ಅಪರಾಧ

ಸುಳ್ಯ – ಪುತ್ತೂರಿನಿಂದ ಪ್ರಯಾಣಿಸುವವರಿಗೆ 7:30ರ ನಂತರ ಬಸ್‍ ಇಲ್ಲ | ಬಸ್‍ಗಾಗಿ ಪ್ರಯಾಣಿಕರ ಪರದಾಟ

ಪುತ್ತೂರು: ಸುಳ್ಯ ಸೇರಿದಂತೆ ಪುತ್ತೂರು ಸುಳ್ಯ ನಡುವಿನ ಪ್ರದೇಶಗಳಿಂದ ಪುತ್ತೂರಿಗೆ ಕೆಲಸಕ್ಕೆಂದು ಬರುವ ಪ್ರಯಾಣಿಕರಿಗೆ ಅನುಕೂಲಕರವಾಗಿದ್ದ ಪುತ್ತೂರು ಸುಳ್ಯ ಸರಕಾರಿ ಲೋಕಲ್ ಬಸ್ಸುಗಳ ಸಂಚಾರದಲ್ಲಿ ರಾತ್ರಿ 7.30 ಬಳಿಕ ವ್ಯತ್ಯಯ ಉಂಟಾಗುತ್ತಿರುವುದರಿಂದ ಇದನ್ನೆ ನಂಬಿಕೊಂಡಿರುವ ಹಲವಾರು ನಿತ್ಯ ಪ್ರಯಾಣಿಕರಿಗೆ ತೊಂದರೆಯುಂಟಾಗುತ್ತಿದೆ. ನ.30ರ ಶನಿವಾರದಂದು ಇದೇ ಪರಿಸ್ಥಿತಿ ನಿರ್ಮಾಣಗೊಂಡ ಕಾರಣ ಪುತ್ತೂರಿನಿಂದ ಕಚೇರಿ ಸೇರಿದಂತೆ ವಿವಿಧ ಕೆಲಸಗಳನ್ನು ಮುಗಿಸಿ ತಮ್ಮ ಮನೆಗಳಿಗೆ ತೆರಳಬೇಕಿದ್ದ ಮಹಿಳಾ ಪ್ರಯಾಣಿಕರು ಸೇರಿದಂತೆ ಹಲವು ಪ್ರಯಾಣಿಕರು ಪುತ್ತೂರು ಬಸ್ ಸ್ಟ್ಯಾಂಡಿನಲ್ಲಿ ಪರದಾಡುವಂತಾಗಿತ್ತು. ಈ ಹಿಂದೆ […]

ಸುಳ್ಯ – ಪುತ್ತೂರಿನಿಂದ ಪ್ರಯಾಣಿಸುವವರಿಗೆ 7:30ರ ನಂತರ ಬಸ್‍ ಇಲ್ಲ | ಬಸ್‍ಗಾಗಿ ಪ್ರಯಾಣಿಕರ ಪರದಾಟ Read More »

ಯುವಕ ನಾಪತ್ತೆ : ಪ್ರಕರಣ ದಾಖಲು

ಪುತ್ತೂರು: ಪರ್ಲಡ್ಕದಲ್ಲಿ ವಾಸ್ತವ್ಯವಿರುವ ಯುವಕನೋರ್ವ ನಾಪತ್ತೆಯಾದ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಮೂಲತಃ ರಾಜಸ್ಥಾನ ನಿವಾಸಿ, ಪ್ರಸ್ತುತ ಪರ್ಲಡ್ಕದಲ್ಲಿ ವಾಸ್ತವ್ಯವಿರುವ ರತನ್ ಸಿಂಗ್‌ರವರ ಪುತ್ರ ಲೋಕೇಂದರ್ ಸಿಂಗ್ (22) ನಾಪತ್ತೆಯಾದ ಯುವಕ. ಲೋಕೇಂದರ್ ಸಿಂಗ್ ಕಳೆದ ಎರಡು ತಿಂಗಳ ಹಿಂದೆ ಪಾಸ್ ಪೋರ್ಟ್ ಮಾಡಿಸಿಕೊಂಡಿದ್ದ. ನ.30ರಂದು ಎಂದಿನಂತೆ ಮನೆಯಲ್ಲಿ ಊಟ ಮಾಡಿ ಟಿವಿ ನೋಡಿಕೊಂಡಿದ್ದ. ಬೆಳಿಗ್ಗೆ ನೋಡುವಾಗ ಆತ ಮನೆಯಲ್ಲಿಲ್ಲದೆ ನಾಪತ್ತೆಯಾಗಿದ್ದಾನೆ. ಆತನ ಉಡುಪುಗಳು ತುಂಬಿದ್ದ ಬ್ಯಾಗ್, ದಾಖಲೆ ಪತ್ರಗಳು ಹಾಗೂ ಪಾಸ್‌ಪೋರ್ಟ್ ಸಹಿತ

