ಅಪರಾಧ

ಬಲಿಪ ಭಾಗವತ ಖ್ಯಾತಿಯ ನಾರಾಯಣ ಭಾಗವತ ಅಸ್ತಂಗತ

ಪುತ್ತೂರು : ಬಲಿ ಭಾಗವತರೆಂದೇ ಖ್ಯಾತರಾದ ತೆಂಕುತಿಟ್ಟಿನ ಯಕ್ಷರಂಗದ ಭೀಷ್ಮ ಬಲಿಪ ನಾರಾಯಣ ಭಾಗವತ (84) ಗುರುವಾರ ಸಂಜೆ 6.30 ಕ್ಕೆ ಸ್ವಗೃಹದಲ್ಲಿ ಅಸ್ತಂಗತರಾದರು. ಮೂಲತಃ ಕಾಸರಗೋಡು ಜಿಲ್ಲೆಯ ಪಡ್ರೆಯವರು. ಪ್ರಸ್ತುತ ಬಲಿಪ ನಾರಾಯಣ ಭಾಗವತರು  ಮೂಡಬಿದ್ರೆಯ ನೂಯಿ ಎಂಬಲ್ಲಿ ವಾಸವಾಗಿದ್ದರು. ಮಾ.13, 1938 ರಲ್ಲಿ ಜನಿಸಿದ್ದ ಬಲಿಪರು ತನ್ನ 13ನೇ ವಯಸ್ಸಿನಲ್ಲೇ ಯಕ್ಷರಂಗಕ್ಕೆ ಕಾಲಿಟ್ಟಿದ್ದರು. ಸುಮಾರು 60 ವರ್ಷಗಳ ಕಲಾ ಸೇವೆ ಮಾಡಿರುವ ಅವರು, ಕಟೀಲು ಮೇಳದ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ್ದರು. ಯಕ್ಷಗಾನದ ಹಲವು […]

ಬಲಿಪ ಭಾಗವತ ಖ್ಯಾತಿಯ ನಾರಾಯಣ ಭಾಗವತ ಅಸ್ತಂಗತ Read More »

ಸಾರ್ವಜನಿಕ ಶಾಂತಿ ಭಂಗ : ಬೀದಿ ಬದಿ ವ್ಯಾಪಾರ ತೆರವು

ಪುತ್ತೂರು: ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಕೋರ್ಟ್ ರಸ್ತೆಯಲ್ಲಿ ವ್ಯಾಪಾರ ನಡೆಸುತ್ತಿದ್ದ ಬೀದಿ ಬದಿ ವ್ಯಾಪಾರಿಯೊಬ್ಬನನ್ನು ಪೊಲೀಸರು ತೆರವು ಮಾಡಿಸಿದ್ದಾರೆ. ಗುರುವಾರ ಮಧ್ಯಾಹ್ನದ ವೇಳೆಯಲ್ಲಿ ಸ್ಥಳಕ್ಕಾಗಮಿಸಿದ ಪಿ.ಎಸ್‍.ಐ. ಶ್ರೀಕಾಂತ್ ರಾಥೋಡ್ ಅವರ ನೇತೃತ್ವದ ನಗರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿದರು. ಕೋರ್ಟ್ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವ್ಯಾಪಾರ ನಡೆಸುತ್ತಿದ್ದುದು ಮಾತ್ರವಲ್ಲ, ಸ್ಥಳೀಯರಿಗೂ ಸಮಸ್ಯೆ ಉಂಟು ಮಾಡುತ್ತಿದ್ದ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು, ಬೀದಿ ಬದಿ ವ್ಯಾಪಾರಿಯನ್ನು ಆ ಸ್ಥಳದಿಂದ ತೆರಳುವಂತೆ ಸೂಚಿಸಿ,

ಸಾರ್ವಜನಿಕ ಶಾಂತಿ ಭಂಗ : ಬೀದಿ ಬದಿ ವ್ಯಾಪಾರ ತೆರವು Read More »

