ಅಪರಾಧ

ಧರ್ಮಸ್ಥಳದಲ್ಲಿ ತಿರುಗಾಡುತ್ತಿದ್ದ ಅನ್ಯಕೋಮಿನ ಜೋಡಿ | ಪೊಲೀಸರಿಂದ ವಿಚಾರಣೆ

ಧರ್ಮಸ್ಥಳ: ಅನ್ಯ ಕೋಮಿನ ಜೋಡಿಯೊಂದು ಧರ್ಮಸ್ಥಳದಲ್ಲಿ ತಿರುಗಾಡುತ್ತಿದ್ದಾಗ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ ಘಟನೆ ಮಂಗಳವಾರ ನಡೆದಿದೆ. ಬೆಂಗಳೂರು ಮೂಲದ ಅನ್ಯಕೋಮಿನ ಯುವಕ ಹಾಗೂ ಹಿಂದೂ ಯುವತಿ ಎಂದು ಗೊತ್ತಾಗಿದ್ದು, ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಯುವಕ-ಯುವತಿಯನ್ನು ಠಾಣೆಗೆ ಕರೆದೊಯ್ದಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಧರ್ಮಸ್ಥಳದಲ್ಲಿ ತಿರುಗಾಡುತ್ತಿದ್ದ ಅನ್ಯಕೋಮಿನ ಜೋಡಿ | ಪೊಲೀಸರಿಂದ ವಿಚಾರಣೆ Read More »

ಮಗ ಆತ್ಮಹತ್ಯೆ ಮಾಡಿಕೊಂಡ 13ನೇ ದಿನಕ್ಕೆ ತಂದೆಯೂ ಆತ್ಮಹತ್ಯೆ !

ಬೆಳ್ತಂಗಡಿ: ಮಗ ಆತ್ಮಹತ್ಯೆ ಮಾಡಿಕೊಂಡ 13 ದಿನಕ್ಕೆ ತಂದೆ ಕೂಡ ನೇಣು ಬಿಗಿದು ಆತ್ಚಹತ್ಯೆ ಮಾಡಿಕೊಂಡ ಘಟನೆ ಉಜಿರೆಯ ಪೆರ್ಲದಲ್ಲಿ ನಡೆದಿದೆ. ಉಜಿರೆ ಗ್ರಾಮದ ಪೆರ್ಲ ನಿವಾಸಿ ಯೋಗೀಶ್ ಪೂಜಾರಿ (41) ಆತ್ಮಹತ್ಯೆ ಮಾಡಿಕೊಂಡವರು. ಯೋಗೀಶ್ ಪೂಜಾರಿ ಅವರ ಮಗ ಯಶ್ಚಿತ್ (14) ಕ್ಷುಲ್ಲಕ ವಿಚಾರದಲ್ಲಿ 13 ದಿನಗಳ ಹಿಂದೆ ತಾಯಿಯ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಜ.14 ರಂದು ಆತನ ಉತ್ತರಕ್ರಿಯೆ ನಡೆದಿತ್ತು. ಇದೀಗ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಮಗನ ಆತ್ಮಹತ್ಯೆಯಿಂದ ನೊಂದು ತಂದೆಯೂ

ಮಗ ಆತ್ಮಹತ್ಯೆ ಮಾಡಿಕೊಂಡ 13ನೇ ದಿನಕ್ಕೆ ತಂದೆಯೂ ಆತ್ಮಹತ್ಯೆ ! Read More »

ಬೇಲಿ ವಿಚಾರದಲ್ಲಿ ಗಲಾಟೆ: ಇತ್ತಂಡಗಳಿಂದ ದೂರು, ಪ್ರಕರಣ ದಾಖಲು

ಪುತ್ತೂರು : ಜಮೀನಿನಲ್ಲಿ ಅಳವಡಿಸಿದ ತಂತಿ ಬೇಲಿ ವಿಷಯದಲ್ಲಿ ಗಲಾಟೆ ನಡೆದು ಅವಾಚ್ಯವಾಗಿ ನಿಂದಿಸಿ, ಹಲ್ಲೆ, ಜೀವ ಬೆದರಿಕೆ ಹಾಕಿರುವ ಕುರಿತು ಇತ್ತಂಡಗಳು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಮುಂಡೂರು ನಿವಾಸಿ ಸಂತೋಷ್ ಬಿ.ಕೆ ಎಂಬವರು ನೀಡಿರುವ ದೂರಿನ ಮೇರೆಗೆ ಕೇಶವ, ಧನಂಜಯ, ಜಗದೀಶ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಸಂತೋಷ್ ಸೋಮವಾರ ರಾತ್ರಿ ಆಕ್ಟಿವಾ ಸ್ಕೂಟರ್ ನಲ್ಲಿ ತಮ್ಮ ತೋಟದ ಹತ್ತಿರ ಬಂದು ವಾಹನ ನಿಲ್ಲಿಸಿ, ಅಲ್ಲಿಂದ ತಮ್ಮ ತೋಟದಲ್ಲಿ ನಡೆದುಕೊಂಡು ಮನೆಗೆ ಹೋಗುತ್ತಿರುವಾಗ

