ಅಪರಾಧ

ಪಾಕಿಸ್ಥಾನದಲ್ಲಿ 22 ಭಯೋತ್ಪಾದಕರ ಹತ್ಯೆ

ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ 6 ಸೈನಿಕರ ಸಾವು ಇಸ್ಲಾಮಾಬಾದ್‌: ವಾಯುವ್ಯ ಪಾಕಿಸ್ಥಾನದ ಖೈಬರ್ ಪಖ್ತುನ್‌ಖ್ವಾ ಪ್ರಾಂತ್ಯದಲ್ಲಿ ಎರಡು ದಿನಗಳ ಕಾಲ ನಡೆದ ಮೂರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ 22 ಭಯೋತ್ಪಾದಕರನ್ನು ಪಾಕಿಸ್ಥಾನದ ಭದ್ರತಾ ಪಡೆ ಹತ್ಯೆಗೈದಿದೆ. ಈ ಕಾರ್ಯಾಚರಣೆಯಲ್ಲಿ ಆರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ಥಾನದ ಸೇನೆಯ ಮಾಧ್ಯಮ ವಿಭಾಗ ತಿಳಿಸಿದೆ.ಗುಪ್ತಚರ ಮಾಹಿತಿ ಆಧಾರದ ಮೇಲೆ ಖೈಬರ್ ಪುಖ್ತುನ್‌ಖ್ವಾದ ಟ್ಯಾಂಕ್, ಉತ್ತರ ವಜಿರಿಸ್ಥಾನ್ ಮತ್ತು ಥಾಲ್ ಜಿಲ್ಲೆಗಳಲ್ಲಿ ಡಿ.6 ಮತ್ತು 7ರಂದು ಈ ಕಾರ್ಯಾಚರಣೆ ನಡೆಸಲಾಗಿದೆ. ಟ್ಯಾಂಕ್ ಜಿಲ್ಲೆಯಲ್ಲಿ, […]

ಪಾಕಿಸ್ಥಾನದಲ್ಲಿ 22 ಭಯೋತ್ಪಾದಕರ ಹತ್ಯೆ Read More »

ಸಮುದ್ರದಲ್ಲಿ ಮುಳುಗಿ ಇಬ್ಬರು ಸಹೋದರರ ದಾರುಣ ಸಾವು : ಓರ್ವನ ರಕ್ಷಣೆ

ಕುಂದಾಪುರ ಕೋಡಿ ಬೀಚ್‌ನಲ್ಲಿ ಸಂಭವಿಸಿದ ದುರಂತ ಉಡುಪಿ: ಕುಂದಾಪುರದ ಕೋಡಿ ಬೀಚಿನಲ್ಲಿ ಈಜಾಡಲು ಸಮುದ್ರಕ್ಕಿಳಿದ ಮೂವರು ಸಹೋದರರ ಪೈಕಿ ಇಬ್ಬರು ಮುಳುಗಿ ಸಾವಿಗೀಡಾದ ದಾರುಣ ಘಟನೆ ನಿನ್ನೆ ಸಂಜೆ ಸಂಭವಿಸಿದೆ. ಓರ್ವನನ್ನು ರಕ್ಷಿಸಲಾಗಿದೆ.ಅಂಪಾರು ಐದು ಸೆಂಟ್ಸ್ ನಿವಾಸಿ ದಾಮೋದರ್ ಪ್ರಭು ಎಂಬವರ ಪುತ್ರರಾದ ಧನರಾಜ್ (23) ಮತ್ತು ದರ್ಶನ್ (18) ಸಾವನ್ನಪ್ಪಿದ್ದರೆ, ಇನ್ನೊಬ್ಬ ಮಗ ಧನುಷ್ (20) ಗಂಭೀರ ಸ್ಥಿತಿಯಲ್ಲಿ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರು ಯುವಕರು ಸಹೋದರರಾಗಿದ್ದು ಗಂಭೀರ ಸ್ಥಿತಿಯಲ್ಲಿರುವ ಧನುಷ್ ಸುರತ್ಕಲ್

ಸಮುದ್ರದಲ್ಲಿ ಮುಳುಗಿ ಇಬ್ಬರು ಸಹೋದರರ ದಾರುಣ ಸಾವು : ಓರ್ವನ ರಕ್ಷಣೆ Read More »

