ಅಪರಾಧ

ಮೃತ ಕೂಲಿ ಕಾರ್ಮಿಕ ಶಿವಪ್ಪರ ಮೃತದೇಹ ಇಳಿಸಿ ಹೋದ ಘಟನೆ | ಪ್ರಮುಖ ಆರೋಪಿ ಹೆನ್ರಿ ತಾವ್ರೋ ಬಂಧನ

ಪುತ್ತೂರು: ಕೆರೆಮೂಲೆಯಲ್ಲಿ ಕೂಲಿ ಕಾರ್ಮಿಕನ ಶಿವಪ್ಪ ಅವರ ಮೃತದೇಹವನ್ನು ರಸ್ತೆ ಬದಿಯಲ್ಲಿ ಇರಿಸಿ ಹೋಗಿರುವ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಹೆನ್ರಿ ತಾವ್ರೋ ಸಹಿತ ಮೂವರನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಓರ್ವ ಆರೋಪಿಯನ್ನು ಈ ಹಿಂದೆಯೇ ಬಂಧಿಸಿದ್ದರು. ಸಹಾಯಕ ಕೂಲಿ ಕಾರ್ಮಿಕ ಶಿವಪ್ಪ ಅವರ ಮೃತ ದೇಹವನ್ನು ಪಿಕಪ್ ವಾಹನದಲ್ಲಿ ತಂದು ಅವರ ಮನೆಯ ಮುಂದಿನ ರಸ್ತೆ ಸಮೀಪ ಅಮಾನವೀಯ ರೀತಿಯಲ್ಲಿ ಇರಿಸಿ ಹೋದ ಘಟನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಶಿವಪ್ಪ ಅವರು ಕೆಲಸ ಮಾಡುತ್ತಿದ್ದ […]

ಮೃತ ಕೂಲಿ ಕಾರ್ಮಿಕ ಶಿವಪ್ಪರ ಮೃತದೇಹ ಇಳಿಸಿ ಹೋದ ಘಟನೆ | ಪ್ರಮುಖ ಆರೋಪಿ ಹೆನ್ರಿ ತಾವ್ರೋ ಬಂಧನ Read More »

ಕಾಂತಾರ-1 ಚಿತ್ರತಂಡದ ಬಸ್‌ ಪಲ್ಟಿ : 6 ಮಂದಿಗೆ ಗಾಯ

ಉಡುಪಿ: ರಿಷಬ್‌ ಶೆಟ್ಟಿಯವರ ಕಾಂತಾರ-1 ಚಿತ್ರತಂಡ ಪ್ರಯಾಣಿಸುತ್ತಿದ್ದ ಮಿನಿಬಸ್‌ ಕೊಲ್ಲೂರು ಸಮೀಪ ನಿನ್ನೆ ರಾತ್ರಿ ಪಲ್ಟಿಯಾಗಿ ಆರು ಮಂದಿ ಜೂನಿಯರ್‌ ಕಲಾವಿದರು ಗಾಯಗೊಂಡಿದ್ದಾರೆ.ಮುದೂರಿನಲ್ಲಿ ಚಿತ್ರೀಕರಣ ಮುಗಿಸಿ ಕೊಲ್ಲೂರಿಗೆ ಹೋಗುತ್ತಿದ್ದ ವೇಳೆ ಹಾಲ್ಕಲ್‌ನ ಆನೆಝರಿ ಎಂಬಲ್ಲಿ ಬಸ್‌ ಅಪಘಾತಕ್ಕೀಡಾಗಿದೆ. ಸ್ಕೂಟಿ ಅಡ್ಡಬಂದಾಗ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಯತ್ನಿಸಿದಾಗ ಬಸ್‌ ಮಗುಚಿ ಬಿದ್ದಿದೆ. ಬಸ್‌ನಲ್ಲಿ ಸುಮಾರು 20 ಜ್ಯೂನಿಯರ್ ಕಲಾವಿದರು ಇದ್ದರು. ಈ ಪೈಕಿ 6 ಮಂದಿಗೆ ಗಾಯವಾಗಿದ್ದು, ಅವರನ್ನು ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. 2025ರ ಅಕ್ಟೋಬರ್​ 2ರಂದು ಈ

