ಅಪರಾಧ

24 ತುಂಡು ಮಾಡುತ್ತೇನೆ ಎಂದು ಹಿಂದೂ ಯುವತಿಗೆ ಬೆದರಿಕೆಯೊಡ್ಡಿದ ಆರೋಪಿ ಬಂಧನ

ಯುವತಿಯ ಅಂಗಡಿ ಎದುರು ಬಂದು ಕಿರುಕುಳ ನೀಡುತ್ತಿದ್ದ ಯುವಕರ ತಂಡ ಮಂಗಳೂರು: ಸುರತ್ಕಲ್‌ನ ಹಿಂದು ಯುವತಿಗೆ ಕಿರುಕುಳ ನೀಡಿದ ಆರೋಪಿ ಸುರತ್ಕಲ್‌ ಗ್ರಾಮದ ಇಡ್ಯಾ ಗ್ರಾಮದ ಶಾರೀಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನಿರಂತರ ಕಿರುಕುಳದಿಂದ ಬೇಸತ್ತು ಯುವತಿ ನಿನ್ನೆ ಮುಂಜಾನೆ ನಿದ್ದೆ ಮಾತ್ರ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಬಳಿಕ ಈ ಘಟನೆ ಬೆಳಕಿಗೆ ಬಂದಿತ್ತು. ಹಿಂದೂ ಸಂಘಟನೆಗಳು ಲವ್‌ ಜಿಹಾದ್‌ ಕೃತ್ಯ ಎಂದು ಆರೋಪಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಯುವತಿಗೆ ಬೆದರಿಕೆಯೊಡ್ಡುತ್ತಿದ್ದ […]

24 ತುಂಡು ಮಾಡುತ್ತೇನೆ ಎಂದು ಹಿಂದೂ ಯುವತಿಗೆ ಬೆದರಿಕೆಯೊಡ್ಡಿದ ಆರೋಪಿ ಬಂಧನ Read More »

ಕಲ್ಲಡ್ಕ ಪ್ರಸಿದ್ಧ ಹೊಟೇಲ್ ಶ್ರೀ ಲಕ್ಷ್ಮೀನಿವಾಸದಲ್ಲಿ ಕಳ್ಳತನ

ಬಂಟ್ವಾಳ: ಕಲ್ಲಡ್ಕದಲ್ಲಿ ಕಳೆದ ಹಲವಾರು ವರ್ಷಗಳಿಂದ ಮನೆಮಾತಾಗಿರುವ ಪ್ರಸಿದ್ಧ ಹೊಟೇಲ್ ಗೆ ಕಳ್ಳನೋರ್ವ ನುಗ್ಗಿದ ಘಟನೆ ನಡೆದಿದ್ದು, ಸಿಸಿ ಟಿವಿ ದೃಶ್ಯಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಲ್ಲಡ್ಕದಲ್ಲಿರುವ ಶ್ರೀ ಲಕ್ಮೀನಿವಾಸ ಕೆ.ಟಿ.ಹೋಟೆಲ್ ಗೆ ಕಳ್ಳನೋರ್ವ ನುಗ್ಗಿದ್ದು, ಹೊಟೇಲ್‍ ನಲ್ಲಿ ಇರಿಸಿದ್ದ ದೇವರ ಹುಂಡಿಯನ್ನು ಕಳವು ಮಾಡಿದ್ದಾನೆ. ಈ ಬಗ್ಗೆ ಮಾಲಕರು ಯಾವುದೇ ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ದೇವರ ಡಬ್ಬಿಯಲ್ಲಿದ್ದ ಚಿಲ್ಲರೆ ಹಣವನ್ನು ಕಳವು ಮಾಡಿದ ಕಳ್ಳ ಇತರ ಕಡೆಗಳಲ್ಲಿ ಜಾಲಾಡಿರುವ ದೃಶ್ಯ ‌ಸಿಸಿ.ಟಿ.ವಿಯಲ್ಲಿ ಸೆರೆಯಾಗಿದೆ.

