ಅಪರಾಧ

ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ | ಆರೋಪಿ ಬಂಧನ

ಪುತ್ತೂರು: ಗಲಾಟೆಯೊಂದರ ವಿಷಯವಾಗಿ ವಿಚಾರಣೆಗೆ ತೆರಳಿದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ಬನ್ನೂರಿನಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಬನ್ನೂರು ಗ್ರಾಮದ ಕಂಜೂರು ನಿವಾಸಿ ತೇಜನ್ ಬಂಧಿತ ಆರೋಪಿ. ಶುಕ್ರವಾರ ರಾತ್ರಿ ವೇಳೆ ಜಿಲ್ಲಾ ಕಂಟ್ರೋಲ್ ರೂಮ್ ನಿಂದ ಬಂದ ಸೂಚನೆಯಂತೆ ಪೊಲೀಸರು ಘಟನಾ ಸ್ಥಳವಾದ ಬನ್ನೂರು ಗ್ರಾಮದ ಕುಂಜೂರು ಎಂಬಲ್ಲಿಗೆ ತೆರಳಿದ್ದು, ಈ ಸಂದರ್ಭ ಆರೋಪಿ ತೇಜಸ್ ತನ್ನ ತಾಯಿಯೊಂದಿಗೆ ಗಲಾಟೆ ಮಾಡುತ್ತಿದ್ದು, ತೇಜನ್‌ನ ತಾಯಿ ಚಂದ್ರಾವತಿಯವರು ಪಕ್ಕದ ಮನೆಗೆ ಬಂದಿರುವುದಾಗಿ ತಿಳಿಸಿದ್ದು, ಆಗ ಪೊಲೀಸ್ […]

ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ | ಆರೋಪಿ ಬಂಧನ Read More »

ಬ್ಯಾಂಕ್‍ ಅಧಿಕಾರಿ ಎಂದು ನಂಬಿಸಿ ಒಟಿಪಿ ಪಡೆದು ಲಕ್ಷಾಂತರ ವಂಚನೆ

ಕೊಕ್ಕಡ : ಮಹಿಳೆಯೊಬ್ಬರಿಗೆ ಅಪರಿಚಿತ ವ್ಯಕ್ತಿಯೊಬ್ಬ ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಓ.ಟಿ.ಪಿ ಪಡೆದು ಲಕ್ಷಾಂತರ ರೂ ವಂಚಿಸಿದ ಪ್ರಕರಣ ಕೊಕ್ಕಡದಲ್ಲಿ ನಡೆದಿದೆ. ಕೊಕ್ಕಡ ಗಾಣಗಿರಿ ಸುಶೀಲ ಅವರು ಅಪರಿಚಿತ ವ್ಯಕ್ತಿಯಿಂದ ವಂಚನೆಗೊಳಗಾಗಿದ್ದು, ತನ್ನ  ಬ್ಯಾಂಕ್ ಖಾತೆಯಿಂದ ರೂ. 1.50 ಲಕ್ಷ ರೂ. ಕಳೆದುಕೊಂಡಿದ್ದಾರೆ. ಸುಶೀಲರವರು ಕೊಕ್ಕಡ ಕೆನರಾ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದು, ಎಟಿಎಂ ಗಾಗಿ ಅಪ್ಲಿಕೇಶನ್ ಹಾಕಿದ್ದರು. ಬಳಿಕ ಎಟಿಎಂ ಕಾರ್ಡ್ ಬಂದಿತ್ತು. ಅಪರಿಚಿತ ವ್ಯಕ್ತಿಯೊಬ್ಬರು ಸುಶೀಲ ಅವರಿಗೆ ಫೋನ್ ಮಾಡಿ ನಾನು ಬ್ಯಾಂಕ್

ಬ್ಯಾಂಕ್‍ ಅಧಿಕಾರಿ ಎಂದು ನಂಬಿಸಿ ಒಟಿಪಿ ಪಡೆದು ಲಕ್ಷಾಂತರ ವಂಚನೆ Read More »

ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು : ಜಿಡೆಕಲ್ಲಿನ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಜಿಡೆಕಲ್ಲು ನಿವಾಸಿ ನಾರಾಯಣ ಪೂಜಾರಿ (60) ಆತ್ಮಹತ್ಯೆ ಮಾಡಿಕೊಂಡವರು. ಅನಾರೋಗ್ಯದಿಂದ ಬಳಲುತ್ತಿದ್ದ ನಾರಾಯಣ ಪೂಜಾರಿಯವರು ಖಿನ್ನತೆಗೊಳಗಾಗಿ ಮನೆ ಸಮೀಪ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೃತರು ಪತ್ನಿ ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ.