ಕಾಂತಾರ-1 ಚಿತ್ರತಂಡದ ಬಸ್‌ ಪಲ್ಟಿ : 6 ಮಂದಿಗೆ ಗಾಯ Read More »

ಸಮುದ್ರಕ್ಕೆ ಹಾರಿದ ವಿದ್ಯಾರ್ಥಿನಿ : ಈಜುಗಾರರಿಂದ ರಕ್ಷಣೆ

ಉಳ್ಳಾಲ: ಸಮುದ್ರಕ್ಕೆ ಹಾರಿದ ವಿದ್ಯಾರ್ಥಿನಿಯನ್ನು ಈಜುಗಾರರು ರಕ್ಷಿಸಿದ ಘಟನೆ ಉಳ್ಳಾಲದಲ್ಲಿ ನಡೆದಿದೆ. ಸೋಮೇಶ್ವರದ ರುದ್ರಬಂಡೆಯಿಂದ ಸಮುದ್ರಕ್ಕೆ ಹಾರಿದ ವಿದ್ಯಾರ್ಥಿನಿಯನ್ನು ಗಮನಿಸಿದ ಸ್ಥಳೀಯ ಮೀನುಗಾರರು ಸ್ಥಳದಲ್ಲಿ ಸಿಕ್ಕ ರಕ್ಷಣಾ ಸಾಮಗ್ರಿ ಬಳಸಿ ರಕ್ಷಿಸಿದ್ದಾರೆ. ಉಳ್ಳಾಲ ಸಮೀಪ ಮಾಡೂರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಮಂಗಳೂರಿನ ಕಾಲೇಜೊಂದರ ಪದವಿ ವಿದ್ಯಾರ್ಥಿನಿಯಾಗಿದ್ದಾಳೆ. ಯುವತಿ ಸುರಕ್ಷಿತವಾಗಿದ್ದು, ಮಂಗಳೂರಿನ ವೆಸ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಸಮುದ್ರಕ್ಕೆ ಹಾರಿದ ವಿದ್ಯಾರ್ಥಿನಿ : ಈಜುಗಾರರಿಂದ ರಕ್ಷಣೆ Read More »

ನಿಖಿಲ್‌ ಸೋಲಿನಿಂದ ಮನನೊಂದು ವಿಷ ಸೇವಿಸಿದ ಅಭಿಮಾನಿ

ರಾಮನಗರ : ಚನ್ನಪಟ್ಟಣ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲನುಭವಿಸಿದ್ದಕ್ಕೆ ಬೇಸರಗೊಂಡು ಅವರ ಕಟ್ಟಾ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಮನಗರದಲ್ಲಿ ಸಂಭವಿಸಿದೆ. ಆತನನ್ನು ಮಂಡ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ. ಚನ್ನಪಟ್ಟಣದ ಕೂಡ್ಲೂರು ಬಳಿಯ ಶ್ರೀರಾಂಪುರ ಗ್ರಾಮದ ಮಂಜುನಾಥ್ ಎಂಬಾತ ಆತ್ಮಹತ್ಯೆಗೆ ಯತ್ನಿಸಿದವ.‘ನಾನು ನಿಖಿಲ್ ಅಭಿಮಾನಿ, ನನ್ನ ಸಾವಿಗೆ ನಾನೇ ಕಾರಣ, ಜೈ ಜೆಡಿಎಸ್’ ಎಂದು ಪತ್ರ ಬರೆದಿಟ್ಟು ಆತ ವಿಷ ಸೇವಿಸಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕೊಂಡೊಯ್ದ ಕಾರಣ ಪ್ರಾಣ ಉಳಿದಿದೆ. ಪೊಲೀಸರು ಪ್ರಕರಣ ದಾಖಲಿಸಿ

ನಿಖಿಲ್‌ ಸೋಲಿನಿಂದ ಮನನೊಂದು ವಿಷ ಸೇವಿಸಿದ ಅಭಿಮಾನಿ Read More »

