ಅಪರಾಧ

ಬೆಟ್ಟಿಂಗ್‌ ಆ್ಯಪ್ ಜಾಹೀರಾತು : 100ಕ್ಕೂ ಅಧಿಕ ಯೂಟ್ಯೂಬರ್‌ಗಳ ವಿಚಾರಣೆ

ಸೋಷಿಯಲ್‌ ಮೀಡಿಯಾ ಪೇಜ್‌ಗಳಲ್ಲಿ ಐಪಿಎಲ್‌ ಬೆಟ್ಟಿಂಗ್‌ ಪ್ರಸಾರ ಮಾಡಿದ ಆರೋಪ ಬೆಂಗಳೂರು: ಬೆಟ್ಟಿಂಗ್ ಆ್ಯಪ್ ಜಾಹೀರಾತು ಪ್ರಟಿಸಿದ ಆರೋಪದ ಮೇಲೆ ರೀಲ್ಸ್ ಸ್ಟಾರ್ ಸೋನು ಶ್ರೀನಿವಾಸ್‌ಗೌಡ ಸೇರಿದಂತೆ 100ಕ್ಕೂ ಅಧಿಕ ರೀಲ್ಸ್ ಸ್ಟಾರ್‌ಗಳಿಗೆ ನೋಟಿಸ್ ನೀಡಿ ಸೈಬರ್ ಕ್ರೈಂ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.ತಮ್ಮ ಇನ್‌ಸ್ಟಾಗ್ರಾಂ ಪೇಜ್‌ಗಳಲ್ಲಿ ಐಪಿಎಲ್ ಬೆಟ್ಟಿಂಗ್ ಸಂಬಂಧ ಜಾಹೀರಾತು ಬಿತ್ತರಿಸಿದ್ದ ರೀಲ್ಸ್ ಸ್ಟಾರ್‌ಗಳಿಗೆ ಶಾಕ್ ಎದುರಾಗಿದೆ. ತಮ್ಮ ಪೇಜ್‌ಗಳಲ್ಲಿ ಬಿತ್ತರಿಸಿದ್ದ ಜಾಹೀರಾತುಗಳು ಜನರಿಗೆ ವಂಚಿಸುವ ಜಾಹೀರಾತುಗಳು ಆಗಿದ್ದವು. ಹಾಗಾಗಿ ವಕೀಲರೊಬ್ಬರು ಬೆಂಗಳೂರು ಸೈಬರ್ ಕ್ರೈಂ ಪೊಲೀಸರಿಗೆ […]

ಬೆಟ್ಟಿಂಗ್‌ ಆ್ಯಪ್ ಜಾಹೀರಾತು : 100ಕ್ಕೂ ಅಧಿಕ ಯೂಟ್ಯೂಬರ್‌ಗಳ ವಿಚಾರಣೆ Read More »

ದಲಿತ ಬಾಲಕಿಗೆ ಲೈಂಗಿಕ ಕಿರುಕುಳ : ಆರೋಪಿಗೆ ನಿರೀಕ್ಷಣಾ ಜಾಮೀನು

ಮಂಗಳೂರು: ದಲಿತ ಬಾಲಕಿಗೆ ಕಿರುಕುಳ ನೀಡಿದ ಆರೋಪಕ್ಕೊಳಗಾಗಿರುವ ವಿಟ್ಲ ಮಾಣಿಲದ ಮಹೇಶ್ ಭಟ್‌ಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವಿಶೇಷ ಪೋಕ್ಸೊ ನ್ಯಾಯಾಲಯ ಸೋಮವಾರ ಶರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿದೆ.ಕೃತ್ಯ ಬೆಳಕಿಗೆ ಬಂದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ. ಆತನನ್ನು ಬಂಧಿಸುವಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವಂತೆಯೇ ಆರೋಪಿ ಜಾಮೀನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.ತೋಟದ ಕೆಲಸಕ್ಕೆ ಬರುತ್ತಿದ್ದ ದಲಿತ ಸಮುದಾಯದ ಕೂಲಿ ಕಾರ್ಮಿಕನ 16ರ ಹರೆಯದ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಮಹೇಶ್‌ ಭಟ್‌ ವಿರುದ್ಧ