ಮಂಗಳೂರಿನಲ್ಲಿ ಕಲಿಯುತ್ತಿದ್ದ ಗೋಣಿಕೊಪ್ಪದ ಯುವಕ ನಿಗೂಢವಾಗಿ ನಾಪತ್ತೆ

ದೀಪಾವಳಿ ರಜೆ ಮುಗಿಸಿ ಕಾಲೇಜಿಗೆಂದು ಹೊರಟವ ಕಣ್ಮರೆ, ಊರೂರು ಅಲೆದು ಹುಡುಕುತ್ತಿರುವ ತಾಯಿ ಮಡಿಕೇರಿ: ಮಂಗಳೂರಿನ ಕಾಲೇಜೊಂದರಲ್ಲಿ ಕಲಿಯುತ್ತಿದ್ದ ಮಡಿಕೇರಿಯ ದೀಕ್ಷಿತ್‌ (17) ಎಂಬ ಯುವಕ ಕಳೆದ ಸುಮಾರು ಒಂದು ತಿಂಗಳಿಂದ ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ದೀಪಾವಳಿ ಹಬ್ಬದ ರಜೆಯಲ್ಲಿ ಮನೆಗೆ ಬಂದಿದ್ದ ಯುವಕ ರಜೆ ಮುಗಿಸಿ ಕಾಲೇಜಿಗೆಂದು ಹೊರಟವ ಅತ್ತ ಹಾಸ್ಟೆಲ್‌ ತಲುಪದೆ ಇತ್ತ ಮನೆಗೂ ಬಾರದೆ ನಾಪತ್ತೆಯಾಗಿದ್ದಾನೆ ಎಂದು ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಮಗ ಕಾಣೆಯಾಗಿ ಒಂದು ತಿಂಗಳು ಕಳೆದರೂ

ಮಂಗಳೂರಿನಲ್ಲಿ ಕಲಿಯುತ್ತಿದ್ದ ಗೋಣಿಕೊಪ್ಪದ ಯುವಕ ನಿಗೂಢವಾಗಿ ನಾಪತ್ತೆ Read More »

ಮೊಬೈಲ್‍ ಟವರ್ ಬ್ಯಾಟರಿ ಕಳವು | ಆರೋಪಿ ಬಂಧನ

ಪುತ್ತೂರು  : ಪುತ್ತೂರು ತಾಲೂಕು ಬಲ್ನಾಡು ಗ್ರಾಮದ ಬುಲೇರಿಕಟ್ಟೆ ಸಾಜರೋಡ್ ಮಾವಲೆಕೊಚ್ಚಿ ಎಂಬಲ್ಲಿ  ಮೊಬೈಲ್ ಟವರ್ ಬ್ಯಾಟರಿಗಳ ಕಳ್ಳತನವಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಪತ್ತೆಗಾಗಿ ರವಿ ಬಿ. ಎಸ್ ಪಿಐ ಪುತ್ತೂರು ಗ್ರಾಮಾಂತರ ಠಾಣೆಯ ನೇತೃತ್ವದಲ್ಲಿ ತನಿಖಾ ತಂಡವು ವಿವಿಧ ಆಯಾಮಗಳಲ್ಲಿ ಹಾಗೂ ತಾಂತ್ರಿಕ ಮಾಹಿತಿಯನ್ನಾಧರಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.  ಹರೀಶ್ ನಾಯ್ಕ (30), ಕಾವಳಮುಡೂರು ಗ್ರಾಮ, ಬಂಟ್ವಾಳ ತಾಲೂಕು ಬಂಧಿತ ಅರೋಪಿ ಎಂದು ತಿಳಿದು

ಮೊಬೈಲ್‍ ಟವರ್ ಬ್ಯಾಟರಿ ಕಳವು | ಆರೋಪಿ ಬಂಧನ Read More »