ಪಾಪೆಮಜಲು ನಿವಾಸಿ ಯೋಗೀಶ್‍ ಭಂಡಾರಿ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು: ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಡಗನ್ನೂರು ಗ್ರಾಮದ ತಲೆಂಜಿ ಸಾಮಾಜಿಕ ಗೇರು ನೆಡುತೋಪು ಅರಣ್ಯ ಪ್ರದೇಶದಲ್ಲಿ ನಡೆದಿದೆ. ಅರಿಯಡ್ಕ ಗ್ರಾಮದ ಪಾಪೆಮಜಲು ನಿವಾಸಿ ಯೋಗೀಶ್ ಭಂಡಾರಿ ಆತ್ಮಹತ್ಯೆ ಮಾಡಿಕೊಂಡವರು. ಬೆಳಗಿನ ಜಾವ ವ್ಯಕ್ತಿಯೊಬ್ಬರು ಹಾಲು ಕೊಂಡೊಯ್ಯುವ ಸಂದರ್ಭದಲ್ಲಿ ಪಕ್ಕದ ಕಾಡಿನಿಂದ ಮೊಬೈಲ್ ರಿಂಗಣಿಸುವ ಶಬ್ದ ಕೇಳಿಸಿ ಅದನ್ನು ಆಲಿಸಿಕೊಂಡು ಆ ಸ್ಥಳಕ್ಕೆ ತೆರಳಿದಾಗ ಯೋಗೀಶ್ ಭಂಡಾರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಪೊಲೀಸ್ ಸ್ಥಳಕ್ಕೆ ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ

ಪಾಪೆಮಜಲು ನಿವಾಸಿ ಯೋಗೀಶ್‍ ಭಂಡಾರಿ ನೇಣು ಬಿಗಿದು ಆತ್ಮಹತ್ಯೆ Read More »

3 ವರ್ಷದ ಮಗುವಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ

ಮಂಗಳೂರು: ಉಳ್ಳಾಲ ತಾಲೂಕಿನ ಬಾಳೆಪುಣಿ ಎಂಬಲ್ಲಿ 70 ವರ್ಷದ ವೃದ್ಧ ಮೂರು ವರ್ಷದ ಹೆಣ್ಣು ಮಗುವಿಗೆ ಲೈಂಗಿಕ ಕಿರುಕುಳ ನೀಡಿದ ಆಘಾತಕಾರಿ ಘಟನೆ ಸಂಭವಿಸಿದೆ. ಅಡಿಕೆ ಅಂಗಡಿಯೊಂದರ ಬಳಿ ಆಟವಾಡುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ವೃದ್ಧ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮೂಲತಃ ಪುತ್ತೂರು ನಿವಾಸಿ, ಪ್ರಸ್ತುತ ಮುದುಂಗಾರುಕಟ್ಟೆಯಲ್ಲಿ ವಾಸವಾಗಿರುವ ಅಬ್ದುಲ್ಲಾ (70) ಆರೋಪಿ. ಮಗು ಆಟವಾಡುತ್ತಿದ್ದಾಗ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದು, ಅಸ್ವಸ್ಥಗೊಂಡ ಮಗುವನ್ನು ಗಮನಿಸಿ ವೈದ್ಯಕೀಯ

3 ವರ್ಷದ ಮಗುವಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ Read More »

