ಅಪರಾಧ

ಮಗುವನ್ನು ಹತ್ಯೆ ಮಾಡಿದ ಆರೋಪಿ ಪೊಲೀಸರ ಗುಂಡಿಗೆ ಬಲಿ : ಕಮಿಷನರ್‌ಗೆ ಜೈಕಾರ ಹಾಕಿದ ಜನ

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿ ಕೊಲೆಗೈದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಗುಂಡಿಟ್ಟು ಕೊಂದಿರುವುದು ರಾಜ್ಯಾದ್ಯಂತ ಸಂಚಲನವುಂಟುಮಾಡಿದೆ. ರಾಜ್ಯದಲ್ಲಿ ಆರೋಪಿಯನ್ನು ಈ ರೀತಿ ಎನ್‌ಕೌಂಟರ್‌ನಲ್ಲಿ ಸಾಯಿಸಿರುವುದು ಬಹಳ ಅಪರೂಪದ ಪ್ರಕರಣವಾಗಿದೆ. ಶಿಶುಕಾಮಿ ಆರೋಪಿಯನ್ನು ಪೊಲೀಸರು ಗುಂಟಿಕ್ಕಿ ಸಾಯಿಸಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್​ ಆಯುಕ್ತ ಶಶಿಕುಮಾರ್​ ಅವರಿಗೆ ಜನರು ಜೈಕಾರ ಹಾಕಿದ್ದಾರೆ. ಈ ವೀಡಿಯೊ ಈಗ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದೆ. ಆರೋಪಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕಿಮ್ಸ್ […]

ಮಗುವನ್ನು ಹತ್ಯೆ ಮಾಡಿದ ಆರೋಪಿ ಪೊಲೀಸರ ಗುಂಡಿಗೆ ಬಲಿ : ಕಮಿಷನರ್‌ಗೆ ಜೈಕಾರ ಹಾಕಿದ ಜನ Read More »

ಪಶ್ಚಿಮ ಬಂಗಾಳ : ಮೂವರು ಸಾವು; 150ಕ್ಕೂ ಅಧಿಕ ಬಂಧನ

ವಕ್ಫ್‌ ಕಾಯಿದೆ ವಿರೋಧಿ ಪ್ರತಿಭಟನೆ ವೇಳೆ ಭಾರಿ ಹಿಂಸಾಚಾರ ಕೋಲ್ಕತ್ತಾ: ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆ ಮುಂದುವರಿದಿದೆ. ತಂದೆ ಮತ್ತು ಮಗ ಸೇರಿ ಈವರೆಗೆ ಒಟ್ಟು ಮೂವರು ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಶುಕ್ರವಾರದ ಪ್ರಾರ್ಥನೆಯ ನಂತರ ಭುಗಿಲೆದ್ದ ಹಿಂಸಾಚಾರ ಮುರ್ಷಿದಾಬಾದ್‌ ಜಿಲ್ಲೆಯ ಹಲವು ಭಾಗಗಳಿಗೆ ವ್ಯಾಪಿಸಿದ್ದು, ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿವೆ. ಕಳೆದ ರಾತ್ರಿ ಪೊಲೀಸರು, ಅರೆಸೇನಾ ಪಡೆಗಳು ಸಂಪೂರ್ಣ ಗಸ್ತು ತಿರುಗಿದ್ದು, ಸುತಿ,

ಪಶ್ಚಿಮ ಬಂಗಾಳ : ಮೂವರು ಸಾವು; 150ಕ್ಕೂ ಅಧಿಕ ಬಂಧನ Read More »

