ಅಪರಾಧ

ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್‌ ಠಾಕೂರ್‌ ವಿರುದ್ಧ ಶಿವಮೊಗ್ಗದಲ್ಲಿ ಕೇಸ್‌

ದ್ವೇಷ ಭಾಷಣ ಮಾಡಿದ ಆರೋಪ ಶಿವಮೊಗ್ಗ: ನಗರದಲ್ಲಿ ಭಾನುವಾರ ನಡೆದ ಹಿಂದೂ ಜಾಗರಣ ವೇದಿಕೆಯ ಸಮಾವೇಶದಲ್ಲಿ ದ್ವೇಷಪೂರಿತ ಭಾಷಣ ಮಾಡಿದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸಂಸದೆಯ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್.ಸುಂದರೇಶ್ ದೂರು ಸಲ್ಲಿಸಿದ್ದಾರೆ.ಸಾಧ್ವಿ ಪ್ರಜ್ಞಾ ಅವರ ಭಾಷಣ ಶಸ್ತ್ರಾಸ್ತ್ರಗಳ ಬಳಕೆಗೆ ಮುಕ್ತ ಕರೆಯಾಗಿತ್ತು, ಇದು ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಗುಂಪು ಹಿಂಸಾಚಾರ ಮತ್ತು ಹಲ್ಲೆಗೆ ಕಾರಣವಾಗಬಹುದು. ಭಾಷಣವು ಅಸಹಿಷ್ಣುತೆ, ದ್ವೇಷ ಮತ್ತು ನಿರ್ದಿಷ್ಟ ಸಮುದಾಯದ ವಿರುದ್ಧ ಹಿಂಸಾಚಾರದ […]

ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್‌ ಠಾಕೂರ್‌ ವಿರುದ್ಧ ಶಿವಮೊಗ್ಗದಲ್ಲಿ ಕೇಸ್‌ Read More »

ಚಂದ್ರಬಾಬು ನಾಯ್ಡು ರೋಡ್‌ ಶೋದಲ್ಲಿ ಕಾಲ್ತುಳಿತ : 7 ಸಾವು, ಹಲವರಿಗೆ ಗಾಯ

ಹೈದರಾಬಾದ್‌ : ತೆಲುಗು ದೇಶಂ ಪಾರ್ಟಿಯ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಂ.ಚಂದ್ರಬಾಬು ನಾಯ್ಡು ಅವರ ಸಾರ್ವಜನಿಕ ಸಭೆಯಲ್ಲಿ ಕಾಲ್ತುಳಿತ ಸಂಭವಿಸಿ ಏಳು ಮಂದಿ ದುರ್ಮರಣ ಹೊಂದಿರುವ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಕಂದುಕೊರ್‌ನಲ್ಲಿ ಸಾರ್ವಜನಿಕ ಸಭೆಗೆ ಚಂದ್ರಬಾಬು ನಾಯ್ಡು ಆಗಮಿಸಿದಾಗ ಆ ದುರ್ಘಟನೆ ನಡೆದಿದೆ. ಬೃಹತ್ ಸಮಾವೇಶದಲ್ಲಿ ನೆರೆದಿದ್ದ ಸಾವಿರಾರು ಟಿಡಿಪಿ ಕಾರ್ಯಕರ್ತರು ಮತ್ತು ಬೆಂಬಲಿಗರ ನಡುವೆ ತಳ್ಳಾಟ ಮತ್ತು ನೂಕಾಟ ನಡೆದಿದ್ದು, ಕೆಲವರು ಹತ್ತಿರದ ಒಳಚರಂಡಿ ಕಾಲುವೆಗೆ ಜಿಗಿದು ಕಾಲ್ತುಳಿತದಿಂದ

ಚಂದ್ರಬಾಬು ನಾಯ್ಡು ರೋಡ್‌ ಶೋದಲ್ಲಿ ಕಾಲ್ತುಳಿತ : 7 ಸಾವು, ಹಲವರಿಗೆ ಗಾಯ Read More »

