ಅಪರಾಧ

ವಾಹನಗಳ ಮೇಲೆ ಉಗ್ರರ ದಾಳಿ : 50ಕ್ಕೂ ಹೆಚ್ಚು ಮಂದಿ ಸಾವು

ಇಸ್ಲಾಮಾನಾದ್: ಪಾಕಿಸ್ಥಾನದಲ್ಲಿ ನಾಗರಿಕರನ್ನು ಕರೆದೊಯ್ಯುತ್ತಿದ್ದ ವಾಹನಗಳ ಮೇಲೆ ಉಗ್ರರ ದಾಳಿ ನಡೆದಿದ್ದು, 50 ಜನರು ಸಾವನ್ನಪ್ಪಿದ್ದಾರೆ. 20 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಫ್ಘಾನಿಸ್ತಾನದ ಗಡಿಯಲ್ಲಿರುವ ಖೈಬರ್ ಪಖ್ತೂನ್‌ಖ್ವಾ ಪ್ರಾಂತ್ಯದ ಕರ‍್ರಂ ಜಿಲ್ಲೆಯಲ್ಲಿ ಗುರುವಾರ ಸಂಜೆ ಈ ಘಟನೆ ನಡೆದಿದೆ. ಪರಾಚಿನಾರ್‌ನಿಂದ ಖೈಬರ್ ಪಖ್ತೂನ್‌ಖ್ವಾದ ರಾಜಧಾನಿ ಪೇಷಾವರ್ ಕಡೆಗೆ ಹೊರಟಿದ್ದ ವಾಹನಗಳ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.ಎಂಟು ಮಹಿಳೆಯರು ಮತ್ತು ಐದು ಮಕ್ಕಳು ಸೇರಿದಂತೆ 50 ಜನರು ಸಾವನ್ನಪ್ಪಿದ್ದು, 20 ಜನರು ಗಾಯಗೊಂಡಿದ್ದಾರೆ. ಸಾವನ್ನಪ್ಪಿದವರ […]

ವಾಹನಗಳ ಮೇಲೆ ಉಗ್ರರ ದಾಳಿ : 50ಕ್ಕೂ ಹೆಚ್ಚು ಮಂದಿ ಸಾವು Read More »

ವಿಕ್ರಂ ಗೌಡ ಸಹಚರರಿಗಾಗಿ ವ್ಯಾಪಕ ಶೋಧ

ಗಡಿಭಾಗಗಳಲ್ಲಿ ನಾಕಾಬಂಧಿ ಹಾಕಿ ವಾಹನ ತಪಾಸಣೆ ಕಾರ್ಕಳ : ಎನ್‌ಕೌಂಟರ್‌ಗೆ ಬಲಿಯಾಗಿರುವ ನಕ್ಸಲ್ ನಾಯಕ ವಿಕ್ರಂ ಗೌಡನ ಸಹಚರರ ಪತ್ತೆಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಹೆಬ್ರಿಯ ಪೀತಬೈಲಿನಲ್ಲಿ ಎನ್‌ಕೌಂಟರ್‌ ನಡೆಯುವ ಸಂದರ್ಭದಲ್ಲಿ ವಿಕ್ರಂ ಗೌಡನ ಜೊತೆಗೆ ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ಇದ್ದ. ಅವರು ಕಾಡಿನೊಳಗೆ ಓಡಿಹೋಗಿ ತಪ್ಪಿಸಿಕೊಂಡಿದ್ದಾರೆ ಎಂದು ಎಎನ್‌ಎಫ್‌ ಅಧಿಕಾರಿಗಳು ಹೇಳುತ್ತಿದ್ದಾರೆ. ಇವರಲ್ಲದೆ ನಕ್ಸಲ್‌ ತಂಡದಲ್ಲಿ ಇನ್ನೂ ಕೆಲವರಿದ್ದು, ಒಟ್ಟು ಆರು ಮಂದಿ ಬಂದಿರುವ ಅನುಮಾನವಿದೆ. ಈ ಹಿನ್ನೆಲೆಯಲ್ಲಿ ಗಡಿಭಾಗಗಳಲ್ಲಿ ಚೆಕ್‌ಪೋಸ್ಟ್‌