ಬೇಲಿ ವಿಚಾರದಲ್ಲಿ ಗಲಾಟೆ: ಇತ್ತಂಡಗಳಿಂದ ದೂರು, ಪ್ರಕರಣ ದಾಖಲು Read More »

ಕ್ರಿಶ್ಚಿಯನ್ ಧರ್ಮದ ಕುರಿತು ಅವಹೇಳನಕಾರಿ ಪೋಸ್ಟ್ | ಪ್ರಕರಣ ದಾಖಲು

ನೆಲ್ಯಾಡಿ: ಕಡಬ ತಾಲೂಕಿನ ಇಚ್ಚಂಪಾಡಿ ಗ್ರಾಮದ ಬರುಮಾರು ಎಂಬಲ್ಲಿ ಕ್ರಿಶ್ಚಿಯನ್ ಧರ್ಮದ ಕುರಿತು ಅವಹೇಳನಕಾರಿ ಪೋಸ್ಟ್ ಮಾಡಿದ ಕುರಿತು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೈಪನಡ್ಕಯ ಕೆ.ಪಿ ಜಾರ್ಜ್ ಎಂಬವರು ಈ ಪೋಸ್ಟ್ ಹಾಕಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆ.ಪಿ ಚಾರ್ಜ್ ಎಂಬವರು ಮೊಬೈಲ್‌ ನೋಡುತ್ತಿರುವ ಸಂದರ್ಭ ಕ್ರಿಶ್ಚಿಯನ್ ಬ್ರದರ್ಸ್ ಎಂಬ ವಾಟ್ಸಪ್ ಗ್ರೂಪ್ ನಲ್ಲಿ ಸುನೀಶ್ ಟಿ.ಪಿ. ಎಂಬವರು ಹಾಕಿದ ಸ್ಕ್ರೀನ್ ಶಾಟ್ ನ್ನು ನೋಡಲಾಗಿ ಇಚ್ಲಂಪಾಡಿ ಗ್ರಾಮದ ಗ್ರಾಮದ ಒಡತಡ್ಕ ಮನೆ

ಕ್ರಿಶ್ಚಿಯನ್ ಧರ್ಮದ ಕುರಿತು ಅವಹೇಳನಕಾರಿ ಪೋಸ್ಟ್ | ಪ್ರಕರಣ ದಾಖಲು Read More »

ಸಹೋದರರೊಳಗೆ ಗಲಾಟೆ | ಹಲ್ಲೆ, ಜೀವ ಬೆದರಿಕೆ ಪ್ರಕರಣ ದಾಖಲು

ಕಡಬ: ಕಳೆ ಕೀಳುವ ವೇಳೆ ಸಹೋದರರೊಳಗೆ ಗಲಾಟೆ ನಡೆದು ಹಲ್ಲೆ ನಡೆದ ಘಟನೆ ಕಡಬದಲ್ಲಿ ಭಾನುವಾರ ನಡೆದಿದೆ. ವಸಂತ ಹಾಗೂ ಪತ್ನಿ ಹೇಮಲತಾ ಹಲ್ಲೆ ನಡೆಸಿದ ಆರೋಪಿಗಳೆಂದು ಗುರುತಿಸಲಾಗಿದೆ. ರೆಂಜಿಲಾಡಿ ಗ್ರಾಮದ ಗಂಗಾಧರ ಎಂಬವರು ತಮ್ಮ ಮನೆಯ ಎದುರು ಕಳೆಯನ್ನು ಮೆಷಿನ್‍ನಲ್ಲಿ ತೆಗೆಯುತ್ತಿದ್ದ ವೇಳೆ ಅವರ ಅಣ್ಣ ವಸಂತ ಸ್ಥಳಕ್ಕೆ ಬಂದು ಆಕ್ಷೇಪ ವ್ಯಕ್ತಪಡಿಸಿ ಮೆಷಿನನ್ನು ಎಳೆದು ಗಂಗಾಧರ ಹಾಗೂ ಪತ್ನಿ ಗುಣಶ್ರೀ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈ ಸಂದರ್ಭ ವಸಂತ ಅವರ

ಸಹೋದರರೊಳಗೆ ಗಲಾಟೆ | ಹಲ್ಲೆ, ಜೀವ ಬೆದರಿಕೆ ಪ್ರಕರಣ ದಾಖಲು Read More »

ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹಾಗೂ ನಳಿನ್ ಕುಮಾರ್ ಕಟೀಲ್ ಭಾವಚಿತ್ರದ ಬ್ಯಾನರ್ ಗೆ ಶ್ರದ್ಧಾಂಜಲಿ, ಚಪ್ಪಲಿ ಹಾರ ಪ್ರಕರಣ | ಪೊಲೀಸ್ ದೌರ್ಜನ್ಯ ಆರೋಪಕ್ಕೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ಮಾನವ ಹಕ್ಕುಗಳ ಆಯೋಗದಿಂದ ಪಶ್ಚಿಮ ವಲಯ ಐಜಿಪಿಗೆ ಸೂಚನೆ

ಪುತ್ತೂರು: ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ನಳಿನ್ ಕುಮಾ‌ರ್ ಕಟೀಲ್‌ ಅವರ ಭಾವಚಿತ್ರವಿದ್ದ ಬ್ಯಾನರ್‌ಗೆ ಶ್ರದ್ಧಾಂಜಲಿ ಬರಹದೊಂದಿಗೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಮೇಲೆ ಪೊಲೀಸರು ದೌರ್ಜನ್ಯ ನಡೆಸಿರುವ ಆರೋಪದ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮಕೈಗೊಂಡು ವರದಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಪಶ್ಚಿಮ ವಲಯ ಐಜಿಪಿಯವರಿಗೆ ಸೂಚನೆ ನೀಡಿದೆ. ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕದ ದಿನದಲ್ಲಿ ಬಿಜೆಪಿ ನಾಯಕರಾದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ

ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹಾಗೂ ನಳಿನ್ ಕುಮಾರ್ ಕಟೀಲ್ ಭಾವಚಿತ್ರದ ಬ್ಯಾನರ್ ಗೆ ಶ್ರದ್ಧಾಂಜಲಿ, ಚಪ್ಪಲಿ ಹಾರ ಪ್ರಕರಣ | ಪೊಲೀಸ್ ದೌರ್ಜನ್ಯ ಆರೋಪಕ್ಕೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ಮಾನವ ಹಕ್ಕುಗಳ ಆಯೋಗದಿಂದ ಪಶ್ಚಿಮ ವಲಯ ಐಜಿಪಿಗೆ ಸೂಚನೆ Read More »

ಅಯೋಧ್ಯೆ ಕಾರ್ಯಕ್ರಮದ ಬ್ಯಾನರ್ ಹರಿದ ಕಿಡಿಗೇಡಿಗಳು !

ಸುಳ್ಯ: ಕಳೆದ ವಾರವಷ್ಟೇ ಸದ್ದು ಮಾಡಿದ ಬ್ಯಾನ್ ಹರಿದ ವಿಚಾರ ಮಾಸುವ ಮುನ್ನವೇ ಇದೀಗ ಮತ್ತೊಂದು ಅಯೋಧ್ಯೆ ಕಾರ್ಯಕ್ರಮಕ್ಕೆ ಶುಭಕೋರಿ ಹಾಕಿದ ಬ್ಯಾನರನ್ನು ಕಿಡಿಗೇಡಿಗಳು ಹರಿದು ಹಾಕಿದ ಘಟನೆ ಸುಳ್ಯ ತಾಲೂಕಿನ ಅಡ್ಕಾರು ಬಳಿ ಗುರುವಾರ ನಡೆದಿದೆ. ಅಡ್ಕಾರು ಕಾರ್ತಿಕೇಯ ಯುವ ಸೇವಾ ಸಮಿತಿಯವರು ಜ.22 ರಂದು ಅಯೋಧ್ಯೆ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಶುಭಕೋರಿ ಬ್ಯಾನರ್ ಅಳವಡಿಸಿದ್ದರು. ಬುಧವಾರ ರಾತ್ರಿ ಯಾರೋ ಕಿಡಿಗೇಡಿಗಳು ಬ್ಯಾನರ್‍ ನ ಮಧ್ಯಭಾಗವನ್ನು ಹರಿದು ಹಾಕಿದ್ದಾರೆ. ಇದೀಗ ಈ ಘಟನೆಯಿಂದ ಆಕ್ರೋಶ

ಅಯೋಧ್ಯೆ ಕಾರ್ಯಕ್ರಮದ ಬ್ಯಾನರ್ ಹರಿದ ಕಿಡಿಗೇಡಿಗಳು ! Read More »

ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿದ ದರೋಡೆಕೋರರು | ಲಕ್ಷಾಂತರ ರೂ. ನಗ-ನಗದು ದೋಚಿ ಪರಾರಿ!!