ಯುವಕ ನಾಪತ್ತೆ : ಪ್ರಕರಣ ದಾಖಲು Read More »

ನಗರಸಭೆ ಅಧ್ಯಕ್ಷರ ವಿರುದ್ಧ ಅವಹೇಳನಕಾರಿ ಸಂದೇಶ ರವಾನೆ | ಆರೋಪಿ ಅದ್ದು ಪಡೀಲ್‍ ಪೊಲೀಸರ ವಶಕ್ಕೆ

ಪುತ್ತೂರು: ನಗರಸಭಾ ಅಧ್ಯಕ್ಷರು ಸಹಿತ ಇತರರ ವಿರುದ್ಧ ಅವಹೇಳನಕಾರಿಯಾಗಿ ಬರೆದು ಸಾಮಾಜಿಕ ಜಾಲತಾಣದಲ್ಲಿ ರವಾನಿಸಿದ ಆರೋಪಿ ಅದ್ದು ಪಡೀಲ್‍ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಾಟ್ಸಾಪ್ ಗ್ರೂಪ್ ನಲ್ಲಿ ನಗರಸಭೆ ಅಧ್ಯಕ್ಷರು ಹಾಗೂ ಇತರರ ವಿರುದ್ಧ ಅವಹೇಳನಕಾರಿಯಾಗಿದ್ದ ಬರೆದಿದ್ದರ ವಿರುದ್ಧ ನಗರಸಭೆ ಅಧ್ಯಕ್ಷೆ ಸಹಿತ ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭೆ ಸದಸ್ಯರು ಠಾಣೆ ಎದುರು ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು. ಇದೀಗ ಅದ್ದು ಪಡೀಲ್ ನನ್ನು ಪೊಲೀಸರು

ನಗರಸಭೆ ಅಧ್ಯಕ್ಷರ ವಿರುದ್ಧ ಅವಹೇಳನಕಾರಿ ಸಂದೇಶ ರವಾನೆ | ಆರೋಪಿ ಅದ್ದು ಪಡೀಲ್‍ ಪೊಲೀಸರ ವಶಕ್ಕೆ Read More »

ನಗರಸಭೆ ಅಧ್ಯಕ್ಷರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಮಾನವೀಯ ಸಂದೇಶ ರವಾನೆ | ಆರೋಪಿಯನ್ನು ಬಂಧಿಸುವಂತೆ ಬಿಜೆಪಿಯಿಂದ ಠಾಣೆ ಎದುರು ಪ್ರತಿಭಟನೆ