ವಿಕ್ರಂ ಗೌಡ ಸಹಚರರಿಗಾಗಿ ವ್ಯಾಪಕ ಶೋಧ Read More »

ಮೃತ ಕೂಲಿ ಕಾರ್ಮಿಕ ಶಿವಪ್ಪ ಕೆರೆಮೂಲೆ ಸಾವು ಪ್ರಕರಣ | ಪ್ರಮುಖ ಆರೋಪಿಯನ್ನು ಬಂಧಿಸದಿದ್ದಲ್ಲಿ ನಾಳೆ ಪ್ರತಿಭಟನೆ : ಪತ್ರಿಕಾಗೋಷ್ಠಿಯಲ್ಲಿ ಆದಿ ದ್ರಾವಿಡ ಸಮಾಜ ಸೇವಾ ಸಂಘ

ಪುತ್ತೂರು: ಮೃತಪಟ್ಟ ಕೂಲಿ ಕಾರ್ಮಿಕ ಶಿವಪ್ಪ ಕೆರೆಮೂಲೆ ಎಂಬವರನ್ನ ರಸ್ತೆ ಬದಿ ಮಲಗಿಸಿ ಅವಮಾನಕಾರಿ ರೀತಿಯಲ್ಲಿ ಬಿಟ್ಟು ಹೋದ ಮಾಲಿಕ, ಪ್ರಮುಖ ಆರೋಪಿ ಹೆನ್ರಿ ತಾವ್ರೋರನ್ನು ಪುತ್ತೂರು ನಗರ ಠಾಣಾ ಪೊಲೀಸರು ಇನ್ನೂ ಬಂಧಿಸದೇ ಇರುವ ನಿಟ್ಟಿನಲ್ಲಿ ನ.22 ನಾಳೆ ಪುತ್ತೂರು ನಗರ ಠಾಣೆ ಎದುರು ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘ ಪುತ್ತೂರು ತಾಲೂಕು ಘಟಕದ ವತಿಯಿಂದ ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ಬಾಬು

ಮೃತ ಕೂಲಿ ಕಾರ್ಮಿಕ ಶಿವಪ್ಪ ಕೆರೆಮೂಲೆ ಸಾವು ಪ್ರಕರಣ | ಪ್ರಮುಖ ಆರೋಪಿಯನ್ನು ಬಂಧಿಸದಿದ್ದಲ್ಲಿ ನಾಳೆ ಪ್ರತಿಭಟನೆ : ಪತ್ರಿಕಾಗೋಷ್ಠಿಯಲ್ಲಿ ಆದಿ ದ್ರಾವಿಡ ಸಮಾಜ ಸೇವಾ ಸಂಘ Read More »

