಅತ್ಯಾಚಾರಕ್ಕೀಡಾಗಿ ಕೊಲೆಗೀಡಾಗಿದ್ದ ಸೌಜನ್ಯ ಹತ್ಯೆ ಪ್ರಕರಣಕ್ಕೆ 11 ವರ್ಷಗಳ ಬಳಿಕ ಪ್ರಕರಣದ ತನಿಖೆ ಮರು ಜೀವ ಪಡೆದುಕೊಳ್ಳುತ್ತಿದೆ. ಸಿಬಿಐ ವಿಶೇಷ ಕೋರ್ಟ್ ನಲ್ಲಿ, ಆರೋಪಿ ಸಂತೋಷ್ ರಾವ್ ನಿರಪರಾಧಿ ಎಂದು ತೀರ್ಪು ಬರುತ್ತಲೇ ನಿಜವಾದ ಅಪರಾಧಿ ಯಾರು ಅನ್ನುವ ಪ್ರಶ್ನೆ ಉದ್ಭವ ಆಗಿದೆ. ಸೌಜನ್ಯ ಪೋಷಕರು ಮತ್ತು ಹೋರಾಟಗಾರರು ಮಾಧ್ಯಮಗಳ ಮುಂದೆ ಬಂದು ತಮ್ಮ ನೋವನ್ನು ಮತ್ತು ಬೇಸರವನ್ನು ಮತ್ತು ನಮ್ಮ ನ್ಯಾಯ ವ್ಯವಸ್ಥೆಯ ಮೇಲಿನ ಒಟ್ಟಾರೆ

ಸೌಜನ್ಯ ಹತ್ಯೆ ಪ್ರಕರಣದ ನಿಜವಾದ ಆರೋಪಿಗಳ ಪತ್ತೆಗೆ ದೈವದ ಮೊರೆ ಹೋದ ಸೌಜನ್ಯ ಕುಟುಂಬ | 6 ತಿಂಗಳೊಳಗೆ ಶಿಕ್ಷೆಯಾದ್ರೆ ಕಾನತ್ತೂರು ದೈವ, ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ಹರಕೆ Read More »

ಯುವಕ ನೇಣು ಬಿಗಿದು ಆತ್ಮಹತ್ಯೆ

ಬಂಟ್ವಾಳ : ಯುವಕನೋರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗೂಡಿನಬಳಿ ಯಲ್ಲಿ ನಡೆದಿದೆ. ಮೃತನನ್ನು ಬಿ.ಮೂಡ ಗ್ರಾಮದ ಗೂಡಿನಬಳಿ ನಿವಾಸಿ ಚೆರಿಯೆಮೋನು ಎಂಬವರ ಪುತ್ರ ಜಾಫರ್ (24) ಎಂದು ತಿಳಿದುಬಂದಿದೆ. ಕೂಲಿ ಕೆಲಸ ಮಾಡುತ್ತಿದ್ದ ಈತ ತನ್ನ ಮನೆಯ ಕೊಠಡಿಯಲ್ಲಿ ಫ್ಯಾನ್ ಗೆ ನೇಣು ಬಿಗಿದು ಮಾಡಿಕೊಂಡಿದ್ದಾರೆ. ಮೃತರು ತಂದೆ, ತಾಯಿ, 6 ಮಂದಿ ಸಹೋದರರು, ನಾಲ್ವರು ಸಹೋದರಿಯರನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು

ಯುವಕ ನೇಣು ಬಿಗಿದು ಆತ್ಮಹತ್ಯೆ Read More »

ಪ್ರಧಾನಿ ಮೋದಿ ನಿವಾಸದ ಬಳಿ ಡ್ರೋನ್ ಹಾರಾಟ | ಪೊಲೀಸರಿಂದ ತನಿಖೆ

ನವದೆಹಲಿ: ನವದೆಹಲಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಬಳಿ ಡ್ರೋನ್‌ ಹಾರಾಟವಾಗಿರುವ ಕುರಿತು ವರದಿಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿ ಅವರ ರಕ್ಷಣೆಗಿರುವ ವಿಶೇಷ ರಕ್ಷಣಾ ತಂಡ ಡ್ರೋನ್‌ ಹಾರಾಟವನ್ನು ನೋಡಿ ಕೂಡಲೇ ಪೊಲೀಸರಿಗೆ ಮಾಹಿತಿಯನ್ನು ನೀಡಿದೆ. ಪೊಲೀಸರು ಕೂಡಲೇ ತನಿಖೆ ಆರಂಭಿಸಿದ್ದಾರೆ.ಇನ್ನು ಡ್ರೋನ್‌ ಪತ್ತೆ ಕಾರ್ಯವನ್ನು ಆರಂಭಿಸಿರುವ ಪೊಲೀಸರಿಗೆ ಇದುವರೆಗೆ ಯಾವುದೇ ಡ್ರೋನ್‌ ಪತ್ತೆಯಾಗಿಲ್ಲ ಎಂದು ವರದಿ ತಿಳಿಸಿದೆ. ಮೋದಿ ಅವರ ನಿವಾಸವು ನೋ ಡ್ರೋನ್ ಝೋನ್ ಅಡಿಯಲ್ಲಿ ಬರುತ್ತದೆ. ಆದರೂ ಡ್ರೋನ್‌

ಪ್ರಧಾನಿ ಮೋದಿ ನಿವಾಸದ ಬಳಿ ಡ್ರೋನ್ ಹಾರಾಟ | ಪೊಲೀಸರಿಂದ ತನಿಖೆ Read More »

ಕುಂಬ್ರದ ವ್ಯಕ್ತಿ ದಿಢೀರ್ ನಾಪತ್ತೆ | ಕುಟುಂಬ ಆತಂಕದಲ್ಲಿ

ಪುತ್ತೂರು : ಒಳಮೊಗ್ರು ಗ್ರಾಮದ ಕುಂಬ್ರ ನಿವಾಸಿ ಉಮ್ಮರ್ ಎಂಬವರು ದಿಢೀರ್ ನಾಪತ್ತೆಯಾದ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶನಿವಾರ ಮಧ್ಯಾಹ್ನ 3 ಗಂಟೆ ವರೆಗೆ ಪುತ್ತೂರಿನಲ್ಲಿದ್ದ ಅವರು ಬಳಿಕ ನಾಪತ್ತೆಯಾಗಿದ್ದಾರೆ. ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಜು.3 ರಂದು ಅವರ ಪುತ್ರನಿಗೆ ಮದುವೆ ನಡೆಯಲಿದ್ದು, ಜು.2 ರಂದು ನಡೆಯಬೇಕಿದ್ದ ಮೆಹೆಂದಿ ರದ್ದು ಮಾಡಿದ್ದಾರೆ. ಇದೀಗ ನಾಪತ್ತೆಯಾಗಿರುವ ಕುರಿತು ಕುಟುಂಬದವರಿಗೆ ಅಘಾತ ಉಂಟು ಮಾಡಿದ್ದು, ಪೊಲೀಸರು ಹುಡುಕಾಟದಲ್ಲಿ ತೊಡಗಿದ್ದಾರೆ.

ಕುಂಬ್ರದ ವ್ಯಕ್ತಿ ದಿಢೀರ್ ನಾಪತ್ತೆ | ಕುಟುಂಬ ಆತಂಕದಲ್ಲಿ Read More »

error: Content is protected !!
Scroll to Top