ಅಪರಾಧ

ಲಂಚ ಪಡೆದ ಆರೋಪ: ಗ್ರಾಮ ಆಡಳಿತಾಧಿಕಾರಿ ಮಹೇಶ್ ಎಸ್.ಗೆ ಜೈಲು, ದಂಡ

ಪುತ್ತೂರು: ಲಂಚ ಪಡೆದ ಆರೋಪದ ಮೇಲೆ ಗ್ರಾಮ ಆಡಳಿತಾಧಿಕಾರಿ ಮಹೇಶ್ ಎಸ್. ಅವರಿಗೆ ಜೈಲು ಶಿಕ್ಷೆ ವಿಧಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಆದೇಶ ನೀಡಿದೆ. ಪುತ್ತೂರು ಕಸಬಾ ಹಾಗೂ ನರಿಮೊಗರು ಗ್ರಾಮದ ಗ್ರಾಮ ಆಡಳಿತಾಧಿಕಾರಿಯಾಗಿದ್ದ ಮಹೇಶ್ ಎಸ್. ಅವರಿಗೆ 4 ವರ್ಷ ಜೈಲು ಶಿಕ್ಷೆ ಹಾಗೂ 70 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ಕಟ್ಟಲು ವಿಫಲವಾದರೆ ಮತ್ತೆ 8 ತಿಂಗಳ ಜೈಲು ಶಿಕ್ಷೆಗೆ ಆದೇಶಿಸಲಾಗಿದೆ. ಅಕ್ರಮ ಸಕ್ರಮದ ಅರ್ಜಿ […]

ಲಂಚ ಪಡೆದ ಆರೋಪ: ಗ್ರಾಮ ಆಡಳಿತಾಧಿಕಾರಿ ಮಹೇಶ್ ಎಸ್.ಗೆ ಜೈಲು, ದಂಡ Read More »

ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಕೆಎಎಸ್‌ ಅಧಿಕಾರಿ

ಬೆಂಗಳೂರು : ಲಂಚ ಪಡೆಯುವ ವೇಳೆ ದಾವಣಗೆರೆಯ ಚೆನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಪ್ರಶಾಂತ್ ಸೇರಿದಂತೆ ಐವರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಶಾಂತ್ ಮಾಡಾಳ್ ಕೆಎಎಸ್ ಅಧಿಕಾರಿಯಾಗಿದ್ದು ಜಲಮಂಡಳಿ ಹಾಗೂ ಎಸಿಬಿ ಎರಡಲ್ಲೂ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ ನಿಯಮಿತಕ್ಕೆ ರಾಸಾಯನಿಕ ಪೂರೈಸುವ ಟೆಂಡರ್ ನೀಡುವ ಸಲುವಾಗಿ 81 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದಾಗಿ ಕಚ್ಚಾ ಸಾಮಾಗ್ರಿ ಕಂಪನಿಯನ್ನು ನಡೆಸುತ್ತಿದ್ದ ಶ್ರೇಯಸ್ ಕಶ್ಯಪ್

ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಕೆಎಎಸ್‌ ಅಧಿಕಾರಿ Read More »

ಮಂಗಳೂರು : ಇಬ್ಬರು ಮಕ್ಕಳೊಂದಿಗೆ ನೇಣು ಬಿಗಿದು ತಾಯಿ ಆತ್ಮಹತ್ಯೆ : ಓರ್ವ ಬಾಲಕಿ ಪಾರು!

ಮಂಗಳೂರು: ಕೊಡಿಯಾಲ್ ಬೈಲಿನಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಸಂಭವಿಸಿದೆ. ಮೃತರನ್ನು ವಿಜಯಾ(33) ಮತ್ತು ಶೋಭಿತಾ (4) ಮೃತ ದುರ್ದೈವಿಯಾಗಿದ್ದು, ಅದೃಷ್ಟವಶಾತ್ 12 ವರ್ಷದ ಯಜ್ಞಾ ನೇಣು ಕುಣಿಕೆಯಿಂದ ಪಾರಾಗಿದ್ದಾಳೆ. ವಿಜಯಾ ಅವರ ಪತಿ ಆರು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಹೀಗಾಗಿ ಆಕೆ ಉಮೇಶ್ ಎಂಬುವರನ್ನು ಮರು ಮದುವೆಯಾಗಿದ್ದರು. ಆದರೆ ಉಮೇಶ್ ಇತ್ತೀಚೆಗೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಆಸರೆಯಾಗಿದ್ದ ಎರಡನೇ ಪತಿಯೂ ಆತ್ಮಹತ್ಯೆಗೆ ಶರಣಾಗಿದ್ದರಿಂದ ನೊಂದ ವಿಜಯಾ ತಮ್ಮ