ಸೌತಡ್ಕ  ಮಹಾಗಣಪತಿ ಕ್ಷೇತ್ರದ ಸ್ವಚ್ಚತಾ ಸಿಬ್ಬಂದಿಯ ಮೇಲೆ ಯಾತ್ರಾರ್ಥಿಗಳಿಂದ ಹಲ್ಲೆ

ಕೊಕ್ಕಡ :  ಸೌತಡ್ಕ ಶ್ರೀ ಮಹಾಗಣಪತಿ ಸನ್ನಿದಾನದ ಸ್ವಚ್ಚತಾ ಕೆಲಸ ನಿರ್ವಹಿಸುತ್ತಿದ್ದ  ಸಿಬ್ಬಂದಿ ಮಹೇಂದ್ರ ಕೊಲ್ಲಾಜೆಪಳಿಕೆ ಎಂಬವರಿಗೆ ಯಾತ್ರಾರ್ಥಿಗಳು ಹಲ್ಲೆ ನಡೆಸಿದ ಘಟನೆ ನ.20ರಂದು ನಡೆದಿದೆ. ಹಲ್ಲೆಗೊಳಗಾದ ಮಹೇಂದ್ರ ಕೊಲ್ಲಾಜೆಪಳಿಕೆ ಅವರ ತಲೆಗೆ ಗಂಭೀರ ಏಟಾಗಿದ ಪರಿಣಾಮ ಅವರು ಪ್ರಜ್ಞೆ ಕಳೆದುಕೊಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಕೊಕ್ಕಡ ಸರಕಾರಿ ಆಸ್ಪತ್ರೆಗೆ ಕರೆತಂದು, ಅಲ್ಲಿಂದ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ವಚ್ಚತಾ ಸಿಬ್ಬಂದಿಯಾದ ಮಹೇಂದ್ರ ಅವರು ತನ್ನ

ಸೌತಡ್ಕ  ಮಹಾಗಣಪತಿ ಕ್ಷೇತ್ರದ ಸ್ವಚ್ಚತಾ ಸಿಬ್ಬಂದಿಯ ಮೇಲೆ ಯಾತ್ರಾರ್ಥಿಗಳಿಂದ ಹಲ್ಲೆ Read More »

ವಿಟ್ಲದ ಮನೆಯೊಂದರಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ವಿಟ್ಲ: ಕನ್ಯಾನದ ಪಂಜಿಗದ್ದೆ ದೇಲಂತಬೆಟ್ಟು ಎಂಬಲ್ಲಿಯ ಮನೆಯೊಂದರಲ್ಲಿ ವ್ಯಕ್ತಿಯೋರ್ವರ ಶವ ಮನೆಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಮೌರಿಸ್ ಎಂಬವರ ಮನೆಯಲ್ಲಿ ಕೆಲಸದ ಮಾಡುತ್ತಿದ್ದ ಓರ್ವ ವ್ಯಕ್ತಿ ಮೃತಪಟ್ಟಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಎರಡು ದಿನಗಳ ಹಿಂದೆಯೇ ಮೃತಪಟ್ಟಿದ್ದು ವಿಟ್ಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಾವಿನ ಕಾರಣದ ಬಗ್ಗೆ ತನಿಖೆ ನಡೆಸುತ್ತಿದ್ದು ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ವಿಟ್ಲದ ಮನೆಯೊಂದರಲ್ಲಿ ವ್ಯಕ್ತಿಯ ಮೃತದೇಹ ಪತ್ತೆ Read More »

ಹೇರ್‌ ಡ್ರೈರ್‌ ಸ್ಫೋಟಗೊಂಡು ಮಹಿಳೆಯ ಎರಡೂ ಕೈ ಛಿದ್ರ

ಆರ್ಡರ್‌ ಮಾಡದಿದ್ದರೂ ಕೊರಿಯರ್‌ನಲ್ಲಿ ಬಂದ ಹೇರ್‌ ಡ್ರೈಯರ್‌ ಬಗ್ಗೆ ಅನುಮಾನ ಬೆಂಗಳೂರು: ಕೊರಿಯರ್‌ನಲ್ಲಿ ಬಂದ ಹೇರ್ ಡ್ರೈಯರ್ ಕೇಯಲ್ಲೇ ಸ್ಫೋಟಗೊಂಡು ಮೃತ ಯೋಧರೊಬ್ಬರ ಪತ್ನಿಯ ಎರಡೂ ಕೈಗಳು ತುಂಡಾಗಿರುವ ದಾರುಣ ಘಟನೆ ಬಾಗಲಕೋಟೆಜಿಲ್ಲೆಯ ಇಳಕಲ್ ನಗರದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.ಯೋಧ ದಿ.ಪಾಪಣ್ಣ ಎಂಬವರ ಪತ್ನಿ ಬಸಮ್ಮ ಯರನಾಳ ಅವರ ಎರಡೂ ಕೈಗಳು ತುಂಡಾಗಿವೆ. 2017ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಪಾಪಣ್ಣ ಮೃತಪಟ್ಟಿದ್ದರು. ಬಸಮ್ಮ ಅವರ ಸ್ನೇಹಿತೆ ಶಶಿಕಲಾ ಎಂಬವರ ಹೆಸರು, ನಂಬರ್ ಇದ್ದ ಪಾರ್ಸಲ್ ಕೊರಿಯರ್‌ನಲ್ಲಿ