ಯುವಕನ ಹತ್ಯೆ : ಕರವೇ ಅಧ್ಯಕ್ಷನ ಸಹಿತ ಐದು ಮಂದಿ ಸೆರೆ

9 ತಿಂಗಳ ಬಳಿಕ ನಿಗೂಢ ಕೊಲೆ ಪ್ರಕರಣ ಭೇದಿಸಿದ ಪೊಲೀಸರು ಬೆಂಗಳೂರು: ಒಂಬತ್ತು ತಿಂಗಳ ಹಿಂದೆ ನಡೆದಿದ್ದ ಅಪಹರಣ ಹಾಗೂ ಹತ್ಯೆ ಪ್ರಕರಣವನ್ನು ಕೊನೆಗೂ ಭೇದಿಸಿರುವ ಪೊಲೀಸರು ಕರ್ನಾಟಕ ರಕ್ಷಣಾ ವೇದಿಕೆಯ ಚಿಕ್ಕಬಳ್ಳಾಪುರ ಘಟಕದ ಅಧ್ಯಕ್ಷ ಎಚ್‌.ಜಿ.ವೆಂಕಟಾಚಲಪತಿ, ಆತನ ಪುತ್ರ ಎ.ವಿ.ಶರತ್‌ ಕುಮಾರ್‌ ಸಹಿತ ಐವರನ್ನು ಬಂಧಿಸಿದ್ದಾರೆ. ಆರ್‌.ಶ್ರೀಧರ್‌, ಕೆ.ಧನುಷ್‌ ಮತ್ತು ಎಂ.ಪಿ.ಮಂಜುನಾಥ್‌ ಸೆರೆಯಾಗಿರುವ ಇತರ ಆರೋಪಿಗಳು. ಹಣಕಾಸಿನ ವಿಚಾರವಾಗಿ ಈ ಹತ್ಯೆ ನಡೆದಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.ಶರತ್ ಯುವಕನನ್ನು ಬೆಂಗಳೂರಿನಿಂದ ಕಿಡ್ನಾಪ್‌ ಮಾಡಿ ಚಿತ್ರಹಿಂಸೆ ಕೊಟ್ಟು

ಯುವಕನ ಹತ್ಯೆ : ಕರವೇ ಅಧ್ಯಕ್ಷನ ಸಹಿತ ಐದು ಮಂದಿ ಸೆರೆ Read More »

ಕಾಶ್ಮೀರದಲ್ಲಿ ಮೂವರು ಉಗ್ರರ ಹತ್ಯೆ

ಶ್ರೀನಗರ : ಕಾಶ್ಮೀರದ ಸಿಧ್ರಾದಲ್ಲಿ ಭದ್ರತಾ ಪಡೆ ಜತೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ಉಗ್ರರು ಹತರಾಗಿದ್ದಾರೆ.ಟ್ರಕ್‌ನಲ್ಲಿದ್ದ ಉಗ್ರರ ಜತೆ ಗುಂಡಿನ ಚಕಮಕಿ ನಡೆದಿದೆ. ಟ್ರಕ್ಕಿನಲ್ಲಿದ್ದ ಎಲ್ಲ ಮೂರು ಉಗ್ರರನ್ನು ಸಾಯಿಸಲಾಗಿದೆ ಮತ್ತು ಅವರ ಶವಗಳನ್ನು ವಶಕ್ಕೆ ತೆಗೆದುಕೊಂಡಿದ್ದೇವೆ ಎಂದು ಭದರತಾ ಪಡೆ ಅಧಿಕಾರಿ ತಿಳಿಸಿದ್ದಾರೆ.

ಕಾಶ್ಮೀರದಲ್ಲಿ ಮೂವರು ಉಗ್ರರ ಹತ್ಯೆ Read More »

ಹಾಸನ ಮಿಕ್ಸಿ ಬ್ಲಾಸ್ಟ್‌ ಭಗ್ನಪ್ರೇಮಿಯ ಕೃತ್ಯ

ಪ್ರೀತಿ ನಿರಾಕರಿಸಿದ ಮಹಿಳೆಗೆ ಮಿಕ್ಸಿಯಲ್ಲಿ ಬಾಂಬಿಟ್ಟು ಕಳುಹಿಸಿದ್ದ ಯುವಕ ಹಾಸನ: ಇಲ್ಲಿನ ಕೊರಿಯರ್ ಅಂಗಡಿಯಲ್ಲಿ ಸಂಭವಿಸಿದ ಮಿಕ್ಸಿ ಬ್ಲಾಸ್ಟ್ ಭಗ್ನ ಪ್ರೇಮಿಯೊಬ್ಬನ ಹುಚ್ಚಾಟ ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ. ವಿಚ್ಛೇದಿತ ಮಹಿಳೆಯೊಬ್ಬಳ ಹಿಂದೆ ಬಿದ್ದಿದ್ದ ಯುವಕ ತನ್ನ ಪ್ರೀತಿಯನ್ನು ನಿರಾಕರಿಸಿದಳು ಎಂಬ ಕಾರಣಕ್ಕೆ ಮಹಿಳೆಯನ್ನು ಮುಗಿಸಲು ಸ್ಕೆಚ್ ಹಾಕಿ ಮಿಕ್ಸಿ ಬಾಂಬ್ ಕಳುಹಿಸಿದ್ದ ಸಂಗತಿ ತನಿಖೆಯಿಂದ ಬಯಲಾಗಿದೆ.ನಗರದ ಕೆ.ಆರ್. ಪುರಂ ಸಬ್ ರಿಜಿಸ್ಟ್ರಾರ್ ಕಚೇರಿ ರಸ್ತೆಯ ಅಂಗಡಿಯಲ್ಲಿ ಸೋಮವಾರ ಸಂಜೆ ಮಿಕ್ಸಿ ಸ್ಫೋಟಗೊಂಡು ಆತಂಕಕ್ಕೆ ಕಾರಣವಾಗಿತ್ತು. ಇದು ಉಗ್ರ

