ಅಪರಾಧ

ಆಸ್ಪತ್ರೆಗೆ ದಾಖಲಾದ ಬಾಲಕ ಶಸ್ತ್ರಚಿಕಿತ್ಸೆ ಬಳಿಕ ಮೃತ್ಯು : ವೈದ್ಯರ ಬೇಜವಾಬ್ದಾರಿ ಆರೋಪ |ಆಸ್ಪತ್ರೆ ಮುಂಭಾಗ ಮೃತದೇಹ ಇಟ್ಟು ದಲಿತ ಸಂಘಟನೆಯಿಂದ ಪ್ರತಿಭಟನೆ

ಪುತ್ತೂರು; ಅಪ್ರಾಪ್ತ ಬಾಲಕನೋರ್ವ ಕರುಳಿಗೆ ಸಂಬಂಧಿಸಿದ ಸಮಸ್ಯೆಯಿಂದ ಹೊಟ್ಟೆನೋವು ಉಂಟಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿ ಬಳಿಕ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಬಾಲಕನ ಸಾವಿಗೆ ಪುತ್ತೂರಿನ ಖಾಸಗಿ ಆಸ್ಪತ್ರೆಯ ವೈದ್ಯರುಗಳೇ ಕಾರಣ ಎಂದು ಆರೋಪಿಸಿ ಮೃತ ಬಾಲಕನ ಶವವನ್ನು ಆಸ್ಪತ್ರೆಯ ಮುಂದಿಟ್ಟು ದಲಿತ ಸಂಘಟನೆ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ. ಪ್ರತಿಭಟನಾ ನಿರತ ದಲಿತ ಸಂಘಟನೆ ಮೃತ ಬಾಲಕನ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಬೇಕು, ಜತೆಗೆ ಬೇಜವಾಬ್ದಾರಿ ವಹಿಸಿ […]

ಆಸ್ಪತ್ರೆಗೆ ದಾಖಲಾದ ಬಾಲಕ ಶಸ್ತ್ರಚಿಕಿತ್ಸೆ ಬಳಿಕ ಮೃತ್ಯು : ವೈದ್ಯರ ಬೇಜವಾಬ್ದಾರಿ ಆರೋಪ |ಆಸ್ಪತ್ರೆ ಮುಂಭಾಗ ಮೃತದೇಹ ಇಟ್ಟು ದಲಿತ ಸಂಘಟನೆಯಿಂದ ಪ್ರತಿಭಟನೆ Read More »

ಸೌಜನ್ಯಳ ನ್ಯಾಯಕ್ಕಾಗಿ ಸಂಘರ್ಷ ಹೋರಾಟಕ್ಕೂ ಸಿದ್ಧ : ಅರುಣ್ ಕುಮಾರ್ ಪುತ್ತಿಲ| ಪುತ್ತಿಲ ಪರಿವಾರದಿಂದ “ನಮ್ಮ ನಡೆ ನ್ಯಾಯದ ಕಡೆ” ಘೋಷ ವಾಕ್ಯದೊಂದಿಗೆ ಬೃಹತ್ ಮೌನಮೆರವಣಿಗೆ | ಬೃಹತ್ ಸಂಖ್ಯೆಯಲ್ಲಿ ಸೇರಿದ ಜನಸಮೂಹ

ಪುತ್ತೂರು: ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ನೈಜ ಆರೋಪಿಗಳನ್ನು ಪತ್ತೆಹಚ್ಚಿ ಸೂಕ್ತ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಪುತ್ತಿಲ ಪರಿವಾರ ಸಂಘಟನೆ ವತಿಯಿಂದ ಬೃಹತ್ ಮೌನ ಮೆರವಣಿಗೆ, ಪ್ರತಿಭಟನಾ ಸಭೆ ಸೋಮವಾರ ನಡೆಯಿತು. “ನಮ್ಮ ನಡೆ ನ್ಯಾಯದ ಕಡೆ “ ಎಂಬ ಘೋಷ ವಾಕ್ಯದೊಂದಿಗೆ ನಗರದ ದರ್ಬೆ ವೃತ್ತದಲ್ಲಿ ಮೌನ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಜನ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಸೌಜನ್ಯ ಕುಟುಂಬದವರಿಗೆ ನ್ಯಾಯಕ್ಕಾಗಿ ಘೋಷಣೆಗಳನ್ನು ಕೂಗಿದರು. ಪ್ರಥಮ ಬಾರಿ ಎಂಬಂತೆ ಪ್ರತಿಭಟನೆಯಲ್ಲಿ ಬೃಹತ್