ಕಲ್ಲಡ್ಕ ಪ್ರಸಿದ್ಧ ಹೊಟೇಲ್ ಶ್ರೀ ಲಕ್ಷ್ಮೀನಿವಾಸದಲ್ಲಿ ಕಳ್ಳತನ Read More »

ಕಾರ್ಕಳ : ಪ್ರಿಯಕರನ ಜತೆ ಸೇರಿ ಪತಿಯ ಹತ್ಯೆ ಮಾಡಿದ ಪತ್ನಿ

ಇನ್‌ಸ್ಟಾಗ್ರಾಂ ಗೆಳೆಯನ ಮೋಹದಲ್ಲಿ ದಾರಿ ತಪ್ಪಿದ ಗೃಹಿಣಿ ಕಾರ್ಕಳ: ಪ್ರಿಯಕರನ ಜೊತೆ ಸೇರಿಕೊಂಡು ಪತಿಯನ್ನು ಪತ್ನಿಯೇ ಹತ್ಯೆ ಮಾಡಿರುವ ಘಟನೆ ಕಾರ್ಕಳ ತಾಲೂಕಿನ ಅಜೆಕಾರಿ ಎಂಬಲ್ಲಿ ನಡೆದಿದೆ.ಬಾಲಕೃಷ್ಣ ಪೂಜಾರಿ (44) ಕೊಲೆಯಾದ ವ್ಯಕ್ತಿ. ಆತನ ಪತ್ನಿ ಪ್ರತಿಮಾ (36) ಹಾಗೂ ಆಕೆಯ ಪ್ರಿಯಕರ ದಿಲೀಪ್‌ ಹೆಗ್ಡೆಯನ್ನು (28) ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಬಾಲಕೃಷ್ಣ ಪೂಜಾರಿ ಕಳೆದ 25 ದಿನಗಳಿಂದ ಜ್ವರ, ವಾಂತಿ ಆಗಿ ಅನಾರೋಗ್ಯದಿಂದ ಬಳಲುತ್ತಿದ್ದರು. ಕಾಮಾಲೆ ರೋಗ ಎಂದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ

ಕಾರ್ಕಳ : ಪ್ರಿಯಕರನ ಜತೆ ಸೇರಿ ಪತಿಯ ಹತ್ಯೆ ಮಾಡಿದ ಪತ್ನಿ Read More »

ಯುವಕನ ಕಿರುಕುಳದಿಂದ ಬೇಸತ್ತು ಯುವತಿ ಆತ್ಮಹತ್ಯೆಗೆ ಯತ್ನ

24 ತುಂಡು ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ ಅನ್ಯಕೋಮಿನ ಯುವಕ ಮಂಗಳೂರು: ಅನ್ಯಕೋಮಿನ ಯುವಕನೊಬ್ಬನ ಕಿರುಕುಳದಿಂದ ಬೇಸತ್ತು ಸುರತ್ಕಲ್‌ ಸಮೀಪದ ಇಡ್ಯದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಸಂಭವಿಸಿದ್ದು, ಇದು ಲವ್‌ ಜಿಹಾದ್‌ ಕೃತ್ಯ ಎಂಬ ಆರೋಪ ಕೇಳಿಬಂದಿದೆ. ಅನ್ಯಕೋಮಿನ ಯುವಕ ಯುವತಿಯ ಸಹೋದರನಿಗೆ ಸಂದೇಶ ಕಳುಹಿಸಿ ತಂಗಿಯನ್ನು ಪ್ರೀತಿಸಲು ಹೇಳು ಇಲ್ಲದಿದ್ದರೆ 24 ತುಂಡು ಮಾಡುತ್ತೇನೆ ಎಂದು ಬೆದರಿಕೆ ಕಳುಹಿಸಿದ್ದಾನೆ ಎಂದು ಆರೋಪಿಸಲಾಗಿದೆ.ನನ್ನನ್ನು ಪ್ರೀತಿಸುವಂತೆ ನಿನ್ನ ಸಹೋದರಿಗೆ ಹೇಳು, ಇಲ್ಲ ನಿನ್ನನ್ನು 24 ತುಂಡು

ಯುವಕನ ಕಿರುಕುಳದಿಂದ ಬೇಸತ್ತು ಯುವತಿ ಆತ್ಮಹತ್ಯೆಗೆ ಯತ್ನ Read More »

ಒಂದೇ ಪ್ರಕರಣದಲ್ಲಿ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ : ನ್ಯಾಯಾಲಯದ ಅಪರೂಪದ ತೀರ್ಪು