ಹಾಸನ ಮಿಕ್ಸಿ ಬ್ಲಾಸ್ಟ್‌ ಭಗ್ನಪ್ರೇಮಿಯ ಕೃತ್ಯ Read More »

ಕುಕ್ಕರ್‌ ಸ್ಫೋಟ ಮಾದರಿಯಲ್ಲಿ ಹಾಸನದಲ್ಲಿ ಮಿಕ್ಸಿ ಸ್ಫೋಟ

ಕೊರಿಯರ್‌ನಲ್ಲಿ ಬಂದಿದ್ದ ಮಿಕ್ಸಿಯನ್ನು ಪರಿಶೀಲಿಸುವಾಗ ಬ್ಲಾಸ್ಟ್‌; ಓರ್ವನಿಗೆ ಗಾಯ ಹಾಸನ: ಮಂಗಳೂರಿನ ಕುಕ್ಕರ್​ ಸ್ಫೋಟ ಮಾದರಿಯಲ್ಲೇ ಹಾಸನದಲ್ಲಿ ಕೊರಿಯರ್ ಮೂಲಕ ಬಂದಿದ್ದ ಮಿಕ್ಸರ್​ ನಿಗೂಢವಾಗಿ ಸ್ಫೋಟಗೊಂಡಿರುವ ಘಟನೆ ನಿನ್ನೆ ರಾತ್ರಿ ಕೆ.ಆರ್.ಪುರಂ ಬಡಾವಣೆಯ ಡಿಟಿಡಿಸಿ‌ ಕೊರಿಯರ್ ಶಾಪ್​ನಲ್ಲಿ ನಡೆದಿದೆ. ಕೊರಿಯರ್​​ ಮೂಲಕ ಬಂದಿದ್ದ ಹೊಸ ಮಿಕ್ಸರ್​​ ಟೆಸ್ಟ್​ ಮಾಡುತ್ತಿರುವಾಗ ಸ್ಫೋಟಗೊಂಡಿದೆ. ಕೊರಿಯರ್ ಮಾಲೀಕ ಶಶಿಗೆ ಗಂಭೀರ ಗಾಯಗಳಾಗಿದ್ದು, ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ.ಮಂಗಳೂರು ಬ್ಲಾಸ್ಟ್ ಕೇವಲ ರಾಜ್ಯ ಮಾತ್ರವಲ್ಲ ದೇಶದಲ್ಲಿ ಸುದ್ದಿಯಾಗಿದೆ.

ಕುಕ್ಕರ್‌ ಸ್ಫೋಟ ಮಾದರಿಯಲ್ಲಿ ಹಾಸನದಲ್ಲಿ ಮಿಕ್ಸಿ ಸ್ಫೋಟ Read More »

ನಟ ಸುಶಾಂತ್‌ ಸಿಂಗ್‌ ನಿಗೂಢ ಸಾವಿನ ಪ್ರಕರಣಕ್ಕೆ ತಿರುವು

ಆತ್ಮಹತ್ಯೆಯಲ್ಲ ಎಂದು ಶವ ಪರೀಕ್ಷೆ ಮಾಡಿದ ಸಿಬ್ಬಂದಿ ಹೇಳಿಕೆ ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಆತ್ಮಹತ್ಯೆಯಿಂದ ಸಂಭವಿಸಿಲ್ಲ, ಅದು ಕೊಲೆ ಎಂದು ಶವ ಪರೀಕ್ಷೆ ಮಾಡಿದ್ದ ಶವಾಗಾರದ ಸಿಬ್ಬಂದಿ ಹೇಳುವುದರೊಂದಿಗೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.ಸುಶಾಂತ್ ಸಿಂಗ್ 2020ರ ಜೂನ್ 14 ರಂದು ಮುಂಬೈಯ ಫ್ಲಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರನ್ನು ಕೊಲೆ ಮಾಡಲಾಗಿದೆ ಎಂಬ ವಾದಗಳು ಕೇಳಿಬಂದಿದ್ದವು. ಶವ ಪರೀಕ್ಷೆ ವರದಿಯಲ್ಲಿ ಆತ್ಮಹತ್ಯೆ ಎಂದು ಉಲ್ಲೇಖಿಸಲಾಗಿದ್ದರೂ, ಅದನ್ನು ಕೊಲೆ ಎಂದೇ

ನಟ ಸುಶಾಂತ್‌ ಸಿಂಗ್‌ ನಿಗೂಢ ಸಾವಿನ ಪ್ರಕರಣಕ್ಕೆ ತಿರುವು Read More »

