ಬಾಡಿಗೆಗೆಂದು ತೆಗೆದುಕೊಂಡ ಲಾರಿಯನ್ನು ಚಾಲಕನೇ ಅಡವಿಟ್ಟ | ವಿಚಾರಿಸಲು ಹೋದ ಮಾಲೀಕನಿಗೆ ಜೀವ ಬೆದರಿಕೆ | ಪ್ರಕರಣ ದಾಖಲು
ಪುತ್ತೂರು: ಬಾಡಿಗೆಗೆಂದು ತೆಗೆದುಕೊಂಡು ಹೋದ ಲಾರಿಯನ್ನು ಚಾಲಕನೇ ಅಡವಿಟ್ಟು ಈ ಬಗ್ಗೆ ವಿಚಾರಿಸಲು ಹೋದ ಮಾಲಕನಿಗೆ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ನಿವಾಸಿ ಫರ್ವೀಝ್ ಎಂ. ಎಂಬವರು ನಗರ ಠಾಣೆಗೆ ದೂರು ನೀಡಿದ್ದು, ಲಾರಿ ಚಾಲಕ ಅಸಾಸುದ್ದೀನ್ ಫೈರೋಝ್ ಮತ್ತು ಮಂಗಳೂರಿನ ಕಿರಣ್ ಪ್ರಕರಣದ ಆರೋಪಿಗಳು ಎಂದು ತಿಳಿದು ಬಂದಿದೆ. ತಮ್ಮ ಮಾಲಕತ್ವದ ಲಾರಿಗೆ ಅಸಾಸುದ್ದೀನ್ ಫೈರೋಝ್ ನನ್ನು ಚಾಲಕನಾಗಿ ನೇಮಿಸಿದ್ದು, ಮಾ.29ರಂದು ಸರಕು ಸಾಗಾಟದ ಉದ್ದೇಶಕ್ಕಾಗಿ ಲಾರಿಯನ್ನು ಪಡೆದ ಆತ […]