ಕೊಪ್ಪಳ ಜಿಲ್ಲೆಯ ಗಂಗಾವತಿಯ ಮರಕುಂಬಿ ದಲಿತ ದೌರ್ಜನ್ಯ ಪ್ರಕರಣ ಕೊಪ್ಪಳ: ಒಂದೇ ಪ್ರಕರಣದಲ್ಲಿ ಬರೋಬ್ಬರಿ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವ ಮೂಲಕ ಕೊಪ್ಪಳ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಂಗ ಇತಿಹಾಸದಲ್ಲಿ ಅಪರೂಪದ ತೀರ್ಪ ನೀಡಿದ ಹಿರಿಮೆಗೆ ಪಾತ್ರವಾಗಿದೆ. ಗಂಗಾವತಿಯ ಮರುಕುಂಬಿ ದಲಿತ ದೌರ್ಜನ್ಯ ಪ್ರಕರಣದ 98 ಅಪರಾಧಿಗಳಿಗೆ ಗುರುವಾರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಎಸ್‌ಸಿ ಮತ್ತು ಎಸ್‌ಟಿ ಸಮುದಾಯಕ್ಕೆ ಸೇರಿದ ಇತರ ಮೂವರು ಆರೋಪಿಗಳಿಗೆ ಐದು ವರ್ಷಗಳ ಜೈಲು ಶಿಕ್ಷೆ

ಒಂದೇ ಪ್ರಕರಣದಲ್ಲಿ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ : ನ್ಯಾಯಾಲಯದ ಅಪರೂಪದ ತೀರ್ಪು Read More »

ಬಾನೆಟ್‌ ಮೇಲೆ ಪೊಲೀಸ್‌ ಸಿಬ್ಬಂದಿಯನ್ನು ಮೀಟರ್‌ಗಟ್ಟಲೆ ದೂರ ಹೊತ್ತೊಯ್ದ ಕಾರು

ಶಿವಮೊಗ್ಗ: ವಾಹನ ತಪಾಸಣೆ ನಡೆಸುತ್ತಿದ್ದ ಸಂಚಾರ ಠಾಣೆ ಪೊಲೀಸ್ ಸಿಬ್ಬಂದಿಯನ್ನು ಚಾಲಕನೊಬ್ಬ ಕಾರಿನ ಬಾನೆಟ್ ಮೇಲೆ ಹೊತ್ತೊಯ್ದ ಸಿನಿಮೀಯ ರೀತಿಯ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.ನಗರದ ಸಹ್ಯಾದ್ರಿ ಕಾಲೇಜು ಬಳಿ ಸಹ್ಯಾದ್ರಿ ಕಾಲೇಜು ಮುಂಭಾಗ ಬಿ.ಎಚ್. ರಸ್ತೆಯಲ್ಲಿ ವಾಹನ ತಡೆದು ತಪಾಸಣೆ ನಡೆಸುವಾಗ ಘಟನೆ ಸಂಭವಿಸಿದೆ.ಬಿ.ಎಚ್. ರಸ್ತೆಯಲ್ಲಿ ವಾಹನ ತಪಾಸಣೆ ವೇಳೆ ಪೂರ್ವ ಸಂಚಾರ ಠಾಣೆಯ ಸಿಬ್ಬಂದಿಯೊಬ್ಬರು ಕಾರು ತಡೆದಿದ್ದಾರೆ. ರಸ್ತೆಯ ಪಕ್ಕಕ್ಕೆ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಚಾಲಕ ಕಾರನ್ನು ನಿಲ್ಲಿಸದೆ ಮುಂದೆ ಚಲಾಯಿಸಿದ್ದಾನೆ. ಪೊಲೀಸ್ ಸಿಬ್ಬಂದಿ ಕೂಡಲೆ

ಬಾನೆಟ್‌ ಮೇಲೆ ಪೊಲೀಸ್‌ ಸಿಬ್ಬಂದಿಯನ್ನು ಮೀಟರ್‌ಗಟ್ಟಲೆ ದೂರ ಹೊತ್ತೊಯ್ದ ಕಾರು Read More »