ದಲಿತ ಬಾಲಕಿಗೆ ಲೈಂಗಿಕ ಕಿರುಕುಳ : ಆರೋಪಿಗೆ ನಿರೀಕ್ಷಣಾ ಜಾಮೀನು Read More »

ಕಾರಿನಲ್ಲಿ ಹುಚ್ಚಾಟ ಮೆರೆದ ಯುವಕರು | ಪ್ರಕರಣ ದಾಖಲಾಗುತ್ತಿದ್ದಂತೆ ಯುವಕರು ಎಸ್ಕೇಪ್‍

ಸುಳ್ಯ: ಸಂಪಾಜೆ ಬಳಿ ಕಾರಿನಲ್ಲಿ ಹುಚ್ಚಾಟ ಮೆರೆದ ಪ್ರಕರಣದಲ್ಲಿ ಸುಮೋಟೊ ಕೇಸ್ ದಾಖಲಾಗುತ್ತಿದ್ದಂತೆ ಯುವಕರು ತಲೆಮರೆಸಿಕೊಂಡಿದ್ದಾರೆ. ಭಟ್ಕಳ ಮೂಲದ ಯುವಕರು ಕಾರಿನಲ್ಲಿ ಹುಚ್ಚಾಟ ಮೆರೆದಿರುವ ವೀಡಿಯೋ ವೈರಲ್ ಆಗಿದೆ. ಈ ಬಗ್ಗೆ ಸುಳ್ಯ ಠಾಣೆಯಲ್ಲಿ BNS ಆಕ್ಟ್ 281 IMV ಆಕ್ಟ್ ನ 184 ಸೆಕ್ಷನ್ ಅಡಿ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಫೋನ್ ಸ್ವಿಚ್ ಆಫ್ ಮಾಡಿ ಯುವಕರು ಎಸ್ಕೆಪ್ ಆಗಿದ್ದಾರೆ. ಸಂಪಾಜೆ-ಸುಳ್ಯ ರಸ್ತೆಯಲ್ಲಿ KA09MG5880 ನಂಬರ್‌ನ ಕಾರಿನಲ್ಲಿ ಒಟ್ಟು ಏಳು ಮಂದಿ

ಕಾರಿನಲ್ಲಿ ಹುಚ್ಚಾಟ ಮೆರೆದ ಯುವಕರು | ಪ್ರಕರಣ ದಾಖಲಾಗುತ್ತಿದ್ದಂತೆ ಯುವಕರು ಎಸ್ಕೇಪ್‍ Read More »

ಮಾಟ ತೆಗೆಯುವ ನೆಪದಲ್ಲಿ ಕಿರುಕುಳ : ಆರೋಪಿ ಬಂಧನ

ಮಂಗಳೂರು : ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ಮಾಟಮಂತ್ರ ತೆಗೆಯುವ ಚಿಕಿತ್ಸೆಯ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿ, ಒಂದು ಲಕ್ಷ ರೂ. ಪಡೆದು ವಂಚಿಸಿದ ಆರೋಪದಲ್ಲಿ ಹೆಜಮಾಡಿಯ ಒಬ್ಬನನ್ನು ಮಂಗಳೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ.ಗುರುವಾಯನಕೆರೆಯ ನಿವಾಸಿ ಜಿ.ಅಬ್ದುಲ್ ಕರೀಮ್ ಅಲಿಯಾಸ್ ಕೂಳೂರು ಉಸ್ತಾದ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. 2022ರಲ್ಲಿ ಸಂತ್ರಸ್ತೆಗೆ ಖಿನ್ನತೆಯ ಸಮಸ್ಯೆ ಉಂಟಾಗಿದ್ದು, ಅವರು ತನ್ನ ಅಕ್ಕನ ಗಂಡನ ಸಲಹೆಯಂತೆ ಆಗ ಹೆಜಮಾಡಿಯಲ್ಲಿದ್ದ ಉಸ್ತಾದ್ ಅಬ್ದುಲ್ ಕರೀಮ್ ಮನೆಗೆ ಹೋಗಿದ್ದರು. ಅಲ್ಲಿ ಕೂಳೂರು