ನಿಯಂತ್ರಣ ತಪ್ಪಿದ ಕಾರು | ಕಾರಿನಲ್ಲಿ ಗಾಂಜಾ ಪ್ಯಾಕೇಟ್‍ ಪತ್ತೆ : ಮೂವರು ಪೊಲೀಸರ ವಶಕ್ಕೆ

ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಪಲ್ಟಿಯಾದ ಘಟನೆ ದೇವರಕೊಲ್ಲಿ ಬಳಿ ನಡೆದಿದ್ದು, ಈ ಸಂದರ್ಭ ವೇಳೆ ಕಾರನ್ನು ಎತ್ತಿ ಸರಿ ಪಡಿಸಲು ಹೋದ ಸ್ಥಳೀಯರಿಗೆ ಕಾರಿನಲ್ಲಿ ಗಾಂಜಾ ಪ್ಯಾಕೆಟ್ ಇದ್ದ ಪ್ರಕರಣ ಬಯಲಿಗೆ ಬಂದಿದೆ. ಶನಿವಾರ ಸಂಜೆ ಪಿರಿಯಾಪಟ್ಟಣದಿಂದ ಮಡಿಕೇರಿ ಮಾರ್ಗವಾಗಿ ಪುತ್ತೂರಿಗೆ ತೆರಳುತ್ತಿದ್ದ ಕಾರು ದೇವರಕೊಲ್ಲಿ ಬಳಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಪಲ್ಟಿಯಾಗಿದೆ. ನೆರವಿಗೆ ಧಾವಿಸಿ ಬಂದ ಸ್ಥಳೀಯರಿಗೆ ಕಾರಿನಲ್ಲಿ ಗಾಂಜಾ ಪ್ಯಾಕೇಟ್ ಗಳು ಪತ್ತೆಯಾಗಿದ್ದು ಕೂಡಲೇ ಮಡಿಕೇರಿ ಗ್ರಾಮಾಂತರ

ನಿಯಂತ್ರಣ ತಪ್ಪಿದ ಕಾರು | ಕಾರಿನಲ್ಲಿ ಗಾಂಜಾ ಪ್ಯಾಕೇಟ್‍ ಪತ್ತೆ : ಮೂವರು ಪೊಲೀಸರ ವಶಕ್ಕೆ Read More »

ನ್ಯಾಶನಲ್‌ ಹೆರಾಲ್ಡ್‌ ಹಗರಣ : ಕಾಂಗ್ರೆಸ್‌ನ 661 ಕೋ. ರೂ. ಆಸ್ತಿ ಜಪ್ತಿ ಪ್ರಕ್ರಿಯೆ ಶುರು

ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಆರೋಪಿಗಳಾಗಿರುವ ಪ್ರಕರಣ ನವದೆಹಲಿ : ನ್ಯಾಶನಲ್‌ ಹೆರಾಲ್ಡ್‌ ಭ್ರಷ್ಟಾಚಾರ ಕೇಸಿಗೆ ಸಂಬಂಧಪಟ್ಟಂತೆ ಕಾಂಗ್ರೆಸ್‌ನ 600 ಕೋಟಿ ರೂ.ಗೂ ಮಿಕ್ಕಿದ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಪ್ರಾರಂಭಿಸಿದೆ.ಕಾಂಗ್ರೆಸ್ ನಿಯಂತ್ರಿತ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ವಿರುದ್ಧದ ಹಣ ವರ್ಗಾವಣೆ ಪ್ರಕರಣದ ತನಿಖೆಯಲ್ಲಿ ಜಪ್ತಿ ಮಾಡಲಾಗಿರುವ 661 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಜಾರಿ ನಿರ್ದೇಶನಾಲಯ ಶನಿವಾರ ನೋಟಿಸ್ ಜಾರಿ ಮಾಡಿದೆ. ದೆಹಲಿಯ ಐಟಿಒದಲ್ಲಿರುವ ಹೆರಾಲ್ಡ್ ಹೌಸ್, ಮುಂಬಯಿಯ

ನ್ಯಾಶನಲ್‌ ಹೆರಾಲ್ಡ್‌ ಹಗರಣ : ಕಾಂಗ್ರೆಸ್‌ನ 661 ಕೋ. ರೂ. ಆಸ್ತಿ ಜಪ್ತಿ ಪ್ರಕ್ರಿಯೆ ಶುರು Read More »

ವೃದ್ಧೆ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು: ವೃದ್ಧೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನ ಕೆರೆಮೂಲೆ ಎಂಬಲ್ಲಿ ನಡೆದಿದೆ. ಜಯಂತಿ (70) ಆತ್ಮಹತ್ಯೆ ಮಾಡಿಕೊಂಡ ವೃದ್ಯೆ. ವಿಪರೀತ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇಂದು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವೃದ್ಧೆ ನೇಣು ಬಿಗಿದು ಆತ್ಮಹತ್ಯೆ Read More »