ಕಂದಕಕ್ಕೆ ಉರುಳಿದ ವ್ಯಾನ್‌ : 8 ಅಯ್ಯಪ್ಪ ಭಕ್ತರ ಸಾವು

ಪತ್ತನಂತಿಟ್ಟ : ಶಬರಿಮಲೆ ಯಾತ್ರಿಕರಿದ್ದ ವ್ಯಾನ್‌ ಆಳವಾದ ಕಂದಕಕ್ಕೆ ಉರುಳಿ ಬಿದ್ದು ಎಂಟು ಮಂದಿ ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ತೇಕ್ಕಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಮಿಲಿ-ಕುಂಭಂ ಮಾರ್ಗದಲ್ಲಿ ತಮಿಳುನಾಡಿಗೆ ನೀರು ಸಾಗಿಸುವ ಪೈಪ್‌ಲೈನ್‌ ಬಳಿರಾತ್ರಿ 11 ಗಂಟೆಗೆ ಈ ಆಪಘಾತ ಸಂಭವಿಸಿದೆ. ವಿಪರೀತ ವೇಗ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಶಬರಿಮಲೆ ದರ್ಶನ ಮುಗಿಸಿ ವಾಪಸಾಗುತ್ತಿದ್ದ ತೇಣಿ-ಅಂಡಿಪಟ್ಟಿಯ ಭಕ್ತರು ಈ ವ್ಯಾನಿನಲ್ಲಿದ್ದರು. ಗಾಯಾಳುಗಳಲ್ಲಿ ಒಂದು ಮಗುವೂ ಸೇರಿದೆ.

ಕಂದಕಕ್ಕೆ ಉರುಳಿದ ವ್ಯಾನ್‌ : 8 ಅಯ್ಯಪ್ಪ ಭಕ್ತರ ಸಾವು Read More »

ಬಾಲಕನನ್ನು ಮಹಡಿಯಿಂದ ದೂಡಿ ಕೊಂದ ಶಿಕ್ಷಕ ಸೆರೆ

ತಾಯಿಯ ಸಲುಗೆ ಮಗನ ಕೊಲೆಗೆ ಕಾರಣವಾಯಿತು ಗದಗ: ನರಗುಂದ ತಾಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಭರತ್‌ನನ್ನು ಹತ್ಯೆ ಮಾಡಿದ ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿರುವ ಬಾಲಕನ ತಾಯಿ ಗೀತಾ ಬಾರಕೇರ ಹಾಗೂ ಸಹಶಿಕ್ಷಕ ಸಂಗನಗೌಡ ಪಾಟೀಲ ಅವರ ಮೇಲೂ ಆರೋಪಿ ಗಂಭೀರ ಹಲ್ಲೆ ನಡೆಸಿ ಪರಾರಿಯಾಗಿದ್ದ.ಅತಿಥಿ ಶಿಕ್ಷಕಿ ಗೀತಾ ಬಾರಕೇರ ಮೇಲೆ ಇದ್ದ ಮತ್ಸರವೇ ಬಾಲಕನ ಕೊಲೆಗೆ ಮತ್ತು ಶಿಕ್ಷಕರ ಹಲ್ಲೆಗೆ ಕಾರಣ

ಬಾಲಕನನ್ನು ಮಹಡಿಯಿಂದ ದೂಡಿ ಕೊಂದ ಶಿಕ್ಷಕ ಸೆರೆ Read More »

ಕುಖ್ಯಾತ ಮನೆಗಳ್ಳನ ಬಂಧನ; 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಪುತ್ತೂರು, ಶಿವಮೊಗ್ಗದಲ್ಲೂ ಕಳ್ಳತನ ಮಾಡಿದ್ದ ಆರೋಪಿ ಉಡುಪಿ : ಬ್ರಹ್ಮಾವರ ಮತ್ತು ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಮನೆಗಳೀಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ಕೊನೆಗೂ ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕಾಡೂರು ತಂತ್ರಾಡಿ ನಿವಾಸಿ ವಿಜಯ್ ಕುಮಾರ್ ಶೆಟ್ಟಿ (28) ಎಂದು ಗುರುತಿಸಲಾಗಿದೆ.ಬ್ರಹ್ಮಾವರ ವೃತ್ತದ ಬ್ರಹ್ಮಾವರ ಹಾಗೂ ಕೋಟ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಹಲವು ಮನೆಗಳಲ್ಲಿ ಕಳ್ಳತನ ನಡೆದು ಜನರು ಆತಂಕದಲ್ಲಿದ್ದರು. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ

ಕುಖ್ಯಾತ ಮನೆಗಳ್ಳನ ಬಂಧನ; 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ Read More »

error: Content is protected !!
Scroll to Top