ಹೇರ್‌ ಡ್ರೈರ್‌ ಸ್ಫೋಟಗೊಂಡು ಮಹಿಳೆಯ ಎರಡೂ ಕೈ ಛಿದ್ರ Read More »

ವಿಕ್ರಂ ಗೌಡನ ಹೆಂಡತಿಯೂ ನಕ್ಸಲ್‌ ನಾಯಕಿ

ಮೂರು ವರ್ಷಗಳಿಂದ ಕೇರಳದ ಜೈಲಿನಲ್ಲಿದ್ದಾಳೆ ವಿಕ್ರಂ ಗೌಡ ಪ್ರೀತಿಸಿ ಮದುವೆಯಾದ ನಕ್ಸಲ್‌ ಯುವತಿ ಕಾರ್ಕಳ : ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿರುವ ನಕ್ಸಲ್‌ ನಾಯಕ ವಿಕ್ರಂ ಗೌಡನ ಹೆಂಡತಿಯೂ ನಕ್ಸಲ್‌ ಆಗಿದ್ದು, ಪ್ರಸ್ತುತ ಜೈಲಿನಲ್ಲಿದ್ದಾಳೆ. ನಕ್ಸಲ್‌ ಸಂಘಟನೆಯಲ್ಲೇ ಇದ್ದ ಸಾವಿತ್ರಿ (38) ಎಂಬ ಯುವತಿಯನ್ನು ಪ್ರೀತಿಸಿ ವಿಕ್ರಂ ಗೌಡ ಮದುವೆಯಾಗಿದ್ದ. ಇಬ್ಬರೂ ಅನೇಕ ವರ್ಷ ಮಾವೋವಾದಿ ಚಟುವಟಿಕೆಗಳಲ್ಲಿ ಜೊತೆಯಾಗಿ ತೊಡಗಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ. ಈಕೆಯೂ ವಿಕ್ರಂ ಗೌಡನ ಊರಿನವಳೇ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಖಚಿತವಾದ ಮಾಹಿತಿಗಳು ಇಲ್ಲ.ಸಾವಿತ್ರಿ

ವಿಕ್ರಂ ಗೌಡನ ಹೆಂಡತಿಯೂ ನಕ್ಸಲ್‌ ನಾಯಕಿ Read More »

ಪಡಿತರ ಪಡೆಯಲು ಬಂದು ಖೆಡ್ಡಾಕ್ಕೆ ಬಿದ್ದ ವಿಕ್ರಮ್‌ ಗೌಡ

ಮೂರುದಿನಗಳಿಂದ ಹೊಂಚು ಹಾಕಿ ಕುಳಿತಿದ್ದ ಎನ್‌ಎನ್‌ಎಫ್‌ ಪಡೆ ಕಾರ್ಕಳ : ಹೆಬ್ರಿಯ ಕಬ್ಬಿನಾಲೆ ಸಮೀಪ ಪೀತಬೈಲು ಎಂಬಲ್ಲಿ ಸೋಮವಾರ ರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲ್‌ ನಾಯಕ ವಿಕ್ರಂ ಗೌಡ (44) ಹತನಾಗಿದ್ದಾನೆ. ಈ ಕಾರ್ಯಾಚರಣೆಯ ಒಂದೊಂದೇ ಮಾಹಿತಿ ಈಗ ಬಹಿರಂಗವಾಗುತ್ತಿದೆ. ನಕ್ಸಲರು ಪೀತಬೈಲಿನಲ್ಲಿರುವ ಮನೆಗಳಿಗೆ ಪಡಿತರ ಮತ್ತು ಹಣ ಪಡೆಯಲು ಬಂದು ಪೊಲೀಸರು ರಚಿಸಿದ್ದ ಖೆಡ್ಡಾಕ್ಕೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ಈ ಭಾಗದಲ್ಲಿ ನಕ್ಸಲರ ಓಡಾಟ ಮರಳಿ ಶುರುವಾಗಿರುವ ಕುರಿತು ನಕ್ಸಲ್‌ ನಿಗ್ರಹ ಪಡೆಗೆ ಖಚಿತ ಸುಳಿವು