ಧರ್ಮಸ್ಥಳದ ಆಕ್ಷೇಪಾರ್ಹ ವಿಡಿಯೋ ಮಾಡಿದ ಸಮೀರ್‌ ವಿರುದ್ಧ 10 ಕೋ. ರೂ. ಮಾನನಷ್ಟ ದಾವೆ

ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಎರಡನೇ ವಿಡಿಯೋ ಮಾಡಿರುವುದಕ್ಕೆ ಆಕ್ಷೇಪ ಬೆಂಗಳೂರು : ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಕೊಲೆ ಪ್ರಕರಣ ಸಂಬಂಧ ಧರ್ಮಸ್ಥಳವನ್ನು ಗುರಿಯಾಗಿಟ್ಟುಕೊಂಡು ಮಾಡಿದ್ದ ವಿಡಿಯೋವನ್ನು ತೆಗೆದು ಹಾಕುವಂತೆ ನೀಡಿದ್ದ ಆದೇಶ ಉಲ್ಲಂಘಿಸಿದ ಯುಟ್ಯೂಬರ್‌ ಎಂ ಡಿ ಸಮೀರ್‌ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಧರ್ಮಸ್ಥಳ ಪರ ಡಿ. ಹರ್ಷೇಂದ್ರ ಕುಮಾರ್‌ ಮತ್ತು ನಿಶ್ಚಲ್‌ ಡಿ. ಹೂಡಿದ್ದ ಮಾನನಷ್ಟ ಮೊಕದ್ದಮೆ ಅರ್ಜಿ ಪರಿಶೀಲಿಸಿದ ಬಳಿಕ ಬೆಂಗಳೂರಿನ ಸಿಟಿ ಸಿವಿಲ್‌ ನ್ಯಾಯಾಧೀಶರಾದ ಎಸ್‌. ನಟರಾಜ್‌

ಧರ್ಮಸ್ಥಳದ ಆಕ್ಷೇಪಾರ್ಹ ವಿಡಿಯೋ ಮಾಡಿದ ಸಮೀರ್‌ ವಿರುದ್ಧ 10 ಕೋ. ರೂ. ಮಾನನಷ್ಟ ದಾವೆ Read More »

ಮಂಗಳೂರು: ಬೀಚ್‌ನಲ್ಲಿ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ಮೂವರು ಸೆರೆ

ಮಾದಕವಸ್ತು, ಕಾರು ಸಹಿತ 9.24 ಲ.ರೂ. ಸೊತ್ತು ವಶ ಮಂಗಳೂರು ‌: ನಗರದ ಸುರತ್ಕಲ್‌ ಬೀಚ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರನ್ನು ಮಂಗಳೂರು ನಗರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಿಂದ ನಿಷೇಧಿತ ಎಂಡಿಎಂಎಯನ್ನು ತಂದು ಸುರತ್ಕಲ್ ಸುತ್ತಮುತ್ತ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕರನ್ನು ಗುರಿಮಾಡಿಕೊಂಡು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಬಂಧಿತರನ್ನು ಸುರತ್ಕಲ್ ನಿವಾಸಿಗಳಾದ ಮೊಹಮ್ಮದ್ ಆಸಿಫ್ (24), ಅಸ್ಕರ್ ಅಲಿ (31) ಮತ್ತು ಹಳೆಯಂಗಡಿಯ ಮೊಹಮ್ಮದ್ ರಶೀಮ್ (24)

ಮಂಗಳೂರು: ಬೀಚ್‌ನಲ್ಲಿ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ಮೂವರು ಸೆರೆ Read More »

ವಕ್ಫ್‌ ಕಾಯಿದೆ ವಿರೋಧಿಸಿ ಪ್ರತಿಭಟನೆ ವೇಳೆ ರೈಲುಗಳಿಗೆ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ

ಪಶ್ಚಿಮ ಬಂಗಾಳದಲ್ಲಿ ಇಡೀ ದಿನ ನಡೆದ ಹಿಂಸಾಚಾರ ಕೋಲ್ಕತ್ತಾ: ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಮುಸ್ಲಿಮರು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ನಿಲ್ದಾಣದಲ್ಲಿ ನಿಂತಿದ್ದ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿ ಎರಡು ರೈಲುಗಳನ್ನು ಜಖಂಗೊಳಿಸಿದ್ದಾರೆ.ಶುಕ್ರವಾರ ಮಧ್ಯಾಹ್ನ ಪ್ರತಿಭಟನೆ ನಡೆದಿತ್ತು. ರಾತ್ರಿ ಪ್ರತಿಭಟನೆ ಹಿಂಸಚಾರಕ್ಕೆ ತಿರುಗಿದೆ. ಘಟನೆಯ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರ ರದ್ದು ಮಾಡಲಾಗಿದೆ. ದಾಳಿಯಲ್ಲಿ ಕೆಲವು ಪ್ರಯಾಣಿಕರು ಮತ್ತು ಏಳರಿಂದ ಹತ್ತು ಪೊಲೀಸರು ಗಾಯಗೊಂಡಿದ್ದಾರೆ. ಹಿಂಸಾಚಾರವನ್ನು ನಿಯಂತ್ರಿಸಲು ಗಡಿ ಭದ್ರತಾ

ವಕ್ಫ್‌ ಕಾಯಿದೆ ವಿರೋಧಿಸಿ ಪ್ರತಿಭಟನೆ ವೇಳೆ ರೈಲುಗಳಿಗೆ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ Read More »

ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‍ ಹತ್ಯೆಗೆ ಸಂಚು?