ಸೌಜನ್ಯಳ ನ್ಯಾಯಕ್ಕಾಗಿ ಸಂಘರ್ಷ ಹೋರಾಟಕ್ಕೂ ಸಿದ್ಧ : ಅರುಣ್ ಕುಮಾರ್ ಪುತ್ತಿಲ| ಪುತ್ತಿಲ ಪರಿವಾರದಿಂದ “ನಮ್ಮ ನಡೆ ನ್ಯಾಯದ ಕಡೆ” ಘೋಷ ವಾಕ್ಯದೊಂದಿಗೆ ಬೃಹತ್ ಮೌನಮೆರವಣಿಗೆ | ಬೃಹತ್ ಸಂಖ್ಯೆಯಲ್ಲಿ ಸೇರಿದ ಜನಸಮೂಹ Read More »

ಅರಣ್ಯಾಧಿಕಾರಿಗಳು ನ್ಯಾಯಾಲಯದ ತೀರ್ಪು ಓದುವ ವೇಳೆ ಎಡವಟ್ಟು ಮಾಡಿ ನನ್ನನ್ನು ಉದ್ಯೋಗದಿಂದ ಅಮಾನತು ಮಾಡಿದ್ದಾರೆ : ಸಂಜೀವ ಪೂಜಾರಿ ಆರೋಪ

ಪುತ್ತೂರು: ಪುತ್ತೂರು ಅರಣ್ಯ ಅಧಿಕಾರಿಗಳು ನ್ಯಾಯಾಲಯದ ತೀರ್ಪು ಓದುವ ವೇಳೆ ಎಡವಟ್ಟು ಮಾಡಿ ನನ್ನನ್ನೂ ಉದ್ಯೋಗದಿಂದ ಅಮಾನತು ಮಾಡಿದ್ದಾರೆ. ನ್ಯಾಯ ಕೊಡಬೇಕಾದ ಅಧಿಕಾರಿಗಳೇ ಅನ್ಯಾಯ ಮಾಡಿದ್ದಾರೆಂದು ಪುತ್ತೂರಿನ ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಆರೋಪಿಸಿದ್ದಾರೆ. ಪುತ್ತೂರು ಅರಣ್ಯ ವಲಯದ ಕೊಯಿಲ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನನ್ನ ವಿರುದ್ಧ ವೃಥಾ ಸುಳ್ಳು ಆರೋಪ ಹೊರಿಸಿ ಜನವರಿ 13 2023 ರಂದು ಮಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಅಮಾನತು ಆದೇಶ ಹೊರಡಿಸಿರುತ್ತಾರೆ. ಇದನ್ನು ಪ್ರಶ್ನಿಸಿ ಕರ್ನಾಟಕ ಆಡಳಿತ ನ್ಯಾಯಾಧಿಕರಣ

ಅರಣ್ಯಾಧಿಕಾರಿಗಳು ನ್ಯಾಯಾಲಯದ ತೀರ್ಪು ಓದುವ ವೇಳೆ ಎಡವಟ್ಟು ಮಾಡಿ ನನ್ನನ್ನು ಉದ್ಯೋಗದಿಂದ ಅಮಾನತು ಮಾಡಿದ್ದಾರೆ : ಸಂಜೀವ ಪೂಜಾರಿ ಆರೋಪ Read More »

ಪುತ್ತೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಭಾರೀ ಅವ್ಯವಹಾರ | ಅಧಿಕಾರಿಯನ್ನು ತರಾಟೆಗೆ ಎತ್ತಿಕೊಂಡ ಶಾಸಕರು