ನೇಣು ಬಿಗಿದು ಆತ್ಮಹತ್ಯೆ Read More »

ಮಂಗಳೂರು ಜೈಲ್‍ ಮೇಲೆ ಪೊಲೀಸರಿಂದ ಕಾರ್ಯಾಚರಣೆ | ಗಾಂಜಾ, ಡ್ರಗ್ಸ್ ಪತ್ತೆ

ಮಂಗಳೂರು: ಮಂಗಳೂರು ಪೊಲೀಸರು ಜೈಲ್ ಮೇಲೆ ಕಾರ್ಯಾಚರಣೆ ನಡೆಸಿದ್ದು, ಈ ಸಂದರ್ಭ ಗಾಂಜಾ ಮತ್ತು ಡ್ರಗ್ಸ್ ಪತ್ತೆಯಾಗಿದೆ. ಮುಂಜಾನೆ ನಾಲ್ಕು ಗಂಟೆ ವೇಳೆಗೆ ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ ಇಪ್ಪತ್ತೈದು ಮೊಬೈಲ್, ಒಂದು ಬ್ಲೂ ಟೂತ್ ಡಿವೈಸ್, ಐದು ಇಯರ್ ಫೋನ್, ಒಂದು ಪೆನ್ ಡ್ರೈವ್, ಐದು ಚಾರ್ಜರ್, ಒಂದು ಕತ್ತರಿ ಸೇರಿದಂತೆ ವಿವಿಧ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜತೆಗೆ ಜೈಲು ಖೈದಿಗಳ ಜೊತೆಗಿದ್ದ ಗಾಂಜಾ ಮತ್ತು ಡ್ರಗ್ಸ್ ಪ್ಯಾಕೇಟ್ ಕೂಡಾ ವಶಪಡಿಸಿಕೊಂಡಿದ್ದಾರೆ. 150

ಮಂಗಳೂರು ಜೈಲ್‍ ಮೇಲೆ ಪೊಲೀಸರಿಂದ ಕಾರ್ಯಾಚರಣೆ | ಗಾಂಜಾ, ಡ್ರಗ್ಸ್ ಪತ್ತೆ Read More »

ವಿದ್ಯಾರ್ಥಿನಿ ನಯನಾ ನೇಣು ಬಿಗಿದು ಆತ್ಮಹತ್ಯೆ

ಉಡುಪಿ: ಪಿಯುಸಿ ವಿದ್ಯಾರ್ಥಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿಡಿಯಡ್ಕದಲ್ಲಿ ನಡೆದಿದೆ. ಹಿರಿಯಡ್ಕ ನಿವಾಸಿ ನಯನಾ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಪೆರ್ಡೂರು ಪ್ರಥಮದ ದರ್ಜೆ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿರುವ ನಯನಾ ಮನೆಯಲ್ಲಿ ಒಬ್ಬಳೇ ಇದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈಕೆಯ ತಾಯಿ ಶೋಭಾ ಹಿರಿಯಡ್ಕ ಠಾಣೆಗೆ ದೂರು ನೀಡಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ೀ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿದ್ಯಾರ್ಥಿನಿ ನಯನಾ ನೇಣು ಬಿಗಿದು ಆತ್ಮಹತ್ಯೆ Read More »

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ : ಆರೋಪಿ ಬಂಧನ

ಪುತ್ತೂರು : ಅಪ್ರಾಪ್ತಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಳಿಯೂರುಕಟ್ಟೆ ನಿವಾಸಿ ವಿವಾಹಿತ ಪ್ರಸಾದ್ ಬಂಧಿತ ಆರೋಪಿ. ಬೆಳಿಯೂರುಕಟ್ಟೆ ನಿವಾಸಿಯಾಗಿರುವ ಅಪ್ರಾಪ್ತ ಯುವತಿಗೆ ವಿವಾಹಿತ ಪ್ರಸಾದ್ ಎಂಬ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ : ಆರೋಪಿ ಬಂಧನ Read More »

ಅಸಹಜ ಲೈಂಗಿಕ ದೌರ್ಜನ್ಯ : ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣಗೆ ಷರತ್ತುಬದ್ಧ ಜಾಮೀನು

ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌ ನಲ್ಲಿ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣಗೆ ಷರತ್ತುಬದ್ಧ ಜಾಮೀನು ನೀಡಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಿಂದ ಸೋಮವಾರ ಆದೇಶ ಹೊರಡಿಸಲಾಗಿದೆ. ಇತ್ತೀಚೆಗೆ ಹೊಳೆನರಸೀಪುರದಲ್ಲಿ ದಾಖಲಾಗಿದ್ದ ಮೊದಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರಜ್ ರೇವಣ್ಣ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿತ್ತು. ನ್ಯಾಯಾಲಯ ಷರತ್ತುಬದ್ಧ  ಹೊರಡಿಸಿದ್ದು, ನ್ಯಾಯಾಲಯದಿಂದ ಲಿಖಿತ ಅನುಮತಿ ಪಡೆದಿರಬೇಕು, ತಿಂಗಳ ಪ್ರತಿ ಎರಡನೇ ಭಾನುವಾರ ಮತ್ತು ಬೆಳಿಗ್ಗೆ 9.00 ರಿಂದ

