ಅಪರಾಧ

ಬ್ಯಾನರ್ ಅಳಡಿಕೆ ವಿಚಾರ | ಮಹೇಶ್ ಶೆಟ್ಟಿ ತಿಮರೋಡಿ ಸಹಿತ ಮತ್ತಿತರರ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ: ಬ್ಯಾನರ್ ವಿಚಾರದ ಹಿನ್ನಲೆಯಲ್ಲಿ ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಮುಖಂಡ ಮಹೇಶ್‌ ಶೆಟ್ಟಿ ತಿಮರೋಡಿ ಹಾಗೂ ಇತರರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಧರ್ಮಸ್ಥಳ ಗ್ರಾಮದ ಸಂದೀಪ್ ರೈ ಎಂಬವರು ತಿಮರೋಡಿ ಹಾಗೂ ಮತ್ತಿತರರ ವಿರುದ್ಧ ದೂರು ನೀಡಿದವರಾಗಿದ್ದಾರೆ. ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಧರ್ಮಸಂರಕ್ಷಣಾ ಯಾತ್ರೆಯ ಸಲುವಾಗಿ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದು ಯಾತ್ರೆಗೆ ಬೆಂಬಲ ಸೂಚಿಸಿ ಅಳವಡಿಸಲಾಗಿದ್ದ ಬ್ಯಾನರ್‌ಗಳ ಸಮೀಪದಲ್ಲೇ ಪಾದಯಾತ್ರೆಯನ್ನು ನಿಲ್ಲಿಸುವ ಒಳಸಂಚಿನಿಂದ ಪ್ರಾದೇಶಿಕ ಗುಂಪುಗಳ ನಡುವಣ ಸೌಹಾರ್ದಕ್ಕೆ […]

ಬ್ಯಾನರ್ ಅಳಡಿಕೆ ವಿಚಾರ | ಮಹೇಶ್ ಶೆಟ್ಟಿ ತಿಮರೋಡಿ ಸಹಿತ ಮತ್ತಿತರರ ವಿರುದ್ಧ ಪ್ರಕರಣ ದಾಖಲು Read More »

ತಂದೆಯಿಂದ ಮಗನ ಹತ್ಯೆ | ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

ಉಜಿರೆ: ತಂದೆಯೇ ಮಗನನ್ನು ಕೊಲೆ ಮಾಡಿದ ಘಟನೆ ಭಾನುವಾರ ರಾತ್ರಿ ಉಜಿರೆಯಲ್ಲಿ  ಸಂಭವಿಸಿದೆ. ಉಜಿರೆ ಗ್ರಾಮದ ಕೊಡೆಕಲ್ಲು ನಿವಾಸಿ ಜಗದೀಶ್ (30) ಮೃತಪಟ್ಟವರು. ಮೃತರ ತಂದೆ ಕೃಷ್ಣಯ್ಯಾಚಾರ್ ಎಂಬವರೇ ಕೊಲೆ ಮಾಡಿರುವುದಾಗಿ ಆರೋಪಿಸಲಾಗಿದೆ. ಭಾನುವಾರ ರಾತ್ರಿ ತಂದೆ ಹಾಗೂ ಮಗನ ನಡುವೆ ಮಾತಿನ ಜಗಳ ನಡೆದಿದೆ. ಇದಾದ ಬಳಿಕ ಕೃಷ್ಣಯ್ಯ ಆಚಾರ್ ಮನೆಯ ಕೋಣೆಯೊಳಗೆ ಹೋಗಿ ಚಿಲಕ ಹಾಕಿದ್ದಾರೆ. ಮಗ ಜಗದೀಶ ಬಾಗಿಲು ತೆಗೆಯಲು ಪ್ರಯತ್ನಿಸಿದಾಗ ಏಕಾಏಕಿ ಬಾಗಿಲು ತೆರೆದ ತಂದೆ ಕೃಷ್ಣಯ್ಯ ಆಚಾರ್ ಕೋಣೆಯ ಒಳಗಿನಿಂದ

ತಂದೆಯಿಂದ ಮಗನ ಹತ್ಯೆ | ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು Read More »

ಬಸ್ಸಿನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ | ಪೋಕ್ಸೋ ಪ್ರಕರಣ ದಾಖಲು