ಪುತ್ತೂರು: ಇಲ್ಲಿನ ಮಹಿಳಾ ಮತ್ತು ಕಲ್ಯಾಣ ಇಲಾಖೆಯಲ್ಲಿ ಬಾರೀ ಗೋಲ್‌ಮಾಲ್ ನಡೆಯುತ್ತಿದೆ ಎಂದು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಬುಧವಾರ ಸಂಜೆ ಸಿಡಿಪಿಒ ಕಚೇರಿಗೆ ಭೇಟಿ ನೀಡಿದ್ದಾರೆ. ಶಾಸಕರು ಭೇಟಿ ನೀಡುವ ವೇಳೆ ಸಿಡಿಪಿಒ ಅಧಿಕಾರಿ ಕಚೇರಿಯಲ್ಲಿರಲಿಲ್ಲ. ಕರೆ ಮಾಡಿದಾಗ ಬೆಳ್ತಂಗಡಿ ಹೋಗಿರುವುದಾಗಿ ತಿಳಿಸಿದರು. ಈ ವೇಳೆ ಮೊಬೈಲ್ ಮೂಲಕವೇ ಅಧಿಕಾರಿಯನ್ನು ತರಾಟೆಗೆತ್ತಿಕೊಂಡ ಶಾಸಕರು “ ಇಲಾಖೆಯಿಂದ ” ಅಂಗನವಾಡಿಗೆ ಆಹಾರ (ಫುಡ್) ವಿತರಣೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ. ಖಾಸಗಿ ವ್ಯಕ್ತಿಗಳ

ಪುತ್ತೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಭಾರೀ ಅವ್ಯವಹಾರ | ಅಧಿಕಾರಿಯನ್ನು ತರಾಟೆಗೆ ಎತ್ತಿಕೊಂಡ ಶಾಸಕರು Read More »

ವಿಷ ಸೇವಿಸಿ ಆತ್ಮಹತ್ಯೆ

ಕಡಬ: ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದ ಐತ್ತೂರು ಗ್ರಾಮದ ಕೇರ್ಪಡ ನಿವಾಸಿ, ಕೆಎಫ್‌ಡಿಸಿ ನಿವೃತ್ತ ನೌಕರ ಮೋನಪ್ಪ ಗೌಡ (56ವ.)ರವರು ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೋನಪ್ಪ ಗೌಡರು ಅನಾರೋಗ್ಯದ ಹಿನ್ನೆಲೆಯಲ್ಲಿ 6 ವರ್ಷದ ಹಿಂದೆ ಕೆಎಸ್‌ಡಿಸಿ ಉದ್ಯೋಗ ಬಿಟ್ಟಿದ್ದರು. ಆ.6ರಂದು ಬೆಳಿಗ್ಗೆ ಮೈಲುತುತ್ತು ಸೇವಿಸಿ ಅಸ್ವಸ್ಥರಾಗಿದ್ದ ಅವರನ್ನು 108 ಆಂಬುಲೆನ್ಸ್‌ನಲ್ಲಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ

ವಿಷ ಸೇವಿಸಿ ಆತ್ಮಹತ್ಯೆ Read More »

ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು: ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ಳಿಪ್ಪಾಡಿ ಬೇರಿಕೆಯ ಕಾಯರ್ ಕಾಡ್ ನಲ್ಲಿ ನಡೆದಿದೆ. ಪುತ್ತೂರಿನ ಶರ್ಮಹಾನ್ ಸೊಸೈಟಿಯ ಅಧ್ಯಕ್ಷರಾಗಿದ್ದ ಗಿರೀಶ್ ಶರ್ಮ ಅವರ ತಂದೆ ಗಣೇಶ್ ಶರ್ಮ(60ವ)ರವರು ಮನೆಯ ಸಮೀಪ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು. ಅವರು ತನ್ನ ಮನೆಯ ಹಿಂಬದಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತರು ಪತ್ನಿ, ಪುತ್ರ, ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ Read More »

ಗಿರಾಕಿ ಸೋಗಿನಲ್ಲಿ ಬಂದು ಚಿನ್ನದ ಚೈನ್ ಎಗರಿಸಿದ ಮಹಿಳೆ | ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯ

ಪುತ್ತೂರು: ಮಹಿಳೆಯೊಬ್ಬರು ಗಿರಾಕಿ ಸೋಗಿನಲ್ಲಿ ಬಂದು ಚಿನ್ನಾಭರಣ ಅಂಗಡಿಯಿಂದ ಚಿನ್ನದ ಚೈನು ಎಗರಿಸಿದ ಘಟನೆ ನಡೆದಿದೆ. ಸೋಮವಾರ ನಗರದ ಕೋರ್ಟ್ ರಸ್ತೆಯಲ್ಲಿರುವ ಬಾವಾ ಜ್ಯುವೆಲ್ಲರ್ಸ್ ಗೆ ಬುರ್ಖಾ ಧರಿಸಿ ಸಣ್ಣ ಮಗುವಿನೊಂದಿಗೆ ಬಂದ ಮಹಿಳೆಯೊಬ್ಬರು ಈ ಕೃತ್ಯ ಎಸಗಿದ್ದಾರೆ. ಗಿರಾಕಿಯಂತೆ ಬಂದ ಮಹಿಳೆ 8 ಗ್ರಾಂ, 4ಗ್ರಾಂ ನ ಚೈನು(ಸರ) ಬೇಕೆಂದು ಬೇರೆ ಬೇರೆ ಡಿಸೈನ್ ನ ಸರಗಳನ್ನು ನೋಡಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಆ ಮಹಿಳೆ ಮಗುವಿಗೆ ಎದೆ ಹಾಲು ಕೊಡಲು ಶುರು ಮಾಡಿದೆ. ಈ

ಗಿರಾಕಿ ಸೋಗಿನಲ್ಲಿ ಬಂದು ಚಿನ್ನದ ಚೈನ್ ಎಗರಿಸಿದ ಮಹಿಳೆ | ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯ Read More »

ಸೇತುವೆ ನಿರ್ಮಾಣಕ್ಕೆಂದು ತಂದಿಟ್ಟಿದ್ದ ಸಾಮಾಗ್ರಿಗಳು ಕಳವು | ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು

ವಿಟ್ಲ: ಸೇತುವೆ ನಿರ್ಮಾಣಕ್ಕೆಂದು ತಂದಿಟ್ಟಿದ್ದ ವಸ್ತುಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ಬಿ ಮೂಡ ಗ್ರಾಮದ ನಿವಾಸಿ, ಕೆ.ಎಸ್‍.ಆರ್. ಕನ್‍ ಸ್ಟ್ರಕ್ಷನ್ ಕಂಪೆನಿಯ ಪಿಆರ್ ಒ ಆಗಿರುವ ಆರ್.ನಂದಕುಮಾರ್ ದೂರು ನೀಡಿದ್ದಾರೆ. ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆಂದು ತಂದಿಟ್ಟಿದ್ದ ಕಬ್ಬಿಣದ ಸಲಾಖೆಗಳು, ಪ್ಲೇಟ್ಸ್ ಇನ್ನಿತರ ಸಾಮಾಗ್ರಿಗಳು ಸೋಮವಾರ ಕಳ್ಳತನವಾಗಿತ್ತು. ಕಳ್ಳತನವಾದ ಸಾಮಾಗ್ರಿಗಳ ಒಟ್ಟು ಮೌಲ್ಯ 3.50 ಲಕ್ಷ ಎಂದು ಅಂದಾಜಿಸಲಾಗಿದೆ.

ಸೇತುವೆ ನಿರ್ಮಾಣಕ್ಕೆಂದು ತಂದಿಟ್ಟಿದ್ದ ಸಾಮಾಗ್ರಿಗಳು ಕಳವು | ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು Read More »

ರಾಜ್ಯ ಕೃಷಿ ಸಚಿವರಿಂದ ಕೃಷಿ ಅಧಿಕಾರಿಗಳು, ಸಿಬ್ಬಂದಿಗಳಿಂದ ಹಣಕ್ಕಾಗಿ ಒತ್ತಡ | ಕ್ರಮ ಕೈಗೊಳ್ಳುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಮನವಿ

ಮಂಡ್ಯ: ರಾಜ್ಯ ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಕೃಷಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ತಲಾ 6 ರಿಂದ 8 ಲಕ್ಷ ರೂ. ನೀಡುವಂತೆ ಮಂಡ್ಯ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಮೂಲಕ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿ ಮಂಡ್ಯ ಜಿಲ್ಲೆಯ 7 ಮಂದಿ ಸಹಾಯಕ ಕೃಷಿ ನಿರ್ದೇಶಕರು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಮೂಲಕ ಕರ್ನಾಟಕ ಸರಕಾರದ  ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ. ಈ ಕುರಿತು ಮಂಡ್ಯ ಜಿಲ್ಲೆಯ ಮಂಡ್ಯ, ಮಳವಳ್ಳಿ, ಕೃಷ್ಣರಾಜಪೇಟೆ, ಪಾಂಡವಪುರ, ನಾಗಮಂಗಲ, ಶ್ರೀರಂಗಪಟ್ಟಣ ಹಾಗೂ ಮದ್ದೂರು

ರಾಜ್ಯ ಕೃಷಿ ಸಚಿವರಿಂದ ಕೃಷಿ ಅಧಿಕಾರಿಗಳು, ಸಿಬ್ಬಂದಿಗಳಿಂದ ಹಣಕ್ಕಾಗಿ ಒತ್ತಡ | ಕ್ರಮ ಕೈಗೊಳ್ಳುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಮನವಿ Read More »

ಸೌಜನ್ಯ ಕೊಲೆ ನೈಜ ಆರೋಪಿಗಳ ಪತ್ತೆಗೆ ಹಕ್ಕೊತ್ತಾಯ | ಸವಣೂರು ಯುವಕ ಮಂಡಲ, ಸಮಾನ ಮನಸ್ಕರ ವೇದಿಕೆ ವತಿಯಿಂದ ಸವಣೂರಿನಲ್ಲಿ ಸಾರ್ವಜನಿಕ ಮೌನ ಪ್ರತಿಭಟನೆ

ಪುತ್ತೂರು: ಸವಣೂರು ಯುವ ಮಂಡಲ ಹಾಗೂ ಸಮಾನ ಮನಸ್ಕರ ವೇದಿಕೆ ವತಿಯಿಂದ ಸೌಜನ್ಯ ಕೊಲೆಯ ನೈಜ ಆರೋಪಿಗಳ ಪತ್ತೆಗೆ ಹಕ್ಕೊತ್ತಾಯದ ಕುರಿತು ಸಾರ್ವಜನಿಕ ಮೌನ ಪ್ರತಿಭಟನೆ ಸವಣೂರಿನಲ್ಲಿ ಸೋಮವಾರ ನಡೆಯಿತು. ಸವಣೂರು ಪದ್ಮಾವತಿ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಗಿರಿಶಂಕರ ಸುಲಾಯ ಮೌನ ಮೆರವಣಿಗೆಗೆ ಚಾಲನೆ ನೀಡಿದರು. ರಾಕೇಶ್ ರೈ ಕೆಡೆಂಜಿ ಸಂದರ್ಭೋಚಿತವಾಗಿ ಮಾತನಾಡಿದರು. ಬಳಿಕ ಮೌನ ಮೆರವಣಿಗೆ ಸಾಗಿ ಸವಣೂರು ವೃತ್ತದಲ್ಲಿ ಸಮಾಪನಗೊಂಡು ಬಳಿಕ ಯುವಕ ಮಂಡಲದ ಕಾರ್ಯದರ್ಶಿ ಕೀರ್ತನ್ ಕೋಡಿಂಬೈಲು ಅವರು ಸವಣೂರು ಗ್ರಾಮ

ಸೌಜನ್ಯ ಕೊಲೆ ನೈಜ ಆರೋಪಿಗಳ ಪತ್ತೆಗೆ ಹಕ್ಕೊತ್ತಾಯ | ಸವಣೂರು ಯುವಕ ಮಂಡಲ, ಸಮಾನ ಮನಸ್ಕರ ವೇದಿಕೆ ವತಿಯಿಂದ ಸವಣೂರಿನಲ್ಲಿ ಸಾರ್ವಜನಿಕ ಮೌನ ಪ್ರತಿಭಟನೆ Read More »

error: Content is protected !!
Scroll to Top