ಚಾರ್ವಕದ ಯುವಕ ತಾರನಾಥ ಬೆಂಗಳೂರಿನಲ್ಲಿ ನೇಣು ಬಿಗಿದು ಆತ್ಮಹತ್ಯೆ
ಬೆಂಗಳೂರು: ಕಡಬ ತಾಲೂಕಿನ ಚಾರ್ವಕ ನಿವಾಸಿಯೊಬ್ಬರು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಚಾರ್ವಕ ನಿವಾಸಿ ತಾರಾನಾಥ (39) ಎಂಬವರೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು. ಕಡಬ ತಾಲೂಕಿನ ಬೊಮ್ಮಳಿಕೆ ಪದ್ಮನಾಭ ಗೌಡ ಎಂಬವರ ಪುತ್ರರಾಗಿರುವ ತಾರನಾಥ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ತನ್ನ ರೂಮ್ ನಲ್ಲೇ ನ.3ರಂದು ರಾತ್ರಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ಕಾರಣಗಳು ತಿಳಿದು ಬಂದಿಲ್ಲ. ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಚಾರ್ವಕದ ಯುವಕ ತಾರನಾಥ ಬೆಂಗಳೂರಿನಲ್ಲಿ ನೇಣು ಬಿಗಿದು ಆತ್ಮಹತ್ಯೆ Read More »