ಮಂಗಳೂರು : ಇಬ್ಬರು ಮಕ್ಕಳೊಂದಿಗೆ ನೇಣು ಬಿಗಿದು ತಾಯಿ ಆತ್ಮಹತ್ಯೆ : ಓರ್ವ ಬಾಲಕಿ ಪಾರು! Read More »

ಗೃಹ ಸಚಿವರ ಎಸ್ಕಾರ್ಟ್ ವಾಹನ ಬೈಕ್‌ಗೆ ಡಿಕ್ಕಿ : ಸವಾರ ಸಾವು

ಹಾಸನ: ಬಂಕ್ ನಿಂದ ಪೆಟ್ರೋಲ್ ಹಾಕಿಸಿಕೊಂಡು ಹೊರಬರುತ್ತಿದ್ದ ಬೈಕ್‌ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಎಸ್ಕಾರ್ಟ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸವಾರನ್ನೊಬ್ಬ ಸಾವನ್ನಪ್ಪಿದ್ದಾನೆ. ಅರಸೀಕೆರೆ ತಾಲೂಕಿನ ಗಂಡಸಿ ಪೊಲೀಸ್ ಠಾಣೆ ಬಳಿ ಅಪಘಾತ ಸಂಭವಿಸಿದ್ದು ಚಿಕ್ಕಗಂಡಸಿ ಗ್ರಾಮದ ರಮೇಶ್(45) ಎಂಬುವರು ಮೃತಪಟ್ಟಿದ್ದಾರೆ. ಆರಗ ಜ್ಞಾನೇಂದ್ರ ಅವರು ಮಲೆಮಹದೇಶ್ವರ ಬೆಟ್ಟದಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಪೊಲೀಸ್ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಅಪಘಾತ ಸ್ಥಳಕ್ಕೆ ಗಂಡಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತನ ದೇಹವನ್ನು

ಗೃಹ ಸಚಿವರ ಎಸ್ಕಾರ್ಟ್ ವಾಹನ ಬೈಕ್‌ಗೆ ಡಿಕ್ಕಿ : ಸವಾರ ಸಾವು Read More »

ಪುತ್ತೂರಿನ ಬೀರಮಲೆ ಬೆಟ್ಟಕ್ಕೆ ಬೆಂಕಿ : ಬೆಂಕಿ ನಂದಿಸುವಲ್ಲಿ ನಿರತರಾದ ಅಗ್ನಿಶಾಮಕ ದಳ

ಪುತ್ತೂರು : ಪುತ್ತೂರಿನ ಬೀರಮಲೆ ಬೆಟ್ಟಕ್ಕೆ ಬೆಂಕಿ ತಗುಲಿದ ಘಟನೆ ಬುಧವಾರ ಸಂಜೆ ನಡೆದಿದೆ. ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಮರಗಳು ಸುಟ್ಟು ಹೋಗಿದ್ದು, ಹೆಚ್ಚಿನ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಮಾಹಿತಿ ತಿಳಿದ ಪುತ್ತೂರು ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಪುತ್ತೂರಿನ ಬೀರಮಲೆ ಬೆಟ್ಟಕ್ಕೆ ಬೆಂಕಿ : ಬೆಂಕಿ ನಂದಿಸುವಲ್ಲಿ ನಿರತರಾದ ಅಗ್ನಿಶಾಮಕ ದಳ Read More »

ಸಜೀಪ: ಕೃಷಿಕ, ಸಾಮಾಜಿಕ, ಧಾರ್ಮಿಕ ಮುಂದಾಳು ಗಂಗಾಧರ್ ಭಟ್ ನಿಧನ.!!

ವಿಟ್ಲ: ಸಜೀಪಮೂಡ ಗ್ರಾಮದ ಕೊಳಕೆ ನಿವಾಸಿ, ಕೃಷಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಮುಂದಾಖು ಎಸ್.ಗಂಗಾಧರ ಭಟ್ ಕೊಳಕೆ (77) ಅವರು ಅಸೌಖ್ಯದಿಂದಾಗಿ ಸ್ವಗೃಹದಲ್ಲಿ ಫೆ.27ರಂದು ನಿಧನರಾದರು. ಗಂಗಾಧರ ಭಟ್ ರವರು ನಂದಾವರ ಶ್ರೀ ಶಂಕರನಾರಾಯಣ ದುರ್ಗಾಂಬಾ ದೇವಸ್ಥಾನದ ಮಾಜಿ ಟ್ರಸ್ಟಿಯಾಗಿ, ಬಂಟ್ವಾಳ ತಾಲೂಕು ಕಸಾಪ ಕನ್ನಡ ಭವನ ನಿರ್ಮಾಣ ಕಟ್ಟಡ ಸಮಿತಿ ಅಧ್ಯಕ್ಷರಾಗಿ, ನೀರ್ಪಾಜೆ ಭೀಮ‌ಭಟ್ ಅಭಿಮಾನಿ ಬಳಗದ‌ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಮೃತರ ದೇಹವನ್ನು ದೇರಳಕಟ್ಟೆ ಆಸ್ಪತ್ರೆಗೆ ದಾನ ಮಾಡಲಾಗಿದೆ. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು

ಸಜೀಪ: ಕೃಷಿಕ, ಸಾಮಾಜಿಕ, ಧಾರ್ಮಿಕ ಮುಂದಾಳು ಗಂಗಾಧರ್ ಭಟ್ ನಿಧನ.!! Read More »

ಶತಾಯುಷಿ ಗುಡ್ಡಪ್ಪ ಗೌಡ ಬನ್ನೂರು ನಿಧನ

ಪುತ್ತೂರು: ಪ್ರಗತಿಪರ ಕೃಷಿಕ, ಬನ್ನೂರು ಗುತ್ತಿನ ದೈವದ ಪರಿಚಾರಕರಾಗಿದ್ದ ಶತಾಯುಷಿ, ಬನ್ನೂರು ನಿವಾಸಿ ಗುಡ್ಡಪ್ಪ ಗೌಡ (101) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಫೆ. 27ರಂದು ಬೆಳಿಗ್ಗೆ ನಿಧನರಾದರು. ಊರ ಗೌಡತ್ತಿಗೆ ಮಾಡುತ್ತಿದ್ದ ಗುಡ್ಡಪ್ಪ ಗೌಡ ಅವರು ಪ್ರಗತಿಪರ ಕೃಷಿಕರಾಗಿಯೂ ಗುರುತಿಸಿಕೊಂಡಿದ್ದರು. ಹಿಂದೆ ಗುತ್ತಿಗೆದಾರರಾಗಿಯೂ ಕೆಲಸ ನಿರ್ವಹಿಸುತ್ತಿದ್ದರು. 72 ವರ್ಷ ಕಾಲ ಸುಖೀ ದಾಂಪತ್ಯ ಜೀವನ ನಡೆಸಿದ ಹಿನ್ನೆಲೆಯಲ್ಲಿ ಅಲುಂಬುಡ ಸೇವಾ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಗಿತ್ತು. ಹಿಂದಿನ ವರ್ಷ ಗುಡ್ಡಪ್ಪ ಗೌಡ ಅವರ ಪತ್ನಿ ಲಕ್ಷ್ಮೀ ಅವರು ನಿಧನರಾಗಿದ್ದರು.

ಶತಾಯುಷಿ ಗುಡ್ಡಪ್ಪ ಗೌಡ ಬನ್ನೂರು ನಿಧನ Read More »

ವಿದ್ಯುತ್‍ ಶಾರ್ಟ್‍ ಸರ್ಕ್ಯೂಟ್: ಗೇರು ಮರಗಳು ಸುಟ್ಟು ನಷ್ಟ

ಕಾವು : ಮಾಡ್ನೂರು ಗ್ರಾಮದ ಸಸ್ಪೆಟ್ಟಿ ಎಂಬಲ್ಲಿ ವಿದ್ಯುತ್ ಶಾರ್ಟ್‍ ಸರ್ಕ್ಯೂಟಿನಿಂದ ಬೆಂಕಿ ಹತ್ತಿಕೊಂಡು ಅರ್ಧ ಎಕ್ರೆ ಜಾಗದಲ್ಲಿರುವ ಗೇರು ಮರಗಳು ಸುಟ್ಟು ಹೋಗಿ ನಷ್ಟ ಉಂಟಾದ ಘಟನೆ ನಡೆದಿದೆ. ರಾಮಕೃಷ್ಣ ಭಟ್ ಎಂಬವರ ಜಾಗದಲ್ಲಿ ಸುತ್ತಲು ಹುಲ್ಲು ಪೊದೆಗಳು ಬೆಳೆದಿದ್ದು, ಹಠಾತ್ತನೇ ವಿದ್ಯುತ್‍ ಪರಿವರ್ತಕದಲ್ಲಿ ಶಾರ್ಟ್‍ ಸರ್ಕ್ಯೂಟಿನಿಂದ ಉಂಟಾದ ಪರಿಣಾಮ ಪೊದೆಗಳಿಗೆ ಬೆಂಕಿ ಹಿಡಿದು ಗೇರು ಮರಗಳನ್ನು ಆವರಿಸಿದೆ. ಅಗ್ನಿಶಾಮಕ ದಳದವರಿಗೆ ಕರೆ ಮಾಹಿತಿ ತಿಳಿಸಲಾಯಿತು. ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳದವರು ಸಾರ್ವಜನಿಕರ ಸಹಕಾರದೊಂದಿಗೆ ಬೆಂಕಿ ನಂದಿಸಿ