ಅಫಘಾತದಲ್ಲಿ ಮೃತಪಟ್ಟ ನಿಡ್ಪಳ್ಳಿ ಗ್ರಾ.ಪಂ. ಸದಸ್ಯ ಮುರಳೀಕೃಷ್ಣ ಭಟ್ ಮೃತದೇಹದ ಮೆರವಣಿಗೆ, ಅಂತಿಮ ದರ್ಶನ | ಸಾಮಾಜಿಕ ಜಾಲತಾಣದಲ್ಲಿ ಅಗಲಿದ ಗೆಳೆಯನಿಗೆ ‘ಅಕ್ಷರ ನಮನ’

ಪುತ್ತೂರು: ಬೆಟ್ಟಂಪಾಡಿ ಮಂಡಲದ ನಿಡ್ಪಳ್ಳಿಯ ಸಕ್ರೀಯ ಬಿಜೆಪಿ ಕಾರ್ಯಕರ್ತ, ನಿಡ್ಪಳ್ಳಿ ಗ್ರಾಮ ಪಂಚಾಯತ್ ಸದಸ್ಯ ಮುರಳೀಕೃಷ್ಣ ಭಟ್ ಮುಂಡೂರು ಅವರ ಮೃತದೇಹದ ಅಂತಿಮಯಾತ್ರೆ ಹಾಗೂ ಅಂತಿಮ ದರ್ಶನ ಬುಧವಾರ ಮಧ್ಯಾಹ್ನ ನಡೆಯಿತು. ವಾಹನದ ಮೂಲಕ ಸಾಗಿಬಂದ ಅಂತಿಮ ಯಾತ್ರೆಯಲ್ಲಿ ಹಲವಾರು ಮಂದಿ ಜೊತೆಗೂಡಿದರು. ಬಳಿಕ ಅಂತಿಮ ದರ್ಶನವನ್ನು ವೀಕ್ಷಿಸಿದ ಮಂದಿಯ ಕಣ್ಣಾಲಿಗಳು ತುಂಬಿ ಬಂದವು. ಸಂಟ್ಯಾರಿನ ಬಳಕ್ಕದಲ್ಲಿ ಮಂಗಳವಾರ ರಾತ್ರಿ ನಡೆದ ಅಪಘಾತದಲ್ಲಿ ಮುರಳೀಕೃಷ್ಣ ಭಟ್ ಅವರು ಕೊನೆಯುಸಿರೆಳೆದಿದ್ದರು. ಮುರಳೀಕೃಷ್ಣ ಭಟ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ

ಅಫಘಾತದಲ್ಲಿ ಮೃತಪಟ್ಟ ನಿಡ್ಪಳ್ಳಿ ಗ್ರಾ.ಪಂ. ಸದಸ್ಯ ಮುರಳೀಕೃಷ್ಣ ಭಟ್ ಮೃತದೇಹದ ಮೆರವಣಿಗೆ, ಅಂತಿಮ ದರ್ಶನ | ಸಾಮಾಜಿಕ ಜಾಲತಾಣದಲ್ಲಿ ಅಗಲಿದ ಗೆಳೆಯನಿಗೆ ‘ಅಕ್ಷರ ನಮನ’ Read More »

ಸವಣೂರು ಕಿನಾರ ವಾರಿಜ ಶೆಟ್ಟಿ ನಿಧನ

ಪುತ್ತೂರು: ಸವಣೂರು ಕಿನಾರ ದಿ. ಸಂಕಪ್ಪ ಶೆಟ್ಟಿಯವರ ಪತ್ನಿ ವಾರಿಜ ಶೆಟ್ಟಿ (75 ವ) ಫೆ. 15ರಂದು ಬೆಳಿಗ್ಗೆ ನಿಧನರಾದರು. ಮೃತರು ಪುತ್ರರಾದ ಪ್ರಗತಿಪರ ಕೃಷಿಕ ಸತೀಶ್ ಶೆಟ್ಟಿ ಕಿನಾರ, ಉದ್ಯಮಿ ಶಿವಪ್ರಸಾದ್ ಶೆಟ್ಟಿ ಕಿನಾರ, ಪುತ್ರಿಯರಾದ ಜಯಶ್ರೀ, ವಸಂತಿ, ಉಷಾ ಹಾಗೂ ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ. ಇಂದು ಮಧ್ಯಾಹ್ನ ಅಂತ್ಯ ಸಂಸ್ಕಾರ: ಫೆ. 15ರಂದು ಮಧ್ಯಾಹ್ನ ಗಂಟೆ 12ಕ್ಕೆ ಮೃತರ ಅಂತ್ಯಸಂಸ್ಕಾರ ಸವಣೂರಿನ ಕಿನಾರ ಮನೆಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಸವಣೂರು ಕಿನಾರ ವಾರಿಜ ಶೆಟ್ಟಿ ನಿಧನ Read More »