ಪುತ್ತೂರು: ಪುತ್ತೂರು ನಗರದ ರಸ್ತೆಯ ಅವ್ಯವಸ್ಥೆಯ ಕುರಿತು ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಸಹಿತ ಸದಸ್ಯರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಮಾಕರವಾಗಿ ಸಂದೇಶ ರವಾನಿಸಿದ ವ್ಯಕ್ತಿಯೊಬ್ಬರ ಮೇಲೆ ಪುತ್ತೂರು ನಗರ ಠಾಣೆಗೆ ದೂರು ನೀಡಲು ಹೋದ ನಗರಸಭೆ ಅಧ್ಯಕ್ಷೆ ಲೀಲಾವತಿ ಅವರನ್ನು ದೂರು ಸ್ವೀಕರಿಸದೆ ಸತಾಯಿಸಿದ ಘಟನೆ ಇಂದು ನಡೆದಿದೆ. ಪುತ್ತೂರು ನಗರಸಭೆಯ ಆಡಳಿತ ಇಂದು ಬಿಜೆಪಿ ಕೈಯಲ್ಲಿದೆ, ಪುತ್ತೂರು ಪೇಟೆಯ ರಸ್ತೆಗಳು ನಗರಸಭೆಯ ಅಧೀನದಲ್ಲಿದೆ. ಸಿಟಿ ರಸ್ತೆಗಳನ್ನು ರಿಪೇರಿ ಮಾಡದ ನಗರಸಭೆಯ ಬಿಜೆಪಿ ಆಡಳಿತ ಕೇವಲ ಕಡ್ಲೆಕಾಯಿ

ನಗರಸಭೆ ಅಧ್ಯಕ್ಷರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಮಾನವೀಯ ಸಂದೇಶ ರವಾನೆ | ಆರೋಪಿಯನ್ನು ಬಂಧಿಸುವಂತೆ ಬಿಜೆಪಿಯಿಂದ ಠಾಣೆ ಎದುರು ಪ್ರತಿಭಟನೆ Read More »

ಕೋಟಿಗಟ್ಟಲೆ ರೂಪಾಯಿ ವಂಚನೆ : ತುಳುಚಿತ್ರ ನಿರ್ಮಾಪಕನ ವಿರುದ್ಧ ಕೇಸ್‌

ಬಂಟ್ವಾಳದ ಉದ್ಯಮಿಗೆ ಕೋಟಿಗಳ ವ್ಯವಹಾರದ ಕಥೆ ಹೇಳಿ ವಂಚನೆ ಬೆಂಗಳೂರು: ತುಳು-ಕನ್ನಡ ಚಿತ್ರ ನಿರ್ಮಾಪಕ ಅರುಣ್‌ ರೈ ವಿರುದ್ಧ ಕೋಟಿಗಟ್ಟಲೆ ರೂಪಾಯಿ ವಂಚನೆ ಕೇಸ್‌ ದಾಖಲಾಗಿದೆ. ರಾಷ್ಟ್ರಪ್ರಶಸ್ತಿ ವಿಜೇತ ತುಳುಚಿತ್ರ ಜೀಟಿಗೆ ಸಹಿತ ತುಳು ಮತ್ತು ಕನ್ನಡದಲ್ಲಿ ಕೆಲವು ಚಿತ್ರಗಳನ್ನು ನಿರ್ಮಿಸಿರುವ ಅರುಣ್‌ ರೈ ಬಂಟ್ವಾಳದ ಉದ್ಯಮಿಯೊಬ್ಬರನ್ನು ಕೋಟಿ ಕೋಟಿಗಳ ಲೆಕ್ಕದಲ್ಲಿ ವ್ಯವಹಾರದ ಕಥೆ ಹೇಳಿ ವಂಚಿಸಿದ್ದಾರೆ ಎನ್ನಲಾಗಿದೆ.ಅರುಣ್ ರೈ ವಿರುದ್ಧ ಬೆಂಗಳೂರಿನ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕನ್ನಡದ ವೀರಕಂಬಳ ಸಿನಿಮಾವನ್ನು ಸಹ

ಕೋಟಿಗಟ್ಟಲೆ ರೂಪಾಯಿ ವಂಚನೆ : ತುಳುಚಿತ್ರ ನಿರ್ಮಾಪಕನ ವಿರುದ್ಧ ಕೇಸ್‌ Read More »