ಭೋವಿ ನಿಗಮ ಹಗರಣ : ತನಿಖಾಧಿಕಾರಿ ಕಿರುಕುಳದಿಂದ ಯುವತಿ ಆತ್ಮಹತ್ಯೆ

ಬೆಂಗಳೂರು: ಭೋವಿ ನಿಗಮ ಹಗರಣಕ್ಕೆ ಸಂಬಂಧಿಸಿ ಸಿಐಡಿ ತನಿಖೆ ಎದುರಿಸಿದ್ದ ಯುವತಿ ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ಸಂಭವಿಸಿದ್ದು, ತನಿಖೆಯ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ. ಭೋವಿ ನಿಗಮದ ಫಲಾನುಭವಿಗಳಿಗೆ ಮೆಟಿರಿಯಲ್ಸ್‌ ಪೂರೈಕೆ ಮಾಡಿದ್ದ ಪದ್ಮನಾಭ ನಗರದ ಜೀವಾ (32) ಎಂಬ ಯುವತಿ ಪದ್ಮನಾಭ ನಗರದ ತನ್ನ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜೀವಾ ಭೋವಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿ ಮೂರು ತಿಂಗಳ ಹಿಂದೆ ಒಮ್ಮೆ ವಿಚಾರಣೆ ಎದುರಿಸಿದ್ದರು. ಬಳಿಕ

ಭೋವಿ ನಿಗಮ ಹಗರಣ : ತನಿಖಾಧಿಕಾರಿ ಕಿರುಕುಳದಿಂದ ಯುವತಿ ಆತ್ಮಹತ್ಯೆ Read More »

ಗ್ಯಾನವ್ಯಾಪಿ ಮಸಿದಿಯಲ್ಲಿ ಪತ್ತೆಯಾದ ಶಿವಲಿಂಗ | ಮಸೀದಿಯನ್ನು ಸಮೀಕ್ಷೆ ಮಾಡುವಂತೆ ಹಿಂದೂಪರ ಸಂಘಟಕರ ಒತ್ತಾಯ

ನವದೆಹಲಿ : ಗ್ಯಾನ ವ್ಯಾಪಿ ಮಸೀದಿಯೊಳಗೆ ಶಿವಲಿಂಗ ಪತ್ತೆಯಾಗಿದೆ. ಶಿವಲಿಂಗ ಪತ್ತೆಯಾದ ಕಾರಣ ಅಲ್ಲಿ ಉತ್ಖನನ ನಡೆಸಬೇಕೆಂದು ಸಲ್ಲಿಸಿದ್ದ ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಗ್ಯಾನವ್ಯಾಪಿ ನಿರ್ವಹಣಾ ಸಮಿತಿ ಹಾಗೂ ಭಾರತೀಯ ಪುರಾತತ್ವ ಇಲಾಖೆಗೆ ನೋಟೀಸ್ ನೀಡಿದೆ. ಕಳೆದ ಬಾರಿ ಪುರಾತತ್ವ ಇಲಾಖೆಯ ವತಿಯಿಂದ ಮಸೀದಿಯ ವಜುಖಾನಾದಲ್ಲಿ ವಿಡಿಯೋಗ್ರಾಫಿಕ್ ಸಮೀಕ್ಷೆ ನಡೆಸಲಾಗಿತ್ತು. ಆಗ ವಜೂಖಾನದಲ್ಲಿ ಶಿವಲಿಂಗ ಪತ್ತೆಯಾಗಿತ್ತು. ತಕ್ಷಣ ಸಮೀಕ್ಷೆಗೆ ತಡೆಯಾಜ್ಙೆಯನ್ನು ಮಾಡಲಾಯಿತು. ಬಳಿಕ ಮಸೀದಿಯ ಕೆಲವು ಭಾಗಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದ್ದಲ್ಲದೇ, ಕೋಣೆಗಳಿಗೆ ಬೀಗ ಹಾಕಲಾಗಿದೆ.

ಗ್ಯಾನವ್ಯಾಪಿ ಮಸಿದಿಯಲ್ಲಿ ಪತ್ತೆಯಾದ ಶಿವಲಿಂಗ | ಮಸೀದಿಯನ್ನು ಸಮೀಕ್ಷೆ ಮಾಡುವಂತೆ ಹಿಂದೂಪರ ಸಂಘಟಕರ ಒತ್ತಾಯ Read More »

ಕಾರ್ಮಿಕ ಶಿವಪ್ಪ ಮೃತದೇಹ ಇಳಿಸಿ ಹೋದ ಘಟನೆ | ಹೆನ್ರಿ ತಾವ್ರೋರನ್ನು ಶೀಘ್ರ ಬಂಧಿಸುವಂತೆ ಆದಿ ದ್ರಾವಿಡ ಸಮಾಜ ಸೇವಾ ಸಂಘದಿಂದ ಪ್ರತಿಭಟನೆ | ಪ್ರತಿಭಟನೆಗೆ ಎಸ್ಡಿ ಪಿಐ ಸಾಥ್