ವಿದ್ಯುತ್‍ ಶಾರ್ಟ್‍ ಸರ್ಕ್ಯೂಟ್: ಗೇರು ಮರಗಳು ಸುಟ್ಟು ನಷ್ಟ Read More »

ಗುಂಡ್ಯದಲ್ಲಿ ಅರಣ್ಯ ಇಲಾಖೆ ನರ್ಸರಿಯನ್ನು ಪುಡಿಮಾಡಿದ ಕಾಡಾನೆಗಳು

ಪುತ್ತೂರು: ಹಂತಕ ಕಾಡಾನೆಯನ್ನು ಸೆರೆ ಹಿಡಿದ ಬಳಿಕ, ಉಪಟಳ ನೀಡುವ ಉಳಿದ ಆನೆಗಳ ಪತ್ತೆ ಕಾರ್ಯವನ್ನು ಅರಣ್ಯ ಇಲಾಖೆ ಮುಂದುವರಿಸಿದೆ. ಗುಂಡ್ಯ ಭಾಗದಲ್ಲಿ ಅರಣ್ಯ ಇಲಾಖೆ ನರ್ಸರಿಗಳನ್ನು ಕಾಡಾನೆಗಳು ಹಾಳು ಗೆಡವಿದೆ ಎನ್ನುವ ಮಾಹಿತಿ ಲಭಿಸಿದ್ದು, ಕಾರ್ಯಾಚರಣೆಯನ್ನು ಆ ಭಾಗಕ್ಕೆ ಕೇಂದ್ರಿಕರಿಸಲಾಗಿದೆ. ಮೊದಲಿಗೆ ಆನೆಗಳ ಪತ್ತೆ ಕಾರ್ಯ ನಡೆದ ಬಳಿಕವಷ್ಟೇ ಅವುಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯಲಿದೆ ಎಂದು ತಿಳಿದುಬಂದಿದೆ. ಒಟ್ಟು 5 ಆನೆಗಳ ಪೈಕಿ ಅಭಿಮನ್ಯು ಹಾಗೂ ಇನ್ನೊಂದು ಆನೆಯನ್ನು ಸೆರೆ ಹಿಡಿದ ಕಾಡಾನೆಯ ಜೊತೆ

ಗುಂಡ್ಯದಲ್ಲಿ ಅರಣ್ಯ ಇಲಾಖೆ ನರ್ಸರಿಯನ್ನು ಪುಡಿಮಾಡಿದ ಕಾಡಾನೆಗಳು Read More »

ಸೆರೆಯಾದದ್ದು ಹಂತಕ ಆನೆ ಎನ್ನುವುದು ಖಚಿತ!

ಪುತ್ತೂರು: ಗುರುವಾರ ಸಂಜೆ ಸೆರೆ ಸಿಕ್ಕ ಕಾಡಾನೆಯ ದಂತದಲ್ಲಿದ್ದ ರಕ್ತದ ಕಲೆಗಳು, ಕೊಲೆಗಡುಕ ಎನ್ನುವುದನ್ನು ಖಾತ್ರಿ ಪಡಿಸಿವೆ. ರೆಂಜಿಲಾಡಿಯ ನೈಲದಲ್ಲಿ ರಂಜಿತಾ ಹಾಗೂ ರಮೇಶ್ ರೈ ಎನ್ನುವವರನ್ನು ಕಾಡಾನೆ ಕೊಂದು ಹಾಕಿತ್ತು. ರಂಜಿತಾ ಅವರ ಬೊಬ್ಬೆ ಕೇಳಿ ಓಡಿ ಬಂದ ರಮೇಶ್ ರೈ ಅವರು ಆನೆಯ ತಿವಿತಕ್ಕೆ ಕೊನೆಯುಸಿರೆಳೆದಿದ್ದರು. ಬಳಿಕ ಆನೆಗಳು ಪರಾರಿಯಾಗಿದ್ದು, ಕಾರ್ಯಾಚರಣೆ ವೇಳೆಯಲ್ಲೂ ಬಲೆಗೆ ಬಿದ್ದಿರಲಿಲ್ಲ. ಗುರುವಾರ ಸಂಜೆ ಹೊತ್ತಿಗೆ ಆನೆಯನ್ನು ಪತ್ತೆ ಹಚ್ಚಿ, ಅರಿವಳಿಕೆ ಚುಚ್ಚುಮದ್ದು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 40 ವರ್ಷ

ಸೆರೆಯಾದದ್ದು ಹಂತಕ ಆನೆ ಎನ್ನುವುದು ಖಚಿತ! Read More »

error: Content is protected !!
Scroll to Top