ಮಾದಕ ವಸ್ತು ಸೇವಿಸಿದ ವ್ಯಕ್ತಿಯ ಬಂಧನ

ಉಪ್ಪಿನಂಗಡಿ: ಮಾದಕ ವಸ್ತು ಮಾರಾಟದ ಜತೆಗೆ ಸೇವನೆ ಮಾಡಿದ ವ್ಯಕ್ತಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ ಘಟನೆ ಪೆರ್ನೆಯಲ್ಲಿ ನಡೆದಿದೆ. ಕೌಕ್ರಾಡಿ ಗ್ರಾಮದ ದೋಂತಿಲ್ಲ ಮನೆ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಮಹಮ್ಮದ್ ತೌಫೀಕ್ (22) ಬಂಧಿತ ಆರೋಪಿ. ಪೊಲೀಸರು ಶನಿವಾರ ಪೆರ್ನೆ ಗ್ರಾಮದ ಕಡಂಬು ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಆಟೋ ರಿಕ್ಷಾವೊಂದು ನಿಲ್ಲಿಸಲು ಸೂಚಿಸಿದ್ದರು. ರಿಕ್ಷಾ ಚಾಲಕ ಸೂಚನೆಯನ್ನು ಪರಿಗಣಿಸದೆ ಮುಂದಕ್ಕೆ ಚಲಿಸಿದಾಗ ಬೆನ್ನಟ್ಟಿದ ಪೊಲೀಸರು ಚಾಲಕ ಮುಹಮ್ಮದ್ ತೌಫೀಕ್ ನನ್ನು ವಿಚಾರಣೆಗೊಳಪಡಿಸಿದಾಗ ತಾನು ಮಾದಕ

ಮಾದಕ ವಸ್ತು ಸೇವಿಸಿದ ವ್ಯಕ್ತಿಯ ಬಂಧನ Read More »

ಬೆಳಗಾವಿಯಲ್ಲಿ ಹಾಡುಹಗಲೇ ಯುವಕನಿಗೆ ಚಾಕು ಇರಿದು ಹತ್ಯೆ !

ಬೆಳಗಾವಿ: ಯುವಕನೊಬ್ಬನಿಗೆ ಚಾಕು ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಹಾಡುಹಗಲೇ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದ ಹೊರ ವಲಯದಲ್ಲಿ ನಡೆದಿದೆ. ಸೋಹಿಲ್ ಅಹ್ಮದ್ ಕಿತ್ತೂರು (17) ಚಾಕು ಇರಿತದಿಂದ ಹತ್ಯೆಯಾದವ. ಸೋಹಿಲ್ ಗ್ರಾಮದಲ್ಲಿ ಎಗ್‌ ರೈಸ್ ಅಂಗಡಿ ಇಟ್ಟುಕೊಂಡಿದ್ದು, ಆತನನ್ನು ಐದು ಮಂದಿಯ ತಂಡ ಹತ್ಯೆಗೈದಿದ್ದಾರೆ ಎಂದು ಶಂಕಿಸಲಾಗಿದೆ. ಈ ಹಿಂದೆ ಕೆಲವು ಯುವಕರಿಂದ ಮೃತನಿಗೆ ಕೊಲೆ ಬೆದರಿಕೆ ಬಂದಿತ್ತು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಮುರಗೋಡು ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ

ಬೆಳಗಾವಿಯಲ್ಲಿ ಹಾಡುಹಗಲೇ ಯುವಕನಿಗೆ ಚಾಕು ಇರಿದು ಹತ್ಯೆ ! Read More »

ಕೆರೆಕಟ್ಟೆ, ಶೃಂಗೇರಿ ಪರಿಸರದಲ್ಲಿ ನಕ್ಸಲರು?