ಮಾಟ ತೆಗೆಯುವ ನೆಪದಲ್ಲಿ ಕಿರುಕುಳ : ಆರೋಪಿ ಬಂಧನ Read More »

ನಟಿಗೆ ವಂಚಿಸಿದ ಉದ್ಯಮಿಗೆ 61.50 ಲ.ರೂ. ದಂಡ

ಬೆಂಗಳೂರು : ನಟಿ ಸಂಜನಾ ಗಲ್ರಾನಿಗೆ ವಂಚಿಸಿದ ಉದ್ಯಮಿ ರಾಹುಲ್ ತೋನ್ಸೆಗೆ ನ್ಯಾಯಾಲಯ ಬರೋಬ್ಬರಿ 61.50 ಲಕ್ಷ ರೂಪಾಯಿ ದಂಡ ಹಾಗೂ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. 33ನೇ ಎಸಿಜೆಎಂ ನ್ಯಾಯಾಲಯ ಈ ತೀರ್ಪು ನೀಡಿದೆ. ದಂಡದ ಮೊತ್ತದಲ್ಲಿ 10 ಸಾವಿರ ಕೋರ್ಟ್ ಶುಲ್ಕ ಕಡಿತ ಮಾಡಿ ಉಳಿದ ಹಣ ಸಂಜನಾಗೆ ನೀಡಬೇಕು. ನಿಗಧಿತ ಸಮಯದಲ್ಲಿ ದಂಡ ಪಾವತಿಸಿದರೆ ಆರು ತಿಂಗಳ ಶಿಕ್ಷೆ ಮಾಫಿ ಮಾಡಲಾಗುವುದು. ಒಂದು ವೇಳೆ ಪರಿಹಾರ ಮೊತ್ತ ನೀಡದೆ ಜೈಲು ಶಿಕ್ಷೆ

ನಟಿಗೆ ವಂಚಿಸಿದ ಉದ್ಯಮಿಗೆ 61.50 ಲ.ರೂ. ದಂಡ Read More »

ತಾಯಿ-ಮಗ ಆತ್ಮಹತ್ಯೆಗೆ ಯತ್ನ | ಮಗ ಮೃತ್ಯು, ತಾಯಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

ಸುಬ್ರಹ್ಮಣ್ಯ: ತಾಯಿ-ಮಗ ಇಬ್ಬರೂ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಮಗ ಮೃತಪಟ್ಟು, ತಾಯಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಸುಬ್ರಹ್ಮಣ್ಯ ಸಮೀಪದ ನಾಲ್ಕೂರು ಗ್ರಾಮದಲ್ಲಿ ಇಂದು ನಡೆದಿದೆ. ಸುಲೋಚನಾ ಹಾಗೂ ಮಗ ನಿತಿನ್ ಕುಮಾರ್ ಆತ್ಮಹತ್ಯೆಗೆ ಯತ್ನಿಸಿದ್ದು, ಮಗ ನಿತಿನ್‍ (35) ಮೃತಪಟ್ಟಿದ್ದಾರೆ. ತಾಯಿ ಸುಲೋಚನಾ ಅವರನ್ನು ಸುಳ್ಯ  ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ. ಮೃತ ನಿತಿನ್ ಐಟಿಐ ವಿದ್ಯಾಭ್ಯಾಸ ಹೊಂದಿದ್ದು, ತಮ್ಮ ಜಮೀನಿನಲ್ಲಿ ಕೃಷಿಕರಾಗಿ ದುಡಿಯುತ್ತಿದ್ದರು. ಕಳೆದ ಒಂದು ವರ್ಷದ

ತಾಯಿ-ಮಗ ಆತ್ಮಹತ್ಯೆಗೆ ಯತ್ನ | ಮಗ ಮೃತ್ಯು, ತಾಯಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು Read More »