ಕಡಬ ತಹಶೀಲ್ದಾರ್ ರಿಂದ ದಲಿತರ ಮೇಲೆ ಮುಂದುವರಿದ ದೌರ್ಜನ್ಯ : ಬಿ.ಎಂ.ಭಟ್‌ಖಂಡನೆ

ಕಡಬ: ತಾಲೂಕಿನ ಕೌಕ್ರಾಡಿ ಗ್ರಾಮ ನಿವಾಸಿ ದಲಿತೆ ರಾಧಮ್ಮ ಕುಟುಂಬದ ಮೇಲೆ ಮತ್ತೆ ಮತ್ತೆ ದೌರ್ಜನ್ಯ ಎಸಗುತ್ತಿರುವ ಕಡಬ ತಹಶೀಲ್ದಾರ್ ಪ್ರಭಾಕರ ಕಜೂರೆ ಅವರ ಕಾನೂನು ದುರುಪಯೋಗದ ನಡೆಯನ್ನು ಸಹಿಸಲು ಸಾದ್ಯವಿಲ್ಲ. ಈ ನಿಟ್ಟಿನಲ್ಲಿ ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಿಪಿಐಎಂ ಜಿಲ್ಲಾ ಮುಖಂಡ, ನ್ಯಾಯವಾದಿ ಬಿ.ಎಂ.ಭಟ್ ಸರಕಾರವನ್ನು ಒತ್ತಾಯಿಸಿದ್ದಾರೆ. ರೇಣುಕೆ ಎಂಬ ಬೆಳ್ತಂಗಡಿ ತಾಲೂಕು ಶಿಬಾಜೆ ನಿವಾಸಿಯ ಹೆಸರಲ್ಲಿ ಹೈಕೋರ್ಟಲ್ಲಿ ದಾವೆ ದಾಖಲಿಸಲಾಗಿದೆ ಎಂದು ರೇಣುಕೆ ಎಂಬವರ ಮನೆಯನ್ನು ದ್ವಂಸ ಮಾಡಲು ಆದೇಶವಿದೆ

ಕಡಬ ತಹಶೀಲ್ದಾರ್ ರಿಂದ ದಲಿತರ ಮೇಲೆ ಮುಂದುವರಿದ ದೌರ್ಜನ್ಯ : ಬಿ.ಎಂ.ಭಟ್‌ಖಂಡನೆ Read More »

ಡ್ರಗ್ಸ್‌ ದಂಧೆ : 63 ವರ್ಷದ ಮಹಿಳೆ ಬಂಧನ; 40 ಕೆಜಿ ಗಾಂಜಾ ವಶ

ಮಾದಕವಸ್ತು ವ್ಯಾಪಾರದಿಂದಲೇ ಕೋಟಿಗಟ್ಟಲೆ ಸಂಪಾದಿಸಿದ್ದ ಲೇಡಿ ಡಾನ್‌ ಬೆಂಗಳೂರು: ಹಲವು ವರ್ಷಗಳಿಂದ ಡ್ರಗ್ಸ್ ದಂಧೆ ಮಾಡುತ್ತಿದ್ದ 63 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಕೆಲವು ಪೊಲೀಸರು ಸಹ ಆಕೆಯೊಂದಿಗೆ ಕೈಜೋಡಿಸಿದ್ದಾರೆ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ. ಮಹಿಳೆಯ ಮನೆಯಿಂದ 40 ಕೆಜಿ ಗಾಂಜಾ, 33 ಲಕ್ಷ ರೂ. ನಗದು, ಮಚ್ಚು ಸೇರಿದಂತೆ ಎಂಟು ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಆಧಾರದ ಮೇರೆಗೆ ಬ್ಯಾಟರಾಯನಪುರ ಪೊಲೀಸರು ಮಾದಕವಸ್ತು ಮಾರಾಟಗಾರ್ತಿ ಕಾಲಿ ಮೆಹರುನಿಸಾ ಒಡೆತನದ ಹಲವು

ಡ್ರಗ್ಸ್‌ ದಂಧೆ : 63 ವರ್ಷದ ಮಹಿಳೆ ಬಂಧನ; 40 ಕೆಜಿ ಗಾಂಜಾ ವಶ Read More »