ನಡುರಾತ್ರಿ ದಟ್ಟ ಕಾಡಿನ ನಡುವೆ ಕಾಣಿಸಿದ ಟಾರ್ಚ್‌ ಬೆಳಕಿನ ಹಿನ್ನೆಲೆಯಲ್ಲಿ ಅನುಮಾನ ಕಾರ್ಕಳ : ನಕ್ಸಲರು ಇನ್ನೂ ಕೊಪ್ಪ, ಶೃಂಗೇರಿ ಭಾಗದಲ್ಲೇ ಇರುವ ಅನುಮಾನವಿದ್ದು, ಈ ಹಿನ್ನೆಲೆಯಲ್ಲಿ ಕೂಂಬಿಂಗ್‌ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ಶುಕ್ರವಾರ ನಡುರಾತ್ರಿ ವೇಳೆ ಕುದುರೆಮುಖ ರಾಷ್ಟ್ರೀಯ ಅರಣ್ಯ ವ್ಯಾಪ್ತಿಯ ಕೆರೆಕಟ್ಟೆ ಪರಿಸರದಲ್ಲಿ ದಟ್ಟ ಕಾಡಿನ ನಡುವೆ ಟಾರ್ಚ್‌ ಬೆಳಕು ಕಂಡುಬಂದಿದೆ. ಇದು ನಕ್ಸಲರ ಓಡಾಟ ಇರಬಹುದು ಎಂಬ ಅನುಮಾನದಲ್ಲಿ ನಕ್ಸಲ್‌ ನಿಗ್ರಹ ಪಡೆ ಕೂಂಬಿಂಗ್‌ ತೀವ್ರಗೊಳಿಸಿದೆ.ಹೆಬ್ರಿಯ ನಾಡ್ಪಾಲು ಸಮೀಪ ಪೀತಬೈಲಿನಲ್ಲಿ ನಕ್ಸಲ್‌ ಮುಖಂಡ ವಿಕ್ರಂ

ಕೆರೆಕಟ್ಟೆ, ಶೃಂಗೇರಿ ಪರಿಸರದಲ್ಲಿ ನಕ್ಸಲರು? Read More »

200ಕ್ಕೂ ಅಧಿಕ ದ್ವಿಚಕ್ರ ವಾಹನಗಳು ಬೆಂಕಿಗಾಹುತಿ

ರೈಲು ನಿಲ್ದಾಣದ ಪಾರ್ಕಿಂಗ್‌ ಸ್ಥಳದಲ್ಲಿ ಸಂಭವಿಸಿದ ಅವಘಡ ಲಖನೌ: ಉತ್ತರ ಪ್ರದೇಶದ ವಾರಣಾಸಿಯ ಕ್ಯಾಂಟ್ ರೈಲ್ವೆ ನಿಲ್ದಾಣದ ವಾಹನ ನಿಲುಗಡೆ ಪ್ರದೇಶದಲ್ಲಿ ಬೆಂಕಿ ಅವಘಡ ಸಂಭವಿಸಿ 200ಕ್ಕೂ ಅಧಿಕ ದ್ವಿಚಕ್ರ ವಾಹನಗಳು ಸುಟ್ಟು ಭಸ್ಮವಾಗಿದೆ. ಶನಿವಾರ ಮುಂಜಾನೆ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಸುಮಾರು 12 ಅಗ್ನಿಶಾಮಕ ದಳ ವಾಹನಗಳು, ಜೊತೆಗೆ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ), ರೈಲ್ವೆ

200ಕ್ಕೂ ಅಧಿಕ ದ್ವಿಚಕ್ರ ವಾಹನಗಳು ಬೆಂಕಿಗಾಹುತಿ Read More »

ಬಸ್‌ ಪಲ್ಟಿ: 12ಕ್ಕೇರಿದ ಸಾವಿನ ಸಂಖ್ಯೆ

ಪ್ರಧಾನಿ ನರೇಂದ್ರ ಮೋದಿ ವಿಷಾದ ಮುಂಬಯಿ : ಮಹಾರಾಷ್ಟ್ರ ಸಾರಿಗೆ ಬಸ್ಸೊಂದು ಪಲ್ಟಿಯಾಗಿ 12 ಜನ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯಲ್ಲಿ ನಡೆದಿದೆ. ಅಪಘಾತದಲ್ಲಿ 30ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಸ್ ಭಂಡಾರ ಡಿಪ್ಪೊದಿಂದ ಗೊಂಡಿಯಾಗೆ ತೆರಳುತ್ತಿದ್ದ ಈ ವೇಳೆ ಗೊಂಡಿಯಾ–ಅರ್ಜುನಿ ರಸ್ತೆಯ ಬಿಂದ್ರವನ ಟೋಲಾ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. 12 ಜನ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಗೊಂಡಿಯಾ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ

ಬಸ್‌ ಪಲ್ಟಿ: 12ಕ್ಕೇರಿದ ಸಾವಿನ ಸಂಖ್ಯೆ Read More »

error: Content is protected !!
Scroll to Top