ಕಳ್ಳತನ ಮಾಡಿದ ಬಾಲಕರನ್ನು ಮರಕ್ಕೆ ಕಟ್ಟಿಹಾಕಿ ಚಿತ್ರಹಿಂಸೆ

ಬೆಂಗಳೂರು: ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಇಬ್ಬರು ಬಾಲಕರನ್ನು ಅಡಿಕೆ ಮರಕ್ಕೆ ಕಟ್ಟಿ ಹಲ್ಲೆ ಮಾಡಿ ಗುಪ್ತಾಂಗಗಳಿಗೆ ಕೆಂಪು ಇರುವೆ ಬಿಟ್ಟು ಚಿತ್ರಹಿಂಸೆ ನೀಡಿರುವ ಅಮಾನವೀಯ ಘಟನೆಯೊಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರ ಬಳಿ ಇರುವ ಅಸ್ತಾಪನಹಳ್ಳಿಯಲ್ಲಿ ಏಪ್ರಿಲ್​ 4ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಚಿತ್ರಹಿಂಸೆ ನೀಡಿರುವ ವೀಡಿಯೊ ವೈರಲ್ ಆಗಿದೆ. ಪೊಲೀಸರು 9 ಜನರ ವಿರುದ್ಧ ಎಫ್​ಐಆರ್​ ದಾಖಲಿಸಿದ್ದು, ಸುಭಾಷ್​ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಉಳಿದವರಿಗಾಗಿ ಹುಡುಕಾಟ ನಡೆಸಿದ್ದಾರೆ.ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಹಕ್ಕಿಪಿಕ್ಕಿ

ಕಳ್ಳತನ ಮಾಡಿದ ಬಾಲಕರನ್ನು ಮರಕ್ಕೆ ಕಟ್ಟಿಹಾಕಿ ಚಿತ್ರಹಿಂಸೆ Read More »

ಕಾಲೇಜು ವಿದ್ಯಾರ್ಥಿನಿ ಮೇಲೆ ಆಟೋ ಚಾಲಕನಿಂದ ಅತ್ಯಾಚಾರ : ಪೋಕ್ಸೋ ಪ್ರಕರಣ ದಾಖಲು

ಪುತ್ತೂರು: ಅಟೋ ಚಾಲಕನೋರ್ವ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಪುತ್ತೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕಾಲೇಜಿಗೆ ರಜೆ ಇದ್ದ ಸಂದರ್ಭ ಮನೆಯಲ್ಲಿದ್ದ ವಿದ್ಯಾರ್ಥಿನಿ ಮೇಲೆ ಆಟೋ ಚಾಲಕ ಮಂಜುನಾಥ್ ಕಟ್ಟಿತ್ತಡ್ಕ ಎಂಬಾತ ಅತ್ಯಾಚಾರ ಎಸಗಿದ ಆರೋಪಿಯಾಗಿದ್ದಾನೆ. ಕಳೆದ ಆಗಸ್ಟ್ ತಿಂಗಳಲ್ಲಿ ಯುವತಿ ಒಬ್ಬಳೇ ಇದ್ದ ಸಂದರ್ಭ ನೀರು ಕೇಳುವ ಮನೆಗೆ ಬಂದು ಅತ್ಯಾಚಾರ ಎನ್ನಲಾಗಿದೆ. ಈ ವಿಚಾರವನ್ನು ಯಾರಲ್ಲೂ ಹೇಳಬಾರದು ಎಂದು ಬೆದರಿಕೆ ಒಡ್ಡಿದ್ದು, 7-8 ಬಾರಿ ದೈಹಿಕ ಸಂಪರ್ಕ ಹೊಂದಿದ್ದಾನೆ ಎನ್ನಲಾಗಿದೆ. ಯುವತಿಯ

ಕಾಲೇಜು ವಿದ್ಯಾರ್ಥಿನಿ ಮೇಲೆ ಆಟೋ ಚಾಲಕನಿಂದ ಅತ್ಯಾಚಾರ : ಪೋಕ್ಸೋ ಪ್ರಕರಣ ದಾಖಲು Read More »