ಕುವೈಟ್‌ನ ಬ್ಯಾಂಕಿಗೇ 700 ಕೋ. ರೂ. ವಂಚಿಸಿದ ಮಲಯಾಳಿಗಳು

ಸಾಲ ಪಡೆದು ಸ್ವದೇಶಕ್ಕೆ ಪಲಾಯನ ತಿರುವನಂತಪುರ: ಕುವೈಟ್‌ಗೆ ಉದ್ಯೋಗಕ್ಕೆ ತೆರಳಿದ ಕೇರಳದವರು ಅಲ್ಲಿನ ಗಲ್ಫ್‌ ಬ್ಯಾಂಕ್‌ಗೆ 700 ಕೋ. ರೂ.ಅಧಿಕ ಮೊತ್ತ ವಂಚಿಸಿ ಪಲಾಯನ ಮಾಡಿರುವುದು ಬೆಳಕಿಗೆ ಬಂದಿದೆ. ಇತ್ತೀಚೆಗೆ ಗಲ್ಫ್‌ ಬ್ಯಾಂಕ್‌ನ ಡೆಪ್ಯುಟಿ ಜನರಲ್‌ ಮ್ಯಾನೇಜರ್‌ ಕೇರಳಕ್ಕೆ ಬಂದು ಈ ಕುರಿತು ದೂರು ನೀಡಿದ ಬಳಿಕ ಕೇರಳ ಪೊಲೀಸರು ವಂಚನೆ ಕುರಿತು ತನಿಖೆ ಪ್ರಾರಂಭಿಸಿದ್ದಾರೆ. ವಿಶೇಷವೆಂದರೆ ಸಾಲ ಪಡೆದು ವಂಚಿಸಿದವರಲ್ಲಿ ಬಹುತೇಕ ಮಂದಿ ನರ್ಸ್‌ ಕೆಲಸಕ್ಕಾಗಿ ಕುವೈಟ್‌ಗೆ ಹೋದ ಮಹಿಳೆಯರು. ಗಲ್ಫ್‌ ಬ್ಯಾಂಕ್‌ನ ಕುವೈಟ್‌ ಷೇರ್‌

ಕುವೈಟ್‌ನ ಬ್ಯಾಂಕಿಗೇ 700 ಕೋ. ರೂ. ವಂಚಿಸಿದ ಮಲಯಾಳಿಗಳು Read More »

ಭಾರತದ ಮೇಲೆ ಮತ್ತೆ ದಾಳಿ : ಉಗ್ರ ಮಸೂದ್ ಅಜರ್ ಉಗ್ರ ಪ್ರತಿಜ್ಞೆ

ಪಾಕಿಸ್ಥಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಭಾರತ ಹೊಸದಿಲ್ಲಿ: ಭಾರತದ ಮೇಲೆ ಮತ್ತೆ ದಾಳಿ ಮಾಡುತ್ತೇನೆ ಎಂದು ಪಾಕಿಸ್ಥಾನದ ಉಗ್ರಗಾಮಿ ಸಂಘಟನೆ ಜೈಶ್‌ ಎ ಮೊಹಮ್ಮದ್‌ನ ಮುಖಂಡ ಮಸೂದ್‌ ಅಜರ್‌ ಉಗ್ರ ಪ್ರತಿಜ್ಞೆ ಮಾಡಿದ್ದಾನೆ. ನಿಷೇಧಿತ ಭಯೋತ್ಪಾದನಾ ಸಂಘಟನೆಯಾಗಿರುವ ಜೈಶ್-ಎ-ಮೊಹಮ್ಮದ್ 2011ರ ಸಂಸತ್ ದಾಳಿಯಂತಹ ಭಯೋತ್ಪಾದಕ ಕೃತ್ಯಗಳನ್ನು ಎಸಗಿದ್ದು, ಈ ದಾಳಿಗಳ ಮಾಸ್ಟರ್ ಮೈಂಡ್ ಉಗ್ರ ಮಸೂದ್ ಅಜರ್ ಆಗಿದ್ದಾನೆ. ಅವನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪಾಕಿಸ್ಥಾನವನ್ನು ಭಾರತ ಒತ್ತಾಯಿಸಿದೆ. ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದ ಬಹವಾಲ್‌ಪುರದ ಇಸ್ಲಾಮಿಕ್ ಸೆಮಿನರಿಯಲ್ಲಿ

ಭಾರತದ ಮೇಲೆ ಮತ್ತೆ ದಾಳಿ : ಉಗ್ರ ಮಸೂದ್ ಅಜರ್ ಉಗ್ರ ಪ್ರತಿಜ್ಞೆ Read More »