ಸಲ್ಮಾನ್‌ ಖಾನ್‌ಗೆ ಜೀವ ಬೆದರಿಕೆಯೊಡ್ಡಿದ್ದ ಆರೋಪಿ ಬಂಧನ

5 ಕೋ.ರೂ. ಕೇಳಿ ಬೆದರಿಕೆಯೊಡ್ಡಿದ್ದ ತರಕಾರಿ ವ್ಯಾಪಾರಿ ಮುಂಬಯಿ: 5 ಕೋಟಿ ರೂ. ಕೊಡು ಇಲ್ಲದಿದ್ದರೆ ನಿನ್ನ ಸ್ಥಿತಿ ಬಾಬಾ ಸಿದ್ದಿಕಗಿಂತಲೂ ಘೋರವಾಗಿರಲಿದೆ ಎಂದು ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ಗೆ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ಹೆಸರಲ್ಲಿ ಧಮಕಿ ಹಾಕಿದ್ದ ಯುವಕನನ್ನು ಮುಂಬಯಿ ಪೊಲೀಸರು ಬಂಧಿಸಿದ್ದಾರೆ. ಕಳೆದ ಅ.18ರಂದು ಮುಂಬಯಿ ಪೊಲೀಸರಿಗೆ ವಾಟ್ಸಪ್‌ ಮೂಲಕ ಬೆದರಿಕೆ ಕರೆ ಬಂದಿತ್ತು. ಇದಕ್ಕೂ ಕೆಲವು ದಿನ ಮೊದಲು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿಯನ್ನು ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ನ ಶೂಟರ್‌ಗಳು ದಸರಾ

ಸಲ್ಮಾನ್‌ ಖಾನ್‌ಗೆ ಜೀವ ಬೆದರಿಕೆಯೊಡ್ಡಿದ್ದ ಆರೋಪಿ ಬಂಧನ Read More »

ನನ್ನ ಜತೆ ಸಹಕರಿದಿದ್ದರೆ 24 ತುಂಡು | ವಾಟ್ಸಪ್ ಸಂದೇಶ ರವಾನಿಸಿದ ಅನ್ಯಕೋಮಿನ ಯುವಕ

ಸುರತ್ಕಲ್ : ನನ್ನ ಜೊತೆ ಸಹಕರಿಸದಿದ್ದರೆ 24 ತುಂಡು ಮಾಡುವೆ ಎಂದು ಸುರತ್ಕಲ್ ಇಡ್ಯಾ ನಿವಾಸಿಯೋರ್ವ ವಾಟ್ಸಪ್ ಮೂಲಕ ಸಂದೇಶ ರವಾನಿಸಿದ್ದು, ಯುವತಿಯ ಕುಟುಂಬ ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ಮನೆ ಸಮೀಪ ವಾಸಿಸುವ ಯುವತಿ ಸಹೋದರನ  ವಾಟ್ಸಪ್ ಮೆಸೇಜ್ ಮಾಡಿದ್ದಾನೆ ಎನ್ನಲಾಗುತ್ತಿದ್ದು, ಸುರತ್ಕಲ್ ಇಡ್ಯಾ ನಿವಾಸಿ, ಸದಾಶಿವನಗರದ ಶಾರಿಕ್ ನೂರ್ಜಹಾನ್ ಮೆಸೇಜ್ ಮಾಡಿದಾತ ಎಂದು ತಿಳಿದು ಬಂದಿದೆ. ಯುವತಿಯ ಸಹೋದರನಿಗೆ ವಾಟ್ಸಪ್ ಮೆಸೇಜ್ ಮಾಡಿ ಈ ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ. ಕಿರುಕುಳ ನೀಡಿದ ವಿಚಾರಕ್ಕೆ

ನನ್ನ ಜತೆ ಸಹಕರಿದಿದ್ದರೆ 24 ತುಂಡು | ವಾಟ್ಸಪ್ ಸಂದೇಶ ರವಾನಿಸಿದ ಅನ್ಯಕೋಮಿನ ಯುವಕ Read More »

ವಿಶ್ವ ಹಿಂದೂ ಪರಿಷತ್ ನೂತನ ಕಾರ್ಯಾಲಯದ ಭೂಮಿ ಪೂಜೆ ಸಂದರ್ಭ ಹಿಂದೂ ಸಂಘಟನೆ ಕಾರ್ಯಕರ್ತರ ನಡುವೆ ಮಾರಾಮಾರಿ | ಘಟನಾ ಸ್ಥಳದಲ್ಲಿ ಪೊಲೀಸರಿಂದ ಬಿಗಿ ಬಂದೋಬಸ್ತ್