ಪುತ್ತೂರು: ಕಾರ್ಮಿಕ ಶಿವಪ್ಪ ಮೃತಪಟ್ಟು ಅವರ ಮೃತ ದೇಹವನ್ನು ತಂದಿಟ್ಟ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಶಿವಪ್ಪರವರು ಕೆಲಸ ಮಾಡುತ್ತಿದ್ದ ಮಾಲೀಕ ಹೆನ್ರಿ ತಾರ್ವೋ ರನ್ನು ಶೀಘ್ರ ಬಂಧಿಸಬೇಕು ಎಂದು ಒತ್ತಾಯಿಸಿ ಆದಿ ದ್ರಾವಿಡ ಸಮಾಜ ಸೇವಾ ಸಂಘ ಪುತ್ತೂರು ತಾಲೂಕು ಘಟಕದ ವತಿಯಿಂದ ಎಸ್ಡಿರಪಿಐ ಬೆಂಬಲದೊಂದಿಗೆ ಶುಕ್ರವಾರ ಅಮರ್ ಜವಾನ್‍ ಸ್ಮಾರಕದ ಬಳಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ದಲಿತ ಮುಖಂಡ ಸೇಸಪ್ಪ ಬೆದ್ರಕಾಡು ಮಾತನಾಡಿ, ಶಿವಪ್ಪರ ಮೃತದೇಹವನ್ನು ತಂದು ಇರಿಸಿದ ರೀತಿ ಅಮಾನವೀಯವಾಗಿದ್ದು, ಇಂತಹಾ ನೀಚ ಕೃತ್ಯವನ್ನು

ಕಾರ್ಮಿಕ ಶಿವಪ್ಪ ಮೃತದೇಹ ಇಳಿಸಿ ಹೋದ ಘಟನೆ | ಹೆನ್ರಿ ತಾವ್ರೋರನ್ನು ಶೀಘ್ರ ಬಂಧಿಸುವಂತೆ ಆದಿ ದ್ರಾವಿಡ ಸಮಾಜ ಸೇವಾ ಸಂಘದಿಂದ ಪ್ರತಿಭಟನೆ | ಪ್ರತಿಭಟನೆಗೆ ಎಸ್ಡಿ ಪಿಐ ಸಾಥ್ Read More »

ಹತ್ತು ನಕ್ಸಲೀಯರು ಎನ್‌ಕೌಂಟರ್‌ಗೆ ಬಲಿ

ರಾಯ್ಪುರ್: ಛತ್ತೀಸ್‌ಗಢದ ಕೊಂಟಾದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಹತ್ತು ನಕ್ಸಲೀಯರು ಹತ್ಯೆಗೀಡಾಗಿದ್ದಾರೆ. ಇಂದು ನಸುಕಿನ ಹೊತ್ತು ಸುಕ್ಮ ಸಮೀಪ ಭಂಡರ್‌ಪದರ್‌ ಪ್ರದೇಶದಲ್ಲಿ ಎನ್‌ಕೌಂಟರ್ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವಾಣ್ ತಿಳಿಸಿದ್ದಾರೆ. ನಕ್ಸಲರು ಒಡಿಶಾ ಮೂಲಕ ಛತ್ತೀಸ್‌ಗಢ ಪ್ರವೇಶಿಸುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿ ಮೇರೆಗೆ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಕಾರ್ಯಾಚರಣೆ ನಡೆಸಿದೆ. ಈ ವೇಳೆ 10 ನಕ್ಸಲರು ಭದ್ರತಾ ಪಡೆಯ ಗುಂಡಿಗೆ ಬಲಿಯಾಗಿದ್ದಾರೆ. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆ

ಹತ್ತು ನಕ್ಸಲೀಯರು ಎನ್‌ಕೌಂಟರ್‌ಗೆ ಬಲಿ Read More »

error: Content is protected !!
Scroll to Top