ಟಾರ್ಗೆಟ್‌ ರೀಚ್‌ ಮಾಡದ ನೌಕರನಿಗೆ ನಾಯಿಯಂತೆ ನಡೆಯುವ ಶಿಕ್ಷೆ

ಖಾಸಗಿ ಕಂಪನಿ ನೀಡಿದ ಶಿಕ್ಷೆಯ ವೀಡಿಯೊ ವೈರಲ್‌ ಕೊಚ್ಚಿ: ಟಾರ್ಗೆಟ್‌ ರೀಚ್‌ ಮಾಡಲು ಸಾಧ್ಯವಾಗದ ಉದ್ಯೋಗಿಗಳನ್ನು ಕತ್ತಿಗೆ ಸರಪಳಿ ಬಿಗಿದು ನಾಯಿಯಂತೆ ನಡೆಸಿಕೊಂಡು ಹೋದ ಘಟನೆಯೊಂದು ಕೇರಳದಲ್ಲಿ ಸಂಭವಿಸಿದ್ದು, ಕೃತ್ಯದ ವೀಡಿಯೊ ಭಾರಿ ವೈರಲ್‌ ಆಗಿ ಆಕ್ರೋಶಕ್ಕೆ ಗುರಿಯಾಗಿದೆ.ಕೊಚ್ಚಿಯಲ್ಲಿರುವ ಮಾರ್ಕೆಟಿಂಗ್‌ ಕಂಪನಿಯೊಂದು ತನ್ನ ನೌಕರರಿಗೆ ಈ ಶಿಕ್ಷೆ ನೀಡಿದೆ ಎನ್ನಲಾಗಿದೆ. ಕಂಪನಿಯ ಮಾಜಿ ಮ್ಯಾನೇಜರ್‌ ಈ ವೀಡಿಯೊವನ್ನು ಬಹಿರಂಗಪಡಿಸಿದ ಬಳಿಕ ಸರಕಾರದ ಗಮನಕ್ಕೂ ಬಂದಿದೆ. ಟಾರ್ಗೆಟ್‌ ರೀಚ್‌ ಮಾಡಲಾಗದ ನೌಕರರಿಗೆ ಈ ಕಂಪನಿಯ ಮಾಲೀಕ ಈ ರೀತಿಯ

ಟಾರ್ಗೆಟ್‌ ರೀಚ್‌ ಮಾಡದ ನೌಕರನಿಗೆ ನಾಯಿಯಂತೆ ನಡೆಯುವ ಶಿಕ್ಷೆ Read More »

ಯುವತಿ ಮೇಲೆ ಅತ್ಯಾಚಾರ ಎಸಗಿದ ಜೈನ ಮುನಿಗೆ 10 ವರ್ಷ ಜೈಲು

ಗುರು ಎಂದು ಭಾವಿಸಿದಾತನೇ ಎಸಗಿದ ಘೋರ ಕೃತ್ಯ ಅಹಮದಾಬಾದ್: ಎಂಟು ವರ್ಷದ ಹಿಂದೆ 19 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜೈನ ದಿಗಂಬರ ಪಂಥದ ಸನ್ಯಾಸಿ ಶಾಂತಿಸಾಗರ್‌ ಮಹಾರಾಜ್‌ ಎಂಬಾತನಿಗೆ ಸೂರತ್‌ನ ಸೆಶನ್ಸ್ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ 25,000 ರೂ. ದಂಡ ವಿಧಿಸಿದೆ. ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ಎ.ಕೆ. ಶಾ ಅವರು ಅತ್ಯಾಚಾರ ಎಸಗಿದ ಆರೋಪದ ಮೇಲೆ 56 ವರ್ಷದ ದಿಗಂಬರ ಜೈನಮುನಿ ತಪ್ಪಿತಸ್ಥರೆಂದು ತೀರ್ಪು

ಯುವತಿ ಮೇಲೆ ಅತ್ಯಾಚಾರ ಎಸಗಿದ ಜೈನ ಮುನಿಗೆ 10 ವರ್ಷ ಜೈಲು Read More »

error: Content is protected !!
Scroll to Top