ಶರವೂರು: ಮೊಟ್ಟೆ ಸಾಗಾಟದ ಟೆಂಪೋ ಪಲ್ಟಿ, ಚಾಲಕ ಗಂಭೀರ

ಪುತ್ತೂರು: ಆಲಂಗಾರು ಬಳಿಯ ಶರವೂರು ದೇವಸ್ಥಾನದ ಬಳಿಯಲ್ಲಿ ಮೊಟ್ಟೆ ಸಾಗಿಸುತ್ತಿದ್ದ ಟೆಂಪೋವೊಂದು ಪಲ್ಟಿಯಾದ ಘಟನೆ ಫೆ. 15ರಂದು ಬೆಳಿಗ್ಗೆ ನಡೆದಿದೆ. ಆಲಂಗಾರು ಕಡೆಯಿಂದ ಶಾಂತಿಮೊಗರು ಕಡೆಗೆ ಬರುತ್ತಿದ್ದ ವೇಳೆ, ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿಯಾಗಿದೆ. ಟೆಂಪೋದಲ್ಲಿದ್ದ ಚಾಲಕ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಟೆಂಪೋದಲ್ಲಿದ್ದ ಇನ್ನಿಬ್ಬರು ಗಾಯಗೊಂಡಿದ್ದಾರೆ.

ಶರವೂರು: ಮೊಟ್ಟೆ ಸಾಗಾಟದ ಟೆಂಪೋ ಪಲ್ಟಿ, ಚಾಲಕ ಗಂಭೀರ Read More »

ಸಂಟ್ಯಾರ್: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು: ನಿಡ್ಪಳ್ಳಿ ಗ್ರಾ.ಪಂ. ಸದಸ್ಯ ಮೃತ್ಯು

ಪುತ್ತೂರು: ಸಂಟ್ಯಾರ್ ಸಮೀಪದ ಬಳಕದಲ್ಲಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ಪಲ್ಟಿಯಾದ ಘಟನೆ ಮಂಗಳವಾರ ರಾತ್ರಿ ನಡೆದಿದ್ದು, ಮುರಳಿ ಭಟ್ ಎನ್ನುವವರು ಮೃತಪಟ್ಟಿದ್ದಾರೆ. ಮೃತರನ್ನು ನಿಡ್ಪಳ್ಳಿ ಗ್ರಾಮ ಪಂಚಾಯತಿಯ ಬಿಜೆಪಿ ಬೆಂಬಲಿತ ಸದಸ್ಯ ಎಂದು ಗುರುತಿಸಲಾಗಿದೆ. ಪುತ್ತೂರಿನಿಂದ ಬೆಟ್ಟಂಪಾಡಿ ಕಡೆಗೆ ತೆರಳುವ ಕಾರು ಸಂಟ್ಯಾರ್ ಸಮೀಪ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ರಸ್ತೆ ಬದಿಯ ಸುಮಾರು 50 ಅಡಿಯ ತೋಟಕ್ಕೆ ಪಲ್ಟಿಯಾಗಿದೆ. ಗಂಭೀರ ಗಾಯಗೊಂಡ ಮುರಳಿ ಭಟ್ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮುರಳಿ ಭಟ್ ಅವರ ಜೊತೆ

ಸಂಟ್ಯಾರ್: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು: ನಿಡ್ಪಳ್ಳಿ ಗ್ರಾ.ಪಂ. ಸದಸ್ಯ ಮೃತ್ಯು Read More »

ನೆಲ್ಲಿಕಟ್ಟೆ ಪಾರ್ಕ್‌ನಲ್ಲಿ ಕಾಣಿಸಿಕೊಂಡ ಬೆಂಕಿ : ಬೆಂಕಿ ನಂದಿಸಿದ ಸ್ಥಳೀಯರು | ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ

ಪುತ್ತೂರು : ನಗರದ ನೆಲ್ಲಿಕಟ್ಟೆಯಲ್ಲಿರುವ ಪಾರ್ಕ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹತ್ತಿಕೊಂಡು ಸ್ಥಳೀಯರು ಎಚ್ಚೆತ್ತುಕೊಂಡು ಬೆಂಕಿ ನಂದಿಸಿದ ಪರಿಣಾಮ ಸಂಭವಿಸಬಹುದಾದ ಅಪಾಯ ತಪ್ಪಿದೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ಪಾರ್ಕ್‌ನಲ್ಲಿ ಎಲೆಕ್ಟ್ರಿಕ್ ವೈರ್ ತುಂಡಾಗಿ ಬಿದ್ದದ್ದರಿಂದ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹತ್ತಿಕೊಂಡ ತಕ್ಷಣ ಜಾಗೃತರಾದ ಸ್ಥಳೀಯರು ಬೆಂಕಿ ನಂದಿಸುವಲ್ಲಿ ಕಾರ್ಯಪ್ರವೃತ್ತರಾದರು. ಬಳಿಕ ಅಗ್ಮಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಸಂಪೂರ್ಣ ಬೆಂಕಿ ನಂದಿಸಿದರು. ಯಾವುದೇ ನಷ್ಟವಾಗಲಿ, ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ನೆಲ್ಲಿಕಟ್ಟೆ ಪಾರ್ಕ್‌ನಲ್ಲಿ ಕಾಣಿಸಿಕೊಂಡ ಬೆಂಕಿ : ಬೆಂಕಿ ನಂದಿಸಿದ ಸ್ಥಳೀಯರು | ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ Read More »

ವಸಂತ ಲಕ್ಷ್ಮೀ ಸಚ್ಚರಿಪೇಟೆ ಸೂರ್ಡೆಲ್ ನಿಧನ

ಪೆರ್ನಾಜೆ  : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಚ್ಚರಿಪೇಟೆ ನಿವಾಸಿ ನಿವೃತ್ತ ಶಿಕ್ಷಕ  ಉದಯ  ಶಂಕರ ಭಟ್ ಸೂರ್ಡೆಲ್ ಪತ್ನಿ ವಸಂತ ಲಕ್ಷ್ಮೀ (62 ವ ) ಫೆ.12 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಮೃತರು ತಾಯಿ ಶಾರದಮ್ಮ ಪೆರ್ನಾಜೆ, ಪತಿ ಉದಯಶಂಕರ ಭಟ್ ಸೂರ್ಡೆಲ್, ಸಹೋದರರಾದ ಸತ್ಯನಾರಾಯಣ ಭಟ್ ಪಿಲ್ಯಪೆರ್ನಾಜೆ, ಕುಮಾರ್ ಪೆರ್ನಾಜೆ,  ಉಪನ್ಯಾಸಕ ಮುರ್ಡೇಶ್ವರ ಕೃಷ್ಣ ಪ್ರಸಾದ್ ಪೆರ್ನಾಜೆ., ಸಹೋದರಿಯರಾದ ಸರಸ್ವತಿ ಪ್ರಕಾಶ್ ಕೋಟೆ ಸುಳ್ಯ ,ಪಾರ್ವತಿ ಜಯರಾಮ್ ಭಟ್ ಉಳ್ಳಿಂಜ,  ಶಂಕರಿ ಬಾಲಕೃಷ್ಣ

ವಸಂತ ಲಕ್ಷ್ಮೀ ಸಚ್ಚರಿಪೇಟೆ ಸೂರ್ಡೆಲ್ ನಿಧನ Read More »