ಪುತ್ತೂರು: ವಿಶ್ವಹಿಂದೂ ಪರಿಷತ್ ನೂತನ ಜಿಲ್ಲಾ ಕಾರ್ಯಾಲಯದ ಭೂಮಿ ಸಮಾರಂಭದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದ ಕುರಿತು ತಿಳಿದು ಬಂದಿದೆ. ಇಂದು ಪುತ್ತೂರಿನಲ್ಲಿ ವಿಶ್ವ ಹಿಂದೂ ಪರಿಷತ್‍ ನೂತನ ಕಾರ್ಯಾಲಯಕ್ಕೆ ಭೂಮಿ ಪೂಜೆ ಏರ್ಪಿಸಲಾಗಿತ್ತು. ಭೂಮಿ ಪೂಜೆಯನ್ನು ಕುಕ್ಕೆ ಸುಬ್ರಹ್ಮಣ್ಯದ ನರಸಿಂಹಸ್ವಾಮಿ ಸಂಪುಟ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯರ ಉಪಸ್ಥಿತಿಯಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮ ಆರಂಭಗೊಳ್ಳುತ್ತಿದ್ದಂತೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರನಾಗಿ ಚುನಾವಣೆಗೆ ಸ್ಪರ್ಧಿಸಿ ಬಿಜೆಪಿ ಸೋಲಿಗೆ ಕಾರಣರಾದ ಅರುಣ್ ಕುಮಾರ್‍ ಪುತ್ತಿಲ ಸಹಿತ

ವಿಶ್ವ ಹಿಂದೂ ಪರಿಷತ್ ನೂತನ ಕಾರ್ಯಾಲಯದ ಭೂಮಿ ಪೂಜೆ ಸಂದರ್ಭ ಹಿಂದೂ ಸಂಘಟನೆ ಕಾರ್ಯಕರ್ತರ ನಡುವೆ ಮಾರಾಮಾರಿ | ಘಟನಾ ಸ್ಥಳದಲ್ಲಿ ಪೊಲೀಸರಿಂದ ಬಿಗಿ ಬಂದೋಬಸ್ತ್ Read More »

ನಕಲಿ ಕೋರ್ಟ್‌ ಸ್ಥಾಪಿಸಿ ತೀರ್ಪು ನೀಡುತ್ತಿದ್ದ ನಕಲಿ ನ್ಯಾಯಾಧೀಶ ಸೆರೆ

ಐದು ವರ್ಷಗಳಿಂದ ಜನರಿಗೆ ಮೋಸ ಮಾಡುತ್ತಿದ್ದ ಈ ಮಹಾಕಿಲಾಡಿ ಅಹ್ಮದಾಬಾದ್‌: ನಕಲಿ ಪೊಲೀಸ್‌, ನಕಲಿ ಡಾಕ್ಟರ್‌ಗಳು ಜನರನ್ನು ಏಮಾರಿಸುವ ಘಟನೆಗಳು ಸಾಮಾನ್ಯ. ಆದರೆ ಗುಜರಾತಿನ ಈ ಕಿಲಾಡಿ ಪಾತಕಿ ಮಾತ್ರ ನ್ಯಾಯಾಧೀಶನ ಸೋಗುಹಾಕಿ ಕಳೆದ 5 ವರ್ಷಗಳಿಂದ ಜನರಿಗೆ ಮೋಸ ಮಾಡುತ್ತಿದ್ದ. ಇದಕ್ಕಾಗಿ ಆತ ನಕಲಿ ನ್ಯಾಯಾಲಯವನ್ನೂ ಸ್ಥಾಪಿಸಿದ್ದ. ಗುಜರಾತಿನ ಗಾಂಧಿನಗದರಲ್ಲಿ ಕಾರ್ಯಾಚರಿಸುತ್ತಿತ್ತು ನಕಲಿ ನ್ಯಾಯಾಧೀಶ ಮೋರಿಸ್‌ ಸಾಮ್ಯುವೆಲ್‌ ಕ್ರಿಶ್ಚಿಯನ್‌ ಎಂಬಾತನ ನ್ಯಾಯಾಲಯ. ಈತ ಮುಖ್ಯವಾಗಿ ಭೂ ವಿವಾದ ಹೊಂದಿರುವವರನ್ನು ಬಲೆಗೆ ಕೆಡವಿಕೊಂಡು ಮೋಸ ಮಾಡುತ್ತಿದ್ದ. ಭೂವಿವಾದ

ನಕಲಿ ಕೋರ್ಟ್‌ ಸ್ಥಾಪಿಸಿ ತೀರ್ಪು ನೀಡುತ್ತಿದ್ದ ನಕಲಿ ನ್ಯಾಯಾಧೀಶ ಸೆರೆ Read More »

error: Content is protected !!
Scroll to Top