ಪುತ್ತೂರು: ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಮಂಗಳೂರಿನ ವ್ಯಕ್ತಿಯೊಬ್ಬನನ್ನು ಪುತ್ತೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿ ಪೋಕ್ಸೋ ಪ್ರಕರಣ ದಾಖಲಿಸಿಕೊಂಡ ಘಟನೆ ಶನಿವಾರ ಸಂಜೆ ನಡೆದಿದೆ. ಉದಯ (40) ಬಂಧಿತ ವ್ಯಕ್ತಿ. ಕಿರುಕುಳ ನೀಡಿದ ವಿಚಾರವನ್ನು ಆಕೆ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ತಿಳಿಸಿದ್ದು, ಪ್ರಯಾಣಿಕರು ಆತನನ್ನು ಇಳಿಯಲು ಬಿಡದೆ ತಡೆದಿದ್ದರು. ಬಳಿಕ ಬಸ್ ನ್ನು ಪೊಲೀಸ್ ಠಾಣೆಯ ಬಳಿಗೆ ಬಂದು ನಿಲ್ಲಿಸಲಾಯಿತು. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡರು ಎಂದು

ಬಸ್ಸಿನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ | ಪೋಕ್ಸೋ ಪ್ರಕರಣ ದಾಖಲು Read More »

ಕಾರ್ಖಾನೆಯೊಂದರ ಮಾಲಕಿಯ ಕತ್ತು ಹಿಸುಕಿ ಕೊಲೆ

ಬೆಂಗಳೂರು: ಕಾರ್ಖಾನೆಯೊಂದರ ಮಾಲಕಿಯ ಕತ್ತು ಬಿಗಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಹೆಬ್ಬಾಳದ ಬೆಂಗಳೂರು ಮೈಸೂರು ಹೆದ್ದಾರಿ ಪಕ್ಕದಲ್ಲೇ ಇರುವ ಜಿಕೆಎನ್ ಚಿಕೋರಿ ಇಂಡಸ್ಟ್ರೀಸ್ ನಲ್ಲಿ ನಡೆದಿದೆ. ಮಂಡ್ಯದ ವಿದ್ಯಾನಗರ ನಿವಾಸಿ ನಳಿನಿ (62) ಕೊಲೆಯಾದ ದುರ್ದೈವಿ. ಕೊಲೆಯಾಗಿರೊ ನಳಿನಿ ಸ್ಥಿತಿವಂತರಾಗಿದ್ದರು. ಗಂಡ ರಮೇಶ್‌, ಮಂಡ್ಯದಲ್ಲಿ ಕಾಫಿಪುಡಿ ಅಂಗಡಿ ಹಾಗೂ ಹೆಬ್ಬಾಳ ಬಳಿ ಚಿಕೋರಿ ಕಾರ್ಖಾನೆಯನ್ನ ನಡೆಸುತ್ತಿದ್ದರು. ಆದರೆ ಬರುಬರುತ್ತ ಸಾಕಷ್ಟು ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಮನೆಯನ್ನು ಬ್ಯಾಂಕ್ ನಲ್ಲಿ ಅಡ ಇಟ್ಟಿದ್ದರು. ಕಾರ್ಖಾನೆ ಬಂದ್ ಆಗಿದ್ದು,

ಕಾರ್ಖಾನೆಯೊಂದರ ಮಾಲಕಿಯ ಕತ್ತು ಹಿಸುಕಿ ಕೊಲೆ Read More »

ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಸುಳ್ಯದ ಯುವಕ ಆತ್ಮಹತ್ಯೆ

ಸುಳ್ಯ : ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ಶುಕ್ರವಾರ ನಡೆದಿದೆ. ಸುಳ್ಯ ಗುತ್ತಿಗಾರಿನ ಆಚಳ್ಳಿಯ ಸಿರಿಯಾಕ್ ಮ್ಯಾಥ್ಯೂ ಎಂಬವರ ಮಗ ಸೈಬಿನ್ ಈ ಕೃತ್ಯ ಎಸಗಿದವರು. ನಿನ್ನೆ ಗುತ್ತಿಗಾರು ಪೇಟೆಗೆ ಸೈಬಿನ್  ಆಗಮಿಸಿದ್ದು, ಎಲ್ಲರ ಜೊತೆ ಸಂತೋಷದಿಂದ ಮಾತನಾಡಿದ್ದ ಎನ್ನಲಾಗಿದೆ. ಸೈಬಿನ್ ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರು ಅವರ ಹಳೆ ಮನೆಯ ಪಕ್ಕ ಜಮಾಯಿಸಿದ್ದರು. ಈ ಸಂದರ್ಭ  ಪೊಲೀಸರು ಆಗಮಿಸಿ ಜನರನ್ನು ಚದುರಿಸಿದರು ಎಂದು ತಿಳಿದು ಬಂದಿದೆ.

ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಸುಳ್ಯದ ಯುವಕ ಆತ್ಮಹತ್ಯೆ Read More »

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಆರೋಪಿ ನೌಷದ್ ಸುಳಿವಿಗೆ ಎರಡು ಲಕ್ಷ ಘೋಷಣೆ

ಬೆಂಗಳೂರು: ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸುಳಿವು ನೀಡಿದವರಿಗೆ ಎರಡು ಲಕ್ಷ ರೂಪಾಯಿ ಘೋಷಣೆ ಮಾಡಿ ಬೆಂಗಳೂರು ಎನ್.ಐ.ಎ ಅಧಿಕಾರಿಗಳು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ. 2022 ಜುಲೈ 26ರಂದು ಹತ್ಯೆಯಾದ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಕೆಗುಡ್ಡೆ ನಿವಾಸಿ ನೌಷದ್ (32) ಎಂಬಾತ ಕೊಲೆ ಮಾಡಿದ ಆರೋಪಿಗಳು ಪರಾರಿಯಾಗಲು ಸಹಕರಿಸಿದ ಹಿನ್ನೆಲೆಯಲ್ಲಿ ಎನ್.ಐ.ಎ ಅಧಿಕಾರಿಗಳು ಈ ಮೊದಲೇ ಪಡಂಗಡಿಯಲ್ಲಿರುವ ಮನೆಗೆ ದಾಳಿ

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಆರೋಪಿ ನೌಷದ್ ಸುಳಿವಿಗೆ ಎರಡು ಲಕ್ಷ ಘೋಷಣೆ Read More »

ಸುಳ್ಯದ ವಿವಾಹಿತೆ ಬೆಂಗಳೂರಿನಲ್ಲಿ ಆತ್ಮಹತ್ಯೆ

ಸುಳ್ಯ: ಉದ್ಯಮಿಯೊಬ್ಬರ ಸೊಸೆ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಡೈರಿ ರಿಚ್ ಐಸ್‍ ಕ್ರೀಂ ಉದ್ಯಮಿ ಕನಕಮಜಲಿನ ಗಿರಿಯಪ್ಪ ಗೌಡರ ಸೊಸೆ, ರಾಜೇಶ್ ಎಂಬವರ ಪತ್ನಿ ಐಶ್ವರ್ಯ (26) ಈ ಕೃತ್ಯ ಎಸಗಿದವರು. ಉಬರಡ್ಕ ಮಿತ್ತೂರು ಗ್ರಾಮದ ಮದುವೆಗದ್ದೆ ಸುಬ್ರಹ್ಮಣ್ಯ ಗೌಡ ಹಾಗೂ ಉಷಾ ದಂಪತಿ ಪುತ್ರಿಯಾಗಿರುವ ಐಶ್ವರ್ಯ ನಾಲ್ಕು ವರ್ಷಗಳ ಹಿಂದೆ ರಾಜೇಶ್‍ ಅವರನ್ನು ವಿವಾಹವಾಗಿದ್ದು, ಬೆಂಗಳೂರಿನ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಪತಿ ರಾಜೇಶ್ ಐಸ್‍ ಕ್ರೀಂ ಪಾರ್ಲರ್ ನಡೆಸಿಕೊಂಡು ಬೆಂಗಳೂರಿನಲ್ಲೇ ವಾಸವಾಗಿದ್ದರು. ಅವರ ತಾಯಿಯೂ

ಸುಳ್ಯದ ವಿವಾಹಿತೆ ಬೆಂಗಳೂರಿನಲ್ಲಿ ಆತ್ಮಹತ್ಯೆ Read More »

ಹುಲಿ ವೇಷದ ತಂಡಗಳ ವಿಚಾರಕ್ಕೆ ಗಲಾಟೆ: ಮೂವರಿಗೆ ಚೂರಿ ಇರಿತ | ಮೆಲ್ಕಾರ್ ನಲ್ಲಿ ಘಟನೆ

ಬಂಟ್ವಾಳ: ಹುಲಿ ವೇಷದ ತಂಡಗಳ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಮೂವರಿಗೆ ಚೂರಿ ಇರಿತವಾದ ಘಟನೆ ಮೆಲ್ಕಾರಿನಲ್ಲಿ ನಡೆದಿದೆ. ಬೋಳಂಗಡಿ ನಿವಾಸಿಗಳಾದ ದೇವದಾಸ್, ಸಂದೀಪ್, ಶಂಕರ್ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರು. ಶೋಧನ್, ಯತೀಶ್, ಚೇತನ್, ಪ್ರಸನ್ನ, ಪ್ರದೀಪ್ ಮತ್ತು ಪ್ರಕಾಶ್ ತಂಡದವರು ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಮೆಲ್ಕಾರ್ ನಲ್ಲಿ ಎರಡು ತಂಡಗಳ ನಡುವೆ ಕೆಲ ದಿನಗಳ ಹಿಂದೆ ನಡೆದಿದ್ದ ಜಗಳ ನಡೆದಿತ್ತು. ನಿನ್ನೆ ತಂಡಗಳ ನಡುವೆ ಕಲಹ ಮುಂದುವರಿದು ಮೂವರ ಮೇಲೆ ಮತ್ತೊಂದು