ಕೆಎಎಸ್ ಅಧಿಕಾರಿಯ ಪತಿ ಆತ್ಮಹತ್ಯೆ

ಪತ್ನಿ ಬೆಂಗಳೂರಿಗೆ ತೆರಳಿದ ವೇಳೆ ಕೃತ್ಯ ಬೆಳಗಾವಿ : ಕೆಎಎಸ್ ಅಧಿಕಾರಿ ರೇಷ್ಮಾ ತಾಳಿಕೋಟೆ ಅವರ ಪತಿ ಜಾಫರ್ ಫಿರಜಾದೆ (39) ಎಂಬವರು ನಿನ್ನೆ ರಾತ್ರಿ ಬೆಳಗಾವಿಯ ಅಜಮ್ ನಗರದ ಲ್ಲಿರುವ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫಿರಜಾದೆ ಕಂದಾಯ ನಿರೀಕ್ಷಕರಾಗಿದ್ದರು. ರೇಷ್ಮಾ ತಾಳಿಕೋಟೆ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಪಿರಜಾದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಲೀಸಿದ್ದಾರೆ. ಬೆಳಗಾವಿ ಎಪಿಎಂಸಿ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರೇಷ್ಮಾ ತಾಳಿಕೋಟೆ ಹಿಡಕಲ್ ಡ್ಯಾಂ ವಿಶೇಷ ಭೂಸ್ವಾಧೀನ

ಕೆಎಎಸ್ ಅಧಿಕಾರಿಯ ಪತಿ ಆತ್ಮಹತ್ಯೆ Read More »

ಶಾಫಿ ಬೆಳ್ಳಾರೆಗೆ ಎಸ್.ಡಿ.ಪಿ.ಐ. ಟಿಕೇಟ್: ವಿರೋಧಿಸಿದ ಶಾಸಕ ಸಂಜೀವ ಮಠಂದೂರು | ಎಸ್.ಡಿ.ಪಿ.ಐ. ರಾಜಕೀಯ ಪಕ್ಷವಲ್ಲ; ಭಯೋತ್ಪಾದಕ ಸಂಘಟನೆಯೆಂದು ಜರೆದ ಮಠಂದೂರು

ಪುತ್ತೂರು: ಪ್ರವೀಣ್ ನೆಟ್ಟಾರು ಹತ್ಯೆಗೈದ ಆರೋಪಿಗಳಲ್ಲೋರ್ವನಾದ ಶಾಫಿ ಬೆಳ್ಳಾರೆಯನ್ನು ಅಭ್ಯರ್ಥಿಯಾಗಿ ಘೋಷಿಸುವ ಮೂಲಕ ಎಸ್.ಡಿ.ಪಿ.ಐ. ಪಕ್ಷ ತನ್ನ ನಿಜರೂಪವನ್ನು ಜನರೆದುರು ತೆರೆದಿಟ್ಟಿದ್ದು, ಚುನಾವಣಾ ಆಯೋಗ ಶಾಫಿ ಬೆಳ್ಳಾರೆಯ ಉಮೇದುವಾರಿಕೆಯನ್ನು ಪರಿಗಣಿಸದಂತೆ ಶಾಸಕ ಸಂಜೀವ ಮಠಂದೂರು ಆಗ್ರಹಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಿಲುವನ್ನು ಹಂಚಿಕೊಂಡಿರುವ ಶಾಸಕರು, ಬಿಜೆಪಿಯ ಸಕ್ರೀಯ ಕಾರ್ಯಕರ್ತನಾಗಿದ್ದ ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿ ಎನ್ನುವ ನೆಲೆಯಲ್ಲಿ ಸೂಕ್ತ ಸಾಕ್ಷ್ಯವನ್ನು ಮುಂದಿಟ್ಟುಕೊಂಡೇ ಎನ್‍.ಐ.ಎ. ಶಾಫಿ ಬೆಳ‍್ಳಾರೆಯನ್ನು ಬಂಧಿಸಿದೆ. ಇದೀಗ ಜೈಲು ಸೇರಿರುವ ಶಾಫಿ ಬೆಳ್ಳಾರೆಗೆ ಪುತ್ತೂರು ವಿಧಾನಸಭಾ

ಶಾಫಿ ಬೆಳ್ಳಾರೆಗೆ ಎಸ್.ಡಿ.ಪಿ.ಐ. ಟಿಕೇಟ್: ವಿರೋಧಿಸಿದ ಶಾಸಕ ಸಂಜೀವ ಮಠಂದೂರು | ಎಸ್.ಡಿ.ಪಿ.ಐ. ರಾಜಕೀಯ ಪಕ್ಷವಲ್ಲ; ಭಯೋತ್ಪಾದಕ ಸಂಘಟನೆಯೆಂದು ಜರೆದ ಮಠಂದೂರು Read More »

error: Content is protected !!
Scroll to Top