ಪಡಿತರ ಪಡೆಯಲು ಬಂದು ಖೆಡ್ಡಾಕ್ಕೆ ಬಿದ್ದ ವಿಕ್ರಮ್‌ ಗೌಡ Read More »

ಕುಂಡಡ್ಕದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ !

ವಿಟ್ಲ: ಕುಂಡಡ್ಕದ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವಿಟ್ಲ ಕುಂಡಡ್ಕ ಮರುವಾಳ ನಿವಾಸಿ ತಿಮ್ಮಪ್ಪ ಪೂಜಾರಿ (58) ಆತ್ಮಹತ್ಯೆ ಮಾಡಿಕೊಂಡವರು. ಸಂಜೆಯಾದರೂ ಮನೆಗೆ ಬಾರದ ಹಿನ್ನಲೆಯಲ್ಲಿ ಕಾರಣ ಹುಡುಕಾಡಿದಾಗ ಮನೆಯ ಸಮೀಪದ ಗುಡ್ಡೆಯಲ್ಲಿ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆ ಕಾರಣಗಳು ತಿಳಿದು ಬಂದಿಲ್ಲ.

ಕುಂಡಡ್ಕದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ ! Read More »

ಮುಡಾ ಹಗರಣ : ರಾತ್ರಿ ತನಿಖಾಧಿಕಾರಿಯನ್ನು ಭೇಟಿಯಾದ ಸಿದ್ದರಾಮಯ್ಯ ಬಾಮೈದ

ನೋಟಿಸ್‌ ಇಲ್ಲದೆ ಲೋಕಾಯುಕ್ತ ಕಚೇರಿಗೆ ಬಂದಿರುವ ಹಿನ್ನೆಲೆಯಲ್ಲಿ ಹಲವು ಅನುಮಾನ ಮೈಸೂರು: ಮುಡಾ ಹಗರಣದಲ್ಲಿ ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ನಿನ್ನೆ ರಾತ್ರಿ ಹಗರಣದ ತನಿಖೆ ನಡೆಸುತ್ತಿರುವ ಅಧಿಕಾರಿಯನ್ನು ನೋಟಿಸ್‌ ಇಲ್ಲದೆ ಭೇಟಿ ಮಾಡಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸೈಟ್‌ ಹಂಚಿಕೆ ಅಕ್ರಮದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಎಸ್‌ಪಿ ಟಿ.ಜೆ.ಉದೇಶ್ ಅವರನ್ನು ಸಿದ್ದರಾಮಯ್ಯ ಭಾಮೈದ ಮಲ್ಲಿಕಾರ್ಜುನ ಸ್ವಾಮಿ ರಾತ್ರೋರಾತ್ರಿ ಭೇಟಿ ಮಾಡಿದ್ದಾರೆ. ಅವರನ್ನು ಲೋಕಾಯುಕ್ತರು ಭೇಟಿಗೆ ಕರೆದಿರಲಿಲ್ಲ ಎನ್ನಲಾಗಿದೆ.ಮಂಗಳವಾರ ಮುಡಾದ

ಮುಡಾ ಹಗರಣ : ರಾತ್ರಿ ತನಿಖಾಧಿಕಾರಿಯನ್ನು ಭೇಟಿಯಾದ ಸಿದ್ದರಾಮಯ್ಯ ಬಾಮೈದ Read More »

error: Content is protected !!
Scroll to Top