ತೋಡಿನಲ್ಲಿ ಪತ್ತೆಯಾದ ಮೃತದೇಹದ ಗುರುತು ಪತ್ತೆ

ಪುತ್ತೂರು: ರೋಟರಿ  ಸಾಮೆತ್ತಡ್ಕ ನಡುವೆ ಇರುವ ತೋಡಿನಲ್ಲಿ ಪತ್ತೆಯಾದ ಅಪರಿಚಿತ ವ್ಯಕ್ತಿಯ ಮೃತದೇಹದ ಗುರುತು ಪತ್ತೆಯಾಗಿದೆ. ಪುತ್ತೂರು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗುರುತು ಪತ್ತೆ ಹಚ್ಚಿದ್ದಾರೆ. ನಂದಕುಮಾ‌ರ್ ನಿನ್ನೆ ಸಂಜೆ ಬೊಳ್ಳಾರಿನಿಂದ ಕಾಣೆಯಾಗಿದ್ದರು. ಇಂದು ತೋಡಿನಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ತೋಡಿನಲ್ಲಿ ಪತ್ತೆಯಾದ ಮೃತದೇಹದ ಗುರುತು ಪತ್ತೆ Read More »

ಶ್ರೀ ಮಹಾಲಿಂಗೇಶ್ವರನ ಪುಣ್ಯಭೂಮಿಯಲ್ಲಿರುವ ನಾಗನಕಟ್ಟೆಗೆ ಹಾನಿಗೈದಿರುವುದು ಖಂಡನೀಯ | ಆರೋಪಿಗೆ ಸೂಕ್ತ ಶಿಕ್ಷೆ ನೀಡಬೇಕು: ಕಿಶೋರ್ ಕುಮಾರ್ ಪುತ್ತೂರು

ಪುತ್ತೂರು: ತುಳುನಾಡಿನಲ್ಲಿ ನಾಗದೇವರಿಗೆ ವಿಶೇಷ ಪ್ರಾಧಾನ್ಯತೆ ಇದೆ. ಅದೂ ಶ್ರೀ ಮಹಾಲಿಂಗೇಶ್ವರನ ಪುಣ್ಯಭೂಮಿಯಲ್ಲಿರುವ ನಾಗನಕಟ್ಟೆಯನ್ನು ಧ್ವಂಸಗೊಳಿಸುವುದಲ್ಲದೆ ಕೆಟ್ಟ ರೀತಿಯಲ್ಲಿ ವರ್ತಿಸಿರುವುದು ಖಂಡನೀಯ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಹೇಳಿದ್ದಾರೆ. ಅವರು ಖಾಸಗಿ ವ್ಯಕ್ತಿಯಿಂದ ಹಾನಿಗೊಳಗಾದ ನಗರದ ಖಾಸಗಿ ಬಸ್‍ ನಿಲ್ದಾಣದ ಬಳಿ ಇರುವ ನಾಗನಕಟ್ಟೆಗೆ ಶುಕ್ರವಾರ ಭೇಟಿ ನೀಡಿ ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ ಪುತ್ತೂರು ನಗರ ಠಾಣಾ ಪೊಲೀಸರು ಆತನನ್ನು ಬಂಧಿಸಿದ್ದು, ಇದಕ್ಕಾಗಿ ಅಭಿನಂದನೆ ಸಲ್ಲಿಸಿದ ಅವರು, ಹಿಂದೂಗಳ ಶ್ರದ್ಧಾ ಕೇಂದ್ರಗಳಿಗೆ ಅನ್ಯಾಯ ಆದಾಗ

ಶ್ರೀ ಮಹಾಲಿಂಗೇಶ್ವರನ ಪುಣ್ಯಭೂಮಿಯಲ್ಲಿರುವ ನಾಗನಕಟ್ಟೆಗೆ ಹಾನಿಗೈದಿರುವುದು ಖಂಡನೀಯ | ಆರೋಪಿಗೆ ಸೂಕ್ತ ಶಿಕ್ಷೆ ನೀಡಬೇಕು: ಕಿಶೋರ್ ಕುಮಾರ್ ಪುತ್ತೂರು Read More »

error: Content is protected !!
Scroll to Top