ಬಂಟ್ವಾಳ: ಬೆಳ್ಳಂಬೆಳಗ್ಗೆ ಮನೆಯೊಂದಕ್ಕೆ ನುಗ್ಗಿದ  ನಾಲ್ವರು ಮುಸುಕುಧಾರಿ ತಂಡ ಮನೆಯಲ್ಲಿದ್ದ ತಾಯಿ ಮಗಳಿಗೆ ಚೂರಿ ತೋರಿಸಿ ಲಕ್ಷಾಂತರ ರೂ ನಗ-ನಗದನ್ನು ದೋಚಿದ ಘಟನೆ ವಗ್ಗ ಸಮೀಪದ ಅಂಚಿಕಟ್ಟೆ ಸಾಲುಮರ ತಿಮ್ಮಕ್ಕನ ಟೀ ಪಾರ್ಕ್ ಮುಂಭಾಗದಲ್ಲಿ ಗುರುವಾರ ನಡೆದಿದೆ. ಮನೆಯಲ್ಲಿ ತಾಯಿ ಪ್ಲೋರಿನಾ ಪಿಂಟೋ ಹಾಗೂ ಮಗಳು ಮರಿನಾ ಪಿಂಟೋ ಇಬ್ಬರೇ ಇದ್ದ ಸಂದರ್ಭ ಮನೆಗೆ ನುಗ್ಗಿದ ಕಳ್ಳರು ತಾಯಿ-ಮಗಳಿಗೆ ಚಾಕು ತೋರಿಸಿ ಕಪಾಟಿನಲ್ಲಿದ್ದ ಸುಮಾರು 2.90 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 30 ಸಾವಿರ ನಗದು ಹಾಗೂ

ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿದ ದರೋಡೆಕೋರರು | ಲಕ್ಷಾಂತರ ರೂ. ನಗ-ನಗದು ದೋಚಿ ಪರಾರಿ!! Read More »

ಅಂಗಡಿ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕ!

ಪುತ್ತೂರು: ಒಬ್ಬಂಟಿಯಾಗಿ ವಾಸವಾಗಿದ್ದ ಕಾರ್ಮಿಕನೋರ್ವ ಪೆರಿಗೇರಿಯ ಅಂಗಡಿ ಹೊರಭಾಗದ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಗುರುವಾರ ಬೆಳಿಗ್ಗೆ ಕೃತ್ಯ ಬೆಳಕಿಗೆ ಬಂದಿದ್ದು, ಎಷ್ಟು ಹೊತ್ತಿಗೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ದಿ. ಅಪ್ಪಯ್ಯ ನಾಯ್ಕ ಅವರ ಪುತ್ರ, ಕಾರ್ಮಿಕ ಜಾನು ನಾಯ್ಕ (45) ಆತ್ಮಹತ್ಯೆ ಮಾಡಿಕೊಂಡವರು. ಪೆರಿಗೇರಿಯ ತನ್ನ ಮನೆ ಸಮೀಪದ ದುರ್ಗಾ ಸ್ಟೋರ್ ಎಂಬ ಅಂಗಡಿ ಮುಂಭಾಗವೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಅಂಗಡಿ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕ! Read More »

ಸಾರ್ವಜನಿಕ ಸ್ಥಳದಲ್ಲಿ ವಿದ್ಯಾರ್ಥಿಯಿಂದ ತ್ಯಾಜ್ಯ ತೆರವು ಮಾಡಿಸಿದ ಕೃತ್ಯ: ಠಾಣೆಗೆ ದೂರು! | ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಸಂಜೀವ ಮಠಂದೂರು

ಪುತ್ತೂರು: 7ನೇ ತರಗತಿ ವಿದ್ಯಾರ್ಥಿಯಿಂದ ವ್ಯಕ್ತಿಯೋರ್ವರು ತ್ಯಾಜ್ಯ ತೆರವು ಮಾಡಿಸಿರುವ ಘಟನೆ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಮಾಜಿ ಶಾಸಕ ಸಂಜೀವ ಮಠಂದೂರು ಅವರು ವಿದ್ಯಾರ್ಥಿಗೆ ನ್ಯಾಯ ದೊರಕಿಸಿಕೊಡಲು ಶ್ರಮಿಸುವ ಭರವಸೆ ನೀಡಿದ್ದಾರೆ. ವಿದ್ಯಾರ್ಥಿಯ ತಂದೆ ಬಿಳಿಯೂರು ಗ್ರಾಮದ ನಡುಮನೆ ನಿವಾಸಿ ವಾಸಪ್ಪ ನಾಯ್ಕ ಎಂಬವರು ದೂರು ನೀಡಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಸೇರಿದ ಅಪ್ರಾಪ್ತ ಬಾಲಕನಿಗೆ ಮಾನಸಿಕ ಹಿಂಸೆ ನೀಡಿರುವ ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ವಿದ್ಯಾರ್ಥಿಯಿಂದ ತ್ಯಾಜ್ಯ ತೆರವು ಮಾಡಿಸಿದ ಕೃತ್ಯ: ಠಾಣೆಗೆ ದೂರು! | ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಸಂಜೀವ ಮಠಂದೂರು Read More »

error: Content is protected !!
Scroll to Top