ಪ್ರತಿಭಟನೆಗೆ ಕರೆಕೊಟ್ಟ ಆಡಿಯೊದಲ್ಲಿ ಯತ್ನಾಳರನ್ನು ಮುಗಿಸುವ ಕುರಿತು ಮಾತು ವಿಜಯಪುರ: ಪ್ರವಾದಿ ಮಹಮ್ಮದ್ ಪೈಗಂಬರರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿರುವ ಬಿಜೆಪಿಯ ಉಚ್ಚಾಟಿತ ನಾಯಕ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ ಹತ್ಯೆಗೆ ಸಂಚು ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ. ಮುಸ್ಲಿಂ ಯುವಕನ ಆಡಿಯೊ ತುಣುಕೊಂದು ಬಹಿರಂಗಗೊಂಡಿದ್ದು, ಇದರಲ್ಲಿರುವ ಸಂಭಾಷಣೆ ಹತ್ಯೆ ಸಂಚನ್ನು ಬಯಲುಗೊಳಿಸಿದೆ ಎನ್ನಲಾಗಿದೆ.ಏ.7ರಂದು ಹುಬ್ಬಳ್ಳಿಯಲ್ಲಿ ನಡೆದ ರಾಮನವಮಿ ಕಾರ್ಯಕ್ರಮದಲ್ಲಿ ಯತ್ನಾಳ ಪ್ರವಾದಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ

ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‍ ಹತ್ಯೆಗೆ ಸಂಚು? Read More »

ಮೂಲ್ಕಿ : ನಾಪತ್ತೆಯಾಗಿದ್ದ ಆಟೋ ಚಾಲಕನ ಮೃತದೇಹ ಬಾವಿಯಲ್ಲಿ ಪತ್ತೆ

ಗಡಿಭಾಗದ ಕುಂಜತ್ತೂರು ಪದವು ಎಂಬಲ್ಲಿ ಬಾವಿಯೊಳಗಿದೆ ಶವ- ಕೊಲೆ ಶಂಕೆ ಮೂಲ್ಕಿ‌: ಕಳೆದ ಬುಧವಾರದಿಂದ ನಾಪತ್ತೆಯಾಗಿದ್ದ ಮೂಲ್ಕಿಯ ಆಟೋ ಚಾಲಕನ ಮೃತದೇಹ ಕಾಸರಗೋಡಿನ ಮಂಜೇಶ್ವರ ಸಮೀಪದ ಕುಂಜತ್ತೂರು ಪದವು ಎಂಬಲ್ಲಿ ನಿರ್ಜನ ಪ್ರದೇಶದ ಬಾವಿಯಲ್ಲಿ ಗುರುವಾರ ರಾತ್ರಿ ಪತ್ತೆಯಾಗಿದ್ದು, ಇದು ಕೊಲೆ ಎಂದು ಶಂಕಿಸಲಾಗಿದೆ. ಮೂಲ್ಕಿ ಕೊಳ್ನಾಡಿನ ಮುಹಮ್ಮದ್ ಶರೀಫ್ (52) ಮೃತಪಟ್ಟವರು. ಬುಧವಾರ ಬೆಳಗ್ಗೆ ಎಂದಿನಂತೆ ರಿಕ್ಷಾ ಸಹಿತ ಮನೆಯಿಂದ ತೆರಳಿದ್ದ ಇವರು ಅಂದು ಮನೆಗೆ ಬಾರದೆ ನಾಪತ್ತೆಯಾಗಿದ್ದರು.ಪತ್ನಿ ಕರೆ ಮಾಡಿದಾಗ ಮೊಬೈಲ್ ಸಂಪರ್ಕಕಕ್ಕೆ ಸಿಗದ

ಮೂಲ್ಕಿ : ನಾಪತ್ತೆಯಾಗಿದ್ದ ಆಟೋ ಚಾಲಕನ ಮೃತದೇಹ ಬಾವಿಯಲ್ಲಿ ಪತ್ತೆ Read More »

error: Content is protected !!
Scroll to Top