ಅಸಹಜ ಲೈಂಗಿಕ ದೌರ್ಜನ್ಯ : ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣಗೆ ಷರತ್ತುಬದ್ಧ ಜಾಮೀನು Read More »

ಮಹಿಳೆ ಸ್ನಾನ ಮಾಡುತ್ತಿದ್ದ ವೇಳೆ ವೀಡಿಯೋ ಚಿತ್ರಿಕರಣಕ್ಕೆ ಯತ್ನ | ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

ಉಪ್ಪಿನಂಗಡಿ: ಅನ್ಯಧರ್ಮದ ವ್ಯಕ್ತಿಯೊಬ್ಬ ಮಹಿಳೆಯ ಸ್ನಾನ ಮಾಡುತ್ತಿದ್ದ ವೇಳೆ ವಿಡಿಯೋ ಮಾಡಲು ಯತ್ನಿಸಿ ಸಿಕ್ಕಿಬಿದ್ದ ಘಟನೆ ಉಪ್ಪಿನಂಗಡಿಯ ಪೆರಿಯಡ್ಕದಲ್ಲಿ ನಡೆದಿದೆ. ಪೆರಿಯಡ್ಕ ನಿವಾಸಿ ರೆಹಮಾನ್ ಎಂಬಾತನನ್ನು ಗ್ರಾಮಸ್ಥರು ಹಿಡಿದರು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂದರ್ಭ ಠಾಣೆಯಲ್ಲಿ ಅನೇಕ ಹಿಂದೂ ಕಾರ್ಯಕರ್ತರು ಜಮಾಯಿಸಿದ್ದಾರೆ ಎಂದು ತಿಳಿದುಬಂದಿದೆ.

ಮಹಿಳೆ ಸ್ನಾನ ಮಾಡುತ್ತಿದ್ದ ವೇಳೆ ವೀಡಿಯೋ ಚಿತ್ರಿಕರಣಕ್ಕೆ ಯತ್ನ | ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು Read More »

ಮ್ಯಾನ್ಮಾರ್ ನಿಂದ ಮಿಜೋರಾಂಗೆ ಅಡಿಕೆ ಕಳ್ಳ ಸಾಗಣೆ | ಸಮಗ್ರ ತನಿಖೆಗೆ ಸಿಬಿಐಗೆ

ಐಜ್ವಾಲ್: ಮ್ಯಾನ್ಮಾರ್‌ನಿಂದ ಮಿಜೋರಾಂಗೆ ಅಡಿಕೆ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸುವಂತೆ ಗುವಾಹಟಿ ಹೈಕೋರ್ಟ್‌ ಐಜ್ವಾಲ್ ಪೀಠ ಕೇಂದ್ರ ತನಿಖಾ ಸಂಸ್ಥೆಗೆ ಆದೇಶ ನೀಡಿದೆ. ಸಾಮಾಜಿಕ ಕಾರ್ಯಕರ್ತೆ ನನ್ನಮಾಚೌಂಗಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಪೀಠವು ಈ ಆದೇಶ ನೀಡಿದೆ. ‘ಮ್ಯಾನ್ಮಾರ್’ ಮೂಲದಿಂದ ಈ ಕೃತ್ಯ ನಡೆದಿರುವ ಶಂಕೆ ಇದೆ. ಅಂತಾರಾಷ್ಟ್ರೀಯ ಕಳ್ಳಸಾಗಣೆ ಪ್ರಕರಣ ಇದಾಗಿರುವುದರಿಂದ ತಾವು ಹೆಚ್ಚಿನ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ರಾಜ್ಯ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು. ಇದನ್ನು ಆಧರಿಸಿ

ಮ್ಯಾನ್ಮಾರ್ ನಿಂದ ಮಿಜೋರಾಂಗೆ ಅಡಿಕೆ ಕಳ್ಳ ಸಾಗಣೆ | ಸಮಗ್ರ ತನಿಖೆಗೆ ಸಿಬಿಐಗೆ Read More »

ಕಡಬದ ಯುವಕ ನೇಣು ಬಿಗಿದು ಆತ್ಮಹತ್ಯೆ

ಕಡಬ : ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ರಾತ್ರಿ ಕಡಬದಲ್ಲಿ ನಡೆದಿದೆ. ಕಡಬ ತಿಮರಡ್ಡಿ ನಿವಾಸಿ ಅಝರ್(28) ಆತ್ಮಹತ್ಯೆ ಮಾಡಿಕೊಂಡವರು. ಅಝರ್ ಶನಿವಾರ ರಾತ್ರಿ ತನ್ನ ಮನೆಯ ಕೋಣೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಆತ್ಮಹತ್ಯೆಗೆ ಕಾರಣಗಳು ತಿಳಿದು ಬಂದಿಲ್ಲ.

ಕಡಬದ ಯುವಕ ನೇಣು ಬಿಗಿದು ಆತ್ಮಹತ್ಯೆ Read More »

error: Content is protected !!
Scroll to Top