ಹುಲಿ ವೇಷದ ತಂಡಗಳ ವಿಚಾರಕ್ಕೆ ಗಲಾಟೆ: ಮೂವರಿಗೆ ಚೂರಿ ಇರಿತ | ಮೆಲ್ಕಾರ್ ನಲ್ಲಿ ಘಟನೆ Read More »

ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

ಪುತ್ತೂರು: ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾವು ಸಮೀಪದ ಅಮ್ಚಿನಡ್ಕದಲ್ಲಿ ನಡೆದಿದೆ. ಆಯಿಷಾ ಎಂಬವರೇ ಈ ಕೃತ್ಯ ಎಸಗಿದವರು. ವಿವಾಹಿತೆಯಾಗಿದ್ದ ಆಯಿಷಾ ಮುಖಾರಿಮೂಲೆ ಜೈನುದ್ದೀನ್ ಎಂಬವರ ಪುತ್ರಿಯಾಗಿದ್ದಾರೆ. ಮೃತದೇಹ ಮನೆಯ ಬಾವಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ Read More »

ನಿರ್ಮಾಣ ಹಂತದ ಮನೆಯ ಮೇಲ್ಛಾವಣಿಯಿಂದ ಬಿದ್ದು ಕಾರ್ಮಿಕರೊಬ್ಬರು ಮೃತ್ಯು : ಗುತ್ತಿಗೆದಾರ ಗಂಭೀರ ಗಾಯ

ಅರಿಯಡ್ಕ:ನಿರ್ಮಾಣ ಹಂತದ ಮನೆಯ ಸಿಟೌಟ್‌ನ ಮೇಲ್ಬಾವಣಿ ಕುಸಿದ ಪರಿಣಾಮ ಕಾರ್ಮಿಕರೊಬ್ಬರು ಮೃತಪಟ್ಟು, ಗುತ್ತಿಗೆದಾರ ಗಂಭೀರ ಗಾಯಗೊಂಡಿರುವ ಘಟನೆ ಅರಿಯಡ್ಕ ಗ್ರಾಮದ ಪಾದಲಾಡಿ ಎಂಬಲ್ಲಿ ನಡೆದಿದೆ. ಅರಿಯಡ್ಕ ಗ್ರಾಮದ ಕೌಡಿಚ್ಚಾರ್ ನಿವಾಸಿ ಶೇಖರ್ ಕುಲಾಲ್(45) ಮೃತಪಟ್ಟವರು. ಶೇಖರ್ ಕುಲಾಲ್ ಅರಿಯಡ್ಕ ಗ್ರಾಮದ ಪಾದಲಾಡಿ ಎಂಬಲ್ಲಿ ಕಮಲ ಎಂಬವರ ಮನೆಗೆ ಸೆಂಟ್ರಿಂಗ್ ಕೆಲಸಕ್ಕೆ ತೆರಳಿದ್ದರು. ಮನೆಯ ಸಿಟೌಟ್‌ನ ಮೇಲ್ಟಾವಣಿಯ ಸೆಂಟ್ರಿಂಗ್ ಕೆಲಸ ಮಾಡುತ್ತಿರುವ ಸಂದರ್ಭ ಮೇಲ್ಟಾವಣೆ ಕುಸಿದು ಬಿದ್ದು ಶೇಖರ್ ಕುಲಾಲ್ ಹಾಗೂ ಜೊತೆಗೆ ಕೆಲಸ ಮಾಡಿಕೊಂಡಿದ್ದ ಗುತ್ತಿಗೆದಾರ ಸಂಜೀವ

ನಿರ್ಮಾಣ ಹಂತದ ಮನೆಯ ಮೇಲ್ಛಾವಣಿಯಿಂದ ಬಿದ್ದು ಕಾರ್ಮಿಕರೊಬ್ಬರು ಮೃತ್ಯು : ಗುತ್ತಿಗೆದಾರ ಗಂಭೀರ ಗಾಯ Read More »

error: Content is protected !!
Scroll to Top